ಅಶ್ವತಿ ಪಿಳ್ಳೈ

ವಿಕಿಪೀಡಿಯ ಇಂದ
Jump to navigation Jump to search
Ashwathi Pillai
— ಬ್ಯಾಡ್ಮಿಂಟನ್‌ ಆಟಗಾರ —
2018-10-12 Badminton Mixed International Team Final match 1 at 2018 Summer Youth Olympics by Sandro Halank–001.jpg
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುAshwathi Vinodh Pillai
ಹುಟ್ಟು (2000-07-14) 14 July 2000 (age 19)[೧]
village near Thuckalay, Kanyakumari, Tamil Nadu, India[೨]
ವಾಸಸ್ಥಾನStockholm, Sweden[೨]
ಎತ್ತರ172 cm
ತೂಕ63 kg
ದೇಶ Sweden
ಆಡುವ ಕೈRight
Women's singles & doubles
ಅತಿಹೆಚ್ಚಿನ ಸ್ಥಾನ215 (WS 10 May 2018)
400 (WD 5 July 2018)
BWF profile

ಅಶ್ವತಿ ವಿನೋದ್ ಪಿಳ್ಳೈ (ಜನನ ೧೪ ಜುಲೈ ೨೦೦೦) ಸ್ವೀಡನ್ ದೇಶದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ. ಇವರು ಮೂಲತಃ ಭಾರತದ ಕನ್ಯಾಕುಮಾರಿಯವರು ನಂತರ ತನ್ನ ಕುಟುಂಬದೊಂದಿಗೆ ಸ್ವೀಡನ್ ಗೆ ತೆರಳಿದರು.[೩]

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಅಶ್ವತಿ ಪಿಳ್ಳೈ ಅವರ ತಾಯಿ ಗಾಯತ್ರಿ ಮತ್ತು ತಂದೆ ವಿನೋದ್ ಪಿಳ್ಳೈ. ಅವರು ತಮಿಳುನಾಡಿನ ಥಕ್ಲೆ ಸಮೀಪದ ಹಳ್ಳಿಯಿಂದ ಬಂದವರು.[೪] ಅಶ್ವತಿಯವರು ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ೪ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ.[೫] ಅಶ್ವತಿಯವರಿಗೆ ಬಾಲ್ಯದಿಂದಲೇ ಬ್ಯಾಡ್ಮಿಂಟನ್ನಲ್ಲಿ ಆಸಕ್ತಿ ಇತ್ತು. ೨೦೦೯ರಲ್ಲಿ ರಲ್ಲಿ ಪಿಳ್ಳೈ ಕುಟುಂಬವು ತನ್ನ ತಂದೆಯ ವೃತ್ತಿಪರ ಅಗತ್ಯತೆಗಳಿಂದಾಗಿ ಸ್ವೀಡನ್ಗೆ ತೆರಳಿದರು. ಸ್ವೀಡನ್ನಲ್ಲಿರುವಾಗ ಅವರು ಇಂಟರ್ನ್ಯಾಶೆಲ್ಲಾ ಏಂಗೆಲ್ಸ್ಕಾ ಸ್ಕೋಲನ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಂದುವರೆಸಿದರು. ಅವಳು ಕೆರೊಲಿನಾ ಮರಿನ್ನಿಂದ ಸ್ಫೂರ್ತಿಯನ್ನು ಪಡೆದಿದ್ದಾರೆ.[೬]

ವೃತ್ತಿ ಜೀವನ[ಬದಲಾಯಿಸಿ]

ಪಿಳ್ಳೈ ಅವರು ಏಳು ವರ್ಷ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದರು. ಸ್ವೀಡನ್ಗೆ ತೆರಳಿದ ನಂತರ ತರಬೇತಿಯನ್ನು ನಿಲ್ಲಿಸಲು ಅವರಿಗೆ ಇಷ್ಟವಿರಲಿಲ್ಲ. ತರಬೇತುದಾರ ಆಂಡರ್ಸ್ ಕ್ರಿಸ್ಟಿಯಾನ್ಸೆನ್ರ ಮಾರ್ಗದರ್ಶನದಲ್ಲಿ ಉಪ್ಸಲಾದಲ್ಲಿ ರಾಷ್ಟ್ರೀಯ ತರಬೇತಿ ಕೇಂದ್ರವನ್ನು ಸೇರಿಕೊಂಡರು. ಸ್ವೀಡಿಶ್ ನ್ಯಾಶನಲ್ ಸ್ಪೋರ್ಟ್ಸ್ ಫೆಡರೇಶನ್ನ ದೈಹಿಕ ತರಬೇತುದಾರರ ತರಬೇತಿ ಸೇರಿದಂತೆ ಅವರು ದಿನಕ್ಕೆ ಕನಿಷ್ಠ ಮೂರುವರೆ ಗಂಟೆಗಳವರೆಗೆ ತರಬೇತಿ ಪಡೆಯುತ್ತಾರೆ.

ಕ್ರೀಡಾ ಸಾಧನೆ[ಬದಲಾಯಿಸಿ]

 1. ೨೦೧೫- ಜ್ಯೂನಿಯರ್ ವಿಭಾಗದಲ್ಲಿ ಸ್ವೀಡಿಷ್ ರಾಷ್ಟ್ರೀಯ ಚಾಂಪಿಯನ್
 2. ೨೦೧೫- ಸ್ವಿಸ್ ಜೂನಿಯರ್ ಓಪನ್ನಲ್ಲಿ ಸಿಂಗಲ್ಸ್ನಲ್ಲಿ ವಿಜೇತರು
 3. ೨೦೧೬- ಪೋಲಿಷ್ ಜೂನಿಯರ್ ಇಂಟರ್ನ್ಯಾಷನಲ್ ಚಾಂಪಿಯನ್ಷಿಪ್ನಲ್ಲಿ ಸಿಂಗಲ್ಸ್ನಲ್ಲಿ ರನ್ನರ್ ಅಪ್
 4. ೨೦೧೭ - ಬಲ್ಗೇರಿಯಾ ಓಪನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಗೆ
 5. ೨೦೧೮-ಸ್ವೀಡಿಶ್ ಸೀನಿಯರ್ ನ್ಯಾಷನಲ್ ಚಾಂಪಿಯನ್ಷಿಪ್ನ ಅತ್ಯಂತ ಕಿರಿಯ ವಿಜೇತೆ
 6. ಸ್ವೀಡಿಶ್ ಎಲೈಟ್ ಕ್ಲಾಸ್ ಪಂದ್ಯಾವಳಿಗಳಿಗೆ ಅರ್ಹತೆ ಪಡೆದವರು

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಅಶ್ವತಿಯವರು ಸ್ಟಾಕ್ಹೋಮ್ನಲ್ಲಿ ಬಹುಮಾನದ ಹಣದೊಂದಿಗೆ ೨೦೧೨-೧೩ರ ಪ್ರತಿಷ್ಠಿತ ಆಟಗಾರ ಪ್ರಶಸ್ತಿಯನ್ನು (ಗರ್ಲ್ಸ್ ಜೂನಿಯರ್) ಪಡೆದರು.

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ "Badminton Athlete Profile: PILLAI Ashwathi – Juegos Olímpicos de la Juventud de Buenos Aires 2018". Buenos Aires 2018. Retrieved 26 January 2019.
 2. ೨.೦ ೨.೧ "Despite tasting Swede success, Ashwathi's heart remains in India". The New Indian Express. Retrieved 27 January 2019.
 3. https://www.thenewsminute.com/article/17-yr-old-india-born-shuttler-ashwathi-pillai-represent-sweden-youth-olympics-83458
 4. http://www.newindianexpress.com/states/kerala/2018/oct/07/kerala-girl-ashwathi-pillai-shoulders-swedish-badminton-hopes-1882303.html
 5. https://timesofindia.indiatimes.com/city/kochi/ashwathi-pillai-playing-in-india-in-front-of-my-people-is-one-of-my-biggest-goals/articleshow/66376681.cms
 6. https://searchindie.com/blogs/ashwathi-pillai-chasing-my-dream/