ಅಶ್ವಿನಿ ಕುಮಾರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಹಿಂದೂ ಪುರಾಣದಲ್ಲಿ, ಅಶ್ವಿನಿ ಕುಮಾರರು ಇಬ್ಬರು ವೈದಿಕ ದೇವತೆಗಳು, ಋಗ್ವೇದದಲ್ಲಿ ದೈವಿಕ ಅವಳಿ ಕುದುರೆ ಸವಾರರು, ಮೋಡಗಳ ದೇವತೆ ಹಾಗು ತನ್ನ ವಿವಸ್ವತ ರೂಪದಲ್ಲಿ ಸೂರ್ಯನ ಪತ್ನಿಯಾದ ಸರಣ್ಯುಳ (ವಿಶ್ವಕರ್ಮನ ಪುತ್ರಿ) ಪುತ್ರರಾಗಿದ್ದರು. ಅವರು ಸೂರ್ಯೋದಯ ಹಾಗು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ, ಮತ್ತು ಉದಯದ ಮೊದಲು ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ, ಮತ್ತು ಮನುಷ್ಯರಿಗೆ ಸಂಪತ್ತನ್ನು ತರುತ್ತಾರೆ ಹಾಗು ದೌರ್ಭಾಗ್ಯ ಹಾಗು ಅನಾರೋಗ್ಯವನ್ನು ತಪ್ಪಿಸುತ್ತಾರೆ. ಅವರು ದೇವತೆಗಳ ವೈದ್ಯರು ಮತ್ತು ಆಯುರ್ವೇದಿಕ ಶಾಸ್ತ್ರದ ದೇವರು.