ವಿಷಯಕ್ಕೆ ಹೋಗು

ಅಸ್ಟ್ರೊ ಸ್ಯಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ.ಎಸ್.ಎಲ್.ವಿ.(PSLV) ಉಪಗ್ರಹ ವಾಹಕ

ಅಸ್ಟ್ರೊಸ್ಯಾಟ್ ದೂರದರ್ಶಕ, ಖಗೋಳ ವಿಜ‍್ಞಾನಕ‍್ಕಾಗಿಯೇ ಬಳಸಲು ತಯಾರಿಸಿದ, ಭಾರತದ ಮೊದಲ ದೂರದರ್ಶಕ. ಈ ದೂರದರ್ಶಕವನ‍್ನು ಪಿ.ಎಸ್.ಎಲ್.ವಿ.(PSLV) ಉಪಗ್ರಹ ವಾಹಕದ ಸಹಾಯದಿಂದ, ೨೦೧೫ರ ಮೇ ತಿಂಗಳಲ‍್ಲಿ ಉಡಾವಣೆಗೆ ಸಿದ‍್ದಗೊಳ‍್ಳುತ‍್ತಿದೆ.[] ಆಸ್ಟ್ರೋಸ್ಯಾಟ್ ಎನ್ನುವುದು ಒಂದು ಉಪಗ್ರಹವಾಗಿದೆ. ಪೋಲಾರ್ ಉಪಗ್ರಹ ಉಡಾವಣೆ ವಾಹಕದಲ್ಲಿ (ಪಿ ಎಸ್ ಎಲ್ ವಿ) ಇಟ್ಟು ಆಸ್ಟ್ರೋಸ್ಯಾಟನ್ನು ಉಡಾವಣೆ ಮಾಡಲಾಯಿತು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಆಸ್ಟ್ರೋಸ್ಯಾಟ್ ಅನ್ನು ೧೭೮ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ.ಇದು ೧.೫ ಟನ್ ತೂಕ ಹೊಂದಿದೆ. ಸಮಭಾಜಕ ‍‍‍‍‍‍ವೃತ್ತದ ಸಮೀಪ ಸುಮಾರು ೬೫೦ ಕಿಲೋ ಮೀಟರ್ ಎತ್ತರದಲ್ಲಿ ಸುತ್ತುತ್ತದೆ.ಇದು ಬಾಹ್ಯಾಕಾಶ ಖಗೋಳವೀಕ್ಷಣಾಲಯ ಆಗಿದೆ.‍‍ವಿಜ್ಞಾನಿಗಳ ಪ್ರಕಾರ ಆಸ್ಟ್ರೋಸ್ಯಾಟ್ ನಾಸಾದ ಹಬಲ್ ಸ್ಪೇಸ್ ಟೆಲಿಸ್ಕೋಪ್ ಗಿಂತ ಚಿಕ್ಕದಾಗಿದೆ.ಹಬಲ್ ಅನ್ನು ೧೯೯೦ರಲ್ಲಿ ಉಡಾವಣೆ ಮಾಡಲಾಯಿತು. ಆಸ್ಟ್ರೋಸ್ಯಾಟ್ ಎಕ್ಸ್-ರೇ ಅಂತಹ ಬಹುತರಂಗಾಂತರದಲ್ಲಿರುವ ವಸ್ತುಗಳನ್ನು ಪತ್ತೆಹಚ್ಚುತ್ತದೆ.

  • ಮಹತ್ವ:ಆಸ್ಟ್ರೋಸ್ಯಾಟ್ ಅಭಿವೃಧ್ಧಿಯಿಂದಾಗಿ ಭಾರತದ ಸಂಶೋಧಕರು ಇನ್ನು ಮುಂದೆ ದತ್ತಾಂಶಕ್ಕಾಗಿ ಇತರೆ ಬಾಹ್ಯಾಕಾಶ ಸಂಸ್ಥೆಗಳನ್ನು ಅವಲಂಬಿಸುವ

ಅಗತ್ಯ ವಿಜ್ನಾನಿಗಳಿಗೆ ಉಂಟಾಗುವುದಿಲ್ಲ.ಇದು ವಿಜ್ಞಾನಿಗಳಿಗೆ ಸಂಶೋಧನೆಯನ್ನು ಮುಂದುವರಿಸಲು ಅನುವಾಗುವಂತೆ ಅದರ ವಿನ್ಯಾಸ ಇದೆ.

  • ಉದ್ದೇಶಗಳು;ಆಸ್ಟ್ರೋಸ್ಯಾಟ್ ಭಾರತದ ಮೊತ್ತ ಮೊದಲ ಬಹು-ತರಂಗಾಂತರ ಖಗೋಳ ವೀಕ್ಷಣಾಲಯವಾಗಿದೆ.ಇದು ವಿಜ್ಞಾನಿಗಳಿಗೆ ದೂರದಲ್ಲಿರುವ ಆಕಾಶ

ಕಾಯಗಳನ್ನು ಅಧ್ಯಯನ ಮಾಡಲು ಹಾಗೂ ನಕ್ಷತ್ರ ವ್ಯವಸ್ಥೆಯನ್ನು ಆಳವಾಗಿ ವಿಶ್ಲೇಷಣೆ ಮಾಡಲು ಸಹಾಯ ಮಾಡುತ್ತದೆ.ಇದರ ವೈಜ್ಞಾನಿಕ ಧ್ಯೇಯೊದ್ದೇಶಗಳು ಏನೆಂದರೆ ನ್ಯೂಟ್ರಾನ್ ನಕ್ಷತ್ರಗಳು ಮತ್ತು ಕಪ್ಪುಕುಳಿಗಳನ್ನು ಹೊಂದಿರುವ ಬೈನರಿ ಸ್ಟಾರ್ ಸಿಸ್ಟಮ್ ನಲ್ಲಿರುವ ಹೆಚ್ಚಿನ ಶಕ್ತಿ ಪ್ರಕ್ರಿಯೆಗಳನ್ನು ಅ‌‌ರ್ಥಮಾಡಿಕೊಳ್ಳಲು, ತಟಸ್ಥ ತಾರೆಗಳ ಕಾಂತಕ್ಷೇತ್ರಗಳನ್ನು ಅಂದಾಜು ಮಾಡಲು ಮತ್ತು ನಕ್ಷತ್ರಪುಂಜಗಳ ಹುಟ್ಟನ್ನು ಅಧ್ಯಯನ ಮಾಡಲು ನೆರವು ನೀಡುತ್ತದೆ.

ದೂರದರ್ಶಕದ ಉಪಕರಣಗಳು

[ಬದಲಾಯಿಸಿ]

ಈ ದೂರದರ್ಶಕದಲ‍್ಲಿ ೫ ಉಪಕರಣಗಳಿವೆ.

  • ಟ್ವಿನ್ 40-cm ಅಲ್ಟ್ರಾ ವಾಯ್ಲೆಟ್ ಇಮೇಜಿಂಗ್ ಟೆಲಿಸ್ಕೋಪ್ಸ್ (UVIT).
  • ಲಾರ್ಜ್ ಏರಿಯಾ ಜೆನೊನ್ ಪ್ರಪೋರ್ಶನಲ್ ಕೌಂಟರ್ಸ್ (LAXPC).
  • ಸಾಫ್ಟ್ ಎಕ್ಸ್ ರೇ ಇಮೇಜಿಂಗ್ ಟೆಲಿಸ್ಕೋಪ್ (SXT).
  • ಕ್ಯಾಡ್ಮಿಯಮ್ಜಿಂ-ಜಿಂಕ್ಟೆ-ಟೆಲ್ಲ್ಯುರೈಡ್ ಇಮೇಜರ್ (CZTI).
  • ಸ್ಕ್ಯಾನಿಂಗ್ ಸ್ಕೈ ಮೋನೀಟರ್ (SSM).[]

ಯೋಜನೆಯಲ‍್ಲಿ ಭಾಗಿಯಾದ ಸಂಸ‍್ಥೆಗಳು

[ಬದಲಾಯಿಸಿ]

ಈ ಯೋಜನೆಯಲ‍್ಲಿ ಅಲವು ಸಂಸ‍್ಥೆಗಳು ಭಾಗಿಯಾಗಿವೆ. ಅವುಗಳಲ‍್ಲಿ ಕೆಲವು :

ಬಾಹ್ಯ ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ASTROSAT, ಅಸ್ಟ್ರೊಸ್ಯಾಟ್ ದೂರದರ್ಶಕ.
  2. ASTROSAT Instruments, ಅಸ್ಟ್ರೊಸ್ಯಾಟ್ ಉಪಕರಣಗಳು.
  3. India Works With University Of Leicester On First National Astronomy Satellite, ಯೂನಿವರ್ಸಿಟೀ ಆಫ್ ಲೀಯೈಸ್ಟರ್.