ಅಸ್ಕೋಟ್ ಕಸ್ತೂರಿಮೃಗ ಧಾಮ

ವಿಕಿಪೀಡಿಯ ಇಂದ
Jump to navigation Jump to search

ಅಸ್ಕೋಟ್ ಕಸ್ತೂರಿಮೃಗ ಧಾಮ ಭಾರತಉತ್ತರಾಖಂಡ ರಾಜ್ಯದ ಪಿಥೋರಾಗಢ್‌ ಜಿಲ್ಲೆಯಲ್ಲಿ ಆಸ್ಕೋಟ್ ಗ್ರಾಮದ ಬಳಿ ಇದೆ. ಸಮುದ್ರಮಟ್ಟದಿಂದ ೫೪೧೨ ಅಡಿ ಎತ್ತರದಲ್ಲಿ ರಚಿಸಲಾಗಿರುವ ಅಸ್ಕೋಟ್ ಕಸ್ತೂರಿಮೃಗ ಧಾಮದ ಮೂಲ ಗುರಿ ಅಳಿವಿನತ್ತ ಸಾಗಿರುವ ಕಸ್ತೂರಿ ಮೃಗ ಮತ್ತು ಅದರ ನೆಲೆಯನ್ನು ಉಳಿಸಿಕೊಳ್ಳುವುದಾಗಿದೆ. ಈ ಅತಿ ಅಪರೂಪದ ಜೀವಿಯನ್ನು ಸಂರಕ್ಷಿಸುವಲ್ಲಿ ಅವಿರತ ಮತ್ತು ಗಂಭೀರ ಪ್ರಯತ್ನಗಳು ಸಾಗಿವೆ. ಅಸ್ಕೋಟ್ ಕಸ್ತೂರಿಮೃಗ ಧಾಮದಲ್ಲಿ ಉಳಿದಂತೆ ಚಿರತೆ, ಕಾಡುಬೆಕ್ಕು, ಪುನುಗುಬೆಕ್ಕು, ಬೊಗಳುವ ಜಿಂಕೆ ಮೊದಲಾದ ಪ್ರಾಣಿಗಳು ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿ ನೆಲೆಸುವ ಪಕ್ಷಿಪ್ರಬೇಧಗಳನ್ನು ಸಹ ಕಾಣಬಹುದಾಗಿದೆ.

ಇದನ್ನೂ ನೋಡಿ[ಬದಲಾಯಿಸಿ]

ಕಸ್ತೂರಿ ಮೃಗ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]