ಕಸ್ತೂರಿಮೃಗ
ಕಸ್ತೂರಿ ಮೃಗ Temporal range:
| |
---|---|
ಸೈಬೀರಿಯಾದ ಕಸ್ತೂರಿ ಮೃಗ | |
Scientific classification | |
ಸಾಮ್ರಾಜ್ಯ: | ಪ್ರಾಣಿ
|
ವಿಭಾಗ: | |
ವರ್ಗ: | |
ಗಣ: | |
ಉಪಗಣ: | |
ಕೆಳಗಣ: | |
ಕುಟುಂಬ: | ಮೋಷಿಡೇ (Gray, 1821)
|
ಕುಲ: | ಮೋಷಸ್ (Linnaeus, 1758)
|
ಜಾತಿ | |
|
ಕಸ್ತೂರಿಮೃಗವು ಜಿಂಕೆಗಳ ವರ್ಗಕ್ಕೆ ಸೇರಿದ ಒಂದು ಪ್ರಾಣಿ. ಪ್ರಾಣಿಶಾಸ್ತ್ರದ ಪ್ರಕಾರ ಕಸ್ತೂರಿಮೃಗವನ್ನು ಮೋಷಿಡೇ ಕುಟುಂಬದಲ್ಲಿರಿಸಲಾಗಿದೆ. ಇವು ಸಾಮಾನ್ಯ ಜಿಂಕೆಗಿಂತ ಪ್ರಾಚೀನ ಪ್ರಾಣಿಗಳು. ಕಸ್ತೂರಿಮೃಗಕ್ಕೆ ಕೊಂಬು ಇರುವುದಿಲ್ಲ. ಕೆಚ್ಚಲಿನಲ್ಲಿ ಒಂದು ಜೊತೆ ತೊಟ್ಟುಗಳು ಮಾತ್ರ ಇರುತ್ತವೆ. ಅಲ್ಲದೆ ಒಂದು ಜೊತೆ ಕೋರೆದಾಡೆಗಳು ಮತ್ತು ಒಂದು ಕಸ್ತೂರಿ ಗ್ರಂಥಿಯು ಇರುವುವು. ಈ ದೈಹಿಕ ರಚನೆಗಳು ಇತರ ಜಿಂಕೆಗಳಿಗೂ ಕಸ್ತೂರಿಮೃಗಕ್ಕೂ ಇರುವ ಮುಖ್ಯ ವ್ಯತ್ಯಾಸಗಳಾಗಿವೆ.
ಶಾರೀರಿಕ ಗುಣಗಳು
[ಬದಲಾಯಿಸಿ]ಕಸ್ತೂರಿಮೃಗವು ಒಂದು ಸಣ್ಣ ಗಾತ್ರದ ಜಿಂಕೆಯನ್ನು ಹೋಲುತ್ತದೆ. ಆದರೆ ಅದಕ್ಕಿಂತ ಕೊಂಚ ಸ್ಥೂಲಕಾಯವನ್ನು ಹೊಂದಿರುವುದು. ಕಸ್ತೂರಿಮೃಗವು ೮೦ ರಿಂದ ೧೦೦ ಸೆಂ.ಮೀ. ಉದ್ದವಿದ್ದು ಭುಜದ ಮಟ್ಟದಲ್ಲಿ ೫೦ ರಿಂದ ೭೦ ಸೆಂ.ಮೀ. ಗಳಷ್ಟು ಎತ್ತರವಾಗಿರುತ್ತವೆ. ಶರೀರದ ತೂಕ ೭ ರಿಂದ ೧೭ ಕಿ.ಗ್ರಾಂ. ವರೆಗೆ. ಇವುಗಳ ಹಿಂಗಾಲುಗಳು ಮುಂಗಾಲುಗಳಿಗಿಂತ ಉದ್ದವಾಗಿರುತ್ತವೆ. ಭೂಮಿಯ ಒರಟು ಮೇಲ್ಮೈ ಪ್ರದೇಶಗಳಲ್ಲೂ ಸರಾಗವಾಗಿ ಹತ್ತಲು ಸಾಧ್ಯವಾಗುವಂತಹ ಪಾದರಚನೆಯನ್ನು ಕಸ್ತೂರಿಮೃಗವು ಹೊಂದಿದೆ. ಗಂಡು ಕಸ್ತೂರಿಮೃಗವು ಒಂದು ಜೊತೆ ಉದ್ದನೆಯ ಕೋರೆದಾಡೆಗಳನ್ನು ಹೊಂದಿರುತ್ತವೆ. ಕಸ್ತೂರಿ ಗ್ರಂಥಿಯು ಕೇವಲ ಪ್ರೌಢ ಗಂಡುಗಳಲ್ಲಿ ಮಾತ್ರ ಕಂಡು ಬರುತ್ತದೆ. ಹೊಕ್ಕಳು ಮತ್ತು ಜನನಾಂಗಗಳ ನಡುವೆ ಇರುವ ಸಣ್ಣ ಚೀಲದಂತಹ ರಚನೆಯೊಳಗೆ ಈ ಗ್ರಂಥಿಯು ಇರುವುದು. ಈ ಗ್ರಂಥಿಯಿಂದ ಒಸರುವ ದ್ರವ್ಯದ ಮುಖ್ಯ ಬಳಕೆ ಹೆಣ್ಣನ್ನು ಆಕರ್ಷಿಸುವಲ್ಲಿ.
ಕಸ್ತೂರಿಮೃಗಗಳು ಪರ್ವತ ಕಾಡುಗಳ ಪ್ರಾಂತ್ಯದಲ್ಲಿ ಜೀವಿಸುವ ಸಸ್ಯಾಹಾರಿ ಪ್ರಾಣಿಗಳು. ಇವು ಸಾಮಾನ್ಯವಾಗಿ ಮಾನವವಸತಿಯಿಂದ ಬಲು ದೂರದಲ್ಲಿ ನೆಲೆಸುತ್ತವೆ. ಜಿಂಕೆಯಂತೆ ಕಸ್ತೂರಿಮೃಗಗಳು ಸಹ ಹುಲ್ಲು, ಎಲೆ, ಮತ್ತು ಹೂವುಗಳನ್ನು ತಿನ್ನುತ್ತವೆ. ಕಸ್ತೂರಿಮೃಗಗಳು ಒಂಟಿಜೀವಿಗಳು. ಪ್ರತಿ ಕಸ್ತೂರಿಮೃಗವು ತನ್ನ ಪ್ರಾಂತ್ಯವನ್ನು ಸ್ಪಷ್ಟವಾಗಿ ಗುರುತು ಮಾಡಿರುತ್ತದೆ. ಇವು ಸಂಕೋಚ ಸ್ವಭಾವದ ನಿಶಾಚರಿ ಜೀವಿಗಳು.
ಹೆಣ್ಣುಗಳು ಬೆದೆಗೆ ಬರುವ ಋತುವಿನಲ್ಲಿ ಗಂಡು ಕಸ್ತೂರಿಮೃಗಗಳು ತಮ್ಮ ಪ್ರಾಂತ್ಯದಿಂದ ಹೊರಬಂದು ಸಂಗಾತಿಗಾಗಿ ಪರಸ್ಪರರಲ್ಲಿ ಪೈಪೋಟಿ ನಡೆಸುತ್ತವೆ. ಈ ಕಾದಾಟದಲ್ಲಿ ಕಸ್ತೂರಿಮೃಗಗಳು ತಮ್ಮ ಕೋರೆದಾಡೆಗಳನ್ನು ಶಸ್ತ್ರವನ್ನಾಗಿ ಬಳಸುತ್ತವೆ. ೧೫೦ ರಿಂದ ೧೮೦ ದಿನಗಳ ಗರ್ಭಧಾರಣೆಯ ನಂತರ ಹೆಣ್ಣು ಕಸ್ತೂರಿಮೃಗವು ಒಂದು ಮರಿಗೆ ಜನ್ಮವೀಯುವುದು. ನವಜಾತ ಮರಿಯು ಅತಿ ಚಿಕ್ಕ ಗಾತ್ರದ್ದಾಗಿದ್ದು ಸುಮಾರು ಒಂದು ತಿಂಗಳವರೆಗೆ ನಿಶ್ಚಲಸ್ಥಿತಿಯಲ್ಲಿರುತ್ತದೆ.
ಹಿಮಾಲಯ ಪರ್ವತಗಳ ತಪ್ಪಲಿನಲ್ಲಿ ಹೆಚ್ಚಾಗಿ ಕಂಡುಬರುವ ಕಸ್ತೂರಿಮೃಗದಿಂದ ಪಡೆಯಲಾಗುವ ಕಸ್ತೂರಿಯು ಬೆಲೆಬಾಳುವ ದ್ರವ್ಯವಾಗಿದೆ. ಔಷಧಿಗಳಲ್ಲಿ ಮತ್ತು ಸುಗಂಧದ್ರವ್ಯಗಳಲ್ಲಿ ಇದರ ಬಳಕೆಯಾಗುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Guha S, Goyal SP, Kashyap VK (March 2007). "Molecular phylogeny of musk deer: a genomic view with mitochondrial 16S rRNA and cytochrome b gene". Mol. Phylogenet. Evol. 42 (3): 585–97. doi:10.1016/j.ympev.2006.06.020. PMID 17158073.
{{cite journal}}
: CS1 maint: multiple names: authors list (link)
- Hassanin A, Douzery EJ (April 2003). "Molecular and morphological phylogenies of ruminantia and the alternative position of the moschidae". Syst. Biol. 52 (2): 206–28. doi:10.1080/10635150390192726. PMID 12746147.