ಅರ್ನ್‌ಸ್ಟ್ ಪ್ರಿಂಗ್‌ಷೈಮ್
ಗೋಚರ
ಅರ್ನ್‌ಸ್ಟ್ ಪ್ರಿಂಗ್‌ಷೈಮ್ | |
---|---|
Born | ಅರ್ನ್‌ಸ್ಟ್ ಪ್ರಿಂಗ್‌ಷೈಮ್ ೧೧ ಜೂನ್ ೧೮೫೯ ಜರ್ಮನಿ |
Nationality | ಜರ್ಮನಿ |
ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಅರ್ನ್‌ಸ್ಟ್ ಪ್ರಿಂಗ್‌ಷೈಮ್‌ರವರು ೧೮೫೯ರ ಜೂನ್ ೧೧ರಂದು ಜರ್ಮನಿಯ ಬ್ರೆಸ್ಲಾದಲ್ಲಿ (ಅಂದರೆ ಈಗ ಪೋಲೆಂಡಿನಲ್ಲಿರುವ ವ್ರೊಕ್ಲಾದಲ್ಲಿ) ಜನಿಸಿದರು. ಪ್ರಿಂಗ್‌ಷೈಮ್‌ರವರು ೧೮೮೧ರಲ್ಲಿ ಅವಕೆಂಪು ರೋಹಿತಮಾಪಕವನ್ನು (infrared spectrometer) ಕಂಡುಹಿಡಿದರು. ಅಗೋಚರ ಬೆಳಕಿನ ಅವಕೆಂಪು ಪ್ರದೇಶದ ತರಂಗದೂರಗಳನ್ನು ಮೊದಲ ಬಾರಿಗೆ ನಿಖರವಾಗಿ ಅಳೆಯಲು ಆ ಮಾಪಕದಿಂದ ಸಾಧ್ಯವಾಯಿತು.[೧] ಪ್ರಿಂಗ್‌ಷೈಮ್‌ರವರು ಇತರ ವಿಜ್ಞಾನಿಗಳ ಜೊತೆ ಸೇರಿ ಕಪ್ಪು ಕಾಯಗಳ ವಿಕಿರಣಗಳ ಬಗ್ಗೆ ಅನೇಕ ವಿಷಯಗಳನ್ನು ಸಂಶೋಧಿಸಿದರು. ಅವರ ಸಂಶೋಧನೆಗಳು ಕ್ವಾಂಟಮ್ ಸಿದ್ಧಾಂತಗಳಿಗೆ ತಳಹದಿಯಾದವು. ಪ್ರಿಂಗ್‌ಷೈಮ್‌ರವರು ೧೯೧೭ರ ಜೂನ್ ೨೮ರಂದು ಬ್ರೆಸ್ಲಾದಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]