ಅಲೆವೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆರೆ
ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆರೆ

ಅಲೆವೂರು ಉಡುಪಿ ನಗರದಿಂದ ಸುಮಾರು ೬ ಕಿ.ಮೀ ದೂರದಲ್ಲಿರುವ ಒಂದು ಊರು. ಚರಿತ್ರೆಯ ಕಾಲದಲ್ಲಿ ಇದು ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದ ಬಗ್ಗೆ ಉಲ್ಲೇಖಗಳಿವೆ. ಇಲ್ಲಿ ಇತಿಹಾಸ ಕಾಲದ ಎರಡು ದೇವಾಲಯಗಳಿವೆ. ಒಂದು ಕದಂಬರ ಕಾಲದಲ್ಲಿ ಮಯೂರವರ್ಮನಿಂದ ನಿರ್ಮಿಸಲ್ಪಟ್ಟ ಜನಾರ್ದನ ದೇವಾಲಯವಾದರೆ ಇನ್ನೊಂದು ೧೦ನೆಯ ಶತಮಾನದ ಉಲ್ಲೇಖವಿರುವ ಅಂಬಾ ಅಥವಾ ದುರ್ಗಾದೇವಿ ದೇವಾಲಯ.[೧] ೨೦೧೧ರ ಸಾಲಿನ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩೧೯೧ ಗಂಡಸರು ಹಾಗೂ ೩೧೧೧ ಹೆಂಗಸರು ಸೇರಿ ಒಟ್ಟು ೬೩೦೨ ಆಗಿರುತ್ತದೆ.[೨]ಅಲೆವೂರಿನ ಪ್ರಗತಿ ನಗರದಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದ ನೂರಾರು ವಲಸೆ ಕಾರ್ಮಿಕರು ತಮಗೂ ಮತದಾನದ ಹಕ್ಕು ನೀಡುವಂತೆ ಒತ್ತಾಯಿಸಿ ರಾಜ್ಯ ವಲಸೆ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಅಲೆವೂರು ನೆಹರು ಪ್ರೌಢಶಾಲೆ ಸಮೀಪ ಮೌನ ಪ್ರತಿಭಟನೆ ನಡೆಸಿದರು.


ಉಲ್ಲೇಖಗಳು[ಬದಲಾಯಿಸಿ]

  1. "ಅಲೆವೂರು" (PDF). Retrieved 27 ಜುಲೈ 2014.
  2. "ಜನಸಂಖ್ಯೆ". Retrieved 27 ಜುಲೈ 2014.
"https://kn.wikipedia.org/w/index.php?title=ಅಲೆವೂರು&oldid=1186382" ಇಂದ ಪಡೆಯಲ್ಪಟ್ಟಿದೆ