ಅರ್ಜುನ್ ಭಾಸಿನ್
ಅರ್ಜುನ್ ಭಾಸಿನ್ ಭಾರತೀಯ ವಸ್ತ್ರ ವಿನ್ಯಾಸಕ ಮತ್ತು ಶೈಲಿಗಾರರು. ಇವರು ಹಿಂದಿ ಚಲನಚಿತ್ರ ಮತ್ತು ಹಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ದಿಲ್ ಚಾಹ್ತಾ ಹೈ(೨೦೦೧), ರಂಗ್ ದೇ ಬಸಂತಿ (೨೦೦೬) ಚಲನಚಿತ್ರಗಳಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇವರು ಮಾನ್ಸೂನ್ ವೆಡ್ಡಿಂಗ್(೨೦೦೧), ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್(೨೦೧೨) ಮತ್ತು ಲೈಫ್ ಆಫ್ ಪೈ(೨೦೧೨) ನಂತಹ ಅಂತರಾಷ್ಟ್ರೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. [೧] ಸದ್ಯ ಇವರು ಜಿಕ್ಯೂ ಇಂಡಿಯಾದ ಫ್ಯಾಷನ್ ಸಂಪಾದಕರಾಗಿದ್ದಾರೆ.[೨] [೩]
ಇವರು ನ್ಯೂಯಾರ್ಕ್ ಯೂನಿವರ್ಸಿಟಿ ಫಿಲ್ಮ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು. ನಂತರ ಸ್ವಲ್ಪ ಸಮಯದವರೆಗೆ ಹಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹಾಲಿವುಡ್‌ನಲ್ಲಿ ಅವರು ದಿಲ್ ಚಾಹತಾ ಹೈ (೨೦೦೧) ಚಲನಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. [೪]
ಇವರು ಮೀರಾ ನಾಯರ್, ಆಂಗ್ ಲೀ, ಫರ್ಹಾನ್ ಅಖ್ತರ್ ಮತ್ತು ಜೋಯಾ ಅಖ್ತರ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಇವರ ಸಹೋದರಿ ನಿಹಾರಿಕಾ ಖಾನ್ ಕೂಡ ವಸ್ತ್ರ ವಿನ್ಯಾಸಕಿಯಾಗಿದ್ದು, ಇವರು ಕೂಡ ರಾಕ್ ಆನ್, ರಾಕೆಟ್ ಸಿಂಗ್, ದೆಹಲಿ ಬೆಲ್ಲಿ ಮತ್ತು ಡರ್ಟಿ ಪಿಕ್ಚರ್ ನಂತಹ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. [೫]
ಇವರು ಪ್ರಸ್ತುತ ಮುಂಬೈನ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ. [೬]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]- ಲವಿಂಗ್ ಜೆಜೆಬೆಲ್ (೧೯೯೯)
- ದಿಲ್ ಚಾಹತಾ ಹೈ (೨೦೦೧)
- ಮಾನ್ಸೂನ್ ವೆಡ್ಡಿಂಗ್ (೨೦೦೧)
- ಜಸ್ಟ್ ಎ ಕಿಸ್ (೨೦೦೨)
- ಸ್ವಿಮ್‌ಫ್ಯಾನ್ (೨೦೦೨)
- ಅರ್ಮಾನ್ (೨೦೦೩)
- ಬಾಯ್ಸ್ (೨೦೦೩)
- ಲಕ್ಷ್ಯ (೨೦೦೪)
- ರಾಮ್‌ಜಿ ಲಂಡನ್‌ವಾಲೆ (೨೦೦೫)
- ರಂಗ್ ದೇ ಬಸಂತಿ (೨೦೦೬)
- ದಿ ನೇಮ್‌ಸೇಕ್ (೨೦೦೬)
- ಹನಿಮೂನ್ ಟ್ರಾವೆಲ್ಸ್ ಪ್ರೈ. ಲಿಮಿಟೆಡ್ (೨೦೦೭)
- ಗಜಿನಿ (೨೦೦೮)
- ಲಕ್ ಬೈ ಚಾನ್ಸ್ (೨೦೦೯)
- ದೆಹಲಿ -೬ (೨೦೦೯)
- ಲಿಟಲ್ ಜಿಜೊ (೨೦೦೯)
- ಜಿಂದಗಿ ನಾ ಮಿಲೇಗಿ ದೊಬಾರ (೨೦೧೧)
- ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ (೨೦೧೨)
- ಲೈಫ್ ಆಫ್ ಪೈ (೨೦೧೨)
- ಬಿಗಿನ್ ಅಗೇನ್ (೧೦೧೩)
- ದಿಲ್ ಧಡಕ್ನೆ ದೋ (೨೦೧೫)
- ಅ ಬ್ಯೂಟಿಪುಲ್ ಡೇ ಇನ್ ದ ನೇಬರ್ಹುಡ್ (೨೦೧೯)
- ಶ್ರೀಮತಿ ಮಾರ್ವೆಲ್ (೨೦೨೧)
ಸದಸ್ಯತ್ವ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Arjun Bhasin: NY black and Lahore pink". Mint. Oct 25, 2012.
- ↑ "Conde Nast unveils GQ India". 29 September 2008.
- ↑ "'Glunge' is a style that best captures Bambaiyya cool". The Times of India. Aug 30, 2009. Archived from the original on January 3, 2013.
- ↑ "A Conversation With: Costume Designer Arjun Bhasin". NYT. October 10, 2012.
- ↑ "Keep it stylish". Indian Express. Aug 17, 2011.
Zindagi Na Milegi Dobara 's unsung hero is its stylist, the tour de force that is Arjun Bhasin
- ↑ "Dressing up with Niharika Khan and Arjun Bhasin". The Times of India. Nov 10, 2012. Archived from the original on April 11, 2013. Retrieved March 14, 2013.
- ↑ "Academy invites record 774 new members; 39 percent female, 30 percent people color". Hollywood Reporter. 29 June 2017. Retrieved 29 June 2017.