ಅಲೆಕ್ಸಿಸ್ ವಿಲಿಬಲ್ಡ್

ವಿಕಿಪೀಡಿಯ ಇಂದ
Jump to navigation Jump to search

1798-1871. ಜರ್ಮನಿಯ ಪ್ರಸಿದ್ಧ ಚಾರಿತ್ರಿಕ ಕಾದಂಬರಿಕಾರ ಜಾರ್ಜ್ ವಿಲ್‌ಹೆಲ್ಮ್ ಹೈನ್ರಿಚ್ ಹೇರಿಂಗ್‌ನ ಕಾವ್ಯನಾಮ. ಈತ 1823ರಲ್ಲಿ ಬರೆದ ವಲ್ಲಾಡ್ಮೊರ್ಎಂಬ ಚಾರಿತ್ರಿಕ ಪ್ರೇಮಕಥಾನಕ ತುಂಬ ಯಶಸ್ವಿಯಾಯಿತು. ಡರ್‌ರೋಲಾಂಡ್ ಫಾನ್ ಬರ್ಲಿನ್, ಡರ್ ಫಾಲ್ಚೆ ವೊಲ್ಡೆಮಾರ್ ಮೊದಲಾದ ಈತನ ಚಾರಿತ್ರಿಕ ಕಾದಂಬರಿಗಳು ದೇಶಭಕ್ತಿಪ್ರೇರಕವಾಗಿದ್ದು ಜನಪ್ರಿಯವಾಗಿವೆ. ಮಹಾಕಾವ್ಯಗಳಲ್ಲಿ ಕಾಣುವ ಕಲ್ಪನೆಯ ವೈಭವವನ್ನು ಇವನ ಉತ್ಕೃಷ್ಟ ಕಾದಂಬರಿಗಳಲ್ಲಿ ಕಾಣಬಹುದು.