ಅಲೆಕ್ಸಾಂಡ್ರಾ ರುದರ್‌ಫೋರ್ಡ್
ಅಲೆಕ್ಸಾಂಡ್ರಾ ರುದರ್‌ಫೋರ್ಡ್ | |
---|---|
ರಾಷ್ಟ್ರೀಯತೆ | ಕೆನಡಾ |
ವೃತ್ತಿ(ಗಳು) | ಪ್ರಾಧ್ಯಾಪಕಿ, ಲೇಖಕಿ, ಸಂಪಾದಕಿ |
Academic background | |
Alma mater | ಯಾರ್ಕ್ ವಿಶ್ವವಿದ್ಯಾಲಯ |
Thesis | ಬಿಟ್ವೀನ್ ದ ಸೈನ್ಸ್ ಆಫ್ ಬಿಹೇವಿಯರ್ ಅಂಡ್ ದ ಆರ್ಟ್ಸ್ ಆಫ್ ಲಿವಿ೦ಗ್ :ಬಿ.ಎಫ್ ಸ್ಕಿನ್ನೆರ್ ಅಂಡ್ ಸೈಕಾಲಜಿ ಪಬ್ಲಿಕ್ ಇನ್ ಮಿಡ್ ೨೦ತ್ ಸೆಂಚುರಿ ಅಮೆರಿಕ(೨೦೦೧) (೨೦೦೧) |
Academic work | |
Discipline | ಮನೋವಿಜ್ಞಾನ |
Institutions | ಯಾರ್ಕ್ ವಿಶ್ವವಿದ್ಯಾಲಯ |
Main interests | ಮನೋವಿಜ್ಞಾನ ಮತ್ತು ಸ್ತ್ರೀವಾದ, ಮನೋವಿಜ್ಞಾನದ ಇತಿಹಾಸ |
Notable works | ಬಿಯಾಂಡ್ ದಿ ಬಾಕ್ಸ್: ಬಿ.ಎಫ್ ಸ್ಕಿನ್ನರ್ ಟೆಕ್ನಾಲಜಿ ಆಫ್ ಬಿಹೇವಿಯರ್ ಫ್ರಂ ಲ್ಯಾಬೋರೇಟರಿಯಿಂದ ಲೈಫ್ ೧೯೫೦-೧೯೭೦ |
ಅಲೆಕ್ಸಾಂಡ್ರಾ ರುದರ್‌ಫೋರ್ಡ್ ಯಾರ್ಕ್ ವಿಶ್ವವಿದ್ಯಾನಿಲಯದ ಹಿಸ್ಟರಿ ಅಂಡ್ ಥಿಯರಿ ಆಫ್ ಸೈಕಾಲಜಿ ಗ್ರಾಜುಯೇಟ್ ಪ್ರೋಗ್ರಾಂನಲ್ಲಿ ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ. ಇವರುಬಿಯಾಂಡ್ ದಿ ಬಾಕ್ಸ್: ಬಿ.ಎಫ್ ಸ್ಕಿನ್ನರ್ ಟೆಕ್ನಾಲಜಿ ಆಫ್ ಬಿಹೇವಿಯರ್ ಫ್ರಂ ಲ್ಯಾಬೋರೇಟರಿಯಿಂದ ಲೈಫ್ ೧೯೫೦-೧೯೭೦ ಮತ್ತು ಪಿಯೋನಿಯರ್ಸ್ ಆಫ್ ಸೈಕಾಲಜಿಯ ಲೇಖಕರಾಗಿದ್ದಾರೆ.
ಶಿಕ್ಷಣ
[ಬದಲಾಯಿಸಿ]ರುದರ್‌ಫೋರ್ಡ್ ೧೯೯೩ ರಲ್ಲಿ ಟೊರೊಂಟೊ ವಿಶ್ವವಿದ್ಯಾನಿಲಯದ ಟ್ರಿನಿಟಿ ಕಾಲೇಜಿನಲ್ಲಿ ಉತ್ತಮ ಅಂಕಗಳೊಂದಿಗೆ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದರು. ಅವರು ೧೯೯೫ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ತಮ್ಮ ಮಾಸ್ಟರ್ ಆಫ್ ಆರ್ಟ್ಸ್ ಅನ್ನು ಪೂರ್ಣಗೊಳಿಸಿದರು ಮತ್ತು ೨೦೦೧ ರಲ್ಲಿ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಸೈಕಾಲಜಿ ಮತ್ತು ಕ್ಲಿನಿಕಲ್ ಸೈಕಾಲಜಿ ಇತಿಹಾಸ ಮತ್ತು ಸಿದ್ಧಾಂತದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು. [೧]
ವೃತ್ತಿ
[ಬದಲಾಯಿಸಿ]೨೦೦೧ ರಿಂದ, ರುದರ್‌ಫೋರ್ಡ್ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನ ವಿಭಾಗದಲ್ಲಿ ಬೋಧಕರಾಗಿದ್ದಾರೆ. ೨೦೦೬ ರಿಂದ ಸಹ ಪ್ರಾಧ್ಯಾಪಕರಾಗಿ, [೨] ನಂತರ ಪೂರ್ಣ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
೨೦೦೪ ರಲ್ಲಿ, ರುದರ್‌ಫೋರ್ಡ್ ಸೈಕಾಲಜಿಯ ಫೆಮಿನಿಸ್ಟ್ ವಾಯ್ಸ್ ಪ್ರಾಜೆಕ್ಟ್ ಅನ್ನು ಸ್ಥಾಪಿಸಿದರು.[೩] ಇದು ಸೈಕಾಲಜಿಯ ಸ್ತ್ರೀವಾದಿ ಧ್ವನಿ ಅನ್ನು ಪ್ರಾರಂಭಿಸಲು ಕಾರಣವಾಯಿತು. "ಮನೋವಿಜ್ಞಾನದ ಇತಿಹಾಸದುದ್ದಕ್ಕೂ ಮಹಿಳೆಯರು ನೀಡಿದ ಕೊಡುಗೆಗಳು ಆನ್‌ಲೈನ್, ಡಿಜಿಟಲ್ ಮುದ್ರಣ ಮನೋವಿಜ್ಞಾನದ ಶಿಸ್ತನ್ನು ಪರಿವರ್ತಿಸುವಲ್ಲಿ ಸಮಕಾಲೀನ ಸ್ತ್ರೀವಾದಿ ಮನೋವಿಜ್ಞಾನಿಗಳ ಪಾತ್ರವೂ ಸೇರಿದೆ"ಯೆ೦ದು ಅಲೆಕ್ಸಾಂಡ್ರಾ ರುದರ್‌ಫೋರ್ಡ್ ಹೇಳಿದ್ದಾರೆ. [೪]
ಸಂಶೋಧನೆ
[ಬದಲಾಯಿಸಿ]೨೦೧೭ ರಲ್ಲಿ, ಅವರ ಸಂಶೋಧನೆಯು "ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಿಂಗ ಆಧಾರಿತ ಹಿಂಸಾಚಾರ ನೀತಿಯ ಮೇಲೆ ಸ್ತ್ರೀವಾದಿ-ವಿದ್ವಾಂಸ ಕ್ರಿಯಾವಾದದ ಪ್ರಭಾವವನ್ನು" ಪರಿಶೀಲಿಸುವಲ್ಲಿ ಯಶಸ್ವಿಯಾಗಿದೆ. [೫] : 123
ಪ್ರಕಟಣೆಗಳು
[ಬದಲಾಯಿಸಿ]ಅವರು ಅಮೇರಿಕನ್ ಮನಶ್ಶಾಸ್ತ್ರಜ್ಞ ಮತ್ತು ನಡವಳಿಕೆ ತಜ್ಞ, ಬಿ.ಎಫ್ ಸ್ಕಿನ್ನರ್ ಅವರನ್ನು ಆಧರಿಸಿ ಬರೆದ ಅವರ ೨೦೦೯ ರ ಪುಸ್ತಕ - ಬಿಯಾಂಡ್ ದಿ ಬಾಕ್ಸ್: ಬಿ.ಎಫ್ ಸ್ಕಿನ್ನರ್ಸ್ ಟೆಕ್ನಾಲಜಿ ಆಫ್ ಬಿಹೇವಿಯರ್ ಟು ಲೈಫ್, ೧೯೫೦-೧೯೭೦ -"ಬಿಟ್ವೀನ್ ದಿ ಸೈನ್ಸ್ ಆಫ್ ಬಿಹೇವಿಯರ್ ದಿ ಆರ್ಟ್ ಆಫ್ ಲಿವಿಂಗ್: ಬಿಎಫ್ ಸ್ಕಿನ್ನರ್ ಅಂಡ್ ಸೈಕಾಲಜಿಸ್ ಪಬ್ಲಿಕ್ ಇನ್ ಮಿಡ್-೨೦ನೇ ಸೆಂಚುರಿ ಅಮೇರಿಕಾ" ಎಂಬ ಶೀರ್ಷಿಕೆಯ ಅವರದೇ ಡಾಕ್ಟರೇಟ್ ಪ್ರಬಂಧವನ್ನು ಹೆಚ್ಚಾಗಿ ಆಧರಿಸಿದೆ. [೬] ಬಿಯಾಂಡ್ ದಿ ಬಾಕ್ಸ್ ಅನ್ನು ಲಂಡನ್ ಟೈಮ್ಸ್ ಹೈಯರ್ ಎಜುಕೇಶನ್‌ನ "ವಾರದ ಪುಸ್ತಕ-ಜುಲೈ ೧೬-ಜುಲೈ ೨೩, ೨೦೦೯ ಎಂದು ಪಟ್ಟಿ ಮಾಡಲಾಗಿದೆ.[೭]
ಪಯೋನಿಯರ್ಸ್ ಆಫ್ ಸೈಕಾಲಜಿಯಲ್ಲಿ, ರುದರ್‌ಫೋರ್ಡ್ ಅವರು ರೇಮಂಡ್ ಇ. ಫ್ಯಾಂಚರ್ ಅವರೊಂದಿಗೆ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ. ಅವರು ಸಿಗ್ಮಂಡ್ ಫ್ರಾಯ್ಡ್ ಅವರ ಆಳವಾದ ವ್ಯಾಖ್ಯಾನವನ್ನು ಅವರ ಪುಸ್ತಕ ದಿ ಇಂಟರ್‌ಪ್ರಿಟೇಶನ್ ಆಫ್ ಡ್ರೀಮ್ಸ್‌ನಲ್ಲಿ ಪರಿಶೀಲಿಸಿದ್ದಾರೆ.
ಮಾಧ್ಯಮ
[ಬದಲಾಯಿಸಿ]ರುದರ್‌ಫೋರ್ಡ್ ಆಗಸ್ಟ್ ೨೮, ೨೦೧೯ ರ "ಎ ಹಿಸ್ಟರಿ ಆಫ್ ಪರ್ಸುಯೇಶನ್" ಸಂಚಿಕೆಯಲ್ಲಿ ತಜ್ಞರಾಗಿ ಕಾಣಿಸಿಕೊಂಡರು.
ಇದನ್ನು ಡಬ್ಲ್ಯೂ.ಎನ್.ವೈ.ಸಿ ಸ್ಟುಡಿಯೋಸ್‌ನಲ್ಲಿ ಕೈ ರೈಟ್ ಎನ್ನುವವರು ನಿರೂಪಣೆ ಮಾಡಿ ಅಮಂಡಾ ಅರೋನ್‌ಜಿಕ್ ಎನ್ನುವವರು ಮಾಧ್ಯಮದಲ್ಲಿ ವರದಿ ಮಾಡಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Alexandra Rutherford". York University. Profile. Retrieved July 30, 2020.
- ↑ "Alexandra Rutherford". York University. Profile. Retrieved July 30, 2020."Alexandra Rutherford". York University. Profile. Retrieved July 30, 2020.
- ↑ "Alexandra Rutherford".
- ↑ MacArthur, H.J.; Shields, S.A. (2014). "Psychology's Feminist Voices: A critical pedagogical tool". Sex Roles. 70 (9–10): 431–433. doi:10.1007/s11199-014-0349-9.
- ↑ Rutherford, Alexandra (2017). "Surveying rape: Feminist social science and the ontological politics of sexual assault". History of the Human Sciences. 30: 100–123. doi:10.1177/0952695117722715.
- ↑ "Alexandra Rutherford". York University. Profile. Retrieved July 30, 2020."Alexandra Rutherford". York University. Profile. Retrieved July 30, 2020.
- ↑ "Book of the week: Beyond The Box". Times Higher Education (THE). 2009-07-16. Retrieved 2020-07-30.