ವಿಷಯಕ್ಕೆ ಹೋಗು

ಅಲ್ಯೂರೋಡಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಳಿ ನೊಣಗಳು. ದೇಹ ಮತ್ತು ರೆಕ್ಕೆಗಳ ಮೇಲೆ ಬಿಳಿಯ ದೂಳು ಆವರಿಸಿದ್ದು ಸಸ್ಯಹೇನುಗಳಂತೆ (ಆ್ಯಫಿಡ್ಸ್‌) ಇವೆ. ಈ ನೊಣದ ಮರಿಗಳಿಂದ ಸಸ್ಯಗಳಿಗೆ ಹಾನಿಯಿದೆ. ಇವು ತೆಳುಪೊರೆಯ ಕೀಟಗಳಿಂದ ಭಿನ್ನವಾಗಿವೆ. ಪೊರೆಹುಳುಗಳಿಗೆ ತೆಳುಪೊರೆ ಅಥವಾ ಕವಾಟ ಇರುವುದಿಲ್ಲ. ಬದಲಾಗಿ ಮೇಣದಂತಿರುವ ನವಿರಾದ ಹೊಳೆಯುವ ಬಿಳಿಯ ದಾರದಿಂದ ಸುತ್ತಲ್ಪಟ್ಟಿರುತ್ತವೆ. ಬಿಚ್ಚಿದಾಗ ಅದರ ಉದ್ದ ಸು. 2 ಮಿಮೀ ಇರುತ್ತದೆ. ಪ್ರೌಢ ಕೀಟ ಚಿಕ್ಕದಾಗಿ ಬಿಳಿ ಪತಂಗದಂತಿರುವುದು. ನಾಲ್ಕು ರೆಕ್ಕೆಗಳು ಇರುವುವು. ಇದರ ಮೊಟ್ಟೆಗಳಿಗೆ ತೊಟ್ಟು ಇದ್ದು ರೇತ್ರಾಣುಗಳು ಈ ತೊಟ್ಟಿನ ಮೂಲಕ ಹಾದು ಗರ್ಭಕಟ್ಟುತ್ತದೆ. ಅನಂತರ ಈ ತೊಟ್ಟುಗಳು ಮುದುರಿಕೊಳ್ಳುತ್ತವೆ. ಹೂದಾನಿಯಾಕಾರದ ಸಂದಿನಲ್ಲಿ ಗುದದ್ವಾರವಿರುವುದು ಇದರ ರಚನೆಯ ಒಂದು ವೈಶಿಷ್ಟ್ಯ. ಈ ದ್ವಾರಕ್ಕೆ ಒಂದು ಅಗಲವಾದ ಮುಚ್ಚಳವಿದೆ. ಈ ರಂಧ್ರದಿಂದ ಸಿಹಿಯಾದ ಅಂಟು ಪದಾರ್ಥ ಸ್ರವಿಸುತ್ತದೆ. ಹೆಚ್ಚು ಹಾವಳಿ ಮಾಡುವ ಈ ಜಾತಿಯ ಕೀಟಗಳು ಜಂಬೀರ (ಸಿಟ್ರಸ್) ಜಾತಿಯ ಮತ್ತು ಗಾಜಿನ ಮನೆಯಲ್ಲಿ ಬೆಳೆಸುವ ಕೋಮಲ ಸಸ್ಯಗಳನ್ನು ನಾಶಮಾಡುತ್ತವೆ. ಬಿಳಿ ನೊಣಗಳು ಪ್ರಪಂಚದ ಎಲ್ಲೆಡೆಯಲ್ಲಿಯೂ ವಾಸಿಸುತ್ತವೆ. ಇವಕ್ಕೆ ಕಂದು ಬಣ್ಣದ ದೇಹವೂ ನೀಲಿ ಬಣ್ಣದ ರೆಕ್ಕೆಗಳೂ ಇವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: