ಅವಿಯಲ್

ವಿಕಿಪೀಡಿಯ ಇಂದ
Jump to navigation Jump to search
Aviyal.JPG

ಅವಿಯಲ್ ಕೇರಳದಲ್ಲಿ ಹುಟ್ಟಿಕೊಂಡಿದ್ದು ಎಂದು ನಂಬಲಾದ ಮತ್ತು ಕೇರಳ ಪಾಕಪದ್ಧತಿ, ತಮಿಳುನಾಡು ಪಾಕಪದ್ಧತಿ ಮತ್ತು ಉಡುಪಿ ಪಾಕಪದ್ಧತಿಯಲ್ಲಿ ಸಾಮಾನ್ಯವಾದ ಒಂದು ತಿನಿಸು. ಅದು ತರಕಾರಿಗಳು ಮತ್ತು ಕೊಬ್ಬರಿಯ ಗಟ್ಟಿ ಮಿಶ್ರಣ ಮತ್ತು ತೆಂಗಿನ ಎಣ್ಣೆ ಹಾಗೂ ಕರಿಬೇವಿನ ಒಗ್ಗರಣೆ ಕೊಡಲಾಗುತ್ತದೆ. ಅವಿಯಲ್ ಕೇರಳದ ಸಸ್ಯಾಹಾರಿ ಹಬ್ಬದೂಟವಾದ ಸಾಢ್ಯದ ಒಂದು ಅತ್ಯಗತ್ಯ ಭಾಗವೆಂದು ಪರಿಗಣಿತವಾಗಿದೆ. ಸುವರ್ಣಗೆಡ್ಡೆ, ಬಾಳೆ, ಕುಂಬಳಕಾಯಿ, ಅವರೆಕಾಯಿ, ಬದನೆಕಾಯಿ, ಸೌತೆಕಾಯಿ, ನುಗ್ಗೆಕಾಯಿ, ಪಡವಲಕಾಯಿ ಅವಿಯಲ್‍ನಲ್ಲಿ ಸಾಮಾನ್ಯವಾಗಿ ಬಳಸಲಾದ ತರಕಾರಿಗಳು. ಗಜ್ಜರಿ, ಅವರೆಕಾಯಿ ಇತ್ಯಾದಿ ಇತ್ತೀಚಿನ ಪರಿಚಯವಾದರೆ, ಉತ್ತರ ಕೇರಳದ ಅವಿಯಲ್ ಹಾಗಲಕಾಯಿಯನ್ನೂ ಒಳಗೊಳ್ಳುತ್ತದೆ. ಕೆಲವರು ಮೊಸರನ್ನು ಬಿಡುತ್ತಾರೆ ಅಥವಾ ಅದರ ಬದಲಾಗಿ ಮಾವಿನಕಾಯಿ ಅಥವಾ ಹುಣಸೆ ತಿರುಳನ್ನು ಬಳಸಲು ಇಷ್ಟಪಡುತ್ತಾರೆ. ಈ ತಿನಿಸನ್ನು ಗ್ರೇವಿಯಾಗಿ ತಯಾರಿಸಬಹುದು ಅಥವಾ ಅರೆ ಘನ ಹೆಚ್ಚುವರಿ ಖಾದ್ಯವಾಗಿ ತಯಾರಿಸಬಹುದು. ಇದನ್ನು ಸಾಮಾನ್ಯವಾಗಿ ಅನ್ನದೊಂದಿಗೆ ತಿನ್ನಲಾಗುತ್ತದೆ.

"https://kn.wikipedia.org/w/index.php?title=ಅವಿಯಲ್&oldid=714631" ಇಂದ ಪಡೆಯಲ್ಪಟ್ಟಿದೆ