ವಿಷಯಕ್ಕೆ ಹೋಗು

ಅಲ್ ಉಬೈದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಸಪೊಟೇಮಿಯದ ಪುರಾತನ ಸಂಸ್ಕೃತಿಗಳಲ್ಲಿ ಒಂದು. ಇರಾಕ್‌ನ ಅಲ್ ಉಬೈದ್ ಗ್ರಾಮದ ಬಳಿ ನಡೆದ ಭೂ ಸಂಶೋಧನೆಯಿಂದ ಮೊದಲು ಗುರುತಿಸಲ್ಪಟ್ಟಿತು. ಪ್ರ.ಶ.ಪೂ. 4000 ವರ್ಷಗಳ ಸುಮಾರಿನಲ್ಲಿ ದಕ್ಷಿಣ ಭಾಗದಿಂದ ಮೆಸಪೊಟೇಮಿಯಕ್ಕೆ ವಲಸೆ ಬಂದ ಈ ಸಂಸ್ಕೃತಿಯ ಜನರಿಗೆ ಲೋಹದ ಉಪಯೋಗ ಅಲ್ಪಸ್ವಲ್ಪ ತಿಳಿದಿತ್ತು. ಚಕ್ರದ ಬಳಕೆಯಲ್ಲದೆ ಕೈಯಿಂದ ಮಡಕೆಗಳನ್ನು ಮಾಡುವ ವಿಧಾನವೂ ಇವರಿಗೆ ತಿಳಿದಿತ್ತು. ಮಣ್ಣಿನ ಇಟ್ಟಿಗೆಯ ತಯಾರಿಕೆ, ದೇವಾಲಯಗಳ ಕಟ್ಟಡ ಮುಂತಾದುವನ್ನು ರೂಢಿಗೆ ತಂದ ಈ ಜನ ಮೆಸಪೊಟೇಮಿಯದ ನಾಗರಿಕತೆಗೆ ಅಡಿಗಲ್ಲು ಹಾಕಿದರೆಂದು ಹೇಳಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: