ವಿಷಯಕ್ಕೆ ಹೋಗು

ಅಸ್ಯಾಸಿನ್ಸ್ ಕ್ರೀಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Assassin's Creed
ಅಭಿವರ್ಧಕ(ರು) Ubisoft Montreal
ಪ್ರಕಟಣಕಾರ(ರು) Ubisoft
ವಿನ್ಯಾಸಕಾರ(ರು) Patrice Desilets (creative director), Jade Raymond (producer)
Writer(s) Corey May
Composer(s) Jesper Kyd
ಸರಣಿ Assassin's Creed
ತಂತ್ರಾಂಶ ಚೌಕಟ್ಟು Anvil (Scimitar)
ಕಾರ್ಯಕಾರಿ ಪರಿಸರ(ಗಳು) PlayStation 3, Xbox 360, Windows
ಬಿಡುಗಡೆ ದಿನಾಂಕ(ಗಳು) PlayStation 3, Xbox 360:

ಟೆಂಪ್ಲೇಟು:Vgrelease Microsoft Windows:
ಟೆಂಪ್ಲೇಟು:Vgrelease ಟೆಂಪ್ಲೇಟು:Vgrelease ಟೆಂಪ್ಲೇಟು:Vgrelease

ಪ್ರಕಾರ(ಗಳು) Third person action-adventure
ಬಗೆ(ಗಳು) Single-player
ಹಂಚಿಕೆ Blu-ray Disc, DVD-DL, download

ಅಸ್ಯಾಸಿನ್ಸ್ ಕ್ರೀಡ್ ಎಂಬುದು ಒಂದು ಕಾಲ್ಪನಿಕ ಇತಿಹಾಸ/ಕಾಲ್ಪನಿಕ ವಿಜ್ಞಾನವನ್ನು ಹೊಂದಿರುವ, ಮೂರನೇ ವ್ಯಕ್ತಿ ಆಡಬಹುದಾದ ಸಾಹಸದ ಕಥೆಯನ್ನು ಒಳಗೊಂಡಿರುವ ವಿಡಿಯೋ ಗೇಮ್ ಆಗಿದೆ. ಇದನ್ನು ಯುಬಿಸಾಫ್ಟ್ ಮಾನ್ಟ್ರಿಯಾಲ್ ಅಭಿವೃದ್ಧಿಪಡಿಸಿದ್ದು, ಯುಬಿಸಾಫ್ಟ್ ಬಿಡುಗಡೆ ಮಾಡಿತು. 2007ರ ನವೆಂಬರ್‌‌ನಲ್ಲಿ ಪ್ಲೇಸ್ಟೇಷನ್ 3 ಮತ್ತು ಎಕ್ಸ್‌ ಬಾಕ್ಸ್ (Xbox) 360ನಲ್ಲಿ ಬಿಡುಗಡೆ ಮಾಡಿತು[]. 2008ರ ಏಪ್ರಿಲ್‌ನಲ್ಲಿ ಇದನ್ನು ಪಿಸಿ (ವೈಯಕ್ತಿಕ ಕಂಪೂಟರ್)ಗಳಿಗಾಗಿ ಬಿಡುಗಡೆ ಮಾಡಲಾಯಿತು. ಈ ಆಟದ ಕೇಂದ್ರಗಳು "ಆನಿಮಸ್" ಎಂಬ ಹೆಸರಿನ ಯಂತ್ರಗಳನ್ನು ಉಪಯೋಗಿಸುತ್ತಿದ್ದವು. ಇದು ನಾಯಕನ ಪೂರ್ವಜರ ಅನುವಂಶಿಕ ನೆನಪುಗಳನ್ನು ನೋಡಲು ಅವಕಾಶ ಕಲ್ಪಿಸುತ್ತಿತ್ತು. ಈ ಉಪಕರಣದಲ್ಲಿ ಎರಡು ಪಕ್ಷಗಳಾದ ನೈಟ್ಸ್ ಟೆಂಪ್ಲರ್ ಮತ್ತು ಅಸ್ಯಾಸಿನ್ಸ್‌ಗಳ ನಡುವಿನ ಹೋರಾಟವನ್ನು ನೋಡಬಹುದಾಗಿದೆ. ಇದನ್ನು "ಪೀಸ್ ಆಫ್ ಈಡನ್" ಎಂಬ ಭಾಗದಲ್ಲಿ ನೋಡಬಹುದಾಗಿದೆ. ಈ ಆಟವು 1191ರಲ್ಲಿ ಹೋಲಿ ಲ್ಯಾಂಡ್‌‍ನಲ್ಲಿ ನಡೆದ ಮೂರನೇ ಧಾರ್ಮಿಕ ಯುದ್ಧದ ಸಮಯದಲ್ಲಿ ಪ್ರಾರಂಭವಾಗುತ್ತದೆ. ಈ ಆಟವು ಅನೇಕ ಧನಾತ್ಮಕ ವಿಮರ್ಶೆಗಳನ್ನು ಪಡೆದಿದ್ದು, 2006ರಲ್ಲಿ ಇ3ಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಅದರ ಮುಂದಿನ ಭಾಗ ಅಸ್ಯಾಸಿನ್ಸ್ ಕ್ರೀಡ್ II ಅನ್ನು 2009ರ ನವೆಂಬರ್‍ನಲ್ಲಿ ಬಿಡುಗಡೆ ಮಾಡಲಾಯಿತು.

ಕಥಾವಸ್ತು

[ಬದಲಾಯಿಸಿ]

2012ರ ಸೆಪ್ಟೆಂಬರ್‌ನಲ್ಲಿ ಪಾನಗೃಹ ಪರಿಚಾರಕ ಡೆಸ್ಮಂಡ್ ಮೈಲ್ಸ್, ಔಷಧ ಹಾಗೂ ವಿಜ್ಞಾನ ಕ್ಷೇತ್ರದ ಕಂಪನಿಯಾದ ಆಬ್‌‍ಸ್ಟರ್ಗೊ ಕಂಪನಿಯಿಂದ ಅಪಹರಿಸಲ್ಪಟ್ಟ. ಡೆಸ್ಮಂಡ್‌ನ ವಂಶದವರ ಡಿಎನ್ಎಯಲ್ಲಿ ಉಳಿದುಕೊಂಡಿರುವ ಪೂರ್ವಜರ ನೆನಪನ್ನು ಓದುವ ಉಪಕರಣವಾದ ಆನಿಮಸ್‌ನಲ್ಲಿ ತಮ್ಮ 17ನೇ ಪರೀಕ್ಷೆಗಾಗಿ ಆತನನ್ನು ಉಪಯೋಗಿಸಲಾಯಿತು. ನಂತರ ಡೆಸ್ಮಂಡ್ ನೈಜ ವಾತಾವರಣದಲ್ಲಿ ಪೂರ್ವಜರನ್ನು ಅನುಸರಿಸಿ ವರ್ತಿಸತೊಡಗುತ್ತಾನೆ. ಡಾ. ವಾರೆನ್ ವಿಡಿಕ್, ಡೆಸ್ಮಂಡ್‌ನನ್ನು ಉಪಕರಣದ ಒಳಗೆ ಹಾಕಿ ಒಬ್ಬ ನಿರ್ಧಿಷ್ಟ ಪೂರ್ವಜನ ನೆನಪನ್ನು ಪಡೆಯುವ ಉದ್ದೇಶವನ್ನು ಹೊಂದಿದ್ದ. ಆಲ್ಟೈರ್ ಇಬ್ನ್‌‍ ಲಾ-ಅಹಾದ್‌‍ ಇವನು ಅಲ್‌ ಮೌಲಿಮ್‌ನನ್ನು ಹೊರತುಪಡಿಸಿ ಅಸ್ಸಾಸಿನ್ಸ್‌‍ಗಳ ತದ್ರೂಪಿಗಳಲ್ಲೇ ಉತ್ತಮ ತರಬೇತಿ ಹೊಂದಿದವನಾಗಿದ್ದ. ಆಬ್‌‍ಸ್ಟರ್ಗೊ ಕ್ರಿ.ಶ. 1191ದ ಸಮಯದಲ್ಲಿ ಅಲ್ಟೇರ್‍ನ ಹೊಂದಿದ್ದಿರಬಹುದಾದ ಅನುಭವದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ. ಅದು ಹೋಲಿ ಲ್ಯಾಂಡ್‌ನಲ್ಲಿ ನಡೆದ ಮೂರನೇ ಧಾರ್ಮಿಕ ಯುದ್ಧ (ನಗರಗಳಾದ ಡಮಾಸ್ಕಸ್, ಏಕರ್ ಮತ್ತು ಜರುಸಲೇಮ್)ದ ಭಾಗವಾಗಿತ್ತು. ಆಬ್‌‍ಸ್ಟರ್ಗೊ, ಡೆನ್ಮಂಡ್‌ಗೆ ಆ ಕಲ್ಪನೆಗಳು ನೇರವಾಗಿ ಸ್ಮೃತಿಕೋಶದಲ್ಲಿರುವಂತೆ ಮಾಡಲು ಪ್ರಯತ್ನಿಸಿದ್ದರಿಂದ ಡೆನ್ಮಂಡ್‌ಗೆ ಆ ಉಪಕರಣದೊಂದಿಗೆ ಹೊಂದಿಕೊಳ್ಳಲು ಮೊದಲು ಕಷ್ಟವಾಯಿತು. ಅವರು ಆ ಉಪಕರಣವನ್ನು ಸಾಧ್ಯವಾದಷ್ಟು ಹತ್ತಿರದಲ್ಲಿಟ್ಟರು. ನಂತರದ ಕೆಲವು ವಾರಗಳಲ್ಲಿ ಅಲ್ಟೆರ್‌ನ ಕಾರ್ಯದ ಅನುಭವನ್ನು ಪಡೆದ. ನಂತರ ಆಟವು ಅಲ್ಟೆರ್‌ನ ದೃಷ್ಟಿಕೋನವನ್ನು ಪಡೆದುಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಆನಿಮಸ್ ಉಪಕರಣದಿಂದ ಹೊರಬಂದಾಗ ಡೆಸ್ಮಂಡ್‌ಗೆ ಪರಿವರ್ತಿತಗೊಳ್ಳುತ್ತಿತ್ತು. ಮೊದಲು ಅಲ್ಟೆರ್‍ನನ್ನು ಸೊಲೊಮನ್ ಟೆಂಪಲ್‌ನಿಂದ ಇಬ್ಬರು ಅಸ್ಯಾಸಿನ್‌‌‌ಗಳ ಸಹಾಯದಿಂದ ಸಾಧನವನ್ನು ಹಿಂಪಡೆಯುವ ಪ್ರಯತ್ನದಲ್ಲಿರುವಂತೆ ತೋರಿಸಲಾಗುತ್ತದೆ. ಆ ಸಾಧನವನ್ನು ಅಸಾಸಿನ್‌ಗಳ ಹುಟ್ಟು ವೈರಿಗಳಾದ ನೈಟ್ಸ್ ಟೆಂಪ್ಲರ‍್ರ ಗ್ರಾಂಡ್ ಮಾಸ್ಟರ್ ರಾಬರ್ಟ್ ಡಿ ಸೇಬಲ್‌ನಿಂದ ಪಡೆಯುವ ಸಾಹಸಕ್ಕೆ ತಡೆಯೊಡ್ಡಲಾಗುತ್ತದೆ. ವಿಡಿಯೋ ಗೇಮ್‌ನ ಆರಂಭದ ನಿಮಿಷಗಳಲ್ಲಿ ಡಿ ಸೇಬಲ್‌ನನ್ನು ಕೊಲ್ಲುವ ವಿಫಲ ಪ್ರಯತ್ನದಲ್ಲಿ ಅಲ್ಟೆರ್, ಅಸ್ಯಾಸಿನ್ಸ್‌‍ ಕ್ರೀಡ್‌ನ ಎಲ್ಲಾ ಮೂರು ತತ್ತ್ವಗಳನ್ನು ಮುರಿಯುತ್ತಾನೆ. ("ಅಮಾಯಕರನ್ನು ಕೊಲ್ಲುವ ಹಾಗಿಲ್ಲ", "ಮುಕ್ತವಾಗಿರುವ ಸ್ಥಳದಲ್ಲಿ ಬಚ್ಚಿಟ್ಟುಕೊಳ್ಳುವ ಪ್ರಯತ್ನ" ಮತ್ತು "ಸಹೋದರತ್ವಕ್ಕೆ ಸಂಧಾನಗೊಳ್ಳಬೇಡಿ") ಇದು ವಿಡಿಯೋ ಗೇಮ್ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಆಗುತ್ತದೆ. ನಿರ್ಭಂದಿತ ದೇವಸ್ಥಾನದಿಂದ ತಪ್ಪಿಸಿಕೊಂಡು ಮ್ಯಾಸಾಯಫ್‌ನಲ್ಲಿರುವ ಅಸ್ಯಾಸಿನ್‌‌‍ಗಳ ಕೋಟೆಯತ್ತ ಓಡಿಬಂದ. ಅಸ್ಯಾಸಿನ್‌‌‍ಗಳ ಮುಖ್ಯಸ್ಥನಾದ ಅಲ್ ಮು ಅಲಿಮ್‌ (ಅರಾಬಿಕ್‌ನಲ್ಲಿ ಶಿಕ್ಷಕ) ಟೆಂಪ್ಲರ‍್ಗಳ ದಾಳಿಯನ್ನು ವಿಫಲಗೊಳಿಸಿದ. ಶತ್ರು ಪಡೆಗಳನ್ನು ಸೋಲಿಸಿ, ಅದಕ್ಕೆ ಅಭಿನಂದನೆಯನ್ನು ಪಡೆದ ನಂತರ ಅಲ್ ಮುಅಲಿಮ್ 'ಅವರ ಮೇಲೆ ಗಾಯ ಮಾಡಿದ್ದಕ್ಕಾಗಿ' ಅಲ್ಟೆರ‍್ಗೆ ಚಾಕುವಿನಿಂದ ಚುಚ್ಚಿದ. ಸೈನ್ಯವನ್ನು ಸೋಲಿಸಿದ್ದರಿಂದ ಹಾಗೂ ಮಸ್ಯಾಫ್‌ನನ್ನು ರಕ್ಷಿಸಿದ್ದರಿಂದ ಅಲ್‌ ಮ್ಯೂಲಿಮ್‌‍ ಆಲ್ಟೇರ್‌ನನ್ನು ’ತಮ್ಮ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ’ ಉಳಿದ ಅಸ್ಯಾಸಿನ್‌ಗಳ ಎದುರೇ ಚಾಕುವಿನಿಂದ ಚುಚ್ಚಿ ಗಾಯಗೊಳಿಸುತ್ತಾನೆ. ಆದರೆ, ನಿಜವಾಗಿ ಅಲ್ಟೆರ್ ಇನ್ನೂ ಬದುಕಿದ್ದ ಮತ್ತು ಆತನನ್ನು ಕೆಳಗಿನ ಸ್ಥಾನಕ್ಕೆ ಕಳುಹಿಸಿ ಸಹೋದರತ್ವ ಸ್ಥಾನದಲ್ಲಿ ಮೇಲಕ್ಕೆ ಏರಲು ಮತ್ತೊಂದು ಅವಕಾಶವನ್ನು ಕೊಡುತ್ತಾನೆ. ಅಲ್ಟೆರ‍್ಗೆ ಹೋಲಿ ಲ್ಯಾಂಡ್‌ನ ಜರೂಸಲೇಮ್, ಏಕರ್, ಡಮಾಸ್ಕಸ್‌ನಲ್ಲಿರುವ ಒಂಭತ್ತು ಪ್ರಮುಖ ಮುಖ್ಯ ಪಾತ್ರಗಳನ್ನು ಹತ್ಯೆ ಮಾಡುವ ಕೆಲಸವನ್ನು ಅಲ್ ಮುಅಲಿಮ್ ನೀಡಿದ. ಈ ಹತ್ಯೆಗಳ ಉದ್ದೇಶ ಕ್ರೂಸೇಡರ್ ಮತ್ತು ಸರ್ಸನ್ ಪಡೆಗಳ ನಡುವೆ ಶಾಂತಿಯನ್ನು ಸ್ಥಾಪಿಸುವುದಾಗಿತ್ತು. ಪ್ರತಿಯೊಂದು ಗುರಿಯೂ 1191ರ ಸಮಯದ ಐತಿಹಾಸಿಕ ಘಟನೆಗಳ ನೈಜ ಚಿತ್ರಣವನ್ನು ಹೊಂದಿದೆ. ಇದರಲ್ಲಿ ಮಜ್ದ್ ಅದ್ದೀನ್ (ಜರೂಸಲೇಮ್‌ನ ಆಡಳಿತಾಧಿಕಾರಿ), ಗಾರ್ನಿಯರ್ ಡಿ ನೆಪ್ಲಾಸ್(ಗ್ರಾಂಡ್ ಮಾಸ್ಟರ್ ಆಫ್ ದಿ ನೈಟ್ಸ್ ಹಾಸ್ಪಿಟಲರ್), ಜುಬೇರ್ ಅಲ್ ಹಕೀಂ(ಡಮಾಸ್ಕಸ್‌ನ ಮಹಾನ್ ತತ್ವಜ್ಞಾನಿ), ಅಬುಲ್ ನಕೋಡ್‌‍(ಡಮಾಸ್ಕಸ್‌ನ ಅತೀ ಶ್ರೀಮಂತ ವ್ಯಕ್ತಿ), ಟುಟಾನಿಕ್ ಆರ್ಡರ್‌ನ ಗ್ರಾಂಡ್ ಮಾಸ್ಟರ್ ಸಿಬ್ರಂಡ್ ಮತ್ತು ವಿಲಿಯಂ ವಿ, ಮಾರ್ಕ್‌ಸ್‌‍ ಆಫ್‌‍ ಮೊಂಟೆಫೆರಾಟ್‌‍(ಏಕರ್‌ನ ಆಡಳಿತಾಧಿಕಾರಿ) ಇದ್ದಾರೆ.[] ಅಲ್ಟೆರ್ ಪ್ರತಿಯೊಂದು ಕೆಲಸವನ್ನು ಮುಗಿಸುತ್ತಾನೆ. ಹಾಗೆ ಮಾಡುವಾಗ ಪ್ರತಿಯೊಂದು ಗುರಿಯು ಹೇಗೆ ರಾಬರ್ಟ್ ಮತ್ತು ಟೆಂಪ್ಲರ್ಸ್ ಜೊತೆಗೆ ಸಂಬಂಧವನ್ನು ಹೊಂದಿದೆ ಎಂಬುದನ್ನು ಕಲಿಯುತ್ತಾನೆ. ಈ ಶತ್ರುಗಳು ದೇವಾಲಯಗಳಿಂದ (ಹಲವು ದೇವಾಲಯಗಳಲ್ಲಿ ಒಂದಾದ ದಿ ಪೀಸ್ ಆಫ್ ಈಡನ್) ವಶಪಡಿಸಿಕೊಂಡ ಸಂಪತ್ತನ್ನು ಹೋಲಿ ಲ್ಯಾಂಡ್‌ನ ಜನರ ಮನಸ್ಸನ್ನು ಗುಲಾಮಗಿರಿಗೆ ಒಳಪಡಿಸುವ ಗುರಿಯನ್ನು ಹೊಂದಿದ್ದರು. ಮುಗ್ಧ ಜನರ ಮನಸ್ಸನ್ನು ಕೊಳ್ಳೆಹೊಡೆಯುವ ಮೂಲಕ "ಶಾಂತಿ"ಯನ್ನು ತರುವ ಉದ್ದೇಶ ಹೊಂದಿದ್ದರು. ಎರಡೂ ಕಡೆಯವರಲ್ಲಿ ಪ್ರಬಲರು ಸಾವನ್ನಪ್ಪಿದ ಬಳಿಕ ಅಲ್ಟೆರ್, ಅಸ್ಯಾಸಿನ್ಸ್‌ಗಳಲ್ಲಿರುವ ಹೊಸ ಶತ್ರುಗಳ ವಿರುದ್ಧ ಕ್ರೂಸೇಡರ್ ಮತ್ತು ಸ್ಯಾರಿಸನ್‌ರನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಡಿ ಸೇಬಲ್‌ನ ಕೊನೆಯ ಉಪಾಯವನ್ನು ಕಂಡುಹಿಡಿಯುತ್ತಾನೆ. ಆಲ್ಟೇರ್‌‍ ಆರ್ಸಫ್‌‍‌ನ ವಿರುದ್ಧ ಹೋರಾಡುವ ಮೂಲಕ ಅವನು ಮತ್ತು ಅವನ ಸಹಪಾಠಿ ಸೈನಿಕರನ್ನು ರಿಚರ್ಡ್ ದಿ ಲಯನ್‌ಹಾರ್ಟ್‌ಗಿಂತ ಮೊದಲು ಸೋಲಿಸುತ್ತಾನೆ. ಹೀಗೆ ಮಾಡುವಾಗ ಡಿ ಸೇಬಲ್ಸ್‌ನ ರಾಜದ್ರೋಹಿಗಳ ಮನವೊಪ್ಪಿಸುತ್ತಾನೆ. ಡಿ ಸೇಬಲ್ ಸಾಯುವ ಸಂದರ್ಭದಲ್ಲಿ ಅಲ್ ಮುಅಲಿಮ್‌ ಸ್ವತಃ ಟೆಂಪ್ಲರ್ ಆಗಿದ್ದ ಎಂದು ಬಹಿರಂಗಪಡಿಸಿದ ಮತ್ತು ಈತ ಇತರರನ್ನು ಕೊಂದು ಸಂಪತ್ತನ್ನು ಉಳಿಸಿಕೊಳ್ಳಲು ಅಲ್ಟೆರ್‌ನನ್ನು ಉಪಯೋಗಿಸಿಕೊಳ್ಳುತ್ತಾನೆ. ಅಲ್ಟೆರ್ ಕೂಡಲೇ ತನ್ನ ಗುರುಗಳೊಂದಿಗೆ ಮಾತನಾಡಲು ಮಸ್ಯಾಫ್‌ ಬರುತ್ತಾನೆ. ಆತ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಅಲ್ಟೆರ್ ನಿಯಮವನ್ನು ಉಲ್ಲಂಘಿಸಿ ಜನರ ಮನಸ್ಸಿನಲ್ಲಿ ಭ್ರಾಂತಿಯನ್ನು ಮೂಡಿಸಿದ ನಂತರ ಈತ ಪೀಸ್ ಆಫ್ ಈಡನನ್ನು ದೇವಾಲಯದ ಒಬ್ಬನಿಂದ ಪಡೆಯುತ್ತಾನೆ. ಅಲ್ ಮುಅಲಿಮ್ ಧರ್ಮ ಮತ್ತು ಇತರ ಅಲೌಕಿಕ ಸಂಗತಿಗಳನ್ನು ವಿರೋಧಿಸಿದನು (ಉದಾಹರಣೆಗೆ, ಕೆಂಪು ಸಮುದ್ರದ ವಿಭಜನೆ, ಟೆನ್ ಪ್ಲೇಗ್ಸ್ ಆಫ್ ಈಜಿಪ್ಟ್, ಏಸು ನೀರನ್ನು ವೈನಾಗಿ ಪರಿವರ್ತಿಸುವುದು ಮತ್ತು ಟ್ರೋಜಾನ್ ಯುದ್ಧದಲ್ಲಿ ಗ್ರೀಕ್ ದೇವರುಗಳ ಉಪಸ್ಥಿತಿ). ಇವು ಭ್ರಮೆಗಳು ಪೀಸ್ ಆಫ್ ಈಡನ್‌ನಿಂದ ಆಗಿದೆ ಎಂದು ಹೇಳಿದ. ಅಲ್ ಮುಅಲಿಮ್ ಸಾಧನವನ್ನು ಉಪಯೋಗಿಸಿ ಎಲ್ಲ ಜನರ ಮರುಳುಗೊಳಿಸುವ ಮೂಲಕ ಈ ಸಮಸ್ಯೆಯನ್ನು ತೊಡೆದು ಹಾಕುವ ಇಂಗಿತವನ್ನು ವ್ಯಕ್ತಪಡಿಸಿದ. ಆತ ಪ್ರತಿಯೊಂದು ಆಸ್ಯಾಸಿನೇಟೆಡ್ ಗುರಿಗಳನ್ನು ಪುನಃ ಸೋಲಿಸಬೇಕಾಯಿತು. ಅಲ್ ಮುಅಲಿಮ್ ಸ್ವತಃ 8 ಪ್ರತಿಗಳಾಗಿ ವಿಭಜನೆಯಾದ. ಕೊನೆಗೆ ಅಲ್ಟೆರ್ ಸಾಧನವನ್ನು ಸತ್ತ ಅಲ್ ಮುಅಲಿಮ್‌ನ ಕೈಯಿಂದ ಪಡೆಯುತ್ತಾನೆ. ಅಲ್ ಮುಅಲಿಮ್‌ನ ಒಂದು ಕಲ್ಪಿತ ಧ್ವನಿಯು ಅಲ್ಟೆರ‍್ಗೆ ಅದನ್ನು ನಾಶಪಡಿಸಲು ಹೇಳಿತು. ಅವನ್ನು ಅದನ್ನು ಮಾಡುವುದಕ್ಕೆ ಮೊದಲು, ಪೀಸ್‌ ಆಫ್ ಈಡನ್ ಕ್ರಿಯಾಶೀಲವಾಗಿ ವಿಶ್ವದ ಪೂರ್ಣಲೇಖೀ ದೃಶ್ಯವನ್ನು ನೀಡಿತು. ಅದರಲ್ಲಿ ಬ್ರಹ್ಮಾಂಡದಲ್ಲಿರುವ ಹಲವಾರು ಪೀಸಸ್ ಆಫ್ ಈಡನ್‌ಗಳನ್ನು ಗುರುತಿಸಲಾಗಿತ್ತು. ಅಲ್ಟೇರ್ ನಾಶಪಡಿಸಿದ ಸಾಧನ ಯಾವುದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ ಮತ್ತು 1191ರಲ್ಲಿಯ ಆಟವು ಇವನಿಂದಲೇ ಕೊನೆಗೊಳ್ಳುತ್ತದೆ. ಇದರಲ್ಲಿ ಕೆಲವು ಅಸಾಸಿನ್‌ಗಳು ಮಾತ್ರ ಉಳಿದುಕೊಳ್ಳುತ್ತಾರೆ. ಇವರನ್ನೇ ಆಟದ ಕೊನೆಯಲ್ಲಿ ತೋರಿಸಲಾಗುತ್ತದೆ. ಅನಿಮಸ್‌ನ ನಡುವಿನ ಸಮಯದಲ್ಲಿ ಡೆಸ್ಮಂಡ್, ತನ್ನ ಸ್ನೇಹಿತ ಹಾಗೂ ತಂತ್ರಜ್ಞನಾದ ಲೂಸಿ ಸ್ಟಿಲ್ಮನ್‌ನಿಂದ, ಅಬ್‌ಸ್ಟರ್ಗೊ ಇಂಡಿಸ್ಟ್ರೀಸ್ ಎಂಬುದು ನೈಟ್ಸ್ ಟೆಂಪ್ಲರ್‌ನ ಅಧುನಿಕ ವರ್ಷನ್‌ ಆಗಿದೆ. ಮತ್ತು ಈಗ ಇನ್ನೊಂದು ಸಾಧನವನ್ನು ಆಲ್ಟೇರ್‌ನ ನೆನಪಿನಿಂದ ಪಡೆದುಕೊಳ್ಳಲಾಗುತ್ತದೆ. ಅಂತಿಮ ಅವಧಿಗೆ ಸ್ವಲ್ಪ ಮೊದಲು, ಡೆಸ್ಮಂಡ್‌ನ ಪಕ್ಷದವನಾದ ಆಧುನಿಕ ಅಸ್ಯಾಸಿನ್ ಡೆಸ್ಮಂಡ್‌ನನ್ನು "ರಕ್ಷಿಸಲು" ಪ್ರಯತ್ನಿಸುತ್ತಾನೆ. ಆದರೆ ಅದರಲ್ಲಿ ವಿಫಲನಾಗುತ್ತಾನೆ. ಮಾಹಿತಿಯನ್ನು ಪಡೆದ ನಂತರ ಡೆಸ್ಮಂಡ್‌ ಕೊಲ್ಲಲ್ಪಡುತ್ತಿದ್ದನು, ಆದರೆ ಲೂಸಿ ಅವನನ್ನು ಕಾಪಾಡುತ್ತಾನೆ. ಇದರಿಂದಾಗಿ ಡೆಸ್ಮಂಡ್ ಅಬ್‌ಸ್ಟರ್ಗೊ ಪ್ರಯೋಗಾಲಯದಲ್ಲಿ ಬಂಧಿಯಾಗಿರುತ್ತಾನೆ. ಅನಿಮಸ್‌ನಲ್ಲಿನ ಆತನ ಅನುಭವವು "ಸ್ರಾವದ ಪರಿಣಾಮವನ್ನು" ಸೃಷ್ಟಿ ಮಾಡಿತು. ಇದರ ಅರ್ಥ ಅಲ್ಟೆರ್‌ನ ಹಿಂದಿನ ಜೀವನ ಸ್ವಂತ ಬದುಕಾಗಿ ಮಾರ್ಪಡುವುದು. ಈಗ ಡೆಸ್ಮಂಡ್ ಅಲ್ಟೇರ್‌ನ "ಹದ್ದಿನ ದೃಷ್ಟಿ"ಯ ಶಕ್ತಿಯನ್ನು ಪಡೆದ. ಅದು ಅವನಿಗೆ ಮಿತ್ರ ಮತ್ತು ಶತ್ರು ಪಕ್ಷಗಳನ್ನು ಗುರುತಿಸಲು ಅವಕಾಶ ಕಲ್ಪಿಸಿತು. ಅದರಿಂದ ಲೂಸಿ ಮಿತ್ರಪಕ್ಷದವನು ಎಂದು ಗುರುತಿಸಿದ. ಅಸ್ಯಾಸಿನ್‌ಗಳ ಸೇವಕರು ತಮಗೆ ಅಸ್ಯಾಸಿನ್‌ಗಳು ನೀಡಿದಾಗ, ಅದಕ್ಕೆ ಒಪ್ಪಿಗೆ ಸೂಚಿಸುವಾಗ ಉಂಗುರವಿರುವ ಬೆರಳನ್ನು ಭಾಗಿಸುವ ರೀತಿಯಲ್ಲಿಯೇ ಲೂಸಿ ತನ್ನ ಉಂಗುರವಿರುವ ಬೆರಳನ್ನು ಕೆಳಕ್ಕೆ ಭಾಗಿಸಿ ತೋರಿಸಿದನು. ಈ ಶಕ್ತಿಯು ಆತನಿಗೆ ಅಪರಿಚಿತರನ್ನು ಗುರುತಿಸಲು, ನೆಲದ ಮೇಲೆ, ಪ್ರಯೋಗಾಲದ ಗೋಡೆಗಳ ಮೇಲೆ ಮತ್ತು ಆತನ ಕೋಣೆಯಲ್ಲಿ ರಕ್ತದಲ್ಲಿ ಬರೆದಿರುವ ಸಂದೇಶಗಳನ್ನು ನೋಡಲು ಸಹಾಯ ಮಾಡಿತು. ಅವರು ಇಲೂಮಿನಾಟಿ, ಸಂಖ್ಯೆಗಳು ಮತ್ತು ನಕ್ಷತ್ರಗಳನ್ನು ಚಿತ್ರಿಸಿದ್ದಾರೆ. ಡೆಸ್ಮಂಡ್‌ನ ಮಲಗುವ ಕೋಣೆಯ ಗೋಡೆಯ ಮೇಲೆ ಕೇವಲ ಕಣ್ಣಿರುವ ನಗು ಮುಖದ ಚಿತ್ರವಿದೆ. ಪ್ರಯೋಗಾಲಯದ ಗೋಡೆಯ ಮೇಲೆ ಪ್ರಾಥಮಿಕ ಕೋಡಿನಲ್ಲಿ ಎರಡು ಸಂದೇಶಗಳನ್ನು ಬರೆಯಲಾಗಿದೆ. ಅದರಲ್ಲಿ ಮೊದಲನೆಯದು, "ಅವರು ನನ್ನ ಆತ್ಮವನ್ನು ಖಾಲಿಗೊಳಿಸಿ ಅದನ್ನು ತಮ್ಮದಾಗಿ ಮಾಡಿಕೊಂಡರು, ನಿನ್ನನ್ನು ಎಲ್ಲಿ ನೋಡಿದೆ ಎಂದು ತೋರಿಸಲು ನಾನು ನನ್ನ ದೇಹವನ್ನು ಬರಿದು ಮಾಡಿ/ವ್ಯಯಿಸಿದೆ" ಎಂದು ಹೇಳುತ್ತದೆ. ಎರಡನೆಯದಾಗಿ, "ಒಂದು ವಿಶಿಷ್ಟ ಸಾಧನವನ್ನು ಆಕಾಶದೆಡೆಗೆ ಕಳುಹಿಸಿ ಎಲ್ಲ ದೇಶಗಳನ್ನು ಹಿಡಿತದಲ್ಲಿಡುವಂತೆ ಮಾಡಲಾಗುತ್ತದೆ. ಅಲ್ಲದೆ ಒಂದು ಗುಪ್ತ ಯುದ್ಧಕ್ಕೆ ಎಲ್ಲರೂ ಸಹಾಯಕರಾಗಿರುವಂತೆ ನೋಡಿಕೊಳ್ಳಲಾಗುತ್ತದೆ." ಅವರಿಗೆ ಸಹಾಯ ಮಾಡಬೇಡಿ" ಎಂದು ಹೇಳಿದೆ. ಈ ಸಂದೇಶಗಳು ಮಾಯುನ್ ಸಂಸ್ಕೃತಿಗೆ ಸಂಬಂಧಿಸಿದ ಯೋನಗಾನಿ ಮತ್ತು ಮಿಕ್ಸಿಕೋದ ಪ್ರದೇಶಗಳಂತಹ ಪೀಸಸ್ ಆಫ್ ಈಡನ್‌ ಇರುವ ಇತರೆ ಸ್ಥಳಗಳ ಪತ್ತೆಗೆ ಸುಳಿವಾಗಿ ಸಹಾಯ ಮಾಡುತ್ತದೆ. ಇದರಲ್ಲಿ ಪ್ರಪಂಚದ ಪ್ರಳಯದಿನ ಡಿಸೆಂಬರ್ 21, 2012 ಬಗ್ಗೆ ಹಲವಾರು ಉಲ್ಲೇಖಗಳು ಬರುತ್ತವೆ. ಅದೇ ದಿನ ಅಬ್ಸ್ಟೆರ್ಗೊ ಒಂದು ಉಪಗ್ರಹವನ್ನು ಹಾರಿಬಿಡಲು ಯೋಚಿಸಿರುತ್ತಾನೆ. ಅದು ಶಾಶ್ವತವಾಗಿ ಯುದ್ಧವನ್ನು ಕೊನೆಗೊಳಿಸುತ್ತದೆ ಎಂಬ ಆಕಾಂಕ್ಷೆ ಅವನದಾಗಿರುತ್ತದೆ. ಇದು ಅಲ್‌ಮುಲಿಮ್ ಬಳಕೆ ಮಾಡಿದ ಭ್ರಮೆಯ ಪ್ರಕಾರವನ್ನೇ ಇದು ಬಳಸಿಕೊಂಡಿದ್ದು. ಇಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿರುತ್ತದೆ. ಈ ಚಿತ್ರಗಳ ಅರ್ಥವೇನು ಹಾಗೂ ಇವುಗಳನ್ನು ಯಾರು ಬರೆದರು ಎಂದು ಡೆಸ್ಮಂಡ್ ಆಶ್ಚರ್ಯಪಡುವುದರೊಂದಿಗೆ ಆಟವು ಮುಗಿಯುತ್ತದೆ..

ಅಸ್ಯಾಸಿನ್ಸ್

[ಬದಲಾಯಿಸಿ]
Assassin's Creed series
fictional chronology

ಅಲ್ ಮುಅಲಿಮ್ ಎಂಬ ಪಾತ್ರ ಮತ್ತು ಆತನ ಗುಂಪಿನವರು ಹಶ್‌ಷಾಶಿನ್ ಎಂಬ ಇಸ್ಲಾಮಿಕ್ ಪಂಗಡದಿಂದ ಬಂದಿದ್ದು, ಇದರಿಂದ ಅಸ್ಯಾಸಿನ್ ಎಂಬ ಪದ ಬಂದಿದೆ ಎಂದು ನಂಬಲಾಗಿದೆ. ಅಸ್ಯಾಸಿನ್‌ಗಳು ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತಾರೆ. ಅವನ್ನು "ಅಸ್ಯಾಸಿನ್ಸ್ ಕ್ರೀಡ್" ಎನ್ನುತ್ತಾರೆ. ಅದು ಪ್ರಾಥಮಿಕವಾಗಿ ಮೂರು ನಿಯಮಗಳನ್ನು ಹೊಂದಿದೆ. 1) ಮುಗ್ಧರಿಗೆ ಹಾನಿಮಾಡಬೇಡಿ; 2) ಮುಕ್ತವಾಗಿರುವ ಸ್ಥಳದಲ್ಲಿ ಅಡಗಿಕೊಳ್ಳಿ; 3)ಭಾತೃತ್ವದಲ್ಲಿ ರಾಜಿಮಾಡಿಕೊಳ್ಳಬೇಡಿ. ಅವರು ಹಶ್‌ಷಾಶಿನ್‌‍ನ ಸಂಸ್ಥಾಪಕ ಹಸ್ಸನ್-ಐ-ಸಬಾ ಅವರ ನಿಯಮವಾದ "ಯಾವುದೂ ನಿಜವಲ್ಲ, ಎಲ್ಲದಕ್ಕೂ ಅವಕಾಶವಿದೆ" ಎಂಬುದನ್ನು ಅನುಸರಿಸುತ್ತಾರೆ.

ಆಟದ ರೀತಿ

[ಬದಲಾಯಿಸಿ]

ಅಸ್ಯಾಸಿನ್ಸ್ ಕ್ರೀಡ್ ಒಂದು ಸಾಹಸಮಯ ದೃಶ್ಯ ಆಟವಾಗಿದ್ದು, ಡೆಸ್ಮಂಡ್ ಮೈಲ್ಸ್ ಅನುಭವಿಸಿದಂತೆ ಆಟಗಾರನು ಪ್ರಾಥಮಿಕವಾಗಿ ಅಲ್ಟೆರ್‌ನ ಪಾತ್ರವನ್ನು ಅನುಭವಿಸುತ್ತಾನೆ. ಈ ಆಟದ ಪ್ರಾಥಮಿಕ ಉದ್ದೇಶ, ಅಸ್ಯಾಸಿನ್‌ಗಳ ನಾಯಕನಾದ ಅಲ್ ಮುಅಲಿಮ್‌ ಆಜ್ಞೆಮಾಡಿದ ಸರಣಿ ಹತ್ಯೆಗಳನ್ನು ಮಾಡುವುದಾಗಿದೆ. ಈ ಗುರಿಯನ್ನು ಸಾಧಿಸಲು, ಆಟಗಾರನು ಆ ನಗರದಲ್ಲಿರುವ ಬ್ರದರ‍್ಹುಡ್ ಏಜಂಟ್‌ನನ್ನು ಕಂಡುಹಿಡಿಯಲು ಮಸ್ಯಾಫ್‌ನಲ್ಲಿರುವ ಪ್ರಧಾನ ಕಚೇರಿಯಿಂದ ಹೊರಟು ಹೋಲಿ ಲ್ಯಾಂಡ್‌ನ ಭೂಪ್ರದೇಶವಾಗಿದ್ದು, ಜರೂಸಲೇಂ, ಏಕರ್ ಅಥವಾ ಡಮಾಸ್ಕಸ್‌ ನಗರಗಳಲ್ಲಿ ಒಂದಕ್ಕೆ ರಾಜ್ಯ ಎನ್ನಿಸಿಕೊಂಡಿರುವ ಪ್ರದೇಶದ ಮೂಲಕ ಹಾದುಹೋಗಬೇಕು. ಅಲ್ಲಿ ಸದಸ್ಯನೊಬ್ಬನು ಸುರಕ್ಷಿತವಾಗಿರುವ ಮನೆಯೊಂದನ್ನು ನೀಡುವುದಲ್ಲದೆ. ಆಟಗಾರನಿಗೆ ಗುರಿಯ ಬಗ್ಗೆ ಅತ್ಯಲ್ಪ ಜ್ಞಾನವನ್ನು ನೀಡುತ್ತಾನೆ. ಇದರಿಂದಾಗಿ ಅವರು ಕೊಲೆಯ ಪ್ರಯತ್ನ ಮಾಡುವ ಮೊದಲು ಸಾಕಷ್ಟು ಮಾಹಿತಿಯನ್ನು ಕಲೆಹಾಕಬೇಕಾಗುತ್ತದೆ. ಈ ಮಿಶನ್‌ಗಳು ಕದ್ದಾಲಿಕೆ, ವಿಚಾರಣೆ, ಜೇಬು ಕಳ್ಳತನ, ಮೊದಲಾದವುಗಳನ್ನು ನೀಡುವುದಲ್ಲದೆ ಮಾಹಿತಿಗಾರರಿಗೆ ಹಾಗೂ ಸಹಪಾಠಿ ಅಸಾಸಿನ್‌ಗಳು ತಮಗೆ ನೀಡಿರುವ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಇದರ ಜೊತೆಗೆ, ಆಟಗಾರ ತೆರೆದ ವಾತಾವರಣದಲ್ಲಿ ಇತರೆ ಗುರಿಗಳಾದ ನಗರವನ್ನು ನೋಡಲು ಟವರನ್ನು ಹತ್ತುವುದು ಮತ್ತು ಗಾರ್ಡ್‌ಗಳಿಂದ ಬೆದರಿಸಲ್ಪಟ್ಟ ನಾಗರಿಕರನ್ನು ಕಾಪಾಡುವುದು ಮುಂದಾದ ಚಿಕ್ಕ ಗುರಿಗಳನ್ನು ಸಾಧಿಸಬಹುದಾಗಿದೆ. ಇದಲ್ಲದೆ ಅಲ್ಲಿ ಇನ್ನೂ ಅನೇಕ ಉಪ ಹುಡುಕಾಟಗಳು ಇದ್ದು ಅದು ಕಥೆಯಲ್ಲಿ ಮೊದಲೇ ಬರುವುದಿಲ್ಲ. ಉದಾಹರಣೆಗೆ ಬೇಟೆಯಾಡುವುದು, ಟೆಂಪ್ಲಾರ್‌ಗಳನ್ನು ಸಾಯಿಸುವುದು ಮತ್ತು ಬಾವುಟ ಸಂಗ್ರಹಣೆ ಮೊದಲಾದವು ಸೇರಿರುತ್ತವೆ. . ಪ್ರತಿಯೊಂದು ಕೊಲೆಯನ್ನು ಮಾಡಿದ ಬಳಿಕ ಆಟಗಾರನು ಬ್ರದರ‍್ಹುಡ್‌ ಗೆ ವಾಪಾಸಾಗುತ್ತಾನೆ ಹಾಗೂ ಒಳ್ಳೆಯ ಆಯುಧವನ್ನು ನೀಡಲಾಗುತ್ತದೆ. ನಂತರ ಬೇರೆ ಗುರಿಗಳ ಪಟ್ಟಿಯನ್ನು ನೀಡಲಾಗುತ್ತದೆ. ಆ ಗುರಿಗಳ ಅನುಕ್ರಮವನ್ನು ಆರಿಸಲು ಆಟಗಾರನಿಗೆ ಮುಕ್ತ ಅವಕಾಶವಿರುತ್ತದೆ.

ಚಿತ್ರ:800px-AssassinsCreed Dx10 2008-06-11 20-20-16-49.png
ಬೆಂಚ್‌ ಮೇಲೆ ಕುಳಿತುಕೊಳ್ಳುವುದರಿಂದ ಆಟಗಾರನು ಅದರ ಬಣ್ಣದ ಜೊತೆ ಸೇರಿಕೊಂಡು ಅಡಗಿಕೊಳ್ಳಲು ಮತ್ತು ಕಾವಲುಗಾರರಿಂದ ಗುರುತಿಸಿಕೊಳ್ಳುವುದನ್ನು ತಡೆಯುತ್ತದೆ.

ಆಟಗಾರನಿಗೆ ಆಲ್ಟೇರ್‌ ಹೇಗೆ ಮುಖ್ಯನಾಗುತ್ತಾನೆ ಮತ್ತು ಶತ್ರುಗಳು ಹೇಗೆ ಅವನ ಮೇಲೆ ಈ ಸ್ಥಳದಲ್ಲಿ ಹೇಗೆ ನಿಗಾ ಇರಿಸಿಕೊಂಡಿದ್ದಾರೆ ಎಂಬುದನ್ನು ಮಾಹಿತಿ ತಿಳಿಸುವ ಅಲರ್ಟ್‌ನೆಸ್‌ ಲೆವೆಲ್ ಮೀಟರ್ ತಿಳಿಸುತ್ತಿರುತ್ತದೆ. ಅನೇಕ ಹತ್ಯೆಗಳನ್ನು ಮಾಡಲು ಆಟಗಾರನು ಪ್ರೊಫೈಲ್‌ಗೆ ಅನುಗುಣವಾಗಿ ಬೇರ್ಪಡಿಸಲಾದ ಆದೇಶಗಳನ್ನು ಅನುಸರಿಸಬೇಕಾಗುತ್ತದೆ. ಕಡಿಮೆ ಪ್ರೊಫೈಲ್‌ನ ಅದೇಶಗಳು ಅಲ್ಟೆರ್, ಹತ್ತಿರದ ಜನಸಂದಣಿಯಲ್ಲಿ ನುಸುಳಿ, ಇತರೆ ನಾಗರಿಕರ ಮೂಲಕ ಹಾದುಹೋಗಲು ಅವಕಾಶ ಕಲ್ಪಿಸುತ್ತದೆ ಅಥವಾ ಬಚ್ಚಿಟ್ಟುಕೊಂಡು ಎಚ್ಚರದ ಮಟ್ಟವನ್ನು ಕಡಿಮೆ ಮಾಡಲು ಇತರೆ ಅಪಾಯಕಾರಿಯಲ್ಲದ ಕೆಲಸಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ. ಉನ್ನತ ಪ್ರೊಫೈಲ್‌ನ ಆದೇಶಗಳು ಗಮನಾರ್ಹವಾದವುಗಳಾಗಿದ್ದು, ಅವು ಓಡುವುದು, ಕಟ್ಟಡಗಳನ್ನು ಹತ್ತಲು ಅದರ ಪಾರ್ಶ್ವಗಳನ್ನು ಅಳೆಯುವುದು ಮತ್ತು ಶತ್ರುಗಳ ಮೇಲೆ ದಾಳಿ ಮಾಡುವುದನ್ನು ಒಳಗೊಂಡಿದೆ. ಈ ಕೆಲಸಗಳನ್ನು ಮಾಡುವಾಗ ಸ್ಥಳೀಯ ಪ್ರದೇಶದ ಎಚ್ಚರದ ಮಟ್ಟ ಹೆಚ್ಚಾಗುತ್ತದೆ. ಒಮ್ಮೆ ಕಟ್ಟೆಚ್ಚರವನ್ನು ಘೋಷಿಸಿದ ನಂತರ ಜನರು ಚದುರಿ ಓಡುತ್ತಾರೆ. ಗಾರ್ಡ್‌ಗಳು ಎಚ್ಚರದ ಮಟ್ಟವನ್ನು ಕಡಿಮೆ ಮಾಡಲು ಅಲ್ಟೆರ್‌ನನ್ನು ಹಿಂಬಾಲಿಸಿ ಬೀಳಿಸಲು ಪ್ರಯತ್ನಿಸುತ್ತಾರೆ. ಆಗ ಆಟಗಾರನು ಅಲ್ಟೆರ್‌ನನ್ನು ಗಾರ್ಡ್‌ಗಳ ದೃಷ್ಟಿಯಿಂದ ತಪ್ಪಿಸಿ ಹುಲ್ಲು-ಮೆದೆ ಅಥವಾ ಛಾವಣಿಯ ಮೇಲಿರುವ ಕೈತೋಟ ಅಥವಾ ನಾಗರಿಕರು ಕುಳಿತಿಕೊಂಡಿರುವ ಬೆಂಚ್‌ಗಳ ಹಿಂದೆ ಅಥವಾ ಅಲೆಮಾರಿ ತತ್ವಜ್ಞಾನಿಗಳ ಹಿಂದೆ ಬಚ್ಚಿಟ್ಟುಕೊಳ್ಳುವಂತೆ ಮಾಡಬೇಕು. ಆಟಗಾರ ಗಾರ್ಡ್‌ಗಳಿಂದ ತಪ್ಪಿಸಿಕೊಳ್ಳಲಾಗದಿದ್ದಾಗ ಕತ್ತಿ ವರಿಸೆಯನ್ನು ಉಪಯೋಗಿಸಿ ಹೋರಾಡಬೇಕು.

ಚಿತ್ರ:Assassinscreed dna.jpg
ಆಟದ ಸಮಯದಲ್ಲಿ ನ್ಯೂಕ್ಲಿಯೋಟೈಡ್ಸ್‌ನ್ನೊಳಗೊಂಡ ಉದ್ದೇಶಪೂರ್ವಕ ಗ್ಲಿಚಸ್(ಡಿಎನ್‌ಎಗಳನ್ನು ತಯಾರಿಸುವ) ಮತ್ತು ಕಂಪ್ಯೂಟರ್‌ ಸಂದೇಶಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ.

ಆಟಗಾರನ ಆರೋಗ್ಯವನ್ನು ಡೆಸ್ಮಂಡ್ ಹಾಗೂ ಅಲ್ಟೆರ್‍ನ ನೆನಪುಗಳಲ್ಲಿನ ಸಮನ್ವಯದ ಮೂಲಕ ತೋರಿಸಲಾಗುತ್ತದೆ. ಅಲ್ಟೆರ‍್ಗೆ ಗಾಯವಾದರೆ, ಅದನ್ನು ದೈಹಿಕ ಹಾನಿಯಾಗಿ ತೋರಿಸದೆ, ಅದನ್ನು ಜ್ಞಾಪಕ ಶಕ್ತಿಯು ನೈಜ ಘಟನೆಯಿಂದ ತಿರುವು ತೆಗೆದುಕೊಂಡಂತೆ ತೋರಿಸಲಾಗುತ್ತದೆ. ಎಲ್ಲಾ ಸಮನ್ವಯವು ಮುಗಿದು ಹೋದ ಬಳಿಕ ಪ್ರಸ್ತುತ ಡೆಸ್ಮಂಡ್‌ ಅನುಭವಿಸುತ್ತಿರುವ ನೆನಪು ಕೊನೆಯ ಚೆಕ್‌ಪಾಯಿಂಟ್‌ನಿಂದ ಪುನಃ ಪ್ರಾರಂಭವಾಗುತ್ತದೆ. ಸಮನ್ವಯದ ಗೆರೆ(ಬಾರ್) ಪೂರ್ಣವಾಗಿ ಇದ್ದಾಗ "ಹದ್ದಿನ ದೃಷ್ಟಿ"ಯನ್ನು ಉಪಯೋಗಿಸುವ ಅವಕಾಶವಿರುತ್ತದೆ. ಇದು ಕಂಪ್ಯೂಟರ್ ನೀಡುವ ಮೆಮೊರಿಯು ಕಣ್ಣಿಗೆ ಕಾಣುವ ಪಾತ್ರಗಳನ್ನು ಸ್ನೇಹಿತರು ಅಥವಾ ಶತ್ರುಗಳಾಗಿ ಗುರುತಿಸಲು ಬಣ್ಣದಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಅವರು ಹತ್ಯೆ ಮಾಡಬೇಕಾದವರನ್ನೂ ಕೂಡ ಎದ್ದು ಕಾಣುವಂತೆ ಮಾಡಲಾಗಿರುತ್ತದೆ. ಅಲ್ಟೇರ್‌ನ ಜ್ಞಾಪಕ ಶಕ್ತಿಯು ಆನಿಮಸ್ ಪ್ರೊಜೆಕ್ಟ್‌ನ ಕಂಪ್ಯೂಟರ್‌ನಿಂದ ನಡೆಯಬೇಕಾದುದಾಗಿರುವುದರಿಂದ ಆಟಗಾರನು ಇದರಲ್ಲಿ ಐತಿಹಾಸಿಕ ಪ್ರಪಂಚವನ್ನು ನೋಡುವಾಗ ಗ್ಲಿಚ್‌ಗಳು ಕಂಡು ಬರಬಹುದಾಗಿದೆ. ಇವುಗಳು ಆಲ್ಟೇರ್‌ನಿಗೆ ಗುರಿಯನ್ನು ಗುರುತಿಸಲು ಸಹಾಯ ಮಾಡುವಂತವುಗಳಾಗಿರುತ್ತವೆ. ಅಲ್ಲದೆ ಅವುಗಳು ಎದುರಿದ್ದಾಗ ಆಲ್ಟೇರ್ ಅವುಗಳನ್ನು ತಕ್ಷಣ ಗುರುತಿಸಲು ಸಹಾಯ ಮಾಡುವಂತವುಗಳಾಗಿರುತ್ತವೆ.

ಅಭಿವೃದ್ಧಿ

[ಬದಲಾಯಿಸಿ]

2006ರ ಸೆಪೆಂಬರ್ 28ರಲ್ಲಿ ನಿರ್ಮಾಪಕ ಜೇಡ್ ರೇಮಂಡ್, ಐಜಿಎನ್‌ಗೆ ನೀಡಿದ ಸಂದರ್ಶನದಲ್ಲಿ ಅಲ್ಟೆರ್ " ಒಬ್ಬ ಪ್ರಾಚಿನ ಕಾಲದ ಹೊಡೆತಗಾರನಾಗಿದ್ದು ವಿಚಿತ್ರವಾದ ಇತಿಹಾಸವನ್ನು ಹೊಂದಿರುತ್ತಾನೆ." ಮತ್ತು ಇವನು ಕಾಲದ ಬೆನ್ನಿಗೆ ಬಿದ್ದ ಪ್ರವಾಸಿಗನಲ್ಲ, ಎಂದು ಹೇಳಿದ.[] ಐಜಿಎನ್, ಕ್ರಿಸ್ಟಿನ್‌ ಬೆಲ್ (ಗೇಮ್‌ಗೆ ತನ್ನ ಧ್ವನಿಯನ್ನು ನೀಡಿದ ಮತ್ತು ಆಟವನ್ನು ಮೆಚ್ಚಿದವಳು) ಜೊತೆಗೆ, ಡಿಸೆಂಬರ್ 13, 2006ರಲ್ಲಿ ಒಂದು ಸಂದರ್ಶನದಲ್ಲಿ ಆಟದ ಕಥೆಯ ಬಗ್ಗೆ ಮಾತನಾಡಿದಳು. ಸಂದರ್ಶನದ ಪ್ರಕಾರ, ಆಟವು ಆನುವಂಶೀಯ ಜ್ಞಾಪಕತೆಯನ್ನು ಮತ್ತು ಒಂದು ಸಂಸ್ಥೆಯು ಹತ್ಯೆಕಾಂಡದ ಹಿಂದೆ ಇರುವವರನ್ನು ಹಿಡಿಯುವ ಕಥೆಯನ್ನು ಹೊಂದಿತ್ತು.[]

"It's actually really interesting to me. It's sort of based on the research that's sort of happening now, about the fact that your genes might be able to hold memory. And you could argue semantics and say it's instinct, but how does a baby bird know to eat a worm, as opposed to a cockroach, if its parents don't show it? And it's about this science company trying to, Matrix-style, go into people's brains and find out an ancestor who used to be an assassin, and sort of locate who that person is."

Kristen Bell

ಈ ಆಟವು ಬಾರ್ಟೋಲ್‌ನ ಅಲಾಮಟ್ ಕಾದಂಬರಿಯಿಂದ ಪ್ರಭಾವಿತವಾಗಿದೆ ಎಂದು ಸಹ ರೇಮಂಡ್ ಹೇಳಿದ.[][]


2007ರ ಅಕ್ಟೋಬರ್ 22ರಲ್ಲಿ ಐಜಿಎನ್‌ ಆಸ್ಟ್ರೇಲಿಯಾದಲ್ಲಿ ಪಟ್ರಿಸ್ ಡೆಸಿಲೆಟ್ಸ್‌ನೊಂದಿಗಿನ ಸಂದರ್ಶನದಲ್ಲಿ, ಪ್ರಮುಖ ಪಾತ್ರಧಾರಿಗಳು ಹತ್ತುವುದು ಹಾಗೂ ಓಡುವುದನ್ನು "ಪ್ರಿನ್ಸ್ ಆಫ್ ಪರ್ಷಿಯಾ ಆಟವನ್ನು ಮಾಡಿದ್ದ ಅಲೆಕ್ಸ್ ಮತ್ತು ರಿಚರ್ಡ್" ಮಾಡಿದ್ದಾರೆ ಎಂದು ಹೇಳಲಾಯಿತು.[] ಅಲ್ಟೆರ‍್ಗೆ ನಟ ಫಿಲಿಪ್ ಷಾಬಾಜ್‌ನ[] ಧ್ವನಿಯನ್ನು ಹಾಗೂ ಮುಖವನ್ನು ಮಾಂಟ್ರೀಯಲ್‌ನ ಮೋಡೆಲ್ ಫ್ರಾನಿಸ್ಕೊ ರಾಂಡೆಸ್‌ನಂತೆ ಮಾಡಲಾಯಿತು.[][೧೦] ಅಲ್ ಮುಅಲಿಮ್‌ನ ಪಾತ್ರವು 1191ರಲ್ಲಿ ಹಶಶಿನ್‌ನ ಸೀರಿಯನ್ ವಿಭಾಗದ ಮುಖ್ಯಸ್ಥನಾಗಿದ್ದ ರಷೀದ್ ಅದ್-ದಿನ್ ಸಿನಾಹ್‌ನ ಪಾತ್ರದಿಂದ ಬಂದಿದೆ ಮತ್ತು ಆತ "ದಿ ಓಲ್ಡ್ ಮ್ಯಾನ್ ಆಫ್ ದಿ ಮೌಂಟೇನ್" ಎಂಬ ಉಪನಾಮವನ್ನು ಹೊಂದಿದ್ದ.

ಸಂಗೀತ

[ಬದಲಾಯಿಸಿ]

ಅಸ್ಯಾಸಿ ನ್ಸ್ ಕ್ರೀಡ್‌ನ ನಿರ್ಮಾಪಕನಾದ ಜೇಡ್ ರೇಮಂಡ್, " ಅಸ್ಯಾಸಿ ನ್ಸ್ ಕ್ರೀಡ್ ಆಟದಲ್ಲಿ ಮಧ್ಯ ಯುಗದ ಯುದ್ಧದ ವಾತಾವರಣದ ಜೊತೆಗೆ ಆಧುನಿಕ ಹಾಗೂ ದ್ವೇಷದ ವಾತಾವರಣವನ್ನು ಚಿತ್ರಿಸಲು ಇಚ್ಛಿಸಿದ್ದೆವು".[೧೧] ಇದಕ್ಕೆ ಸಂಗೀತವನ್ನು 2007ರಲ್ಲಿ ಜೆಸ್ಪರ್ ಕೈಡ್ ನೀಡಿದ. ಆಟವನ್ನು ಖರೀದಿಸಿದವರಿಗೆ ಆರು ಹಾಡುಗಳನ್ನು ಅಂತರಜಾಲದಲ್ಲಿ ಸಿಗುವಂತೆ ಮಾಡಲಾಯಿತು. ಯುಬಿಸಾಫ್ಟ್ ಅಂತರಜಾಲ ತಾಣದ ಸೌಂಡ್‌ ಟ್ರ್ಯಾಕ್ ವಿಭಾಗಕ್ಕೆ ಪ್ರವೇಶಿಸಲು ಜನರಿಗೆ ಪಾಸ್ವರ್ಡ್ ನೀಡಲಾಯಿತು.[೧೨] ಅನೇಕ ಹಾಡುಗಳು ಕೈಡ್‌ನ ಮೈಸ್ಪೇಸ್ ಮತ್ತು ಆತನ ಅಧಿಕೃತ ತಾಣಗಳಲ್ಲಿ ಕೇಳಲು ಲಭ್ಯವಾದವು. ಬಿಡುಗಡೆಯಾದ ಈ ಹಾಡುಗಳಲ್ಲಿ ಆರ್ಕ್ಯಾನಿಕ್ ಲ್ಯಾಟಿನ್ ಕೋರಸ್ ಮತ್ತು ಡಾರ್ಕ್ ಓರ್ಕ್ಯಾಸ್ಟ್ರಲ್ ಸಂಗೀತವಿದ್ದು, "ಮೆಡಿಟೇಷನ್ ಬಿಗಿನ್ಸ್" ಎಂಬ ಹಾಡಿನಲ್ಲಿ ಒಂದು ರೀತಿಯ ಸಾಲ್ಟೆರೆಲ್ಲೋ ಧ್ವನಿಯಲ್ಲಿ ಗ್ರಹಿಸಬಹುದಾದ ಮಾದಕತೆ ಹಾಗೂ ಸ್ಥಾಯಿ ಧ್ವನಿಯಲ್ಲಿ ಇರುವ ಹಾಡು ಇದೆ. ಲ್ಯಾಟಿನ್‌ನಲ್ಲಿ ಪುರುಷನ ಪಿಸುಧ್ವನಿ ಇದೆ. ಈ ಹಾಡುಗಳಲ್ಲಿ ಸೃಷ್ಟಿಸಿರುವ ವಾತಾವರಣಕ್ಕೆ ಜೆಸ್ಪರ್ ಕೈಡ್ ಹೆಸರುವಾಸಿಯಾಗಿದ್ದು ಇದು ಸಿತು(situ)ವಿನಲ್ಲಿ ಪರಿಣಾಮಕಾರಿಯಾಗಿದೆ.[೧೩] ಈ ಹಾಡುಗಳು ಐಟ್ಯೂನ್ಸ್ ಮ್ಯೂಸಿಕ್ ಸ್ಟೋರ್[೧೪] ಹಾಗೂ ಅಮೇಜಾನ್ ಎಂಪಿ3ಗಳಲ್ಲಿ ಲಭ್ಯವಿವೆ.

ಬುದ್ಧಿಶಕ್ತಿಯು ಆಟಕ್ಕೆ ನೀಡಿರುವ ಕೊಡುಗೆಯನ್ನು ತೋರಿಸುವ ಇಂಟ್ವೈನ್‌ನ "ದಿ ಚೋಜನ್(ಅಸ್ಯಾಸಿ ನ್ಸ್ ಕ್ರೀಡ್)" ಆಟದಲ್ಲಾಗಲೀ ಅಥವಾ ಅದರ ಹಾಡುಗಳಲ್ಲಾಗಲೀ ಇಲ್ಲ. ಮುನ್ನೋಟ ಮತ್ತು ಅಂತ್ಯದಲ್ಲಿ ಉಪಯೋಗಿಸಲಾದ ಹಾಡುಗಳಾದ,ದೊಡ್ಡ ಆಕ್ರಮಣದಲ್ಲಿ ಉಪಯೋಗಿಸಲಾದ "ಟಿಯರ್ ಡ್ರಾಪ್" UNKLE(ರಿಚರ್ಡ್‌‍ ಆಶ್‌ಕ್ರಾಫ್ಟ್‌‍ ತಾರಾಗಣದಲ್ಲಿರುವ) ನಲ್ಲಿ ಉಪಯೋಗಿಸಲಾದ "ಲೋನ್ಲಿ ದೋಲ್ಸ್ " ಸಹ ಆ ಸೌಂಡ್‌ಟ್ರಾಕ್‌ನಲ್ಲಿಲ್ಲ.

ವಿಂಡೋಸ್‌ ಆವೃತ್ತಿ

[ಬದಲಾಯಿಸಿ]
System requirements
Minimum Recommended

ಟೆಂಪ್ಲೇಟು:Video game requirements/Sub

ಇದನ್ನು 2008ರ ಏಪ್ರಿಲ್‌ನಲ್ಲಿ ಸಾರ್ವಜನಿಕವಾಗಿ ಸಿಗುವಂತೆ ಮಾಡಲಾಯಿತು. ಅಸ್ಯಾಸಿ ನ್ಸ್ ಕ್ರೀಡ್ ಆಟವನ್ನು ಇಲೆಕ್ಟ್ರಾನಿಕವಾಗಿ ಹಾಗೂ ವಾಲ್ವ್‌ನ ಸಾಫ್ಟ್‌ವೇರ್ ವಿತರಣೆಯ ಕಾರ್ಯಕ್ರಮವಾದ ಸ್ಟೀಮ್‌ ಮೂಲಕ ಮೊದಲೇ ಕಾಯ್ದಿರಿಸಿ ಪಡೆಯಬಹುದಾಗಿತ್ತು. ಅಸ್ಯಾಸಿ ನ್ಸ್ ಕ್ರೀಡ್ ನ ಪಿಸಿ ವರ್ಷನನ್ನು 2008ರ ಏಪ್ರಿಲ್ 8ರಂದು ಉತ್ತರ ಅಮೇರಿಕಾದಲ್ಲಿ ಬಿಡುಗಡೆ ಮಾಡಲಾಯಿತು. ಕನ್ಸೋಲ್ ವರ್ಷನ್‌ನಲ್ಲಿ ಇರದ ನಾಲ್ಕು ಮಿಷನ್‌ಗಳನ್ನು ಸೇರಿಸಲಾಯಿತು. ಆ ನಾಲ್ಕು ಮಿಷನ್‌ಗಳು, ಆರ್ಚರ್ ಅಸ್ಯಾಸಿನೇಷನ್ , ರೂಫ್‌ ಟಾಪ್ ರೇಸ್ ಚಾಲೆಂಜ್, ಮರ್ಚೆಂಟ್ ಸ್ಟ್ಯಾಂಡ್ ದಿಸ್ಟ್ರಕ್ಷನ್ ಚಾಲೆಂಜ್ ಮತ್ತು ಎಸ್ಕಾರ್ಟ್ ಚಾಲೆಂಚ್.[೧೬] 2008ರ ಫೆಬ್ರವರಿಯಿಂದ ಈ ಆಟದ ಅನಧಿಕೃತವಾದ ವರ್ಷನ್ ಇದ್ದಿತು. ಯುಬಿಸಾಫ್ಟ್‌ನ ಪ್ರಕಾರ, ಮೊದಲು ಬಿಡುಗಡೆಯಾದ ಆಟಕ್ಕೆ ಪ್ರಕಾಶಕರೇ ಆಟವನ್ನು ಏಕಾಏಕಿ ಹಾಳು ಮಾಡಲು ಹಾಗೂ ಸ್ಪರ್ಧೆಯನ್ನು ತಪ್ಪಿಸಲು ಬಗ್‌ ಅನ್ನು ಉದ್ದೇಶಪೂರ್ವಕವಾಗಿ ಸೇರಿಸುತ್ತಿದ್ದರು. ಆದರೂ ಆಟಗಾರರು ಅಂತರಜಾಲದಲ್ಲಿ ಲಭ್ಯವಿರುವ ಹೆಚ್ಚಿನ ಮಾಹಿತಿಯನ್ನು ಉಪಯೋಗಿಸಿಕೊಳ್ಳುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು.[೧೭][೧೮] 2008ರ ಮಾರ್ಚ್‌ನಲ್ಲಿ ಅಸ್ಸಾಸಿನ್ಸ್ ಕ್ರೀಡ್‌ ನ ಅನಧಿಕೃತ ವರ್ಷನ್‌ನ ಹೆಸರು ಅನಧಿಕೃತ ಮಾರಾಟದಲ್ಲಿ ಜನಪ್ರಿಯ ಹೆಸರಾಗಿದ್ದಿತು.[೧೯] ಬಗ್‌‍ನ ಇರುವಿಕೆ ಹಾಗೂ ಅನಧಿಕೃತ ಆವೃತ್ತಿ ಎಂದು ಯುಬಿಸಾಫ್ಟ್ ಪರಿಗಣಿಸಿದ್ದ ಆ ಆಟವು "ದುರಸ್ತಿ ಮಾಡಲಾಗದ ಕೆಡುಕನ್ನು" ಮಾಡಿತು ಹಾಗೂ ಅದು ಮಾರಾಟದಲ್ಲೂ ಇಳಿಮುಖವಾಗುವಂತೆ ಮಾಡಿತು. ಎನ್‌ಡಿಪಿಯ ವರದಿಯ ಪ್ರಕಾರ, ಸಂಯುಕ್ತ ಸಂಸ್ಥಾನದಲ್ಲಿ 40,000ಕ್ಕೂ ಹೆಚ್ಚು ಪಿಸಿ ಪ್ರತಿಗಳು ಮಾರಾಟವಾದವು. ಯುಬಿಸಾಫ್ಟ್‌ನ ಪ್ರಕಾರ 7,00,000 ಹೆಚ್ಚು ಪ್ರತಿಗಳನ್ನು ಅನಧಿಕೃತವಾಗಿ ಡೌನ್‌ಲೋಡ್ ಮಾಡಲಾಯಿತು.[೧೭][೨೦] 2008ರ ಜುಲೈನಲ್ಲಿ ಆಪ್ಟಿಕಲ್ ಎಕ್ಸ್‌ಪರ್ಟ್ಸ್ ಮ್ಯಾನುಫ್ಯಾಕ್ಚರಿಂಗ್ ಎಂಬ ಡಿಸ್ಕ್ ತಯಾರಕ ಕಂಪನಿಯು ಈ ಸೋರಿಕೆಗೆ ಕಾರಣವಾಗಿದ್ದು, ಅದು ಅತ್ಯಲ್ಪ ಸುರಕ್ಷಾ ಕ್ರಮಗಳನ್ನು ಅನುಸರಿಸಿತ್ತು. ಅದು ಅಲ್ಲಿ ಉದ್ಯೋಗಿಗಳು ಆ ಆಟದ ಒಂದು ಪ್ರತಿಯನ್ನು ಅವರು ಕೊಂಡೊಯ್ಯಲು ಅವಕಾಶ ಕಲ್ಪಿಸಿತು ಎಂದು ಭಾವಿಸಿ, ಆ ಕಂಪನಿಯ ಮೇಲೆ ಯುಬಿಸಾಫ್ಟ್ ಕಂಪನಿಯು ಕಾನೂನು ಕ್ರಮವನ್ನು ಕೈಗೊಂಡಿತು.[೧೭][೨೦]

ಪ್ರದರ್ಶನ(ಪ್ರಾಯೋಗಿಕ)

[ಬದಲಾಯಿಸಿ]

2007, ಜುಲೈ 10ರಂದು ಮೈಕ್ರೋಸಾಫ್ಟ್‌ನ ಇ3 ಪ್ರೆಸ್ ಕಾನ್‌ಫ್ರೆಂಸ್‌ನಲ್ಲಿ, ಮೊದಲು ನೋಡಿರದ ಜರುಸಲೇಂ ನಗರವನ್ನು ಉಪಯೋಗಿಸಿಕೊಂಡು ಪ್ರದರ್ಶಿಸಲಾಯಿತು. ಅಲ್ಲಿ ಪ್ರದರ್ಶಿಸಲಾದ ಆಟದಲ್ಲಿ ಉತ್ತಮಪಡಿಸಲಾದ ಕ್ರೌಡ್ ಮೆಕಾನಿಕ್ಸ್, "ಚೇಸ್" ಸಿಸ್ಟಮ್(ಗುರಿಯು ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಹಿಂಬಾಲಿಸುವುದು), ಪಾರ್ಕ್ವರ‍್ ಇದೆ. ಇಲ್ಲಿ ಮೊದಲ ಬಾರಿಗೆ ಅಲ್ಟೆರ್ ಮಾತನಾಡುವುದನ್ನು ಕೇಳಿಸಿಕೊಂಡ. ಇದನ್ನು ಮತ್ತೆ 2007ರ ಜುಲೈ 11ರಂದು 20 ನಿಮಿಷಗಳ ಕಾಲ ತೋರಿಸಲಾಯಿತು. ಈ ದೃಶ್ಯಾವಳಿಯು ಇ3ಯಲ್ಲಿ ಪ್ರದರ್ಶಿತವಾದ ಪ್ರದರ್ಶನದ ವಿಸ್ತೃತ ರೂಪವಾಯಿತು ಮತ್ತು ಇದು ಗುಲಾಮಿ ವ್ಯಾಪಾರಿ ತಲಾಲ್‌ನನ್ನು ಹತ್ಯೆ ಮಾಡಿದ ಬಳಿಕ ಅಲ್ಟೆರ್ ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ಒಳಗೊಂಡಿತ್ತು. 2007ರ ಆಗಸ್ಟ್ 26ರಂದು ಪೆನ್ನಿ ಆರ್ಕೇಡ್ ಎಕ್ಸ್‌ಪೊದಲ್ಲಿ ಅಸ್ಯಾಸಿನ್ಸ್ ಕ್ರೀಡ ನ್ನು 11ನಿಮಿಷಗಳ ಕಾಲ ಪ್ರದರ್ಶಿಸಲಾಯಿತು. ಇ3 ಡೆಮೊದಲ್ಲಿ ತೋರಿಸಲಾದ ಹಂತವನ್ನೇ ಅಲ್ಲೂ ತೋರಿಸಲಾಯಿತು.ಆದರೆ ಗುರಿಯನ್ನು ತಲುಪಲು ಬೇರೆ ಹಾದಿಯನ್ನು ಬಳಸಲಾಗಿತ್ತು. ಡೆಮೊದ ಕೊನೆಯಲ್ಲಿ ಜರೂಸಲೇಂನಲ್ಲಿ ಅಸ್ಯಾಸಿನ್ಸ್ ಬ್ಯೂರೋದ ಮುಖ್ಯಸ್ಥನಾಗಿರುವ ಮಲ್ಲಿಕ್ ಮತ್ತು ಅಲ್ಟೆರ್‌ನ ನಡುವಿನ ಸಂಭಾಷಣೆಯನ್ನು ತೋರಿಸಲಾಯಿತು.

ಸೀಮಿತ ಆವೃತ್ತಿ

[ಬದಲಾಯಿಸಿ]

ಉತ್ತರ ಅಮೇರಿಕದ ಎಕ್ಸ್‌ಬಾಕ್ಸ್ 360 ಮತ್ತು ಪಿಎಸ್3ಯ ಸೀಮಿತ ಆವೃತ್ತಿಗಳಲ್ಲಿ, ಆಟ, 3-ಅಂಗುಲದ ಅಲ್ಟರ್ ಮೂರ್ತಿ, ಪೆನ್ನಿ ಆರ್ಕೇಡ್ ಕಾಮಿಕ್ಸ್, ಒಂದು ಪ್ರತಿಕೃತಿಯ ನಿಯಮಾವಳಿ ಕೈಪಿಡಿ ಮತ್ತು ಅಸ್ಯಾಸಿನ್ಸ್ ಕ್ರೀಡ್ ಶಾರ್ಟ್ ಫಿಲ್ಮ್ ಸ್ಪರ್ಧೆಯಲ್ಲಿ ಜಯಿಸಿದವರಿಗೆ ಹೆಚ್ಚುವರಿ ಡಿವಿಡಿ, ಅದರೆ ಹಿಂದೆ, ದೃಶ್ಯಾವಳಿಗಳು, ಅಭಿವೃದ್ಧಿಪಡಿಸಿದವರ ಡೈರಿ, ಟ್ರೇಲರ್ಸ್, ನಿರ್ಮಾಕರ ಸಂದರ್ಶನ ಮತ್ತು ಡೌನ್‌ಲೋಡ್‌ ಗಳಿದ್ದವು.

ಎಕ್ಸ್‌ಬಾಕ್ಸ್ 360 ಮತ್ತು ಪಿಎಸ್3ನಲ್ಲಿ ಮೂರು ಯೂರೋಪಿಯನ್ ಸೀಮಿತ ಆವೃತ್ತಿಗಳ ಪ್ಯಾಕೇಜ್ ಇದೆ. ಅದರಲ್ಲಿ ಮೊದಲನೆಯದು: ಆಟ, ಒಂದು 8 ಅಂಗುಲ(210ಮಿ.ಮೀ)ದ ಬಣ್ಣ ಬಳಿದಿರುವ ಅಲ್ಟೆರ್‌ನ ರೆಸಿನ್ ಮೂರ್ತಿಯನ್ನು, ಎರಡನೆಯದು: ಆಟವನ್ನು, 4 ಹೆಚ್ಚುವರಿ ಅಂಚೆ ಕಾರ್ಡ್‌ಗಳು ಮತ್ತು ಅದನ್ನು ಸ್ಟೀಲ್ ಕೇಸ್‌ ಪ್ಯಾಕೇಜ್‌ನಲ್ಲಿಟ್ಟಿರುವುದನ್ನು ಹಾಗೂ ಮೂರನೆಯದು: ಆಟ, ಪಿಸಿ ಡಿವಿಡಿ ರೋಮ್(ಆರ್‍ಒಎಂ) ಹೆಚ್ಚುವರಿ ಡಿಸ್ಕ್, 17 ಪುಟಗಳ ಕಾಸ್ಮಿಕ್ ಪುಸ್ತಕ ಹಾಗೂ ಅದನ್ನು ಸ್ಟೀಲ್ ಕೇಸ್‌ ಪ್ಯಾಕೇಜ್‌ನಲ್ಲಿಟ್ಟಿರುವುದನ್ನು ಒಳಗೊಂಡಿದೆ. ವಿಂಡೋಸ್ ಪಿಸಿಗಳಿಗಾಗಿ ಇರುವ ಯೂರೋಪಿಯನ್ ಸೀಮಿತ ಆವೃತ್ತಿಗಳು ಸ್ಟೀಲ್ ಕೇಸ್‌ ಪ್ಯಾಕೇಜ್‌ನಲ್ಲಿಟ್ಟಿರುವ ಡೈರೆಕ್ಟರ್ಸ್ ಕಟ್‌ ಗೇಮ್‌ನ್ನು ಒಳಗೊಂಡಿದೆ.g.

ಪ್ರತಿಕ್ರಿಯೆಗಳು ಹಾಗೂ ವ್ಯಾಪಾರ

[ಬದಲಾಯಿಸಿ]
 Reception
Aggregate scores
Aggregator Score
GameRankings 79.14% (PC)[೨೧]

78.94% (PS3)[೨೨]
82.24% (360)[೨೩]

Metacritic 79/100 (PC)[೨೪]

80/100 (PS3)[೨೫]
81/100 (360)[೨೬]

Review scores
Publication Score
1UP.com 70/100
Electronic Gaming Monthly 58/100
Eurogamer 7/10
Famitsu 37/40
Game Informer 9.5/10
GamePro 5/5
GameSpot 9.0/10
GameSpy 3.5/5
GamesRadar 10/10
GamesTM 4/10
GameTrailers 9.1/10
Hyper 95/100
IGN 75/100
Official Xbox Magazine 8.5/10
Play 10/10
PSM 5/5
X-Play 5/5

ಅಸ್ಯಾಸಿನ್ ಕ್ರೀಡ್ ಆಟವು ಸಾಮಾನ್ಯವಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆದಿದೆ. ಹಾಗಿದ್ದರೂ ಯುರೊಗೇಮರ್‌‍ ನಂತಹ ಪ್ರಕಾಶಕರು ಈ ಆಟಕ್ಕೆ ಸಾಧಾರಣವಾದ ಅಂಕಗಳನ್ನು ನೀಡಿದ್ದು ಕೆಲವು ಪ್ರಮುಖ ದೋಷಗಳನ್ನು ತೋರಿಸಿದ್ದಾರೆ. "ಈ ಆಟವು ಆಸಕ್ತಿಯನ್ನು ಉಂಟುಮಾಡುವಂತಿಲ್ಲ ಹಾಗೂ ಕೊನೆಗೆ ಸ್ವಲ್ಪ ಪ್ರಮಾಣದಲ್ಲಿ ಬೇಜಾರು ತರುತ್ತದೆ ಮತ್ತು ಅದು ಪೂರ್ಣವಾಗಿ ಪುನರಾವರ್ತಿಸುತ್ತದೆ" ಎಂದು ಯುರೋಗೇಮರ್ ಹೇಳಿದ.[೨೭] ಇಜಿಎಂ(ಕಜ್)ಗಾಗಿನ ಆಂಡ್ರೀವ್ ಪಿ.ಯ ವಿಮರ್ಶೆಯಲ್ಲಿ ಆತ "ಒಂದು ಸ್ಪರ್ಧಾತ್ಮಕ ಪಾರ್ಕೌರ್‌ನ ತಪ್ಪಿಸಿಕೊಳ್ಳಬಹುದಾದ ದಾರಿಯಾಗಿದೆ.."ಎಂದು ಹೇಳಿದ.[೨೮] ಫೆಮಿಸು, ಅಸ್ಯಾಸಿನ್ಸ್‌ ಕ್ರೀಡ್‌ನ ಎಕ್ಸ್‌ಬಾಕ್ಸ್ 360 ವರ್ಷನ್‌ಗೆ 40ಕ್ಕೆ 36(9,9,9,9) ಹಾಗೂ ಪಿಎಸ್3 ವರ್ಷನ್‌ಗೆ 37(10,8,9,10) ಅಂಕಗಳನ್ನು ನೀಡಿದ. ಕಥೆ, ಪ್ರದರ್ಶನ ಮತ್ತು ಸಾಹಸಗಳು ಚೆನ್ನಾಗಿದ್ದವು. ಆದರೆ ಒಂದು ಗುಂಡಿಯಿಂದ ಯುದ್ಧ ಮಾಡುವ, ನಕ್ಷೆಯ ವಿನ್ಯಾಸ ಮತ್ತು ಕ್ಯಾಮರಾ ಸರಿಯಿರಲಿಲ್ಲ ಎಂದು ಟೀಕಿಸಿದ.[೨೯][೩೦] ಗೇಮ್ ಇನ್ಫಾರ್ಮರ್ ಅಸ್ಯಾಸಿಮ್ ಕ್ರೀಡ್‌ ಗೆ 10ಕ್ಕೆ 9.5ಅಂಕಗಳನ್ನು ನೀಡಿತು. ಅದರ ನಿಯಂತ್ರಣ, ಮರು ಆಟ(ರೀಪ್ಲೆ) ಮತ್ತು ಕುತೂಹಲ ಹುಟ್ಟಿಸುವ ಕಥೆಯನ್ನು ಹೊಗಳಿತು, ಆದರೆ ಮಿಶನ್‌ಗಳ "ಪುನರಾವರ್ತಿಸುವ" ಮಾಹಿತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿತು.[೩೧] ಇಎಸ್‌ಪಿಎನ್‌EWS, ಇಎಸ್‌ಪಿಎನ್‌‌ನ ಹಾಟ್‌ಲಿಸ್ಟ್‌‌‍ನಲ್ಲಿ ಆರೋನ್ ಬೌಲ್ಡಿಂಗ್‌‍ ಈ ಆಟದಲ್ಲಿರುವ ಗುಪ್ತ ಸಾಮಾಜಿಕ ಪರಿಕಲ್ಪನೆಯು "ಉತ್ತಮವಾದ ಮೂಲ" ಪರಿಕಲ್ಪನೆಯಾಗಿದೆ ಹಾಗೂ ದೃಶ್ಯಕ್ಕೆ ಸಂಬಂದಪಟ್ಟಂತೆ ವಿನ್ಯಾಸಕಾರರು ಇದನ್ನು ಶ್ರೀಮಂತವಾಗಿಸಿದ್ದಾರೆ" ಎಂದು ಹೇಳಿದ್ದಾರೆ.[೩೨] ಗೇಮ್ ಟ್ರೇಲರ್ಸ್ ಸಹ ಇದೇ ರೀತಿಯಲ್ಲಿ ಕಥೆಯನ್ನು ಹೊಗಳಿದರು(9.7 ಅಂಕಗಳನ್ನು ನೀಡಿದರು) ಹಾಗೂ ಪುನರಾವರ್ತಿಸುವ ಆಟ ಮತ್ತು "ಮೊರೊನಿಕ್‌" ಬಗ್ಗೆ ಉಲ್ಲೇಖಿಸಿದರು. AI ಇದರ ಸಾಮರ್ಥ್ಯವನ್ನು ಗಟ್ಟಿಗೊಳಿಸಿದೆ. "ಅಸ್ಯಾಸಿನ್ ಕ್ರೀಡ್ ಇದು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದ ಕ್ರೀಡೆಯಾಗಿದ್ದು ಆದರೂ ಇದು ಕೆಲವು ಮೂಲಭೂತ ಸಾಧ್ಯತೆಗಳನ್ನು ಕೆದಕುವಲ್ಲಿ ಯಶಸ್ವಿಯಾಗಲಿಲ್ಲ." ಎಂದು ಗೇಮ್‌ಟ್ರೇಲರ್ಸ್‌ ಹೇಳಿಕೊಂಡಿದೆ.[೩೩] ಈ ಆಟವು ಗೇಮ್ಸ್ ರೆಡಾರ್‌ನಿಂದ 10ಕ್ಕೆ 10 ಅಂಕಗಳನ್ನು ಪಡೆದಿದೆ. 80/81(ಅನುಕ್ರಮವಾಗಿ ಪಿಎಸ್3/ಎಕ್ಸ್‌ಬಾಕ್ಸ್360) ಮೆಟಾಕ್ರಿಟಿಕ್ ಅಂಕಗಳನ್ನು ಪಡೆದಿದೆ.[೩೪] ಗೇಮ್‌ಪ್ರೊ ಪ್ರಕಾರ,ಅಸ್ಸಾಸಿನ್ಸ್ ಕ್ರೀಡ್‌ ನ ಘಟನಾವಳಿಗಳು ನಿಧಾನವಾಗಿ ಆಗುವುದರಿಂದ, "ತಾಳ್ಮೆ"ಯಿಂದ ಇದ್ದರೆ, ಅಸ್ಯಾಸಿನ್ಸ್ ಕ್ರೀಡ್ ಆಟವು "ಸೃಷ್ಟಿ ಮಾಡಿರುವ ಒಂದು ಸುಂದರವಾದ ಅನುಭವವನ್ನು ಕೊಡುವ ಆಟವಾಗಿದೆ".[೩೫] ಹೈಪರ್ಸ್ ಡಾರೆನ್ ವೆಲ್ಸ್ ಈ ಆಟದ "ಉತ್ತಮ ಕಥೆ, ಚಿತ್ರಣ ಮತ್ತು ಇಂದ್ರೀಯಗಳಿಂದ ಹತೋಟಿ ಮಾಡುವುದರ" ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ "ಪಿಸಿಯಲ್ಲಿ ಕೆಲವು ಮಿಶನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದನ್ನು ಹಾಗೂ ಉದ್ದನೆಯ ಮೆನುವಿನ ಪದ್ಧತಿಯನ್ನು ಟೀಕಿಸಿದ್ದಾನೆ.[೩೬] 2006ರ ಇ3ಯಲ್ಲಿ ಅಸ್ಯಾಸಿನ್ ಕ್ರೀಡ್ ಅನೇಕ ಪ್ರಶಸ್ತಿಗಳನ್ನು ಗೆದ್ದಿತು. . ಗೇಮ್ ಕ್ರಿಟಿಕ್ಸ್ "ಬೆಸ್ಟ್ ಅ‍ಯ್‌ಕ್ಷನ್/ಅಡ್ವೆಂಚರ್ ಗೇಮ್" ಎಂಬ ಪ್ರಶಸ್ತಿಯನ್ನು ನೀಡಿತು.[೩೭] ಇಜಿಎನ್ "ಬೆಸ್ಟ್ ಅ‍ಯ್‌ಕ್ಷನ್ ಗೇಮ್", ಪಿಎಸ್3 ಗೇಮ್ ಆಫ್ ದಿ ಶೋ", ಬೆಸ್ಟ್ ಪಿಎಸ್3 ಅ‍ಯ್‌ಕ್ಷನ್ ಗೇಮ್", "ಬೆಸ್ಟ್ ಪಿಎಸ್3 ಗ್ರಾಫಿಕ್ಸ್" ಪ್ರಶಸ್ತಿಗಳನ್ನು ನೀಡಿತು. ಗೇಮ್‌ಸ್ಪಾಟ್ ಮತ್ತು ಗೇಮ್‌ಸ್ಪೈ, "ಬೆಸ್ಟ್ ಪಿಎಸ್3 ಗೇಮ್ ಆಫ್ ದಿ ಶೋ" ಎಂಬ ಪ್ರಶಸ್ತಿಯನ್ನು, ಗೇಮ್ ಟ್ರೈಲರ್ಸ್ "ಬೆಸ್ಟ್ ಆಫ್ ಶೋ" ಎಂಬ ಪ್ರಶಸ್ತಿಯನ್ನು ಹಾಗೂ 1ಯುಪಿ.ಕಾಮ್ " ಬೆಸ್ಟ್ ಪಿಎಸ್3 ಗೇಮ್ ಪ್ರಶಸ್ತಿ"ಯನ್ನು ನೀಡಿತು. ಎಕ್ಸ್-ಪ್ಲೇ[೩೮] ಮತ್ತು ಸ್ಪೈಕ್ ಟಿವಿ ಕ್ರೀಡ ನ್ನು ಅನೇಕ ಪ್ರಶಸ್ತಿಗಳಿಗೆ ಸೂಚಿಸಿದವು[೩೯] ಪ್ರಕಾಶಕರ ಪ್ರಕಾರ ಅನಿರೀಕ್ಷಿತವಾಗಿ ಅಸ್ಯಾಸಿನ್ಸ್ ಕ್ರೀಡ್‌ನ ಮಾರಾಟವು ಹೆಚ್ಚಾಗಿದೆ.

ತನ್ನ ಅಧಿಕೃತ ಸಂದರ್ಶನದಲ್ಲಿ ಯುಬಿಸಾಫ್ಟ್ ಹೀಗೆ ಹೇಳಿದೆ:

ಅಸ್ಯಾಸಿನ್ ಕ್ರೀಡ್, ಯುಬಿಸಾಫ್ಟ್‌ನ ಮಾರಾಟದ ನಿರೀಕ್ಷೆಗೆಗಿಂತ ಬಹಳ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿದ್ದು, ಪ್ಲೇಸ್ಟೇಷನ್ 3 ಕಂಪೂಟರ್ ಎಂಟರ‍್ಟೇನ್ಮೆಂಟ್ ಸಿಸ್ಟಮ್‌ಗೆ ಹೆಚ್ಚು ಮಾರಾಟವಾಗುವ ಆಟಗಳಲ್ಲಿ ಮೊದಲ ಎರಡನೇ ಅಥವಾ ಮೂರನೇ ಸ್ಥಾನದಲ್ಲಿದೆ. ಎಕ್ಸ್‌ಬಾಕ್ಸ್360 ವಿಡಿಯೋ ಗೇಮ್ ಮತ್ತು ಎಂಟರ‍್ಟೇನ್‌ಮೆಂಟ್ ಹೆಚ್ಚು ಭೌಗೋಳಿಕ ಪ್ರದೇಶದಲ್ಲಿದೆ. ನಾಲ್ಕು ವಾರಗಳಿಗಿಂತ ಕಡಿಮೆ ಸಮಯದಲ್ಲಿ ವಿಶ್ವಾದ್ಯಂತ ಅಸ್ಯಾಸಿನ್ಸ್ ಕ್ರೀಡ್‌ನ ಎರಡೂವರೆ ಮಿಲಿಯನ್‌ಗಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇದು ಸಂಯುಕ್ತ ಸಂಸ್ಥಾನದಲ್ಲಿ ಇದುವರೆಗಿನ ವಿಡಿಯೋ ಗೇಮ್‌ನ ವೇಗದ ಮಾರಾಟವಾಗಿದೆ. ಇದರ ಪರಿಣಾಮವಾಗಿ, 2007-08ರಲ್ಲಿ ಮೊದಲು ಅಂದಾಜು ಮೂರು ಮಿಲಿಯನ್ ಪ್ರತಿಗಳು ಮಾರಾಟವಾಗುತ್ತದೆಂದು ಹೇಳಲಾಗಿತ್ತಾದರೂ, ನಂತರ ಕನಿಷ್ಠ ಐದು ಮಿಲಿಯನ್ ಪ್ರತಿಗಳು ಮಾರಾಟವಾಗಬಹುದೆಂದು ಯುಬಿಸಾಫ್ಟ್ ಭವಿಷ್ಯ ನುಡಿಯಿತು.

[೪೦]

ಯುಕೆಯಲ್ಲಿ ಅಸ್ಯಾಸಿನ್ ಕ್ರೀಡ್ ಪಾದಾರ್ಪಣೆ ಮಾಡಿ ಇನ್ಫಿನಿಟಿ ವಾರ್ಡ್ಸ್Call of Duty 4: Modern Warfare ಎಂಬ ಆಟವನ್ನು ಪ್ರಥಮ ಸ್ಥಾನದಿಂದ ಹೊಡೆದೋಡಿಸಿ, ತಾನು ಪ್ರಥಮ ಸ್ಥಾನ ಗಳಿಸಿತು. ಆರಂಭದಲ್ಲಿ ಎಕ್ಸ್‌ಬಾಕ್ಸ್360 ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಯಿತು. ಒಟ್ಟು ಮಾರಾಟವಾದ ಆಟಗಳಲ್ಲಿ ಇದರ ಭಾಗ 67% ಆಗಿದ್ದಿತು.[೪೧] 2009ರ ಏಪ್ರಿಲ್ 16ರಂದು, ಆ ದಿನದ ವರೆಗೆ ಒಟ್ಟು 8 ಮಿಲಿಯನ್ ಪ್ರತಿಗಳು ಮಾರಾಟವಾಗಿವೆ ಎಂದು ಯುಬಿಸಾಫ್ಟ್ ಬಹಿರಂಗಪಡಿಸಿತು.[೪೨]

ವಿಶೇಷ ಹಕ್ಕು

[ಬದಲಾಯಿಸಿ]

ಆಟಕ್ಕೆ ಶಿರೋನಾಮೆಯನ್ನು ನೀಡಿ ಅದನ್ನು ಗೇಮ್‌ಲಾಫ್ಟ್[೪೩] ಎಂಬ ಪ್ರಾರಂಭಿಕ ಆವೃತ್ತಿ(prequel)ಯನ್ನು ಅಭಿವೃದ್ಧಿಪಡಿಸಿತುAssassin's Creed: Altaïr's Chronicles ಮತ್ತು ಅದನ್ನು 2008ರ ಫೆಬ್ರವರಿ 5ರಂದು ನಿಂಟೆಂಡೊ ಡಿಎಸ್‌ಗಾಗಿ ಬಿಡುಗಡೆ ಮಾಡಲಾಯಿತು.[೪೪] ಅಸ್ಯಾಸಿನ್ಸ್ ಕ್ರೀಡ್‌ನ ಅಲ್ಟೆರ್ ಕ್ರೋನಿಕಲ್ಸ ನ್ನು 2009ರ ಏಪ್ರಿಲ್ 23ರಂದು ಐಫೋನ್, ಐಪಾಡ್ ಟಚ್, ಜಾವಾ ಮಿ ಮತ್ತು ಪಾಮ್ ಪ್ರಿಗಳಿಗಾಗಿ ಬಿಡುಗಡೆ ಮಾಡಲಾಯಿತು.[೪೫][೪೬]

2009ರ ಜನವರಿ 21ರಂದು ಯುಬಿಸಾಫ್ಟ್ ಕಂಪನಿಯು ಅಸ್ಯಾಸಿನ್ಸ್ ಕ್ರೀಡ್ II ಆಟವು ನಿರ್ಮಾಣ ಹಂತದಲ್ಲಿದೆ ಎಂದು ದೃಢಪಡಿಸಿತು ಮತ್ತು ಅದನ್ನು 2009-2010ರ ವಿತ್ತೀಯ ವರ್ಷದಲ್ಲಿ ಬಿಡುಗಡೆ ಮಾಡಬೇಕೆಂಬ ಗುರಿಯನ್ನು ಹೊಂದಿತ್ತು. ಇದನ್ನು ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ 2009ರ ನವೆಂಬರ್ 17ರಂದು ಹಾಗೂ ಯೂರೋಪ್‌ನಲ್ಲಿ 2009ರ ನವೆಂಬರ್ 20ರಂದು ಬಿಡುಗಡೆ ಮಾಡಲಾಯಿತು.[೪೭] 2009ರ ಜೂನ್‌ 2ರಂದು ತಮ್ಮ ಇ3 ಕಾನ್ಫರೆನ್ಸ್ನಲ್ಲಿ ಸೋನಿಯುAssassin's Creed: Bloodlines ಪ್ಲೇಸ್ಟೇಷನ್ ಪೋರ್ಟೆಬಲ್‌ಗಾಗಿ 2010ರ ನವೆಂಬರ್ 10ರಂದು ಆಟವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು.[೪೮] ಕನಿಷ್ಠ ಪಕ್ಷ ಮೂರನೇ ಆಟವಿರಬೇಕೆಂದು ಸಹ ಇ3ಯಲ್ಲಿ ಘೋಷಿಸಿತು..[೪೯] 2010ರ ಜನವರಿ 14ರಲ್ಲಿ ಯುಬಿಸಾಫ್ಟ್ ಹೊಸ ಅಸ್ಯಾಸಿನ್ಸ್ ಕ್ರೀಡ್ ಆಟವನ್ನು 2011ರ ಮಾರ್ಚ್‌ನಲ್ಲಿ ಆರ್ಥಿಕ ವರ್ಷದ ಕೊನೆಗೆ ಮೊದಲು ಬಿಡುಗಡೆ ಮಾಡುವುದಾಗಿ ದೃಢಪಡಿಸಿತು. ಇದು ಎರಡನೇ ಆಟದಲ್ಲಿ ನಾಯಕನಾದ ಇಜಿಯೊ Auditore da ಫೈರೆಂಜ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿದೆ ಎಂದು ಹೇಳಿತು. ಸಿಇಒ ವ್ಯೆಸ್‌‍ ಗಿಲ್ಮಾಟ್, ಈ ಆಟವು "ಬಹುಆಟಗಾರರ ಸಾಧನ"ವನ್ನು ಹೊಂದಿರುತ್ತದೆ ಎಂದು ಹೇಳಿದ.[೫೦] ಈ ಆಟದ Assassin's Creed: Brotherhood ಚುಟಕಾದ ಜಾಹೀರಾತನ್ನು 2010ರ ಮೇ 10ರಂದು ಬಿಡುಗಡೆ ಮಾಡಲಾಯಿತು ಮತ್ತು ಅದನ್ನು ಅಧಿಕೃತವಾಗಿ 2010ರ ಮೇ 11ರಂದು ಯುಬಿಸಾಫ್ಟ್‌ ನ ಸುದ್ಧಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು ಹಾಗೂ ಅದನ್ನು ಅಧಿಕೃತವಾಗಿ 2010ರ ನವೆಂಬರ‍್ 10ರಂದು[೫೧] ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಲಾಯಿತು. ಬ್ರದರ‍್ಹುಡ್ ಆಟವು "ಆಸ್ಯಾಸಿನ್ಸ್ ಕ್ರೀಡ್ 3 " ಅಲ್ಲವೆಂದು ಮತ್ತು ಅದರಲ್ಲಿನ ಮೂರನೇ ಸೇರ್ಪಡೆಯು ಮೊದಲಿದ್ದ ಪಾತ್ರಧಾರಿಯಲ್ಲವೆಂದು ದೃಢಪಟ್ಟಿತು.

ಉಲ್ಲೇಖಗಳು

[ಬದಲಾಯಿಸಿ]
  1. ಉಲ್ಲೇಖ ದೋಷ: Invalid <ref> tag; no text was provided for refs named Assassins creed Dated
  2. ಅಸ್ಸಾಸಿನ್ಸ್ ಕ್ರೀಡ್ ಅಭಿವರ್ಧಕ ಡೈರಿಗಳು
  3. "ಐಜಿಎನ್: ಅಸ್ಸಾಸಿನ್ಸ್ ಕ್ರೀಡ್ ಮುನ್ನೋಟ". Archived from the original on 2011-09-19. Retrieved 2010-09-13.
  4. ಐಜಿಎನ್ : ಐಜಿಎನ್ ವಿಶಿಷ್ಟವಾದ ಸಂದರ್ಶನ: ಕ್ರಿಸ್ಟನ್ ಬೆಲ್
  5. "Interview: Assassin's creed". Computer and videogames. Retrieved November 3, 2008.
  6. Nick Doerr. "Assassin's Creed producer speaks out, we listen intently [update 1]". Retrieved November 3, 2008.
  7. ಐಜಿಎನ್: ಅಸ್ಸಾಸಿನ್ಸ್ ಕ್ರೀಡ್ ಎಯು ಸಂದರ್ಶನ: ಡೆಸಿಲೆಟ್ಸ್ ಅಭ್ಯಾಸ
  8. ಫಿಲಿಪ್ ಶಹ್‌ಬಜ್
  9. (French) [https://web.archive.org/web/20080213161241/http://www.lienmultimedia.com/article.php3?id_article=13885 Archived 2008-02-13 ವೇಬ್ಯಾಕ್ ಮೆಷಿನ್ ನಲ್ಲಿ. [ಅಸ್ಸಾಸಿನ್ಸ್ ಕ್ರೀಡ್] Francisco Randez prête son visage à Altaïr] lienmultimedia.com. ಏಪ್ರಿಲ್ 28, 2007ರಲ್ಲಿ ಮರುಸಂಪಾದಿಸಲಾಗಿದೆ.
  10. "Francisco Randez". modelresource. Retrieved 2009-04-15.
  11. McWhertor, Michael (2007-10-16). "Assassin's Creed Score Is BAFTAstic". Kotaku. Archived from the original on 2012-07-28. Retrieved 2008-05-11.
  12. "Soundtrack's - Assassin's Creed - Ubisoft". Ubisoft. Retrieved 2008-05-11.
  13. "ಜೆಸ್ಪರ್ ಕೈಡ್‌ನ ಟ್ರಾಕ್‌ಸೌಂಡ್ಸ್ ನೌ!:ಅಸ್ಸಾಸಿನ್ಸ್ ಕ್ರೀಡ್ (ಸೌಂಡ್‌ಟ್ರಾಕ್)". Archived from the original on 2012-04-25. Retrieved 2010-09-13.
  14. ಐಟ್ಯೂನ್ಸ್ - ಜೆಸ್ಪರ್ ಕೈಡ್‌ - ಅಸ್ಸಾಸಿನ್ಸ್ ಕ್ರೀಡ್ (ನೈಜ ಆಟದ ಸೌಂಡ್‌ಟ್ರಾಕ್). Itunes.apple.com. 2009-06-29ರಂದು ಪಡೆಯಲಾಗಿದೆ
  15. Plunkett, Luke (January 22, 2008). "Assassin's Creed PC Specs: Your PC Will Weep Like A Scolded Child". Kotaku. Archived from the original on 2008-11-04. Retrieved 2008-10-14.
  16. ಅಸ್ಸಾಸಿನ್ಸ್ ಕ್ರೀಡ್ ಪಿಸಿ: ನ್ಯೂ ಇನ್ವೆಸ್ಟಿಗೇಶನ್ಸ್ ಟೈಪ್ಸ್ –ನ್ಯೂಸ್
  17. ೧೭.೦ ೧೭.೧ ೧೭.೨ Sinclair, Brendan (2008-08-06). "Ubisoft sues over Assassin's Creed leak". GameSpot. Retrieved 2008-08-07.
  18. Rossignol, Jim (2008-03-04). "So... Assassin's Creed PC?". Rock, Paper, Shotgun. Retrieved 2008-03-06.
  19. Gillen, Kieron (2008-03-05). "The Yarr-ts: Piracy Snapshot 5.3.2008". Rock, Paper, Shotgun. Retrieved 2008-03-06.
  20. ೨೦.೦ ೨೦.೧ Jenkins, David (2008-08-07). "Ubisoft Files $10M Suit Over Assassin's Creed PC Leak". Gamasutra. Retrieved 2008-08-07.
  21. "Assassin's Creed for PC - GameRankings". GameRankings. Archived from the original on 2014-02-19. Retrieved 2009-08-15.
  22. "Assassin's Creed for PlayStation 3 - GameRankings". GameRankings. Archived from the original on 2012-03-07. Retrieved 2009-08-15.
  23. "Assassin's Creed for Xbox 360 - GameRankings". GameRankings. Archived from the original on 2012-06-06. Retrieved 2009-08-15.
  24. "Assassin's Creed Director's Cut (pc) reviews at Metacritic.com". GameRankings. Archived from the original on 2012-01-27. Retrieved 2009-08-15.
  25. "Assassin's Creed (ps3) reviews at Metacritic.com". GameRankings. Archived from the original on 2011-12-22. Retrieved 2009-08-15.
  26. "Assassin's Creed (xbox360) reviews at Metacritic.com". GameRankings. Archived from the original on 2012-03-15. Retrieved 2009-08-15.
  27. ಅಸ್ಸಾಸಿನ್ಸ್ ಕ್ರೀಡ್ ಪುನರವಲೋಕನ// Xಬಾಕ್ಸ್ 360 /// ಯುರೊಗೇಮರ್
  28. ಆ‍ಯ್‌೦ಡ್ರ್ಯೂ ಪಿ., " ಅಸ್ಸಾಸಿನ್ಸ್ ಕ್ರೀಡ್ ನ ಪುನರವಲೋಕನ," ಎಲೆಕ್ಟ್ರಾನಿಕ್ ಗೇಮಿಂಗ್ ಮಂತ್ಲೀ 224 (ಜನವರಿ 2008): 89.
  29. ಫಮಿಟ್ಸು ರಿವ್ಯೂಸ್ ಡ್ರಾಗನ್ಸ್ ಕ್ವೆಸ್ಟ್ IV, ಅಸ್ಸಾಸಿನ್ಸ್ ಕ್ರೀಡ್‌, ಗಿಲ್ಟೀ ಗಿಯರ್ 2 ಮತ್ತು ಇತರೆ
  30. ಅಸ್ಸಾಸಿನ್ಸ್ ಕ್ರೀಡ್ ನಾಬ್ಸ್ 37/40 ಫ್ರಂ ಫಮಿಟ್ಸು
  31. ಗೇಮ್ ಇನ್‌ಫಾರ್ಮರ್ , ಡಿಸೆಂಬರ್ 2007 ಆವೃತ್ತಿ
  32. ಇಎಸ್‌ಪಿಎನ್‌– ಇಸೀ ಪಾಯಿಂಟ್ಸ್ – 'ಟಿಇಸ್ ದ ಸೀಸನ್ – ವೀಡಿಯೋ ಆಟಗಳು
  33. ಗೇಮ್‌ಟ್ರೈಲರ್ಸ್ ಅಸ್ಸಾಸಿನ್ಸ್ ಕ್ರೀಡ್ ವೀಡಿಯೊ ಪುನರಾವಲೋಕನ
  34. "Assassin's Creed (xbox 360: 2007) Reviews". Archived from the original on 2009-11-24. Retrieved 2010-09-13.
  35. Melick, Todd (November 14, 2007). "Assassin's Creed review". GamePro. Retrieved 2008-01-08.
  36. Wells, Darren (June 2008). "Assassin's Creed". Hyper. Next Media (176): 54. ISSN 1320-7458.
  37. "2006 Winners". gamecriticsawards.com. Retrieved 2008-03-23.
  38. "2007 X-Play Best of 2007 Award Nominations". G4. Retrieved 2007-12-10.
  39. Magrino, Tom (2007-11-11). "Halo 3, BioShock top Spike TV noms". GameSpot. Retrieved 2007-11-11.
  40. "Ubisoft Announces Outstanding Sales Performance For Assassin's Creed and Raises Guidance for Fiscal 2007-08". Ubisoft. Retrieved January 4, 2008.
  41. [೧]
  42. "Ubisoft Unveils Assassins Creed II" (PDF). Ubisoft. Retrieved June 4, 2009.
  43. "ಅಸ್ಸಾಸಿನ್ಸ್ ಕ್ರೀಡ್:ಆಲ್ಟೈರ್ಸ್ ಕ್ರೋನಿಕಲ್ಸ್ " ಪಾಕೆಟ್‌ಗೇಮರ್. 2008ರ ಅಕ್ಟೋಬರ್ 11ರಂದು ಮರುಸಂಪಾದಿಸಲಾಯಿತು.
  44. "Nintendo lays out Q4 '07, Q1 '08 slate". GameSpot. Retrieved December 29, 2007.
  45. Starrett, Charles (2009-04-14). "Gameloft previews Assassin's Creed for iPhone, iPod touch". iLounge. Archived from the original on 2009-04-17. Retrieved 2009-04-15.
  46. ಆರ್ಟಿಕಲ್ಸ್ ಡೇಟೈಲ್- ಪಿಸಿ ಗೇಮಿಂಗ್, ಪ್ಲೇಸ್ಟೇಶನ್, ವೀ, ನಿಟೆಂಡೊ ಡಿಎಸ್, Xಬಾಕ್ಸ್ 360, ನ್ಯೂಸ್ , ರಿವ್ಯೂಸ್, ಡೌನ್‌ಲೋಡ್ಸ್, ಕಸ್ಟಮ್ಸ್ ಆಪ್ಸ್, ಹೋಮ್‌ಬ್ರ್ಯೂ ಆ‍ಯ್‌೦ಡ್ ಮಚ್ ಮೋರ್ Archived 2009-04-26 ವೇಬ್ಯಾಕ್ ಮೆಷಿನ್ ನಲ್ಲಿ.. Qj.net (2009-04-22). 2009-06-29ರಂದು ಪಡೆಯಲಾಗಿದೆ
  47. "IGN: New Ghost Recon, Assassin's Creed 2 Coming". IGN. 2009-07-17. Archived from the original on 2009-01-25. Retrieved 2009-04-11.
  48. "E3 2009: Assassin's Creed PSP Gets Official Name and Date". IGN. Retrieved June 5, 2009.
  49. "Assassins Creed 3 will see Desmond become the Ultimate Assassin". Video Games Blogger. 2009-10-20. Retrieved 2009-11-21.
  50. "Assassin's Creed 3 to star Ezio". CVG. Retrieved February 1, 2010.
  51. "Assassins Creed: Brotherhood official announcement". 1up. 2010-05-11.[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]