ಅರಾಗೊ, ಡೊಮಿನಿಕ್ ಫಾಂಕೊಜೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
François Arago
ಅರಾಗೊ, ಡೊಮಿನಿಕ್ ಫಾಂಕೊಜೀನ್


ಅಧಿಕಾರದ ಅವಧಿ
9 May 1848 – 24 June 1848
ಪೂರ್ವಾಧಿಕಾರಿ Jacques-Charles Dupont de l'Eure
ಉತ್ತರಾಧಿಕಾರಿ Louis-Eugène Cavaignac

ಜನನ 26 February 1786
Estagel
ಮರಣ 2 October 1853(1853-10-02) (aged 67)
Paris
ರಾಜಕೀಯ ಪಕ್ಷ None
ಧರ್ಮ None. Atheist.[೧]

ಅರಾಗೊ, ಡೊಮಿನಿಕ್ ಫಾಂಕೊಜೀನ್ : 1786-1853. ಫಾನಿನ ಎಸ್ಟಜೆಲ್‍ನಲ್ಲಿ ಜನಿಸಿದ ಭೌತವಿಜ್ಞಾನಿ.

ಬದುಕು[ಬದಲಾಯಿಸಿ]

ಫಾನಿನ ರೇಖಾಂಶ ಸಂಸ್ಥೆಯ (ಬ್ಯೂರೂ ಆಫ್ ಲಾಂಜಿಟ್ಯೂಡ್ಸ್) ಕಾರ್ಯದರ್ಶಿಯಾಗಿ ಬದುಕನ್ನು ಪ್ರಾರಂಭಿಸಿ, 1806ರಲ್ಲಿ ಡಿಲ್ಯಾಂಬರ್ ಮತ್ತು ಮೆಕ್ಕೈಸ್ ಅವರು ಪೂರ್ಣಮಾಡದೆ ಬಿಟ್ಟಿದ್ದ ಮಧ್ಯಾಹ್ನ ರೇಖೆಯ ಕಂಸದ ಅಳತೆಗಳನ್ನು ಪೂರೈಸುವ ಸಲುವಾಗಿ ಬಿಯೋಟ್ ಎಂಬುವನ ಜೊತೆ ಸ್ಪೇನಿಗೆ ಪಯಾಣ ಮಾಡಿದ. ಹಿಂತಿರುಗುವಾಗ ಅವನ ಹಡಗು ಬಿರುಗಾಳಿಗೆ ಸಿಲುಕಿ ನಾಶಗೂಂಡು ಆಲ್ಜಿಯರ್ಸ್‍ನಲ್ಲಿ ಬಂಧಿತನಾದ. ಭೌತವಿಜ್ಞಾನದಲ್ಲಿ ಪತಿಭಾಪೂರ್ಣ ಸಂಶೋಧನೆಗಳನ್ನು ನಡೆಸಿ, ಬೆಳಕಿನ ವೇಗವನ್ನು ನಿರ್ಧರಿಸಲು ತಿರುಗುವ ಕನ್ನ ಡಿಯ ವಿಧಾನವನ್ನು ತಿಳಿಸಿಕೊಟ್ಟ, ಈತ ಫ್ರೆನೆಲ್ ಎಂಬ ಮತೊಬ್ಬ ಭೌತವಿಜ್ಞಾನಿಯೊಡನೆ ಬೆಳಕಿನ ವಿವರ್ತನೆಯ (ಡಿಫ್ರಾಕ್ಷನ್) ಮೇಲೆ ನಡೆಸಿದಪ್ರಯೋಗಗಳಿಂದಾಗಿ, ಬೆಳಕಿನ ತರಂಗಸಿದ್ಧಾಂತವನ್ನು (ವೇವ್ ಥಿಯೊರಿ) ಸ್ಥಿರೀಕರಿಸಿದ. ಕಬ್ಬಿಣವೊಂದೇ ಅಲ್ಲದೆ ಇತರ ಕೆಲವು ಲೋಹಗಳಿಗೂ ಕಾಂತೀಯ ಗುಣಗಳಿವೆ ಎಂಬುದವನ್ನು ತೋರಿಸಿದವರಲ್ಲಿ ಈತನೇ ಮೊದಲಿಗ. ಇದರ ಸಲುವಾಗಿ ಇವನಿಗೆ ಕಾಪ್ಲಿ ಪದಕ 1825 ರಲ್ಲಿ ದೊರಕಿತು. 1818-1822ರವರೆಗೆ ಶಬ್ದದ ಬಗ್ಗೆಯೂ ಕೆಲಸಮಾಡಿ ಕಾಂತೀಯವಲ್ಲದ ವಾಹಕದ ಭ್ರಮಣದಿಂದ ಕಾಂತತೆ ಉಂಟಾಗುವುದನ್ನು ಆವಿಷ್ಕರಿಸಿದ.

ಇವನು ೧೮೪೮ರಲ್ಲಿ ಅಲ್ಪಕಾಲ ಫ್ರಾನ್ಸ್ ದೇಶದ ಅದ್ಯಕ್ಷನಾಗಿಯೂ ಸೇವೆ ಸಲ್ಲಸಿದ.

ಉಲ್ಲೇಖಗಳು[ಬದಲಾಯಿಸಿ]

  1. Theresa Levitt (2009). "4: A Vital Matter: Light and Life". The Shadow of Enlightenment : Optical and Political Transparency in France 1789-1848: Optical and Political Transparency in France 1789-1848. Oxford University Press. p. 105. ISBN 9780191562631. The same Arago who spent his time criticizing unfounded myths now peddled them. Arago the atheist now spoke of souls. {{cite book}}: |access-date= requires |url= (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]