ವಿಷಯಕ್ಕೆ ಹೋಗು

ಅರವಿಂದ್ ಮಫತ್ ಲಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಸಾಮಾಜಿಕ ಕಾರ್ಯಕರ್ತ', ಹೆಸರಾಂತ ಹತ್ತಿಬಟ್ಟೆಯ ತಯಾರಕ,'ಮಫತ್ ಲಾಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ರುವಾರಿ,,ಅರವಿಂದ್ ಮಫತ್ ಲಾಲ್ ಒಬ್ಬ ಶ್ರೇಷ್ಟಮಟ್ಟದ ಉದ್ಯೋಗಪತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಸ್ವಾತಂತ್ರೋತ್ತರದ ಸಮಯದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವಲ್ಲಿ ಅವರು ತಮ್ಮ ಅನುಪಮ ಕೊಡುಗೆಯನ್ನು ನೀಡಿದ್ದಾರೆ. ಅವರ ಅಜ್ಜನವರು ೧೯೦೫ ರಲ್ಲಿ 'ಅಹಮದಾಬಾದ್' ನಲ್ಲಿ ಒಂದು ಬಟ್ಟೆಗಿರಣಿಯನ್ನು ಸ್ಥಾಪಿಸಿದರು. ಅರವಿಂದ್, ೧೯೫೪ ರಲ್ಲಿ ಅದರ ಸ್ವಾಮಿತ್ವವನ್ನು ತೆಗೆದುಕೊಂಡರು.ಹತ್ತಿ-ವಸ್ತ್ರ ಉದ್ಯೋಗವಲ್ಲದೆ, ರಬ್ಬರ್ ಕೆಮಿಕಲ್ಸ್, ಸ್ಪೆಶ್ಯಾಲಿಟಿ ಕೆಮಿಕಲ್ಸ್, ಪೆಟ್ರೊಕೆಮಿಕಲ್ಸ್ ಗಳ ಒಂದು ಸಮೂಹವನ್ನೇ ತಮ್ಮ ಸ್ವಾಮಿತ್ವದಲ್ಲಿ ಸೇರಿಸಿ, ಕಂಪೆನಿಯನ್ನು ಬೆಳೆಸಿದರು. ಮಹಾರಾಷ್ಟ್ರದ ಥಾಣೆಯಲ್ಲಿ ರಾಯಲ್ ಡಚ್ ಶೆಲ್, ಮತ್ತು ಹೆಕ್ಸ್ಟ್ ಎಂಬ ವಿದೇಶಿ ಸಹಯೋಗದೊಂದಿಗೆ ಸ್ಥಾಪಿಸಿದ ನೋಸಿಲ್ ರಬ್ಬರ್ ಕೆಮಿಕಲ್ಸ್, ಬೃಹತ್ ಕಂಪೆನಿಗಳು, ಅವರ ಮನೆತನದ ಬಿಜಿನೆಸ್ ವಲಯಕ್ಕೆ ಒಂದು ಹೊಸ ತಿರುವು ನೀಡಿದವು. ದೇಶದಲ್ಲೇ ಅವರ ಕೆಮಿಕಲ್ಸ್ ಕಂಪೆನಿ ಭಾರೀ ರಬ್ಬರ್ ವಿದೇಶಕ್ಕೆ ರಫ್ತುಮಾಡುವ ನಿಟ್ಟಿನಲ್ಲಿ ದೊಡ್ಡಹೆಸರು ಮಾಡಿತು. ನವೀನ್ ಫ್ಲೋರಿನ್ ಮತ್ತೊಂದು 'ಫ್ಲೋರೊ ಕಾರ್ಬನ್' ತಯಾರಿಸುವ ಭಾರಿ ದೊಡ್ಡ ಕಂಪೆನಿ'. ಮಫತ್ ಲಾಲ್ ಡೆನಿಮ್ ಅತ್ಯಂತ ಹೆಸರುವಾಸಿಯಾದ 'ಹತ್ತಿ ಡೆನಿಮ್ ಬ್ರಾಂಡ್' ಎಂದು ಹೆಸರು ಗಳಿಸಿದೆ.

'ಅರವಿಂದ್ ಮಫತ್ ಲಾಲ್', ಕೆಳವರ್ಗದ ಜನರ ಜೀವನ ಮಟ್ಟವನ್ನು ಸುಧಾರಿಸುವ ದಿಶೆಯಲ್ಲಿ ಹೆಸರಾಂತ ಗಾಂಧಿತತ್ವವಾದಿ, ಮನಿಭಾಯ್ ದೇಸಾಯಿಯವರ ಜೊತೆ ಸೇರಿ, ಕೆಲಸಮಾಡಿದರು 'ಭಾರತೀಯ ಅಗ್ರೊ ಇಂಡಸ್ಟ್ರೀಸ್ ಫೌಂಡೇಶನ್' ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು,ಅನುಸಂಧಾನ ಪದ್ಧತಿಗಳಿಗೆ ಒತ್ತು ನೀಡುತ್ತ, ಹಳ್ಳಿಯ ಬಡಜನರ, ಉದ್ಯೋಗ, ವಸತಿ ಮುಂತಾದವುಗಳ ಹಿತಾಸಕ್ತಿಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ತರಹದ ಕಾರ್ಯಕ್ರಮಗಳಿಂದ ದೇಶದ ೧೬ ರಾಜ್ಯಗಳಲ್ಲಿ ಸುಮಾರು ೪.೪ ಮಿಲಿಯನ್ ಗಿರಿಜನರ, ಮನೆ-ಹೊಲಗಳಿಲ್ಲದವರ ಜೀವನ ನಿರ್ವಹಣೆಯ ಕಾರ್ಯ ಸುಗಮವಾಗಿ ನಡೆಯುತ್ತಿದೆ. 'ಅರವಿಂದ್ ಮಫತ್ ಲಾಲ್' ಸ್ತ್ರೀಯರ ಮುಂದಾಳತ್ವಕ್ಕೆ ಒತ್ತುಕೊಟ್ಟಿದ್ದರು.

ಪ್ರಕೃತಿ ವಿಕೋಪಕ್ಕೆ ಬಲಿಯಾಗಿ ತಮ್ಮ ಮನೆಮಠಗಳನ್ನು ಕಳೆದುಕೊಂಡು ಆಶ್ರಯಹೀನರಾದ ಬಡಜನ,ಗಿರಿಜನರ ಕ್ಷೇಮಾಭಿವೃದ್ಧಿಗೆ ಗಮನವಿಟ್ಟು ೧೯೬೮ ರಲ್ಲಿ ಶ್ರೀ ಸದ್ಗುರು ಸೇವಾಸಂಘ್ ಟ್ರಸ್ಟ್ ಸ್ಥಾಪಿಸಿದರು. ಕೆಳವರ್ಗದ ಜನರ ಜೀವನ ಮಟ್ಟವನ್ನು ಸುಧಾರಿಸುವ ದಿಶೆಯಲ್ಲಿ ಕೆಲಸಮಾಡಿದರು.

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
  • 'ದುರ್ಗಾಪ್ರಸಾದ್ ಖೈತಾನ್ ಸ್ಮಾರಕ ಚಿನ್ನದ ಪದಕ', (೧೯೬೬)
  • 'ಇಂಡಸ್ಟ್ರಿಯಲ್ ಪೀಸ್',ಗಾಗಿ, 'ಸರ್ ಜೆಹಾಂಗೀರ್ ಘಾಂಧಿ ಸ್ಮಾರಕ ಚಿನ್ನದ ಪದಕ', 'ಜಮ್ ಶೆಡ್ ಪುರದ ಸೇಂಟ್ ಜೇವಿಯರ್ ಲೇಬರ್ ರಿಲೇಶನ್ಸ್ ಇನ್ಸ್ಟಿ ಟ್ಯೂಟ್',ನ ವತಿಯಿಂದ (೧೯೭೮)
  • 'ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಆಫ್ ಯು.ಎಸ್.ಎ', ವತಿಯಿಂದ 'ಲಯನ್ಸ್ ಹ್ಯುಮನೆಟೇರಿಯನ್ ಪ್ರಶಸ್ತಿ' (೧೯೯೩)

'ಅರವಿಂದ್ ಮಫತ್ ಲಾಲ್ ರ, ಮಗ ಹೃಷಿಕೇಶ್ ಮಫತ್ ಲಾಲ್ ಈಗಿನ 'ಅರವಿಂದ್ ಮಫತ್ ಲಾಲ್ ಕಂಪೆನಿ'ಯ ಒಡೆಯರಾಗಿದ್ದಾರೆ. ಮೈಥಿಲಿ ದೇಸಾಯ್ ಮಗಳು. ಸುಮಾರು ಒಂದುತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ, ೮೮ ವರ್ಷ ಪ್ರಾಯದ 'ಅರವಿಂದ ಮಫತ್ ಲಾಲ್' ರವರು, ಮುಂಬೈನಿಂದ ಮಧ್ಯಪ್ರದೇಶದ ಚಿತ್ರಕೂಟಕ್ಕೆ ಹೋಗಿ ನೆಲೆಸಿದರು.ಅವರಿಗೆ ತಮ್ಮ ಅಂತಿಮ ದಿನಗಳನ್ನು ಅಲ್ಲಿಯೇ ಕಳೆಯುವ ಆಶೆಯಿತ್ತು. ಅವರು ೨೦೧೧ ರ, ರವಿವಾರ, ಅಕ್ಟೋಬರ್, ೩೦ ರಂದು, ನಿಧನರಾದರು.