ಅಯಾನ್ ಡೊನಾಲ್ಡ್
ಗೋಚರ
ಅಯಾನ್ ಡೊನಾಲ್ಡ್ | |
---|---|
Born | ಅಯಾನ್ ಡೊನಾಲ್ಡ್ ೨೭ ಡಿಸೆಂಬರ್ ೧೯೧೦ ಸ್ಕಾಟ್‌ಲೆಂಡ್ |
Nationality | ಸ್ಕಾಟ್‌ಲೆಂಡ್ |
ಸ್ಕಾಟ್‌ಲೆಂಡಿನ ಶರೀರವಿಜ್ಞಾನಿಯಾಗಿದ್ದ ಅಯಾನ್ ಡೊನಾಲ್ಡ್‌ರವರು ೧೯೧೦ರ ಡಿಸೆಂಬರ್ ೨೭ರಂದು ಸ್ಕಾಟ್‌ಲೆಂಡಿನ ಪೈಸ್ಲೀಯಲ್ಲಿ ಜನಿಸಿದರು. ಡೊನಾಲ್ಡ್‌ರವರು ಲಂಡನ್ನಿನ ಗ್ಲಾಸ್ಗೋವಿನ ಯಾರ್ಕ್‌ಹಿಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಶ್ರವಣಾತೀತ ಧ್ವನಿಯನ್ನು (ultrasound) ವೈದ್ಯಕೀಯ ಪ್ರಕ್ರಿಯೆಗಳಲ್ಲಿಯೂ ಉಪಯೋಗಿಸಬಹುದೆಂಬ ವಿಷಯವನ್ನು ಮನಗಂಡರು.[೧] ೧೯೫೯ರಲ್ಲಿ ಅವರು ಭ್ರೂಣದ (foetus) ಮತ್ತು ಅದರ ಬೆಳವಣಿಗೆಯ ಬಿಂಬವನ್ನು ಸುರಕ್ಷಿತವಾಗಿ (ಅಂದರೆ ಕ್ಷ-ಕಿರಣಗಳಿಂದ ಒದಗುವ ಅಪಾಯಕ್ಕೆ ಅದನ್ನು ಒಡ್ಡುವುದನ್ನು ತಪ್ಪಿಸಿ) ಶ್ರವಣಾತೀತ ಧ್ವನಿಯ ಸಹಾಯದಿಂದ ಸೆರೆಹಿಡಿಯಬಹುದು ಎಂಬುದನ್ನು ಕಾರ್ಯತಃ ನಿರೂಪಿಸಿದರು. ಹಾಗಾಗಿ ಪ್ರಸವವಿಜ್ಞಾನದಲ್ಲಿ (obstetrics) ಶ್ರವಣಾತೀತ ಧ್ವನಿಯ ಬಳಕೆ ಮೂಲಭೂತಕ್ರಿಯೆಯಾಗಿದೆ. ಅವರು ೧೯೮೭ರ ಜೂನ್ ೧೯ರಂದು ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-04-25. Retrieved 2016-04-19.