ಅಸ್ಕಾರಿಯಾಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ascariasis
Classification and external resources
ICD-10B77
ICD-9127.0
OMIM604291
DiseasesDB934
MedlinePlus000628
eMedicinearticle/212510
MeSHD001196

ಅಸ್ಕಾರಿಯಾಸಿಸ್ ಎಂಬದು ಜಂತುಹುಳ ಅಸ್ಕಾರಿಯಾಸಿಸ್ ಲುಂಬ್ರಿಕಾಯ್ಡ್ಸ್.[೧] ಪರಾವಲಂಬಿ ಜೀವಿಗಳಿಂದ ಉಂಟಾಗುವ ಒಂದು ರೋಗ. 85%ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ, ಅದರಲ್ಲೂ ವಿಶೇಷವಾಗಿ ಹುಳುಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಸೋಂಕಿನ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ.[೧] ರೋಗಲಕ್ಷಣಗಳು ಹೆಚ್ಚಾಗುವುದು ಇರುವಂತಹ ಹುಳುಗಳ ಸಂಖ್ಯೆಯನ್ನವಲಂಬಿಸುತ್ತದೆ ಮತ್ತು ರೋಗಲಕ್ಷಣಗಳು ರೋಗದ ಆರಂಭದಲ್ಲಿ ಉಸಿರಾಟದಲ್ಲಿ ಕಷ್ಟ ಮತ್ತು ಜ್ವರ[೧] ನಂತರದ ಕಿಬ್ಬೊಟ್ಟೆ ಊತ, ಕಿಬ್ಬೊಟ್ಟೆ ನೋವು ಮತ್ತು ಅತಿಸಾರ[೧] ಒಳಗೊಳ್ಳಬಹುದು. ಬಲು ಸಾಮಾನ್ಯವಾಗಿ ಮಕ್ಕಳು ಇದರ ಪ್ರಭಾವಕ್ಕೊಳ್ಳಗಾಗುತ್ತಾರೆ, ಮತ್ತು ಈ ವಯೋಗುಂಪಿನಲ್ಲಿ ಸೋಂಕು, ಕಡಿಮೆ ತೂಕ ಗಳಿಕೆ ಅಪೌಷ್ಟಿಕತೆ ಮತ್ತು ಕಲಿಕೆಯಲ್ಲಿ ಸಮಸ್ಯೆಗಳನ್ನು ಉಂಟಾಗಬಹುದು.[೧][೨][೩] ಮಲದಲ್ಲಿನ ಅಸ್ಕಾರಿಸ್ ಮೊಟ್ಟೆಗಳಿಂದ ಕಲುಷಿತಗೊಂಡ ಆಹಾರ ಅಥವಾ ಪಾನೀಯ ಸೇವನೆಯಿಂದ ಸೋಂಕುಂಟಾಗುತ್ತದೆ.[೨] ಮೊಟ್ಟೆಗಳು ಜಠರದಲ್ಲಿ ಒಡೆಯುತ್ತವೆ, ಹೊಟ್ಟೆಯ ಪದರದ ಮೂಲಕ ಕೊರೆದುಕೊಂಡು ಸಾಗುತ್ತಾ ರಕ್ತದ ಮೂಲಕ lಶ್ವಾಸಕೋಶ ಗಳನ್ನು ತಲುಪುತ್ತವೆ.[೨] ಅಲ್ಲಿ ಅವು ಗಾಳಿಗೂಡುಗಳನ್ನು ಪ್ರವೇಶಿಸುತ್ತವೆ ಮತ್ತು ಶ್ವಾಸನಾಳದ ಮೂಲಕ ಮೇಲೆ ಸಾಗಿ ಕೆಮ್ಮಲ್ಪಟ್ಟು ಮತ್ತೆ ನುಂಗಲ್ಪಡುತ್ತವೆ.[೨] ಇಂತಹ ಮರಿಹುಳುಗಳು ಎರಡನೇ ಬಾರಿ ಹೊಟ್ಟೆಯ ಮೂಲಕ ಜಠರಕ್ಕೆ ಬಂದುಸೇರುತ್ತವೆ ಮತ್ತು ಅಲ್ಲಿ ದೊಡ್ಡ ಹುಳುಗಳಾಗುತ್ತವೆ. [೨] ಮುನ್ನೆಚ್ಚರಿಕೆ ಕ್ರಮವು ಶುಚಿತ್ವ ಉತ್ತಮಗೊಳಿಸುವುದು, ಶೌಚಾಲಯಗಳ ಲಭ್ಯತೆಯನ್ನು ಸುಧಾರಿಸುವುದು ಮತ್ತು ಮಲಮೂತ್ರಗಳು ಹೊರ ಸಾಗಿ ಶೌಚಾಲಯಗಳು ಸ್ವಚ್ಛಗೊಳಿಸಲ್ಪಡುವುದನ್ನು ಒಳಗೊಳ್ಳುತ್ತದೆ.[೧][೪] ಸೋಪಿನಿಂದ ಕೈತೊಳೆದುಕೊಳ್ಳುವುದು ರಕ್ಷಣಾತ್ಮಕವಾದುದು.[೫] 20%ಕ್ಕಿಂತ ಹೆಚ್ಚಿನ ಜನಸಂಖ್ಯೆಯು ಪ್ರಭಾವಕ್ಕೊಳಗಾಗಿರುವ ಪ್ರದೇಶಗಳಲ್ಲಿ, ಪ್ರತಿಯೊಬ್ಬರನ್ನೂ ಆಗಾಗ ಉಪಚರಿಸುವುದನ್ನು ಶಿಫಾರಸು ಮಾಡಲಾಗುತ್ತದೆ.[೧] ಸೋಂಕು ಪುನರಾವರ್ತನೆಗಳು ಸಾಮಾನ್ಯ.[೨][೬] ಯಾವುದೇ ಲಸಿಕೆ ಇಲ್ಲ.[೨] ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುವ ಚಿಕಿತ್ಸೆಗಳೆಂದರೆ [ಅಲ್ಬೆಂಡಜೋಲ್]], ಮೆಬೆಂಡಜೋಲ್, ಲೆವಮಿಸೋಲ್ or ಪೈರ್ಯಾಂಟೆಲ್ ಪಮೋಟ್.[೨] ಇತರ ಪರಿಣಾಮಕಾರಿ ಏಜೆಂಟುಗಳೆಂದರೆ ಟ್ರೈಬೆಂಡಿಮೈಡೈನ್ and ನಿಟಾಜೊಕ್ಸನೈಡ್.[೨] ಅಸ್ಕಾರಿಯಾಸಿಸ್ ಪ್ರಭಾವಕ್ಕೆ ಒಳಗಾದ ಬಹಳ ಹೆಚ್ಚಿನ ಜನಸಂಖ್ಯೆ ಸಬ್-ಸಹಾರನ್ ಆಫ್ರಿಕಾ, ಲ್ಯಾಟಿನ್ ಅಮೇರಿಕಾ, ಮತ್ತು ಏಷ್ಯಾದಲ್ಲಿ ಕಂಡುಬಂದಿದ್ದು, ಸುಮಾರು 0.8 ರಿಂದ 1.2 ಬಿಲಿಯನ್ ಜನರು ಜಾಗತಿಕ ಮಟ್ಟದಲ್ಲಿ ಇದನ್ನು ಹೊಂದಿದ್ದಾರೆ.[೧][೭][೮] ಇದು, ಅಸ್ಕಾರಿಯಾಸಿಸ್ ಅನ್ನು ಅತ್ಯಂತ ಸಾಮಾನ್ಯ ರೂಪದ ಮಲಪದಾರ್ಥದ ಮೂಲಕ ವರ್ಗಾಂತರಗೊಳ್ಳುವ ಜಂತುರೋಗವನ್ನಾಗಿ ಮಾಡುತ್ತದೆ.[೭] ಸಾವಿನ ಸಂಖ್ಯೆ 1990ರಲ್ಲಿ 3,400 ಆಗಿದ್ದು, 2010ರ ಪ್ರಕಾರ ಸುಮಾರು 2,700 ಆಗಿತ್ತು.[೯] ಮತ್ತೊಂದು ಬಗೆಯ ಅಸ್ಕಾರಿಸ್ ಹಂದಿಗಳಿಗೆ ಸೋಂಕನ್ನುಂಟುಮಾಡುತ್ತದೆ.[೧]

References[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ ೧.೮ Dold, C; Holland, CV (Jul 2011). "Ascaris and ascariasis". Microbes and infection / Institut Pasteur. 13 (7): 632–7. doi:10.1016/j.micinf.2010.09.012. PMID 20934531.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ೨.೮ Hagel, I; Giusti, T (Oct 2010). "Ascaris lumbricoides: an overview of therapeutic targets". Infectious disorders drug targets. 10 (5): 349–67. doi:10.2174/187152610793180876. PMID 20701574.
  3. "Soil-transmitted helminth infections Fact sheet N°366". World Health Organization. June 2013.
  4. Ziegelbauer, K; Speich, B; Mäusezahl, D; Bos, R; Keiser, J; Utzinger, J (Jan 2012). "Effect of sanitation on soil-transmitted helminth infection: systematic review and meta-analysis". PLoS medicine. 9 (1): e1001162. doi:10.1371/journal.pmed.1001162. PMC 3265535. PMID 22291577.{{cite journal}}: CS1 maint: unflagged free DOI (link)
  5. Fung, IC; Cairncross, S (Mar 2009). "Ascariasis and handwashing". Transactions of the Royal Society of Tropical Medicine and Hygiene. 103 (3): 215–22. doi:10.1016/j.trstmh.2008.08.003. PMID 18789465.
  6. Jia, TW; Melville, S; Utzinger, J; King, CH; Zhou, XN (2012). "Soil-transmitted helminth reinfection after drug treatment: a systematic review and meta-analysis". PLoS neglected tropical diseases. 6 (5): e1621. doi:10.1371/journal.pntd.0001621. PMC 3348161. PMID 22590656.{{cite journal}}: CS1 maint: unflagged free DOI (link)
  7. ೭.೦ ೭.೧ Keiser, J; Utzinger, J (2010). "The drugs we have and the drugs we need against major helminth infections". Advances in parasitology. 73: 197–230. doi:10.1016/s0065-308x(10)73008-6. PMID 20627144.
  8. Fenwick, A (Mar 2012). "The global burden of neglected tropical diseases". Public health. 126 (3): 233–6. doi:10.1016/j.puhe.2011.11.015. PMID 22325616.
  9. Lozano, R (Dec 15, 2012). "Global and regional mortality from 235 causes of death for 20 age groups in 1990 and 2010: a systematic analysis for the Global Burden of Disease Study 2010". Lancet. 380 (9859): 2095–128. doi:10.1016/S0140-6736(12)61728-0. PMID 23245604.