ಅರಿವೀಡುತನ(ಸೆನ್ಸಿಬಿಲಿಟಿ)

ವಿಕಿಪೀಡಿಯ ಇಂದ
Jump to navigation Jump to search

ಅರಿವೀಡುತನ: ಕಣ್ಣು, ಕಿವಿ, ಚರ್ಮ, ನಾಲಗೆ, ಮೂಗು, ಒಳಾಂಗಗಳಿಂದ ಎಡೆಬಿಡದೆ ಸುದ್ದಿಗಳು ಮಿದುಳಿಗೆ ಸಾಗುತ್ತಿರುವುದರಿಂದ ಮಾನವನಿಗೆ ಪರಿಸರದ ತಿಳಿವಳಿಕೆ ಆಗುತ್ತದೆ. ಈ ಸುದ್ದಿಗಳನ್ನು ತಿಳಿವ ಬಲವೇ ಅರಿವೀಡುತನ (ಸೆನ್ಸಿಬಿಲಿಟಿ). ಈ ಬಲ ಒಬ್ಬೊಬ್ಬರಲ್ಲಿ ಒಂದೊಂದು ತರ. ಕಿವಿಯಿಂದ ಕೆಳುವುದನ್ನೇ ತೆಗೆದುಕೊಂಡರೆ ಎಲೆಲ್ಲೂ ಸದ್ದಿಲ್ಲದಾಗ ನಾಲ್ಕೈದು ಕಿಲೊಮೀಟರುಗಳ ದೂರದಲ್ಲಿ ಪಟಾಕಿ ಹಾರಿಸಿದ್ದನ್ನು ಬಹಳ ಮಂದಿ ಕೇಳಿಸಿಕೊಳ್ಳ ಬಲ್ಲರು. ಇನ್ನು ಕೆಲವರು ಇನ್ನೂ ದೂರದ್ದನ್ನು ಕೇಳಿಸಿಕೊಳ್ಳುವರು. ನೋವು, ಬೆಳಕು, ಒತ್ತಡಗಳ ಅರಿವುಗಳಲ್ಲೂ ಅಷ್ಟೆ . ನೋವು, ಮುಟ್ಟುವಿಕೆಗಳಿಗೆ ಮೈದುಡಿತದ ಕೂಲಿ ಆಳುಗಳಿಗಿಂತ ಪಟ್ಟಣಿಗರೇ ಸುಲಭವಾಗಿ ಈಡಾಗುವರು. ಓದಿದವರೂ ಕರಿಯರಿಗಿಂತ ಬಿಳಿಯರೂ ಈಡಾಗುವರು. ಉಪ್ಪು ಒಂದನ್ನು ಬಿಟ್ಟರೆ ರುಚಿ ಕಂಡುಕೊಳ್ಳುವುದರಲ್ಲಿ ಹೆಂಗಸರೇ ಮುಂದು; ವಾಸನೆ, ಆಲಿಕೆಗಳಲ್ಲಿ ಗಂಡಸರು ಮುಂದು. ಅಂತೂ ಒಬ್ಬರದಿದ್ದಂತೆ ಇನ್ನೊಬ್ಬರ ಕಾಣ್ಕೆ ಇರದು. ಒಬ್ಬರಲ್ಲೇ ಒಂದೊಂದು ಹೊತ್ತಿನಲ್ಲಿ ಒಂದೊಂದು ತೆರ. ಅರಿವೀಡುತನ ದಣಿವಾದಾಗ, ನಿದ್ದೆ ಬರುವಾಗ ಕುಂದಿರುವುದು. ಬಲು ಚಳಿಯಲ್ಲೂ ಅಷ್ಟೇ. ಅರಿವುಗಳಲ್ಲಿ ವಿಶೇಷವಾಗಿ ಮನಸ್ಸಿಟರೆ ಅರಿವಿಗೆ ಈಡಾಗುವುದೂ ಹೆಚ್ಚುತ್ತದೆ. ಮಿದುಳಿನ ರೋಗಗಳಲ್ಲಿ ಅರಿವೀಡುತನ ಏರುಪೇರಾಗುವುದು. ಕೆಲವು ಹುಚ್ಚರು 12-15 ಮೀ ದೂರದಲ್ಲಿ ಪಿಸುಮತಾಡಿದ್ದನ್ನೂ ಕೇಳಿಸಿಕೊಳುವಸ್ತು. ಉನ್ಮಾದವೇರಿದ ಹುಡುಗಿಯರೂ ಸದ್ದುಗಳಿಗೆ ಅಷೇ ಸುಲಭವಾಗಿ ಈಡಾಗುತ್ತಾರೆ. ಮೊಲ್ಲಾಗರ ರೋಗಿಗಳಲ್ಲಿ ಇದರ ಅದಲು ಬದಲು. ವಾಸನೆ, ಬಣ್ಣಗಳಲ್ಲಿ ತುಸು ಬದಲಾದರೆ ಅವರಿಗೇನೂ ಗೊತ್ತಾಗದು. ಅರಿವುಗಳಲ್ಲೆಲ್ಲ ರೋಗಿಗಳಲ್ಲಿ ಸಾಮಾನ್ಯ ಲಕ್ಷಣವಾಗಿ ವೈದ್ಯನಿಗೆ ನಿದಾನದಲ್ಲಿ ಬಹು ನೆರವಾಗುವುದು ನೋವಿನ ಅರಿವು. ಮೈಯಲ್ಲಿನ ಜೀವಕಣಗಳಿಗೆ ಕೆಡುಕಾದಾಗ, ಪೆಟ್ಟಾದಾಗ ನೋವು ಕಾಣಿಸಿಕೊಟ್ಟುತ್ತದೆ. ನೋವು ಕಾಣಿಸಿಕೊಳ್ಳಲು ಇಂತಿಷ್ಟೇ ಚೋದಿಸಬೇಕೆಂದಿಲ್ಲ. ಉತಕಗಳಿಗೆ (ಟಿಷ್ಯೂಸ್) ಅಪಾಯವಾಗುವಷ್ಟು ಬಲವಾಗಿದ್ದರೆ ಸಾಕು, ನೋವು ತೋರುವುದು. ಉಳಿದ ಅರಿವುಗಳಿಗಾಗಿ ಇರುವಂತೆ ನೋವಿನ ಪಡೆಕಗಳು ಬೇರೆಯಾಗಿ ವಿಶೇಷದವಲ್ಲ ನರಗಳ ಬಿಡಿಯಾದ ತುದಿಗಳೇ ನೋವಿನ ಪಡೆಕಗಳು. ತರಚಲು, ಜಜ್ಜುಗಾಯಗಳಲ್ಲಿ ಇದು ಜೋರಾಗಿ ತೋರುತ್ತದೆ. ಬೇನೆಬಿದ್ದವರಲ್ಲಿ ಅರಿವೀಡುತನವನ್ನು ಕುಂದಿಸಬೇಕಾಗುವುದು. ಇದಕ್ಕಾಗಿ ಹಲವಾರು ವಿಧಾನಗಳಿವೆ. ಹಲ್ಲು ಕೀಳುವಾಗ ಮಾಡುವಂತೆ, ಮೈಯಲ್ಲಿ ಎಲ್ಲಾದರೂ ಒಂದೆಡೆ ಇದು ಇಲ್ಲವಾಗಿಸಲು, ಆ ಜಾಗದ ಸುತ್ತಲೂ ಕೊಕೇನಿನ ತಾವಿನ ಅರಿವಳಿಕವನ್ನು (ಅನೀಸ್ತೆಟಿಕ್) ಚುಚ್ಚಬಹುದು. ತತ್ಕಾಲ ಮಾತ್ರ ಎಚ್ಚರ ಕಳೆಯಲು ಈಥರಿನಂತ ಒಂದು ಸಾಮಾನ್ಯ ಅರಿವಳಿಕವನ್ನೇ ಕೊಡಬಹುದು. ನಿದ್ದೆಗೇಡು, ಬಲು ಕಳವಳ, ನರನಿತ್ರಾಣಗಳಲ್ಲಿ ಎಂದಿನ ಸಾಮಾನ್ಯ ಅರಿವುಗಳನ್ನು ರೋಗಿಯ ಅರಿವ ಬಲಯನ್ನು ಕೆಲವೇಳೆ ಕುಂದಿಸದೆಯೇ ಅರಿವೀಡುತನಯನ್ನು ತಗ್ಗಿಸಬೇಕಾಗುತ್ತದೆ. ಶಮನಿಕಗಳು ಇದಕ್ಕೆ ಒಳ್ಳೆಯವು. (ಎಂ.ಬಿ.)