ಅರಬ್ಬೀ ಗಣರಾಜ್ಯ
ಅರಬ್ಬೀ ಗಣರಾಜ್ಯ ಎಂದರೆ ಈಜಿಪ್ಟ್ ಮತ್ತು ಸಿರಿಯಗಳ ನಡುವಿನ ರಾಜಕೀಯ ಒಪ್ಪಂದದಂತೆ ಏರ್ಪಟ್ಟು 1958-61ರ ವರೆಗೆ ಅಸ್ತಿತ್ವದಲ್ಲಿದ್ದ ದೇಶ.
ಹಿನ್ನೆಲೆ
[ಬದಲಾಯಿಸಿ]ಈಜಿಪ್ಟ್ ಗಣರಾಜ್ಯವಾದದ್ದು 1953ರ ಜನವರಿ 18ನೆಯ ತಾರೀಖು. ರಾಜ್ಯದ ಆದಾಯವನ್ನೆಲ್ಲ ತಮ್ಮ ಭೋಗವಿಲಾಸಗಳಿಗೆ ವಿನಿಯೋಗಿಸಿಕೊಂಡು ಪ್ರಜೆಗಳ ಅಭ್ಯುದಯವನ್ನು ಕಡೆಗಣಿಸಿದ ರಾಜಪ್ರಭುತ್ವವನ್ನು ಕೊನೆಗಾಣಿಸಿ, ಭೇ, ಪಾಷಾ ಮುಂತಾದ ಶ್ರೀಮಂತಿಕೆಯ ಬಿರುದುಗಳನ್ನು ರದ್ದುಗೊಳಿಸಿ, ಮೊಹಮ್ಮದ್ ನಗೀಬ್ ರ ನಾಯಕತ್ವದಲ್ಲಿ ಗಣರಾಜ್ಯತ್ವವನ್ನು ಸಾಧಿಸಲಾಯಿತು.
ರಾಜಕೀಯ ಹಿನ್ನೆಲೆ
[ಬದಲಾಯಿಸಿ]ಆದರೆ ಈಜಿಪ್ಟನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟಿತ್ತು. ಸುಯೆಸ್ ಕಾಲುವೆ ಪ್ರಶ್ನೆ ಮತ್ತು ಸೂಡಾನಿನ ಭವಿಷ್ಯ(ಇವೆರಡೂ ಬಗೆಹರಿದಲ್ಲದೆ ಇಂಗ್ಲೆಂಡಿನೊಂದಿಗೆ ಸಂಬಂಧ ಸರಿಹೋಗುವಂತಿರಲಿಲ್ಲ. ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿತ್ತು. ಹೊಸ ಆಡಳಿತವರ್ಗ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲವು ಸುದಾರಣೆಗಳನ್ನು ಜಾರಿಗೆ ತಂದಿತು. 1954ರಲ್ಲಿ ನಾಸೆರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಇಂಗ್ಲೆಂಡಿನೊಂದಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ನಡೆಯಿತು. ಇಂಗ್ಲೆಂಡ್ ಸೂಡಾನಿನ ಸ್ವಾತಂತ್ರ್ಯವನ್ನು ಘೋಷಿಸಿತು. 1954ರ ಒಪ್ಪಂದದಂತೆ ಈಜಿಪ್ಟ್‍ನಲ್ಲಿಟ್ಟಿದ್ದ ಬ್ರಿಟಷ್ ರಕ್ಷಣಾಪಡೆಯನ್ನು ಸ್ವಲ್ಪ ಸ್ವಲ್ಪವಾಗಿ 20 ತಿಂಗಳಲ್ಲಿ ಹಿಂದಕ್ಕೆ ಕರೆಸಿಕೊಳ್ಳುವ ಭರವಸೆ ಕೊಟ್ಟಿತು. ಒಪ್ಪಂದಕ್ಕನುಸಾರವಾಗಿ ರಕ್ಷಣಾಪಡೆ ಈಜಿಪ್ಟನ್ನು ಬಿಟ್ಟು ಹೋಯಿತು. ಇಂಗ್ಲೆಂಡಿನೊಂದಿಗೆ ಸ್ನೇಹ ಸಂಬಂಧ ಮಾತ್ರ ಹೆಚ್ಚು ಕಾಲ ಉಳಿಯಲಿಲ್ಲ. ಬಾಗ್ದಾದ್ ಒಪ್ಪಂದದಿಂದ ಹುಟ್ಟಿದ, ಇರಾನ್, ಇರಾಕ್, ತುರ್ಕಿ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ರಾಜ್ಯಗಳನ್ನೊಳಗೊಂಡ ಸೆಂಟೋಕೂಟಕ್ಕೆ ಸೇರಲು ನಾಸೆರ್ ನಿರಾಕರಿಸಿದ, ಈ ಕೂಟಕ್ಕೆ ಅರಬ್ಬೀ ಜನತೆಯಲ್ಲಿ ತೀವ್ರ ವಿರೋಧವಿತ್ತು: ಆದ್ದರಿಂದ ಇವರಿಗೆ ನಾಸೆರ್ ಒಬ್ಬನೇ ಅರಬ್ಬರ ಗೌರವ ಮತ್ತು ಹಿತರಕ್ಷಣೆಯಲ್ಲಿ ಆಸಕ್ತನಾದವನೆಂಬ ಭಾವನೆ ಬೆಳೆದು ಆತ ಅವರ ಮುಖಂಡನಾದ, ಬಾಗ್ದಾದ್ ಒಪ್ಪಂದಕ್ಕೆ ವಿರೋಧಿಯಾಗಿದ್ದ ಭಾರತ ಮತ್ತು ಯುಗೋಸ್ಲಾವಿಯ ರಾಜ್ಯಗಳೊಡನೆ ಸ್ನೇಹವ್ಯವಹಾರ ಬೆಳೆಸಿ, ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಸ್ವತಂತ್ರ ಈಜಿಪ್ಟ್ ಪಾತ್ರವಹಿಸುವಂತೆ ಮಾಡಿದ. 1955ರಲ್ಲ ಜರುಗಿದ ಬಾಂಡುಂಗ್ ಸಮ್ಮೆಳನದಲ್ಲಿ ಭಾಗವಹಿಸಿ, ಅಲಿಪ್ತನೀತಿಗೆ ಬೆಂಬಲ ನೀಡಿದ.
ನಾಸೆರ್ ಇಸ್ರೇಲಿನ ಅಸ್ತಿತ್ವವನ್ನು ಒಪ್ಪಿಕೊಂಡೇ ಇರಲಿಲ್ಲ. ಅರಬ್ಬರೇ ಬಹು ಸಂಖ್ಯಾತರಾಗಿದ್ದ ಪಶ್ಚಿಮ ಏಷ್ಯದಲ್ಲಿ ದೊಡ್ಡ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಪಡೆದ ರಾಜ್ಯವೊಂದು ನಿರ್ಮಿತವಾದರೆ ಅದು ಅನೇಕ ಹೊಸ ರಾಜಕೀಯ ಸಮಸ್ಯೆಗಳನ್ನು ತಂದೊಡ್ಡಿ ತಮ್ಮ ರಾಷ್ಟ್ರಗಳ ಬೆಳೆವಣಿಗೆಗೆ ಅಡ್ಡಿಯಾಗಬಹುದು ಎಂದು ಅರಬ್ಬರ ಅಭಿಪ್ರಾಯ. ಇಸ್ರೇಲಿನ ಬಹಿಷ್ಕಾರಕ್ಕೆ ಈಜಿಪ್ಟೇ ಮುಂದಾಳಾಗಿತ್ತು. 1955ರ ಫೆಬ್ರವರಿಯಲ್ಲಿ ಇಸ್ರೇಲ್ ಸೈನ್ಯ ಗಾಜಾóದ ಸೈನ್ಯ ಠಾಣೆಯ ಮೇಲೆ ದಾಳಿ ನಡೆಸಿತು ಮುಂದೆ ಗಂಡಾಂತರ ಕಾದಿದೆಯೆಂಬುದನ್ನರಿತು ಅರಬ್ಬೀ ಗೆರಿಲ್ಲಾ ಯೋಧರ ತಂಡಗಳನ್ನು ಈಜಿಪ್ಟ್ ಸಿದ್ದಪಡಿಸಿತು. ಪಶ್ಚಾತ್ಯ ದೇಶಗಳೂ ಮುಖ್ಯವಾಗಿ ಅಮೆರಿಕದ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಈಜಿಪ್ಟ್ಗೆ ವಿರೋಧವಾಗಿ ನಿಂತುವು. ಆಗ ಕಮ್ಯೂನಿಸ್ಟ್ ರಾಷ್ಟ್ರಗಳೊಂದಿಗೆ ಈಜಿಪ್ಟ್ ಹೆಚ್ಚಾಗಿ ಸಂಬಂಧ ಬೆಳೆಸಬೇಕಾಯಿತು. 1956-599ರಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ಇಸ್ರೇಲ್‍ಗಳ ವಿರುದ್ಧ ನಿಂತು ಯುದ್ಧ ಮಾಡುವ ಪರಿಸ್ಥಿತಿ ಈಜಿಪ್ಟಿಗೆ ಬಂತು; ಆದರೆ ವಿಶ್ವಸಂಸ್ಥೆ ಇದನ್ನು ತಡೆಗಟ್ಟಿತು.[೧]
ಈಜಿಪ್ಟಿನ ಮತ್ತು ಇತರ ಅರಬ್ ರಾಷ್ಟ್ರಗಳ ರಾಜಕೀಯದಲ್ಲಿ ಇಂಗ್ಲೆಂಡ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವವನ್ನು ಮುರಿದು ಕಮ್ಯೂನಿಸ್ಟ್ ರಾಷ್ಟ್ರಗಳ ಒಕ್ಕೂಟವೊಂದನ್ನು ನಿರ್ಮಿಸುವುದೇ ಸರಿಯಾದ ಉಪಾಯವಾದ್ದರಿಂದ, ಮೊದಲ ಹೆಜ್ಜೆಯೆಂಬಂತೆ, ಈಜಿಪ್ಟ್ ಮತ್ತು ಸಿರಿಯ ದೇಶಗಳ ಅಧ್ಯಕ್ಷರು ತಮ್ಮ ಎರಡು ರಾಷ್ಟ್ರಗಳೂ ಒಂದಾಗಿ ಸಂಯುಕ್ತ ಅರಬ್ ಗಣರಾಜ್ಯವಾಗಿದೆಯೆಂದು ಘೋಷಿಸಿದರು (1958, ಫೆಬ್ರವರಿ 1). ಅದೇ ತಿಂಗಳ 21ನೆ ತರೀಖು ಜನಾಭಿಪ್ರಾಯವನ್ನು ಕೋರಲಾಯಿತು: ಬಹುಸಂಖ್ಯಾತ ಮತದಾರರು ಒಪ್ಪಿಗೆ ನೀಡಿದರು. ಮಾರ್ಚ್ ತಿಂಗಳಲ್ಲಿ ಯೆಮೆನ್ ಕೂಡ ಈ ಕೂಟಕ್ಕೆ ಸೇರಿತು. ನಾಸೆರ್ ಈ ಸಂಯುಕ್ತ ರಾಜ್ಯಗಳ ಅಧ್ಯಕ್ಷನಾಗಿ ಆರಿಸಲ್ಪಟ್ಟ, ಹೊರರಾಷ್ಟ್ರ ವ್ಯವಹಾರದಲ್ಲಿ, ಶಿಕ್ಷಣ ಮತ್ತಿತರ ಸಾಂಸ್ಕøತಿಕ ವಿಷಯಗಳಲ್ಲಿ ಮಾತ್ರ ಏಕತೆಯಿರಬೇಕು. ಇತರ ವಿಷಯಗಳಲ್ಲಿ ಪ್ರತಿ ಸದಸ್ಯರಾಷ್ಟ್ರವೂ ಸ್ವತಂತ್ರವಾಗಿರಬೇಕು ಎಂಬ ನಿರ್ಣಯಕ್ಕೆ ಒಪ್ಪಿಗೆ ದೊರಕಿತು. ಹೊಸ ರಾಜ್ಯಾಂಗವ್ಯವಸ್ಥೆಯಲ್ಲಿ ಅಧ್ಯಕ್ಷ ಉಚ್ಚ ಸೇನಾಪತಿಯಾದ ಉಪರಾಷ್ಟ್ರಪತಿಗಳನ್ನು ಮತ್ತು ಮಂತ್ರಿಗಳನ್ನು ನೇಮಿಸಿವುದು, ವಜಾ ಮಾಡುವುದು ಅವನ ಅಧಿಕಾರಕ್ಕೊಳಪಟ್ಟಿತು.
ಒಡಕು
[ಬದಲಾಯಿಸಿ]ಐಕ್ಯ ಸಾಧನೆಗೆ ಪ್ರಥಮ ಹಂತವೆಂದು ಪರಿಗಣಿತವಾಗಿದ್ದ ಈ ಗಣರಾಜ್ಯ ವ್ಯವಸ್ಥೆಯಲ್ಲಿ ಒಡಕುಗಳು ಬಹುಬೇಗ ಕಂಡುಬಂದುವು. ಸರಕಾರದ ಉಚ್ಚಸ್ಥಾನಗಳಲ್ಲಿ ಕೇಂದ್ರ ಸರ್ಕಾರ ತನ್ನ ಅಧಿಕಾರ ಕ್ಷೇತ್ರವನ್ನು ಕೊಂಚಕೊಂಚವಾಗಿ ವಿಸ್ತರಿಸತೊಡಗಿತು. ಸಿರಿಯದಲ್ಲಿ ಕಳವಳ ಹೆಚ್ಚಿ ಸೈನಿಕ ಕ್ರಾಂತಿಯುಂಟಾಗಿ (1961) [೨]ಆ ದೇಶ ಒಕ್ಕೂಟದಿಂದ ಹೊರಬಂತು. ಕೊಂಚಕಾಲದಲ್ಲೇ ಯೆಮೆನ್ ಕೂಡ ಹೊರಬಂತು. ಆದರೆ, ಒಂದು ಕಡೆ ಸಾಮ್ರಾಜ್ಯವಾದಿಗಳು, ಇನ್ನೊಂದುಕಡೆ ಕಮ್ಯೂನಿಸ್ಟರು—ಇವರಿಬ್ಬರ ಪ್ರಭಾವಕ್ಕೂ ಬಗ್ಗದೆ ಅರಬ್ಬರ ಸ್ವಾತಂತ್ರ್ಯ, ಉತ್ಕರ್ಷಗಳಿಗಾಗಿ ಮಾತ್ರ ಶ್ರಮಿಸುತ್ತಿದ್ದ ನಾಸೆರನ ವಿಷಯದಲ್ಲಿ ಜನಾನುರಾಗ ಕುಗ್ಗಲಿಲ್ಲ; ಸಿರಿಯ, ಯೆಮೆನ್ ಬೇರೆಯಾದರೂ ಸಂಯುಕ್ತ ಗಣರಾಜ್ಯದ ಹೆಸರು ಮುಂದುವರಿಯಿತು. ನಸೆರ್ ಅರಬ್ಬೀಯರ ಸ್ವಾತಂತ್ರ್ಯ, ರಾಷ್ಟ್ರಗೌರವಗಳ ಪ್ರತೀಕವಾಗಿ ನಿಂತ. 1963ರಲ್ಲಿ ಪುನಃ ಸಂಯುಕ್ತ ಅರಬ್ ಗಣರಾಜ್ಯವೊಂದನ್ನು ಸ್ಥಾಪಿಸುವ ಪ್ರಯತ್ನಗಳು ನಡೆದುವು.[೩] ಈ ಸಲ ಈಜಿಪ್ಟ್, ಸಿರಿಯ, ಇರಾಕ್‍ಗಳ ನಡುವೆ ತತ್ತ್ವಿಕವಾಗಿ ಒಮ್ಮತವೂ ಕಂಡುಬಂತು. ಆದರೆ ಸಂಯುಕ್ತ ರಾಜ್ಯಾಂಗದಲ್ಲಿ ಸದಸ್ಯರ ಸ್ವಾತಂತ್ರ್ಯವೆಷ್ಟಿರಬೇಕೆಂಬ ವಿಷಯದಲ್ಲಿ ಭಿನ್ನಭಿಪ್ರಾಯಗಳು ತಲೆದೋರಿ, ಆ ಯೋಜನೆ ಅಷ್ಟಕ್ಕೇ ನಿಂತಿತು. ಅರಬ್ಬೀಯರೆಲ್ಲ ಒಟ್ಟುಗೂಡಿ ಹೊರರಾಷ್ಟ್ರಗಳ ಒತ್ತಾಯಗಳಿಗೆಡೆಕೊಡದೆ ತಮ್ಮ ಉತ್ಕರ್ಷವನ್ನು ಸಾಧಿಸಿದಲ್ಲದೆ ಬೇರೆ ಮಾರ್ಗವೇ ಇಲ್ಲ ಎಂಬುದನ್ನು ನಂಬಿ ಅದಕ್ಕಾಗಿ ಶ್ರಮಿಸುತ್ತಿರುವ ಸಂಖ್ಯೆಯೇನೂ ಇನ್ನೂ ಕಡಿಮೆಯಾಗಿಲ್ಲ. 1967ರಲ್ಲಿ ಇಸ್ರೇಲ್‍ನೊಂದಿಗೆ ಮಿಂಚಿನವೇಗದಲ್ಲಿ ನಡೆದ ಯುದ್ಧ ಇದಕ್ಕೆ ಸಮರ್ಥನೆಯನ್ನೂ ಕೊಟ್ಟಿದೆ.
ಉಲ್ಲೇಖಗಳು
[ಬದಲಾಯಿಸಿ]