ಅರೀಢಕ ಸಂಧಿದೇಹಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರೀಢಕ ಸಂಧಿದೇಹಿಗಳು : ಬ್ರಾಕಿಯೋಪೊಡ ವಂಶದ ಒಂದು ಉಪವರ್ಗ. ಪಾರ್ಶ್ವಸಮಸೌಷ್ಠವಸ್ತುಳ್ಳ ಚಿಪ್ಪಿರುವ ಸಮುದ್ರ್ರ ಜೀವಿಗಳು (ಆರ್ಟಿಕ್ಯುಲೇಟ). ಈಗ ಜೀವಿಸಿರುವ ಬ್ರಾಕಿಯೋಪೊಡಗಳಲ್ಲಿ ಹೆಚ್ಚು ಪ್ರಾಣಿಗಳು ಈ ವರ್ಗಕ್ಕೆ ಸೇರಿವೆ. ಇವುಗಳಿಗೆ ಸುಣ್ಣದಿಂದಾದ ಎರಡು ಚಿಪ್ಪುಗಳಿವೆ. ಒಂದರಂತೆ ಮತ್ತೊಂದಿಲ್ಲ. ತಮ್ಮ ಹಿಂಬದಿಯಲ್ಲಿ ಕುಳಿ ಮತ್ತು ಹಲ್ಲುಗಳಿಂದ ಒಂದಕ್ಕೊಂದು ಕಚ್ಚಿಕೊಳ್ಳುವಂತಿವೆ. ಆರ್ಟಿಕ್ಯುಲೇಟದಲ್ಲಿ ಬ್ರೆಕೀಡಿಯಂ ಎಂಬ ದೃಢತೆಯಿಂದಾಗುವ ಆಂತರಿಕ ಪಂಜರ ಇದೆ. ಕೆಲವಕ್ಕೆ ತೊಟ್ಟು ಉಂಟು. ಈ ತೊಟ್ಟು ಹೊರಗೆ ಬರಲು ಕೆಳಗಿನ ಚಿಪ್ಪಿನಲ್ಲಿ ಒಂದು ರಂಧ್ರವಿದೆ. ಇದರಲ್ಲಿನ ಬಿಳಂಗಿ (ಮ್ಯಾಂಟಲ್) ರೂಪಪರಿವರ್ತನೆಯ ಕಾಲದಲ್ಲಿ ತಿರುಗು ಮುರುಗಾಗುವುದು. ಈ ಪ್ರಾಣಿಗಳು ಸಮುದ್ರದಲ್ಲಿ ಉಬ್ಬರವಿಳಿತದ ಜಾಗದಿಂದ ಹಿಡಿದು ಅತಿ ಆಳದವರೆಗೆ ಸಮುದ್ರ್ರ ತಳದಲ್ಲಿನ ಪ್ರಾಣಿ, ವಸ್ತುಗಳಿಗೆ ಕಚ್ಚಿಕೊಂಡಿರುತ್ತವೆ. ಮ್ಯೂರ್‍ವುಡ್‍ನ ಪ್ರಕಾರ ಇರುವ 25 ಕುಟುಂಬಗಳಲ್ಲಿ 21 ಈಗ ಅಳಿದು ಹೋಗಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: