ವಿಷಯಕ್ಕೆ ಹೋಗು

ಅಲ್ಬರ್ಟ್ ಎಂಗ್‍ಸ್ಟ್ರಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂಗ್‍ಸ್ಟ್ರಮ್, ಆಲ್ಬರ್ಟ್ 1869-1940. ಸ್ವೀಡನ್ನಿನ ಅತ್ಯಂತ ಜನಪ್ರಿಯ ಕಥೆಗಾರ. ವ್ಯಂಗ್ಯಚಿತ್ರಕಾರ. ಹುಟ್ಟಿದುದು ಸ್ಮಾಲ್ಯಾಂಡಿನ ಸ್ಟೇಷನ್ ಮಾಸ್ತರರ ಮಗನಾಗಿ. ಸ್ಟಾಕ್‍ಹೋಮ್ ನಗರದಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಉದ್ಯೋಗವನ್ನಾರಂಭಿಸಿದ. ತಾನು ಕಂಡ ತನ್ನೂರಿನ ಕೃಷಿಕರ ಮತ್ತು ಅಪ್‍ಲ್ಯಾಂಡ್ ಕಡಲತೀರದ ಬೆಸ್ತರ ಬದುಕನ್ನು ಚಿತ್ರಿಸುವ ಕಥೆಗಳನ್ನೂ ವ್ಯಂಗ್ಯಚಿತ್ರಗಳನ್ನೂ ಬರೆದು ಅಪರಿಮಿತ ಜನಪ್ರಶಂಸೆಯನ್ನು ಗಳಿಸಿದ.[೧]

ಕಥೆ ಹೇಳುವಲ್ಲಿ ಈತ ತಾನು ಬೆಳೆದ ನೆಲದ ಅಚ್ಚ ದೇಶೀಯತೆಯನ್ನು ವಿಪುಲವಾಗಿ ತಂದಿದ್ದಾನೆ. ಈತ ಸ್ವೀಡಿಷ್ ಜನರಿಗೆ ಸ್ವೀಡಿಷ್‍ನಲ್ಲಿ ನಗುವುದನ್ನು ಹೇಳಿಕೊಟ್ಟನೆಂಬ ಮಾತು ಇವನ ಕಾಲದಲ್ಲೇ ಜನಜನಿತವಾಗಿತ್ತು. ಸ್ಟ್ರಿಕ್ಸ್ (ಸ್ವೀಡನ್ನಿನ ಖ್ಯಾತ ನಾಟಕಕಾರ ಸ್ಟ್ರಿಂಡ್‍ಬರ್ಗನ ಎಳೆತನದ ಅಡ್ಡಹೆಸರು. ಲ್ಯಾಟಿನ್ನಿನಲ್ಲಿ ಗೂಬೆ ಎಂದು ಅರ್ಥ) ಎಂಬ ಹಾಸ್ಯಕ್ಕೆ ಮೀಸಲಾದ (ಕನ್ನಡದ ಕೊರವಂಜಿಯಂಥ) ಚಿಕ್ಕ ಮಾಸಿಕವನ್ನು ಆರಂಭಿಸಿ, ಅದರ ಸಂಪಾದಕನಾಗಿ ಕೆಲವು ವರ್ಷ ಇದ್ದ. ಮುಂದೆ ಲಲಿತಕಲೆಗಳ ರಾಯಲ್ ಅಕಾಡೆಮಿಯಲ್ಲಿ ಪ್ರಾಧ್ಯಾಪಕನಾಗಿಯೂ ಸ್ವೀಡಿಷ್ ಅಕಾಡೆಮಿಯ ಸದಸ್ಯನಾಗಿಯೂ ಸೇವೆ ಸಲ್ಲಿಸಿದ. 1941ರಲ್ಲಿ ಇವನ ಎಲ್ಲ ಕೃತಿಗಳೂ 28 ಸಂಪುಟಗಳಲ್ಲಿ ಪ್ರಕಟವಾದುವು.

ಉಲ್ಲೇಖಗಳು[ಬದಲಾಯಿಸಿ]