ಅರುಣ ನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಲತಃ ಕಾಸರಗೋಡಿನ ಬೋನಂತ ಕೋಡಿ'ಯವರಾದ, ಅರುಣ ನಾರಾಯಣ ಶಾಸ್ತ್ರಿ ಒಬ್ಬ ಹಿರಿಯ ಪತ್ರಕರ್ತರು ಹಾಗೂ ಉಪಸಂಪಾದಕರಾಗಿ, ಸಂಪಾದಕರಾಗಿ, ತರ್ಜುಮೆದಾರರಾಗಿ, ಹಲವಾರು ವರ್ಷ ಪತ್ರಿಕೋದ್ಯಮದಲ್ಲಿ ಕೄಷಿಮಾಡಿದರು. ಕನ್ನಡ ಡೈಜೆಸ್ಟ್ ಕಸ್ತೂರಿಪತ್ರಿಕೆ ಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಿವರಾಮಕಾರಂತರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಶಿಕ್ಷಣ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ 'ಪುತ್ತೂರಿ'ನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಯಿತು.ಅರುಣನಾರಾಯಣರು, 'ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜ್' ನಲ್ಲಿ ಪದವಿಯನ್ನು ಗಳಿಸಿ,ನಂತರ, ಉಡುಪಿಯ 'ಸಂತ ಫಿಲೋಮಿನಾಸ್ ಕಾಲೇಜ್'ನಲ್ಲಿ ಸ್ವಲ್ಪ ಕಾಲ,ಉಪನ್ಯಾಸಕರಾಗಿದ್ದರು.'ಮಂಗಳಗಂಗೋತ್ರಿ'ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಗಳಿಸಿದರು. ಇದಾದ ನಂತರ,'ಸೋವಿಯತ್ ರಾಯಭಾರಿ ಕಚೇರಿ'ಗೆ ಚೆನ್ನೈನಿಂದ ಪ್ರಕಟವಾಗುತ್ತಿದ್ದ ಸೋವಿಯತ್ ಲ್ಯಾಂಡ್ ಕನ್ನಡ ಸಮಾಚಾರಪತ್ರಿಕೆಯ ಪ್ರಧಾನ ತರ್ಜುಮೆದಾರರಾಗಿ ದುಡಿದರು. ಪತ್ರಕರ್ತರಾಗಿ ವೃತ್ತಿಯನ್ನು ಪ್ರಾರಂಭಿಸಿದ್ದು ಹೀಗೆ. 'ಅರುಣ ನಾರಾಯಣರ ಚಿಕ್ಕಪ್ಪ, ಬೋಳಂತಕೋಡಿ ಈಶ್ವರಭಟ್ಟರು, 'ಪುತ್ತೂರಿನ ಕರ್ನಾಟಕ ಸಂಘ'ದ ಮೂಲಕ(ಇದನ್ನು ಸ್ಥಾಪಿಸುವುದರಲ್ಲಿ ಶಿವರಾಮ ಕಾರಂತರ ಪಾತ್ರ ದೊಡ್ಡದು) ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದರು. ಇಂತಹ ಪರಿವಾರಕ್ಕೆ ಸೇರಿದ 'ಅರುಣ ನಾರಾಯಣ'ರು, ಸಹಜವಾಗಿ ಪರ್ತಿಕೋದ್ಯಮದಲ್ಲಿ ಒಂದು ಸಾಧನೆಯನ್ನೇ ಮಾಡಿದರು. 'ಅರುಣ ನಾರಾಯಣ ಶಾಸ್ತ್ರಿ'ಗಳು, ಕೆಳಗೆ ನಮೂದಿಸಿದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರು :

  • 'ಪ್ರಜಾಪ್ರಭುತ್ವ', * 'ವಿಶಾಲ ಕರ್ನಾಟಕ' ಪತ್ರಿಕೆಗಳ ಉಪಸಂಪಾದಕರಾಗಿ ಕೆಲಸಮಾಡಿದರು.
  • 'ಜ್ಞಾನ ಗಂಗೋತ್ರಿ' 'ಕಿರಿಯರ ವಿಶ್ವಕೋಶ ( 'ಕರ್ನಾಟಕ ಸಹಕಾರಿ ಪ್ರಕಾಶನ ಮಂಡಳಿ, ಬೆಂಗಳೂರು', ಇವರ ಪ್ರಕಟಣೆ) ಸಂಪಾದಕೀಯ ಮಂಡಲಿಯಲ್ಲಿ ಕೆಲಸಮಾಡಿದರು.
  • ೧೯೯೧ ರಲ್ಲಿ ಸಂಯುಕ್ತ ಕರ್ನಾಟಕ ಸೇರಿ 'ಸಾಪ್ತಾಹಿಕ ಸೌರಭ' ಉಪಸಂಪಾದಕರಾಗಿ ಒಂದು ದಶಕ ಕೆಲಸಮಾಡಿದರು. ೨೦೦೧ ರಲ್ಲಿ 'ಲೋಕಶಿಕ್ಷಣ ಟ್ರಸ್ಟ್ ನ 'ಕನ್ನಡ ಡೈಜೆಸ್ಟ್ ಮಾಸಪತ್ರಿಕೆ', ಕಸ್ತೂರಿಯ ಸಂಪಾದಕರಾಗಿ ನಿಯುಕ್ತರಾದರು.

'ಅರುಣ ನಾರಾಯಣರ ವ್ಯಕ್ತಿತ್ವ'[ಬದಲಾಯಿಸಿ]

'ಅರುಣನಾರಾಯಣರು' ಒಬ್ಬ ಮೃದು ಭಾಷಿ, ಹಾಗೂ ಸರಳ ಬದುಕಿನ ನಿಷ್ಠ ವ್ಯಕ್ತಿ. 'ಕಾರ್ಯಪ್ರಜ್ಞೆ' ಹಾಗೂ 'ಸಮಯಪ್ರಜ್ಞೆ'ಯನ್ನು ಸದಾಕಾಲವೂ ತಮ್ಮ ಕರ್ತವ್ಯಗಳಲ್ಲಿ ಪ್ರದರ್ಶಿಸುತ್ತಿದ್ದರು. ತಮಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವ ಆಕಾಂಕ್ಷೆ, ಮತ್ತು ಉದಾತ್ತ ಚಿಂತನೆಗಳಿಂದ ಎಲ್ಲರ ಒಲುಮೆಗೆ ಪಾತ್ರರಾಗಿದರು.

ನಿಧನ[ಬದಲಾಯಿಸಿ]

೬೩ ವರ್ಷ ಪ್ರಾಯದ,'ಅರುಣ ನಾರಾಯಣ' ಹುಬ್ಬಳ್ಳಿಯ 'ವಿಕಾಸನಗರ ಬಡಾವಣೆಯ ಸ್ವಗೃಹ'ದಲ್ಲಿ ಶನಿವಾರ, ೭, ಆಗಸ್ಟ್, ೨೦೧೧ ರಂದು ಮುಂಜಾನೆ ನಿಧನರಾದರು. ಪತ್ನಿ ಚಂದ್ರಮತಿ, ಹಾಗೂ ಸೋದರರನ್ನೂ ಹಾಗೂ ಅಪಾರ ಗೆಳೆಯರು,ಹೈತೈಷಿಗಳನ್ನು ಬಿಟ್ಟು ಅಗಲಿದ್ದಾರೆ.