ವಿಷಯಕ್ಕೆ ಹೋಗು

ಅರೇಟಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರೇಟಿಡೀ
Harnessed tiger moth
Apantesis phalerata
Scientific classification e
Unrecognized taxon (fix): Arctiinae
Type species
Arctia caja
Linnaeus, 1758
Diversity
1,400–1,500 genera
Approximately 11,000 species

ಅರೇಟಿಡೀ : ಲೆಪಿಡಾಪರ ಗಣಕ್ಕೆ ಸೇರಿದ ಕೀಟಕುಟುಂಬ. ಹುಲಿಪಟ್ಟೆ ಚಿಟ್ಟೆಗಳು (ಟೈಗರ್ ಮಾತ್ಸ್), ಪದಾತಿ ಚಿಟ್ಟೆಗಳು (ಫುಟ್‍ಮನ್ ಮಾತ್ಸ್) ಈ ಕುಟುಂಬಕ್ಕೆ ಸೇರಿವೆ. ಇವು ಸಣ್ಣದರಿಂದ ಮಧ್ಯಮಗಾತ್ರದವರೆಗಿನ ಸ್ಥೂಲ ಶರೀರದವು. ಎದ್ದು ಕಾಣುವ ಪ್ರಕಾಶಮಾನವಾದ ಚಿಕ್ಕೆ ಅಥವಾ ಪಟ್ಟೆಗಳನ್ನು ಹೊಂದಿವೆ. ರೆಕ್ಕೆಗಳು ತಕ್ಕಮಟ್ಟಿಗೆ ಅಗಲವಾಗಿದ್ದು ಪತಂಗ ಕುಳಿತಾಗ ಮನೆಯ ಛಾವಣಿ ರೀತಿಯಲ್ಲಿ ಹೊಟ್ಟೆಯ ಮೇಲೆ ಕವುಚಿಕೊಳ್ಳುತ್ತವೆ. ಒಂದೆರಡು ಜಾತಿಗಳನ್ನು ಬಿಟ್ಟರೆ, ಸಾಮಾನ್ಯವಾಗಿ ಇವುಗಳ ಹಾರಾಟ ರಾತ್ರಿಯ ಕಾಲದಲ್ಲಿ, ದೀಪದ ಬೆಳಕು ಇವನ್ನು ಆಕರ್ಷಿಸುತ್ತದೆ. ಇವು ಪ್ರಪಂಚದ ಎಲ್ಲ ಭಾಗಗಳಲ್ಲಿದ್ದ ರೂ ಉಷ್ಣದೇಶಗಳಲ್ಲಿ ಇವುಗಳ ಸಂಖ್ಯೆ ಹೆಚ್ಚು. ಈ ಕುಟುಂಬದ ಪತಂಗಗಳು ಹೆಚ್ಚಾಗಿ ನಾಕ್ಟುಯಿಡೀ ಕುಟುಂಬದವನ್ನು ಹೋಲುವುದಾದರೂ ಇವುಗಳ ಹಿಂಭಾಗದ ರೆಕ್ಕೆ ಗಳಲ್ಲಿ ಕ್ಯುಬಿಟಸ್ ನರ ನಾಲ್ಕು ಕವಲಾಗಿದೆ. ನಾಕ್ಟುಯಿಡೀ ಕುಟುಂಬದ ಪತಂಗಗಳು ಹಿಂದಿನ ರೆಕ್ಕೆಗಳಲ್ಲಿ ಕ್ಯುಬಿಟಸ್ ನರ ಮೂರು ಕವಲಾಗಿದೆ. ಕೆಲವು ಜಾತಿಯ ಆರ್ಕ್ಟೈಯಿಡ್ ಪತಂಗಗಳು ಶಬ್ದವನ್ನುಂಟುಮಾಡಬಲ್ಲವು. ಈ ಗುಂಪಿಗೆ ಸೇರಿದ ಪ್ರಭೇದಗಳ ಸಂಖ್ಯೆ 3,500 ಕ್ಕಿಂತಲೂ ಹೆಚ್ಚು. ಮರಿಗಳ ಮೈಮೇಲೆ ತುಂಬ ಕೂದಲು ಇದೆ. ತೆಳ್ಳನೆಯ ಕೀಟಕೋಶದಲ್ಲಿ ಮರಿಗಳ ಕೆಲವು ಕೂದಲು ಕೋಶವಾಗುತ್ತವೆ. ಅರೇಟಿಡೀ ಕುಟುಂಬದ ಉಪಕುಟುಂಬಗಳು:

  1. ಲಿಥೋಸಿನಿ;
  2. ನಿಕ್ಟಿಯೋಲಿನಿ,
  3. ಆಕ್ರ್ಟೈಯಿನಿ.

ಲಿಥೋಸಿನಿ ಉಪಕುಲಕ್ಕೆ ಸೇರಿದ ಈ ಪದಾತಿ ಪತಂಗಗಳು ಗಾತದಲ್ಲಿ ಸಣ್ಣ; ಶರೀರ ನೀಳವಾಗಿದ್ದು ಮಂಕು ಬಣ್ಣದ್ದಾಗಿವೆ. ಮುಂಬೆಳಕಿನಲ್ಲಿ ಮತ್ತು ಬೆಳಗಿನ ಕಾಲದಲ್ಲಿ ಇವು ಹಾರಾಡುತ್ತವೆ. ಮುಂದಿನ ರೆಕ್ಕೆಗಳು ಉದ್ದ ಮತ್ತು ನೀಳವಾಗಿವೆ. ಈ ಉಪಕುಟುಂಬದ ಚಿಟ್ಟೆಯ ಮರಿಗಳಿಗೆ ಸರಳ ಕಣ್ಣು ಇಲ್ಲ. ಮೈಮೇಲೆ ಕೂದಲು ಕಡಿಮೆ. ಮರಗಳ ಮತ್ತು ಬಂಡೆUಳ ಮೇಲೆ ಬೆಳೆಯುವ ಕಲ್ಲು ಹೂವುಗಳೇ (ಲೈಕೆನ್ಸ್) ಮರಿಗಳಿಗೆ ಆಹಾರ. ನಿಕ್ಟಿಯೋಲಿನಿ ಉಪಕುಟುಂಬಕ್ಕೆ ಸೇರಿದ ಪತಂಗಗಳ ಬಣ್ಣ ಸಾಮಾನ್ಯವಾಗಿ ಹಸಿರು. ಇವುಗಳ ಮರಿಗಳ ಮೈಮೇಲೆ ಕೂದಲು ಬಲು ಕಡಿಮೆ. ಕೀಟಕೋಶಗಳು ದೋಣಿಯ ಆಕಾರದವಾಗಿರುತ್ತವೆ. ಬೆಂಡೆಕಾಯಿಗೆ ಬೀಳುವ, ಈರಿಯಸ್, ಫೀಬಿಯಾ ಮತ್ತು ಈರಿಯಾಸ್ ಇನುಲಾನಎಂಬವು ಒಳ್ಳೆಯ ಉದಾಹರಣೆ, ಉಪಕುಟುಂಬ ಆರ್ಕೈಯಿನಿಗೆ ಸೇರಿದ ಪತಂಗಗಳು ಪಕಾಶಮಾನ ವಾದ ನಾನಾ ಮಾದರಿಯ ಬಣ್ಣದಿಂದ ಕೂಡಿವೆ. ಇವುಗಳನ್ನು ಹುಲಿಪಟ್ಟೆ ಪತಂಗಗಳೆಂದು ಕರೆಯಲು ಇದೇ ಕಾರಣ. ಮರಿಗಳಿಗೆ ಮೈತುಂಬ ಕೂದಲು. ಸರಳ ಕಣ್ಣುಗಳಿವೆ. ಇವುಗಳ ಮರಿಗಳು ಮರಗಿಡಗಳ ಎಲೆಗಳನ್ನೂ ಬೆಳೆಗಳನ್ನೂ ತಿಂದು ಹಾಳುಮಾಡುತ್ತವೆ. ಪ್ರಪಂಚದ ನಾನಾ ಭಾಗಗಳಲ್ಲಿ ಕಂಡುಬಂದಿರುವ ಯುಟಿಥೀಸಿಯ ಪಲ್‍ಚಲ್ಲಾ ಎಂಬ ಪತಂಗದ ಮರಿ ಭಾರತದಲ್ಲಿ ಅಪಸೆಣಬು (ಸನ್‍ಹೆಂಪ್) ಗಿಡದ ಎಲೆಗಳನ್ನು ತಿಂದು ಹಾಳುಮಾಡುತ್ತವೆ. ಇದರ ಮುಂದಿನ ರೆಕ್ಕಗಳು ಬೂದು ಬಿಳುಪಾಗಿದ್ದು ಸಣ್ಣ ಕಪ್ಪು ಮತ್ತು ಕೆಂಪು ಮಚ್ಚೆಗಳನ್ನು ಹೊಂದಿವೆ. ಹಿಂದಿನ ರೆಕ್ಕೆ ಗಳು ನೀಲಿ ಮಿಶವಾದ ಬಿಳುಪಾಗಿದ್ದು ಅಲ್ಲಲ್ಲಿ ದೊಡ್ಡ ಕಪ್ಪು ಮಚ್ಚೆಗಳಿವೆ. ಭಾರತದಲ್ಲಿ ಈ ಉಪಕುಟುಂಬಕ್ಕೆ ಸೇರಿದ ಮತ್ತೆ ಕೆಲವು ಜಾತಿಯ ಪತಂಗಗಳು ಧಾನ್ಯದ ಬೆಳೆಗಳನ್ನೂ ಎಣ್ಣೆಬೀಜಗಳ ಬೆಳೆಗಳನ್ನೂ ಹಾಳುಮಾಡುತ್ತವೆ. ಆಮ್‍ಸೆಕ್ಟ ಆಲ್ಟಿಸ್ಟ್ರೈಗಾ, ಕಡಲೆಕಾಯಿ, ತೊಗರಿ, ಜೋಳ ಮುಂತಾದ ಬೆಳೆಗಳಿಗೂ ಡೈಯಾಕ್ರಿಸಿಯಾ ಒಬ್ಲಿಕ್ವ ಮತ್ತು ಎಸ್ಟಿಗ್ಮೀನ್ ಲಾಕ್ಟೀನಿಯ ರಾಗಿ ಬೆಳೆಗೂ ಪೆರಿಕೇಲಿಯಾ ರಿಸಿನಿ ಹರಳು ಮತ್ತು ಬಾಳೆಯ ಗಿಡಕ್ಕೂ ಅಂಟಿಕೊಂಡು ವಿಪರೀತ ಹಾನಿವನ್ನುಂಟು ಮಾಡುತ್ತವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅರೇಟಿಡೀ&oldid=608212" ಇಂದ ಪಡೆಯಲ್ಪಟ್ಟಿದೆ