ಅಯಾನ್ ಡೊನಾಲ್ಡ್

ವಿಕಿಪೀಡಿಯ ಇಂದ
Jump to navigation Jump to search
ಅಯಾನ್ ಡೊನಾಲ್ಡ್
ಜನನ
ಅಯಾನ್ ಡೊನಾಲ್ಡ್

೨೭ ಡಿಸೆಂಬರ್ ೧೯೧೦
ಸ್ಕಾಟ್‌ಲೆಂಡ್
ರಾಷ್ಟ್ರೀಯತೆಸ್ಕಾಟ್‌ಲೆಂಡ್

ಸ್ಕಾಟ್‌ಲೆಂಡಿನ ಶರೀರವಿಜ್ಞಾನಿಯಾಗಿದ್ದ ಅಯಾನ್ ಡೊನಾಲ್ಡ್‌ರವರು ೧೯೧೦ರ ಡಿಸೆಂಬರ್ ೨೭ರಂದು ಸ್ಕಾಟ್‌ಲೆಂಡಿನ ಪೈಸ್ಲೀಯಲ್ಲಿ ಜನಿಸಿದರು. ಡೊನಾಲ್ಡ್‌ರವರು ಲಂಡನ್ನಿನ ಗ್ಲಾಸ್ಗೋವಿನ ಯಾರ್ಕ್‌ಹಿಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಶ್ರವಣಾತೀತ ಧ್ವನಿಯನ್ನು (ultrasound) ವೈದ್ಯಕೀಯ ಪ್ರಕ್ರಿಯೆಗಳಲ್ಲಿಯೂ ಉಪಯೋಗಿಸಬಹುದೆಂಬ ವಿಷಯವನ್ನು ಮನಗಂಡರು.[೧] ೧೯೫೯ರಲ್ಲಿ ಅವರು ಭ್ರೂಣದ (foetus) ಮತ್ತು ಅದರ ಬೆಳವಣಿಗೆಯ ಬಿಂಬವನ್ನು ಸುರಕ್ಷಿತವಾಗಿ (ಅಂದರೆ ಕ್ಷ-ಕಿರಣಗಳಿಂದ ಒದಗುವ ಅಪಾಯಕ್ಕೆ ಅದನ್ನು ಒಡ್ಡುವುದನ್ನು ತಪ್ಪಿಸಿ) ಶ್ರವಣಾತೀತ ಧ್ವನಿಯ ಸಹಾಯದಿಂದ ಸೆರೆಹಿಡಿಯಬಹುದು ಎಂಬುದನ್ನು ಕಾರ್ಯತಃ ನಿರೂಪಿಸಿದರು. ಹಾಗಾಗಿ ಪ್ರಸವವಿಜ್ಞಾನದಲ್ಲಿ (obstetrics) ಶ್ರವಣಾತೀತ ಧ್ವನಿಯ ಬಳಕೆ ಮೂಲಭೂತಕ್ರಿಯೆಯಾಗಿದೆ. ಅವರು ೧೯೮೭ರ ಜೂನ್ ೧೯ರಂದು ನಿಧನರಾದರು.

ಉಲೇಖಗಳು[ಬದಲಾಯಿಸಿ]