ಅಸ್ಟ್ರಲೋಪಿತಕಸ್
ಅಸ್ಟ್ರಲೋಪಿತಕಸ್
ಇತಿಹಾಸ
[ಬದಲಾಯಿಸಿ]4-20 ಲಕ್ಷ ವರ್ಷಗಳ ಹಿಂದೆ ಪ್ಲಿಯಿಸ್ಟೊಸೀನ್ ಮೊದಲ ಭಾಗದಲ್ಲಿ ದಕ್ಷಿಣ ಮತ್ತು ಪೂರ್ವ ಆಫ್ರಿಕದ ಬಯಲುಗಳಲ್ಲಿ ಹರಡಿದ್ದ ಒಂದು ವಾನರ ಜಾತಿ. ಈ ಪ್ರದೇಶದ ಹಲವಾರು ಸುಣ್ಣಕಲ್ಲು ಗುಹೆಗಳಲ್ಲಿ ಇದರ ಪಳೆಯುಳಿಕೆಗಳು ದೊರೆತಿವೆ. ಇತರ ಕಪಿಗಳಂತಲ್ಲದೆ, ಇದು ಮನುಷ್ಯನ ರೀತಿಯ ದ್ವಿಪಾದಚಾರಿ. ತಲೆಬುರುಡೆಯ ಮಾಟ, ಹಲ್ಲಿನ ಜೋಡಣೆ ಮುಂತಾದ ಇತರ ವಿಷಯಗಳಲ್ಲೂ ಇದು ನರಜಾತಿಗೆ ಸಮೀಪದಲ್ಲಿರುವುದರಿಂದ ಇದನ್ನು ಸಮೀಪನರನೆಂದೂ ಪ್ರಾಕ್ತನ ಶಾಸ್ತ್ರಜ್ಞರು ಕರೆಯುತ್ತಾರೆ. ಈ ಸಂತತಿಯ ಕಪಿಗಳು ಬಹುಸಾಮಾನ್ಯತರದ ಒರಟು ಶಿಲಾಯುಧಗಳನ್ನು ಉಪಯೋಗಿಸುತ್ತಿದ್ದಿರಬಹುದೆಂದು ಡಾ|| ಲೀಕಿಯವರ ಸಂಶೋಧನೆಗಳಿಂದ ಗೊತ್ತಾಗಿದೆ. ನಿಜಮಾನವನ ವಿಕಾಸದಲ್ಲಿ ಈ ಜಾತಿ ಒಂದು ಮಧ್ಯಘಟ್ಟವೋ ಅಥವಾ ವಿಕಾಸ ಕಾಂಡದಿಂದ ಒಡೆದು ಮಧ್ಯದಲ್ಲೇ ಅಳಿದುಹೋದ ಒಂದು ಕವಲೋ ಎಂಬುದು ಇನ್ನೂ ಅನಿರ್ದಿಷ್ಟ.
ಬೆಳವಣಿಗೆ
[ಬದಲಾಯಿಸಿ]ಮೊಟ್ಟಮೊದಲು ಡಾ|| ಡಾರ್ಟ್ 1924ರಲ್ಲಿ ಬೆಕುವಾನ ಲ್ಯಾಂಡ್‍ನಲ್ಲಿನ (ಆಫ್ರಿಕ) ಟಾಂನ್ಸ್ ಸುಣ್ಣಕಲ್ಲಿನಲ್ಲಿ ಈ ಗುಂಪಿಗೆ ಸೇರಿದ ತಲೆ ಬುರುಡೆಯ ಪಳೆಯುಳಿಕೆಯನ್ನು ಕಂಡು ಹಿಡಿದರು. ಅದಕ್ಕೆ ಅವರು ಅಸ್ಟ್ರಲೋಪಿತಕಸ್ ಎಂದು ನಾಮಕರಣ ಮಾಡಿದರು. 1936-51ರಲ್ಲಿ ಡಾ|| ರಾಬರ್ಟ್ ಬ್ರೂಂ ಟ್ರಾನ್ ವಾಲ್‍ನಲ್ಲಿ ಕೆಲವು ತಲೆಬುರುಡೆಗಳನ್ನು ಕಂಡುಹಿಡಿದರು. ಡಾಕ್ಟರ್ ಮತ್ತು ಶ್ರೀಮತಿ ಲೀಕಿಯವರು ಟಾಂಗನೀಕದ ಬಲ್ಡುವೆ ಕಣಿವೆಯಲ್ಲಿ 1956ರಲ್ಲಿ ಕಂಡುಹಿಡಿದ ಜಿóಂಜಾóತ್ರಪಸ್ ತಲೆಬುರುಡೆಯೂ ಇದೇ ಗುಂಪಿಗೆ ಸೇರಿದುದೆಂದು ಅನೇಕ ವಿಜ್ಞಾನಿಗಳ ಅಭಿಪ್ರಾಯ. ಮಿದುಳು 600-700 ಕ್ಯೊಬಿಕ್ ಸೆಂ. ಮೀ. ಇದ್ದಾಗ್ಯೂ (ಬಾಲವಿಲ್ಲದ ಮಂಗಗಳಿಗೆ ಇಷ್ಟೇ ಇದೆ) ಜಿóಂeóÁತ್ರೂಪಸ್ ಕಲ್ಲಿನ ಆಯುಧಗಳನ್ನು ಮಾಡುವ ಶಕ್ತಿಯನ್ನು ಹೊಂದಿತ್ತು. ಡಾ|| ಲೀಕಿಯವರು ಇದರ ತಲೆಬುರುಡೆಯ ಪಳೆಯುಳಿಕೆಯ ಜೊತೆಯಲ್ಲಿ ಸಿಕ್ಕಿದ ಕಲ್ಲಿನ ಆಯುಧಗಳನ್ನು ಶೇಖರಿಸಿದರು. ಅಸ್ಟ್ರಲೋಪಿತಕಸ್ ಗುಂಪು ಮೈದಾನದಲ್ಲಿ ಮರವನ್ನು ತ್ಯಜಿಸಿ ಮಾನವನಂತೆ ಎರಡು ಕಾಲುಗಳ ಮೇಲೆ ನೆಟ್ಟಗೆ ನಡೆಯುತ್ತಿದ್ದುರಿಂದ ಅವು ತಮ್ಮ ಆಹಾರಕ್ಕಾಗಿ ಬ್ಯಾಬೊನ್ ಮೊಲ ಮೊದಲಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದುವು.
ನೋಡಿ
[ಬದಲಾಯಿಸಿ]- ಹಿಂದಿನ ಲೇಖನ:ಆಸ್ತ್ರೇಲೋಪಿಥಿಕಸ್
ಉಲ್ಲೇಖಗಳು
[ಬದಲಾಯಿಸಿ]
- ↑ study.com/academy/lesson/australophithecus-definition-characteristics-evolution.html
- ↑ http://www.encyclopedia.com/social-sciences-and-law/anthropology-and-archaeology/human-evolution/australopithecus