ಅಲ್ಕೊಹಾಲಿಸಮ್

ವಿಕಿಪೀಡಿಯ ಇಂದ
Jump to navigation Jump to search

ದುಶ್ಚಟಗಳು[ಬದಲಾಯಿಸಿ]

ಅತಿಯಾದ ಕುಡಿತದಿಂದಾಗುವ ರೋಗಾವಸ್ಥೆಗೆ ಅಲ್ಕೊಹಾಲಿಸಮ್ ಎನ್ನುತ್ತಾರೆ. ಮದ್ಯದ ಗೀಳು ಮತ್ತು ಮಾದಕ ದ್ರವ್ಯ ಸೇವನೆಯ ಚಟವು ಜಗತ್ತಿನಲ್ಲಿ ಸಾವಿರಾರು ವರ್ಷಗಳಿಂದ ಗಂಭೀರ ವರ್ತನೆಯ ಸಮಸ್ಯೆಗಳಿಗೆ ಮೂಲವಾಗಿವೆ. ಆ ವ್ಯಸನದಲ್ಲಿ ಮುಳುಗಿರುವುದು ಅನಿಷ್ಟವೆಂದೂ, ಅಪರಾಧವೆಂದೂ ಪರಿಗಣಿಸಲಾಗಿದೆ. ಕಾಲಕಾಲಕ್ಕೆ ಎಲ್ಲ ರಾಷ್ಟ್ರಗಳಲ್ಲಿ ಈ ದುಶ್ಚಟವನ್ನು ಹತ್ತಿಕ್ಕಲು ಕಾನೂನುಗಳನ್ನು ಮಾಡಿವೆ. ಆದರೆ ಈ ಆಲ್ಕೊಹಾಲಿಸಮ್ ಮತ್ತು ಮಾದಕ ದ್ರವ್ಯ ಸೇವನೆಯ ವ್ಯಸನಗಳು ಕೇವಲ ಕಾನೂನು ಮತ್ತು ಶಿಸ್ತಿನ ಸಮಸ್ಯೆಗಳು ಮಾತ್ರವಲ್ಲ. ಇತ್ತೀಚಿಗಿನ ಅಧ್ಯಯನಗಳು ಬೇರೆ ಎಲ್ಲದರಕ್ಕಿಂತ ಈ ದುಶ್ಚಟಗಳು ಹೆಚ್ಚು ಮಾನಸಿಕ, ಮನೋವೈದ್ಯಕೀಯ ಮತ್ತು ಸಾಮಾಜಿಕ ಸಮಸ್ಯೆಗಳಾಗಿವೆ. ಈ ಚಟಗಳು ವ್ಯಕ್ತಿಯನ್ನು ಮತ್ತು ಸಮಾಜವನ್ನು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ನಾಶಪಡಿಸುತ್ತವೆ.

ಅಲ್ಕೊಹಾಲಿಸಮ್[ಬದಲಾಯಿಸಿ]

ಅಲ್ಕೊಹಾಲಿಸಮ್ ಇದು ಸಾಮಾನ್ಯವಾಗಿ ಅತಿಯಾದ ಕುಡಿತ ಅಥವಾ ಮದ್ಯಸಾರದ ಮೇಲೆ ಅಥವಾ ಶರಾಬಿನ ಮೇಲೆ ಅತಿಯಾದ ಅವಲಂಬನೆಗೆ ಅನ್ವಯಿಸುತ್ತದೆ. ಜನರು ಹಲವಾರು ಕಾರಣಗಳಿಗಾಗಿ ಮತ್ತು ಹಲವಾರು ಬಗೆಗಳಲ್ಲಿ, ಸನ್ನಿವೇಶಗಳಲ್ಲಿ, ಶೈಲಿಯಲ್ಲಿ ಕುಡಿಯುತ್ತಾರೆ. ಅವರನ್ನ್ಮು ಆಲ್ಕೊಹಾಲಿಕ್ಸ್ ಎಂದು ಕರೆಯುವಂತಿಲ್ಲ. ದಿ ವರ್ಲ್ದ್ ಹೆಲ್ತ್ ಆರ್ಗೆನೈಜೇಶನ್ ಅಲ್ಕೊಹಾಲಿಸಮ್ ನ್ನು ಹೀಗೆ ಅರ್ಥವಿವರಣೆ ನೀಡಿದೆ:`ಅತಿಯಾದ ಕುಡಿತ ಅವನ ಅಲ್ಕೊಹಾಲ್ ಮೇಲೆ ಅವಲಂಬನೆ ಎಷ್ಟಾಗಿದೆಯೆಂದರೆ ಅವನು ಗಮನಾರ್ಹವಾಗಿ ಮಾನಸಿಕ ಅಸ್ಥಿರತೆಯನ್ನು ಪ್ರಕಟಪಡಿಸುತ್ತಾನೆ. ಅಥವಾ ಅವನ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವು ಹದಗೆಟ್ಟಿರುತ್ತದೆ. ಅವನ ಸಾಮಾಜಿಕ ವ್ಯಕ್ತಿಗಳೊಂದಿಗೆ ಅವನ ಹೆಂಡತಿ, ಮಕ್ಕಳೊಂದಿಗಿನ ಸಂಬಂಧಗಳು ಹದಗೆಟ್ಟಿರುತ್ತವೆ. ಮತ್ತು ಅವನ ಅರ್ಥಿಕ ಪರಿಸ್ಥಿತಿಯು, ಸಾಮಾಜಿಕ ಸಂಬಂಧಗಳು ಹಾಳಾಗಿರುತ್ತವೆ. ಅಂತಹಬೆಳವಣಿಗೆಯ ಪೂರ್ವಚಿನ್ನೆಯನ್ನು ಪ್ರಾರಂಭದಲ್ಲಿಯೆ ತೋರಿಸುತ್ತಾನೆ.

ಅಲ್ಕೊಹಾಲ್ ಸೇವನೆಯ ಪರಿಣಾಮಗಳು[ಬದಲಾಯಿಸಿ]

ಅಲ್ಕೊಹಾಲಿಸಮ್ ಇದು ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಕೆಲಸಗಳಲ್ಲಿ ಈ ಕೆಳಗಿನ ಗಂಭೀರ ತೊಂದರೆಗಳನ್ನುಂಟು ಮಾಡುತ್ತದೆ. ೧.ದೈಹಿಕ: ಅಲ್ಕೊಹಾಲ್ ನಿಂದ ದೇಹದ ಪ್ರತಿಯೊಂದು ಜೀವಕೋಶಗಳು, ಅಂಗಾಂಶಗಳು ಮತ್ತು ದೇಹದ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಕೊಹಾಲಿಕ್ ಅಂದರೆ ಕುಡಿತದ ಚಟದ ದಾಸನು ಮುಖ್ಯ ಆಹಾರವಾಗಿ ಶರಾಬಿನ ಮೇಲೆಯೆ ಅವಲಂಬಿಸಿರುತ್ತಾನೆ. ಅವನು ತನ್ನ ಆಹಾರ ಸೇವನೆಯನ್ನು ಅಲಕ್ಷಿಸುತ್ತಾನೆ. ತತ್ಪರಿಣಾಮವಾಗಿ ಅವನು ವಿಟಾಮಿನ್ ಮತ್ತು ಸತ್ವಯುತ ಆಹಾರ ಸೇವನೆಯಿಂದ ವಂಚಿತನಾಗುತ್ತಾನೆ. ಪ್ರೋಟೀನ್ ನ ಸೇವನೆ ಒಮ್ಮೆಲೆ ಕುಗ್ಗುವುದರಿಂದ ಅವನ ಲಿವರ್ ಅಥವಾ ಪಿತ್ತ ಕೋಶವು ಯಕೃತ್ತಿನ ತೀವ್ರ ರೋಗಕ್ಕೊಳಗಾಗುತ್ತಾನೆ. ಸುದೀರ್ಘ ಕಾಲ ಶರಾಬು ಸೇವನೆಯಿಂದ ನಿರ್ನಾಳ ಗ್ರಂಥಿಯ ಜೀವಕೋಶವು ಹಾನಿಗೊಳಗಾಗುತ್ತದೆ. ಅದರಿಂದ ಕುಡುಕನ ರೋಗನಿರೋಧಕ ಶಕ್ತಿಯು ಕುಗ್ಗಿ ಅವನ ಆಯಸ್ಸು ಕಡಿಮೆಯಾಗುತ್ತದೆ.ಅಥವಾ ಹಾರ್ಟ್ ಫೈಲ್ಯುರ್, ಬ್ಲಡ್ ಪ್ರೆಶ್ಶರ್, ಹೊಟ್ಟೆಯ ಗೆರೆಯು ಕುಗ್ಗುವುದು, ಅಥವಾ ಬಾತುಕೊಳ್ಳುವುದು, ಮತ್ತು ಲೋಮರಕ್ತನಾಳದ ರಕ್ತಸ್ರಾವವಾಗಬಹುದು. ಅಲ್ಕೊಹಾಲಿಕ್ಸುಗಳು ಡಿಪ್ರೆಶ್ಶನ್ ನಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು. ಸೋಂಕು ವಿಶೇಶವಾಗಿ ಉಸಿರಾಟದ ತೊಂದರೆ, ಕಾಮಾಲೆ ರೋಗ ಅದರಲ್ಲಿ ವಾಂತಿಯಾಗುವ ಕಪ್ಪು ಪದಾರ್ಥ, ಪಿತ್ತ ಜನಕಾಂಗ ಹಾನಿಗೊಳಗಾಗುತ್ತದೆ. ೨. ಮನೋದೈಹಿಕ ಹಾನಿ ಇದು ನರಮಂಡಲದ ಮತ್ತು ಮನೋವಿಕಾರದ ಅಸ್ತವ್ಯಸ್ತತೆಯನ್ನು ಮಿದುಳಿನ ಹಾನಿಯನ್ನು ರೋಗಶಾಸ್ತ್ರೀಯ ಅಮಲನ್ನು, ಅತಿಯಾದ ಕುಡಿತದಿಂದಾಗುವ ಕಂಪಸನ್ನಿ, ಭಯಂಕರ ಭ್ರಮೆ, ನಡುಕ, ಅಲ್ಕೊಹಾಲಿಕ್ ಭ್ರಮೆ, ಅಲ್ಕೊಹಾಲಿಕ್ಸವೆತ, ಮತ್ತು ಕೋರ್ಸಾ ಕೊಫ್ಸ್ ಸಿಂಡ್ರೊಮ್ ಕಂಡುಬರಬಹುದು. ೩. ವರ್ತನೆಯ ಹಾನಿ: ಅಲ್ಕೊಹಾಲಿಸಮ್ ನಿಂದಾಗಿ ಆಲೋಚನಾ ಪ್ರಕ್ರಿಯೆಗಳು ಗಂಭೀರವಾಗಿ ಹಾನಿಗೊಳಗಾಗುತ್ತವೆ.ಮತ್ತು ಬೌದ್ಧಿಕ ಕೆಲಸಗಳು ಹಾನಿಗೊಳಗಾಗುತ್ತವೆ. ಸಾಕಷ್ಟು ಅಮಲು ಅವನ ಬುದ್ಧಿಯನ್ನು ಮಂಕುಕವಿಯುವಂತೆ ಮಾಡುತ್ತವೆ. ಮತ್ತು ಅವನು ಏನನ್ನು ಹೇಳುತ್ತಾನೆ ಮತ್ತು ಏನನ್ನು ಮಾಡುತ್ತಾನೆ ಎಂಬುದನ್ನು ನೆನಪಿಟ್ಟುಕೊಳ್ಳಲು ಅಸಮರ್ಥನಾಗುತ್ತಾನೆ. ಸ್ನಾಯು ಕ್ರಿಯೆಗೆ ಚಾಲನೆ ನೀಡುವಲ್ಲಿ ಪಾತ್ರವಹಿಸುವ ಮುಮ್ಮಿದುಳಿನ ಭಾಗವು ಹದಗೆಡುತ್ತದೆ. ಮುಮ್ಮಿದುಳಿನ ಸಮತೋಲನದ ಹೊಂದಾಣಿಕೆಯು ಕೆಡುವುದರಿಂದ ದೇಹದ ಬ್ಯಾಲೆನ್ಸ್, ಮಾತು ಮತ್ತು ಶಕ್ತಿ ಗ್ರಹಿಕೆ ತೀವ್ರವಾಗಿ ಹಾನಿಗೊಳಗಾಗುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವವನ್ನು ಅಥವಾ ಚರಿತ್ರೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಅವನ ವೈಯುಕ್ತಿಕ ಅಭ್ಯಾಸವು ಕೆಡುವುದು, ಅವನ ವೇಶಭೂಷಣಗಳ ಬಗ್ಗೆ ಅಸಡ್ಡೆ, ನಿರ್ಲಕ್ಷ, ಸ್ವವ್ಯಕ್ತಿತ್ವ ಮತ್ತು ಆತ್ಮಗೌರವವಿಲ್ಲದಿರುವುದು. ಹಿಂಜರಿಕೆ ಮತ್ತು ಸಂಕೋಚಗಳಿಲ್ಲದ ವರ್ತನೆ, ಸರಿ-ತಪ್ಪಿನ ತಿಳುವಳಿಕೆಯ ಹಾನಿ, ಭಾವನಾತ್ಮಕ ಮತ್ತು ಮುಮ್ಮಿದುಳಿನ ಹಾನಿ ಮತ್ತು ತನ್ನ ಬಗ್ಗೆ ಗೌರವ ಇಲ್ಲದಿರುವುದು, ಇದ್ರಿಂದ ಆಲ್ಕೊಹಾಲಿಕ್ಸುಗಳು ಬೇಜವಾಬ್ದಾರಿಯಿಂದ ವರ್ತಿಸುವುರಲ್ಲದೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗುವರು. ಅಮಲು ಸೇವನೆಯು ವ್ಯಕ್ತಿಯಲ್ಲಿ ಲೈಂಗಿಕ ವರ್ತನೆಯ ಮೇಲೆ ಮತ್ತು ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮತ್ತು ಅವನು ಕುಟುಂಬದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಲೈಂಗಿಕ ಅಸಾಮರ್ಥ್ಯವು ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸಬಹುದು. ಆಶಾಭಂಗ, ದೋಷಪೂರ್ಣ ಬೌದ್ಧಿಕ ಮತ್ತು ನೈತಿಕ ನಿರ್ಣಯಗಳು ಲೈಂಗಿಕ ಅಪರಾಧಗಳಲ್ಲಿ ತೊಡಗುವಂತೆ ಮಾಡಬಹುದು. ಹೀಗೆ ಅಲ್ಕೊಹಾಲಿಸಮ್ ಒಬ್ಬ ವ್ಯಕ್ತಿಗೆ ಮಾನಸಿಕ ಮತ್ತು ದೈಹಿಕ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಎಣಿಸಲಾಗದ ವೈಯುಕ್ತಿಕ ಮತ್ತು ಸಾಮಾಜಿಕ ಪರಿಣಾಮಗಳು ಅನಿವಾರ್ಯವಾಗುತ್ತವೆ. ಅವನು ದೈಹಿಕ ಮಾನಸಿಕ ಆರೋಗ್ಯ ಭಾವನಾತ್ಮಕ ಮತ್ತು ಸಾಮಾಜಿಕ ಸಂಬಂಧಗಳ ಮತ್ತು ಆರ್ಥಿಕ ಹಾನಿ ಮತ್ತು ನೈತಿಕ ಅಧಃಪತನ ದೃಷ್ಟಿಯಿಂದ ನಾಶಗೊಳ್ಳುತ್ತಾನೆ. ಇದರಿಂದಾಗಿ ಅವನಿಗೂ ಮತ್ತು ಅವನ ಹೆಂಡತಿ ಮಕ್ಕಳಿಗೂ ಮತ್ತು ಸಮಾಜಕ್ಕೂ ತುಂಬ ಸಂಕಷ್ಟವನ್ನು ನಿರಾಶೆಯನ್ನು ಕೊಡುತ್ತಾನೆ.

ಅಲ್ಕೊಹಾಲಿಸಮ್ ಗೆ ಚಿಕಿತ್ಸೆ[ಬದಲಾಯಿಸಿ]

ಅಲ್ಕೊಹಾಲಿಸಮ್ ಗೆ ಒಂದೇ ಪರಿಣಾಮಕಾರಿಯಾದ ಪರಿಹಾರವಿಲ್ಲ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯು ತನ್ನನ್ನು ಬಂಧಿಸುವರು, ಮತ್ತು ಜೈಲಿಗೆ ಹಾಕುವರು ಎಂಬ ಭೀತಿಯಿಂದ ಕುಡಿಯುವುದನ್ನು ನಿಲ್ಲಿಸಬಹುದು. ಆದರೆ ಈ ಸಮಸ್ಯೆಯ ನಿವಾರಣೆಗೆ ವೈದ್ಯಕೀಯ, ಸಾಮಾಜಿಕ ಮತ್ತು ಮಾನಸಿಕ ಮಟ್ಟದಲ್ಲಿ ಪ್ರಯತ್ನ ಮಾಡಬೇಕಿದೆ. ಚಿಕಿತ್ಸೆ ಮಾಡುವ ಮೊದಲು ಅಲ್ಕೊಹಾಲಿಸಮ್ ನ ಪೂರ್ವ ಲಕ್ಷಣಗಳ ಸ್ಪಷ್ಟ ಮಾಹಿತಿ ಇರಬೇಕು. ಅವುಗಳು ನಿರಂತರ ಕುಡಿತದಿಂದ ಹಿಡಿದು ಅನಿಯಂತ್ರಿತ ಕುಡಿತದ ಆಸ್ಫೋಟ; ಬೆಳಿಗ್ಗಿನ ಕುಡಿತ; ಮಂಕಾಗುವಿಕೆ; ಕುಡಿತದಲ್ಲಿ ಸಂತೋಷ ಕಾಣದಿರುವುದು; ಮತ್ತು ಬಯಸಬಾರದ, ಅನಿಯಂತ್ರಿತ ತೀವ್ರ ವರ್ತನೆಗಳು. ಆಗ ಸರಿಪಡಿಸುವ ಈ ಕೆಳಗಿನ ಕ್ರಮಗಳನ್ನು ಕೈಕೊಳ್ಳಬಹುದು. ೧.ಸಂಸ್ಥೀಕರಣ ಮತ್ತು ಆಸ್ಪತ್ರೆಗೆ ಸೇರಿಸುವುದು: ತೀವ್ರ ಆಲ್ಕೊಹಾಲಿಕ್ಸ್ ವ್ಯಸನದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದರೆ ಒಳಿತು. ಹಲವಾರು ಕೇಸುಗಳಲ್ಲಿ ಆಸ್ಪತ್ರೆಗೆ ಹಾಕುವುದು ಕಡ್ಡಾಯವಲ್ಲ. ಆದರೆ ಅಲ್ಕೊಹಾಲಿಕ್ಸುಗಳನ್ನು ಪ್ರತಿಕೂಲ ಪರಿಸ್ಥಿತಿಯಿಂದ ದೂರವಿಟ್ಟು ಅವರ ವರ್ತನೆಯನ್ನು ನಿಯಂತ್ರಣದಲ್ಲಿಡಬೇಕು. ೨. ಕ್ಲಿನಿಕಲ್ ತನಿಖೆ: ಅದು ಪೂರ್ಣ ರಕ್ತದ ಕೌಂಟನ್ನು, ಎದೆಯ ಮತ್ತು ತಲೆಬುರುಡೆಯ ರೇಡಿಯೊಗ್ರಾಫಿಯನ್ನು ಯಕೃತ್ತಿನ ಕ್ರಿಯಾ ಪರೀಕ್ಷೆಯನ್ನು ಮತ್ತು ಇದರ ಪರಿಣಾಮವಾಗಿ ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಕೊರತೆ ಮತ್ತು ಹಾನಿಯನ್ನು ಸರಿಪಡಿಸಲು ಕೊಡಬೇಕು. ೩. ಅಮಲುರಹಿತನನ್ನಾಗಿ ಮಾಡುವುದು: (ಡಿ ಇಂಟೋಕ್ಸಿಕೇಶನ್) ಅಲ್ಕೊಹಾಲಿಕ್ಸುಗಳನ್ನು ಚಿಕಿತ್ಸೆ ಮಾಡುವ ಮೊದಲ ಹೆಜ್ಜೆಯೆಂದರೆ ಅಮಲೀಕರಣ ಮಾಡುವುದಾಗಿದೆ. ಅಂದರೆ ದೇಹದೊಳ್ಗಿರುವ ಅಲ್ಕೊಹಾಲಿಕ್ ಪದಾರ್ಥಗಳನ್ನು ತೆಗೆದುಬಿಡುವುದು. ಮತ್ತು ಹಿಮ್ಮೆಟ್ಟುವ(ವಿದ್ ಡ್ರಾವಲ್) ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡುವುದು. ಅಲ್ಕೊಹಾಲ್ ಗಾಗಿ ತಹತಹಿಸುವುದು, ನಡುಗುವುದು, ಬೆವರುವುದು, ಜ್ವರ, ವಾಂತಿ,ಮಂಕಾಗುವುದು ಮುಂತಾದವುಗಳಿಗೆ ಸರಿಯಾದ ಚಿಕಿತ್ಸೆ ನೀಡುವುದಾಗಿದೆ. ೪. ನಿರ್ಬಂಧಗೊಳಿಸುವ ಕ್ರಮಗಳು: ನಿರ್ ಅಮಲೀಕರಣವಾದ ಮೇಲೆ ಕುಡಿತ್ಕ್ಫ಼್ಕೆ಼್ೆ಼ ತಡೆಯೊಡ್ಡುವ ಕ್ರಮಗಳನ್ನು ಕುಡಿತವನ್ನು ದ್ವೇಷಿಸುವ, ಷ್ಟಪಡದಿರುವ ಥೆರಪಿಯನ್ನು ಸಾಮಾನ್ಯವಾಗಿ ರೋಗಿ ಕುಡಿಯುವುದರಿಉಂದ ತಡೆ ಹಿಡಿಯಲು ಉಪಯೋಗಿಸಲಾಗುತ್ತದೆ. ರೋಗಿಗೆಡಿಸ್ಯುಲಫಿ, ಅಥವಾ ಆಮ್ಲೀಕರಣ ಮಾಡಿದ ಕ್ಯಾಲ್ಸಿಯಮ್ ಕಾರ್ಬಿಮೈಡ್ (ಎಬ್ಸ್ಟೆಮ್) ಕುಡಿಯದಿರುವಂತೆ ನಿರ್ಧರಿಸಲು ಅವನಿಗೆ ಸಹಾಯ ಮಾಡುತ್ತವೆ. ಈ ದ್ರವ್ಯಗಳು ವ್ಯಕ್ತ್ರಿ ಆಲ್ಕೊಹಾನೊಟ್ಟಿಗೆ ಸೇವಿಸಿದರೆ ತೀವ್ರವಾದ ಅಸ್ವಸ್ಥತೆ ಉಂಟಾಗುತ್ತದೆ. ಮತ್ತು ಇದು ರೋಗಿಯನ್ನು ಕುಡಿತದಿಂದ ತಡೆಹಿಡಿಯುವ ಶಕ್ತಿಶಾಲಿ ಔಷಧವಾಗಿ ಕೆಲಸ ಮಾಡುತ್ತದೆ. ಅಲ್ಕೊಹಾಲಿನ ಬಗ್ಗೆ ದ್ವೇಷ ಬೆಳೆಸಲು ಅಲ್ಕೊಹಾಲಿಕ್ ಡ್ರಿಂಕ್ಸ್ ನ ಜೊತೆಗೆ ತೆಗೆದುಕೊಂಡಾಗ ಅಸಹ್ಯವಾಗುವಂತಹ ಮತ್ತು ವಾಂತಿಯಾಗುವಂತಹ ದ್ರವ್ಯವನ್ನು ಕೊಡಲಾಗುತ್ತದೆ. ಅದನ್ನು ಪದೆ ಪದೆಉಪಯೋಗಿಸಿದಾಗ ಅಲ್ಕೊಹಾಲಿಕ್ ಕ್ರಾರುವಕ್ಕಾಗಿ ಕುಡಿತದ ಬಗ್ಗೆ ದ್ವೇಷ ಬೆಳೆಸಿಕೊಳ್ಳುತ್ತಾನೆ. ಶೊಕ್ ಥೆರಪಿಯನ್ನೂ ಕೂಡಾ ಶರಾಬು ಕಂಡಾಕ್ಷಣ ದ್ವೇಷವುಂಟಾಗುವಂತೆ ಮಾಡುವ ಒಂದು ಪರಿಣಾಮಕಾರಿ ಕ್ರಮವಾಗಿದೆ. ಕೆಲವೊಮ್ಮೆ ವ್ಯಕ್ತಿಯ ಬದುಕಿನ ಕೆಟ್ಟ ಆಘಾತಗಳಿಂದ ಶಾಕಿಗೊಳಗಾಗಿದ್ದರೆ ಶಾಕ್ ಚಿಕಿತ್ಸೆಯು ಅತ್ಯಂತ ಅಮೂಲ್ಯವಾಗಿಬಿಡುತ್ತದೆ.

ಮನೋರೋಗಕ್ಕಾಗಿ ಮಾಡುವ ಚಿಕಿತ್ಸೆ[ಬದಲಾಯಿಸಿ]

ರೋಗಿಯ ಕುಡಿತದ ವ್ಯಸನವನ್ನು ನಿಲ್ಲಿಸಿದ ಮೇಲೆ ಅವನಿಗೆ ಗುಂಪು ಇಲ್ಲವೆ ವೈಯುಕ್ತಿಕ ಮನೋರೋಗ ಚಿಕಿತ್ಸೆಯನ್ನು ಅವನ ವರ್ತನೆಯ ಒಳನೋಟವನ್ನು ಪಡೆಯಲು ಸಹಾಯಕಾರಿಯಾಗುವಂತೆ ಪರಿಣಾಮಕಾರಿ ಹೊಂದಾಣಿಕೆಯ ತಂತ್ರಗಳನ್ನು ಬೆಳೆಸಿಕೊಳ್ಳಲು ಕೊಡಬಹುದು. ಏನೇ ಆದರೂ ಮೂಲಭೂತವಾಗಿ ಸಮಾಜಘಾತುಕರಾದ ಅಲ್ಕೊಹಾಲಿಕ್ಸು ಗಳಿಗೆ ಈ ಚಿಕಿತ್ಸೆಯ ಉಪಯೋಗವನ್ನು ಶಿಫಾರಸುಮಾಡಲಾಗಿಲ್ಲ. ಮನೋಚಿಕಿತ್ಸಿಕ ಅಲ್ಕೊಹಾಲಿಕ್ಸನೊಟ್ಟಿಗೆ ತುಂಬ ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಅಲ್ಕೊಹಾಲ್ ಸೋಂಕು ಇದ್ದವರು ಸಾಮಾನ್ಯವಾಗಿ ಸುಳ್ಳುಗಾರರಾಗಿರುತ್ತಾರೆ. ಅವರು ಎಂದೆಂದೂ ಕುಡಿಯದಿರುವ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರರು. ಇದರ ಫಲಪ್ರದ ಪರಿಣಾಮವನ್ನು ಕಾಣಬೇಕಿದ್ದರೆ ರೋಗಿಗೆ ಕುಡಿತವಿಲ್ಲದ ಬದುಕು ಹೆಚ್ಚು ತೃಪ್ತಿದಾಯಕ ಮತ್ತು ಸಂತೋಷವನ್ನು ತರಬಲ್ಲದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಪ್ರತಿ ಸಂದರ್ಭದಲ್ಲಿ ಮೂಲಭೂತ ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಬೇಕು. ಅವನನ್ನು ಕುಡಿತಕ್ಕೆ ತಳ್ಳಿದ ಪ್ರತ್ರಿಕ್ರಿಯಾತ್ಮಕ ಬದುಕಿನ ಘಟನೆಗಳನ್ನು ಮತ್ತು ಅಲ್ಕೊಹಾಲಿಕ್ ವರ್ತನೆಯ ಶೈಲಿಯನ್ನು ಮೌಲ್ಯಮಾಪನ ಮಾಡಬೇಕು. ಅವನ ಕುಟುಂಬದವರ ಬೆಂಬಲ ಮತ್ತು ಉದ್ಯೋಗ ಇನ್ನೂ ಅವನಿಗಾಗಿ ತೆರೆದಿದೆಯೆ ಇವೆಲ್ಲವನ್ನೂ ತನಿಖೆಗೆ ಒಳಪಡಸಬೇಕು.

ಸಾಮಾಜಿಕ ಚಿಕಿತ್ಸೆ[ಬದಲಾಯಿಸಿ]

ಈ ಚಿಕಿತ್ಸೆಯು ಪರಿಸರದ ಸನ್ನಿವೇಶಗಳ ಮಾರ್ಪಾಡು, ನಿಲುವಿನಲ್ಲಿ ಬದಲಾವಣೆ ಮತ್ತು ಆರೋಗ್ಯವಂತ ಸಾಮಾಜಿಕ ಕೂಟ ಮತ್ತು ಗುಂಪುಗಳನ್ನು ಒದಗಿಸುವುದು ಇವೆಲ್ಲವನ್ನೂ ಒಳಗೊಂಡಿರುತ್ತವೆ. ಇದನ್ನು ಅವನ ಹೆಂಡತಿಗೆ ಮತ್ತು ಕುಟುಂಬದ ಸದಸ್ಯರಿಗೆ ಕೌನ್ಸೆಲಿಂಗ್ ಮತ್ತು ಅವರು ರೋಗಿಗೆ ಕುಟುಂಬದಲ್ಲಿ ಮತ್ತು ಸಮುದಾಯದ ಪರಿಸರದಲ್ಲಿ ಮರುಹೊಂದಾಣಿಕೆಗೆ ಸಹಾಯ ಮಾಡುವಂತೆ ನಿರ್ದೇಶಿಸಿದೆ. ಅವರ ಸಾಮಾಜಿಕ ಸಂಪರ್ಕವನ್ನು ಸರಿಪಡಿಸಲು ಧಾರ್ಮಿಕ ಕೂಟಗಳು, ಸಾಮಾಜಿಕ ಕ್ಲಬ್ಬುಗಳ ರೂಪದಲ್ಲಿ ಪ್ರೇರಣಾತ್ಮಕ ಮತ್ತು ಅಧ್ಯಾತ್ಮಿಕ ಅಂಶಗಳು ಅಲ್ಕೊಹಾಲಿಕ್ಸು ಗಳ ಚಿಕಿತ್ಸೆಗೆ ಪ್ರಯೋಜನಕಾರಿಯಾಗಬಹುದು. ಕುಡಿತದದುಷ್ಪರಿಣಾಮಗಳನ್ನು ಎತ್ತಿ ಹಿಡಿಯುವ ಮತ್ತು ಬದುಕಿನ ಪ್ರಶಾಂತತೆಯನ್ನು ತೋರಿಸುವ ನಾಟಕಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಿನೇಮಾಗಳನ್ನು ತೋರಿಸುವುದು ಇವೆಲ್ಲ ಹೆಚ್ಚು ಉಪಯುಕ್ತವಾಗಬಹುದು.

ಚಿಕಿತ್ಸೆಯ ಅವಧಿ ಮತ್ತು ಮುಂಬರಿಕೆ[ಬದಲಾಯಿಸಿ]

ಚಿಕಿತ್ಸೆಯ ಅವಧಿಯು ಕುಡಿಯುವವರ ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಇರುತ್ತದೆ.ಅವರು ಐದು ವರ್ಷಗಳ ಕಾಲ ಕುಡಿತದಿಂದ ದೂರವಿದ್ದರೆ ಅವರು ಆಲ್ಕೊಹಾಲಿಸಮ್ ನಿಂದ ಪಾರಾಗಿದ್ದಾರೆ ಎನ್ನಬಹುದು ಮೊದಲ ಎರಡು ವರ್ಷಗಳಲ್ಲಿ ಅದು ಮರುಕಳಿಸುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಯಾದ ಮೇಲೆ ತುಂಬ ಕಾಳಜಿಯನ್ನು ಮುಂಬರಿಕೆಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.