ಅರಿಯಲೂರ್
Ariyalur | |
---|---|
town | |
ದೇಶ | ![]() |
ರಾಜ್ಯ | ತಮಿಳು ನಾಡು |
ಜಿಲ್ಲೆ | ಅರಿಯಾಲೂರು |
Elevation | ೭೬ m (೨೪೯ ft) |
ಜನಸಂಖ್ಯೆ (2011) | |
• ಒಟ್ಟು | ೨೮,೯೦೨ |
ಭಾಷೆ | |
• ಅಧಿಕೃತ | ತಮಿಳು |
ಸಮಯ ವಲಯ | ಯುಟಿಸಿ+5:30 (IST) |
ಪಿನ್ | 621704,621713 |
Telephone code | 91-4329 |
ವಾಹನ ನೋಂದಣಿ | TN 61 |
ಅರಿಯಲೂರ್ : ತಮಿಳುನಾಡಿನ ತಿರುಚ್ಚಿರಾಪಳ್ಳಿ ಜಿಲ್ಲೆಯ ಉಡೈಯಾರ್ ಪಾಳೆಯಂ ತಾಲ್ಲೂಕಿನ ಒಂದು ಮುಖ್ಯಪಟ್ಟಣ. ಜನಸಂಖ್ಯೆ ೨೮,೯೦೨ (೨೦೧೧). ಉಡೈಯಾರ್ ಪಾಳೆಯಂ ಮತ್ತು ಪೆರಂಬಲೂರ್ ತಾಲ್ಲೂಕುಗಳ ಆಡಳಿತವಿಭಾಗಕ್ಕೆ ಕೇಂದ್ರಸ್ಥಾನ. ಜಮೀನ್ದಾರಿ ಪದ್ಧತಿಗೆ ಹಿಂದೆ ಪ್ರಮುಖವೆನಿಸಿತ್ತು. ಇಲ್ಲಿಯ ಪಟ್ನೂಲ್‍ಕಾರಾನ್ಸ್ ಪಂಗಡದ ಜನ ಸೀರೆಗಳನ್ನು ನೇಯುವುದರಲ್ಲಿಹೆಸರುವಾಸಿಯಾಗಿದ್ದಾರೆ. ಕರ್ನಾಟಕ ಯುದ್ಧದ ವೇಳೆಯಲ್ಲಿ ಅರಿಯಲೂರ್ ನ ಪಾಳೆಯಗಾರರು ಹೆಚ್ಚು ಕಷ್ಟ ಅನುಭವಿಸಿದರು. 1801ರಲ್ಲಿ ಇಲ್ಲಿಯ ಪಾಳೆಯಗಾರರನ್ನು ಈಸ್ಟ್ ಇಂಡಿಯ ಕಂಪನಿ ವಶಪಡಿಸಿಕೊಂಡಿತು. ರೈಲು ನಿಲ್ದಾಣದ ಅನುಕೂಲವನ್ನು ಹೊಂದಿದ್ದು ದಕ್ಷಿಣ ಭಾರತ್ತದಲ್ಲಿನ ಒಂದು ಉತ್ತಮ ಮಾರುಕಟ್ಟೆಯ ವ್ಯವಸ್ಥೆ ಪಡೆದಿದೆ. ಈ ಪಟ್ಟಣಕ್ಕೆ 6.4 ಕಿಮೀ ದೂರದಲ್ಲಿ ಒಂದು ಹಿಂದೂ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ರೋಗಿಗಳು ಭೇಟಿಕೊಟ್ಟರೆ ಆರೋಗ್ಯವಂತ ರಾಗುವರಂದು ಪ್ರತೀತಿ. ಇದನ್ನೂ ನೋಡಿ: ಅರಿಯಲೂರ್ ಜಿಲ್ಲೆ