ಅಮ್ರೇಲಿ ಜಿಲ್ಲೆ
ಅಮ್ರೇಲಿ ಜಿಲ್ಲೆ
અમરેલી જિલ્લો | |
---|---|
ಜಿಲ್ಲೆ | |
ದೇಶ | ಭಾರತ |
ರಾಜ್ಯ | ಗುಜರಾತ್ |
ಮುಖ್ಯ ಪಟ್ಟಣ | ಅಮ್ರೇಲಿ |
Population (2011) | |
• Total | ೧೫,೧೩,೬೧೪ |
• Summer (DST) | IST (UTC+05:30) |
ಅಮ್ರೇಲಿ ಜಿಲ್ಲೆ ಗುಜರಾತ್ ರಾಜ್ಯದ ಒಂದು ಜಿಲ್ಲೆ.೬,೬೭೦ ಚದರ ಕಿ.ಮೀ ಇರುವ ಈ ಜಿಲ್ಲೆಯಲ್ಲಿ ೧೫,೧೩,೬೧೪ ಜನರು ವಾಸವಿದ್ದಾರೆ.ಇಲ್ಲಿಯ ಸಾಕ್ಷರತೆ ಪ್ರಮಾಣ ೭೪.೭೯% ಲಿಂಗಾನುಪಾತ ೯೬೪ ಮತ್ತು ಸಾಂದ್ರತೆ ೨೦೫ ಪ್ರತೀ ಕಿ.ಮೀ.ಗೆ.ಇದು ಆರುಕಡೆ ಛಿದ್ರಛಿದ್ರವಾಗಿ ಹರಡಿದೆ. ಹಿಂದಿನ ಬರೋಡ ಸಂಸ್ಥಾನದ ಒಂದು ಪ್ರಾಂತ್ಯವಾಗಿತ್ತು.
ಇತಿಹಾಸ
[ಬದಲಾಯಿಸಿ]ಈ ಪ್ರಾಂತ್ಯವು ಹದಿನೇಳನೆಯ ಶತಮಾನದಲ್ಲಿ ಮರಾಠರ ಪ್ರವೇಶದವರೆಗೆ ಯಾವುದೇ ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಮರಾಠರಿಗೆ ಹಾಗೂ ಗಾಯಕ್ವಾಡರು ಇಲ್ಲಿಯ ಮಾಂಡಲಿಕರುಗಳನ್ನು ಜಯಿಸಿ ಕಾಥೇವಾಡ ಪ್ರಾಂತ್ಯವನ್ನು ಅಮ್ರೇಲಿಯನ್ನು ಕೇಂದ್ರವನ್ನಾಗಿಸಿ ರಚಿಸಿದರು.
ಆರ್ಥಿಕತೆ
[ಬದಲಾಯಿಸಿ]ಅಮ್ರೇಲಿ ಜಿಲ್ಲೆಯು ಆರ್ಥಿಕವಾಗಿ ಹಿಂದುಳಿದ ಜಿಲ್ಲೆ. ಕೃಷಿ ಇಲ್ಲಿಯ ಮುಖ್ಯ ಕಸುಬು.ಸಿಮೆಂಟು ಉತ್ಪಾದಿಸುವ ಘಟಕ ಒಂದಿದೆ.
ಕೃಷಿ ಮತ್ತು ವಾಣಿಜ್ಯ
[ಬದಲಾಯಿಸಿ]ಮಣ್ಣು ಕಪ್ಪು, ಫಲವತ್ತಾಗಿದೆ. ಷಿಯಾನಗರ್ ಅರ್ಧ ಜೌಗು ಅರ್ಧ ಮರುಭೂಮಿಯಾಗಿದ್ದು ಗೋದಿ ಬೆಳೆಗೆ ಅನುಕೂಲವಾಗಿದೆ. ಧಾರಿ ತಾಲ್ಲೂಕಿನಲ್ಲಿ ಮಣ್ಣು ತೆಳು ಬಣ್ಣಕ್ಕಿದ್ದು, ಗಿರ್ ಬೆಟ್ಟಗುಡ್ಡಗಳ ಕಡೆ ಕೆಂಪಾಗಿದೆ. (40")ಗಳಿಗಿಂತಲೂ ಹೆಚ್ಚು ಮಳೆ. ಉಳಿದ ತಾಲ್ಲೂಕುಗಳಲ್ಲಿ ಇಷ್ಟು ಮಳೆ ಇಲ್ಲ. ಇಲ್ಲಿ ಜೋಳ, ಬಾಜ್ರ, ಗೋದಿ, ಬೇಳೆ, ಹತ್ತಿ, ಕಬ್ಬು, ಕೆಂಪುಮೆಣಸು ಇತ್ಯಾದಿಗಳನ್ನು ಬೆಳೆಯುತ್ತಾರೆ. ಓಖಾಮಂಡಲ್‍ನಲ್ಲಿ ಮಳೆ ಕಡಿಮೆಯಿದ್ದರೂ ಜೋಳ ಮತ್ತು ಬಾಜ್ರಗಳನ್ನು ಬೆಳೆಯುತ್ತಾರೆ. ಧಾರಿ, ಅಮ್ರೇಲಿ ತಾಲ್ಲೂಕುಗಳು ಪರ್ವತ ಪ್ರದೇಶವಾಗಿದ್ದು ಅನೇಕ ನದಿಗಳ ಜನನ ಸ್ಥಾನವಾಗಿವೆ. ಮುಖ್ಯವಾದುದು ಶತ್ರುಂಜಿ. ಗಿರ್‍ನಲ್ಲಿ ಮಾತ್ರ ಸುಮಾರು (50,000) ಎಕರೆ ಕಾಡುಗಳಿವೆ. ಇಲ್ಲಿನ ಮೃಗಧಾಮದಲ್ಲಿ ಸಿಂಹಗಳ ಸಂತತಿಯನ್ನು ಸಂರಕ್ಷಿಸಲಾಗಿದೆ. ಹತ್ತಿ, ರೇಷ್ಮೆಬಟ್ಟೆಗಳು ಅಮ್ರೇಲಿ, ಕೋಡಿನಾರ್ ಮತ್ತು ದ್ವಾರಕೆಗಳಲ್ಲಿವೆ. ದ್ವಾರಕೆಯಲ್ಲಿ ಸಿಮೆಂಟ್ ಮತ್ತು ರಾಸಾಯನಿಕ ವಸ್ತುಗಳು ತಯಾರಾಗುತ್ತವೆ. ಓಖಾ ಬಂದರನ್ನು ಬರೋಡ ಸಂಸ್ಥಾನ ಅಭಿವೃದ್ಧಿಪಡಿಸಿತ್ತು. ಬೈಟ್‍ದ್ವೀಪದ ಬಂದರನ್ನು ಇತ್ತೀಚೆಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಭೌಗೋಳಿಕ
[ಬದಲಾಯಿಸಿ]ರಾಜ್ಕೋಟ್ ಜಿಲ್ಲೆ | ||||
ಜುನಾಗಢ ಜಿಲ್ಲೆ | ಭಾವನಗರ ಜಿಲ್ಲೆ | |||
ಅಮ್ರೇಲಿ ಜಿಲ್ಲೆ | ||||
ಅರಬ್ಬೀ ಸಮುದ್ರ |