ಅಮ್ಜಾದ್ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೨, ನವೆಂಬರ್, ೧೯೪೦-೨೭, ಜುಲೈ, ೧೯೯೨) 'ಅಮ್ಜಾದ್ ಖಾನ್,' 'ಬಾಲಿವುಡ್ ಚಿತ್ರರಂಗದ ಖಳನಾಯಕ'ನೆಂದು ಹೆಸರುವಾಸಿಯಾಗಿದ್ದರು. ತಮ್ಮ ೨೦ ವರ್ಷಗಳಲ್ಲಿ, ೧೩೦ ಚಿತ್ರಗಳಲ್ಲಿ, ಹಲವಾರು ನಿರ್ದೆಶಕರು ಮತ್ತು ನಟರೊಡನೆ ಕೆಲಸಮಾಡಿದ್ದಾರೆ. ೧೯೭೫ ರಲ್ಲಿ ನಿರ್ಮಿತವಾದ ’ಶೋಲೆ’ ಚಿತ್ರದಲ್ಲಿ ನಟಿಸಿದ ಗಬ್ಬರ್ ಸಿಂಗ್,ಪಾತ್ರ ಅವರ ಜನಪ್ರಿಯತೆಯನ್ನು ಮುಗಿಲೆತ್ತರಕ್ಕೆ ಏರಿಸಿತು.

ಜನಿಸಿದ್ದು[ಬದಲಾಯಿಸಿ]

ಹೈದರಾಬಾದ್ ನಲ್ಲಿ ಜನಿಸಿದ ಅಮ್ಜಾದ್ ಖಾನ್ ರವರು, ಬಾಲಿವುಡ್ ನ ಹಿರಿಯ ಪೋಷಕ ನಟ, ಜಯಂತ್ ರವರ ಮಗ, ಇಮ್ತಿಯಾಝ್ ಖಾನ್, ಮತ್ತು ಇನಾಯತ್ ಖಾನ್, ಅವರ ಒಂದೆ ಚಿತ್ರದಲಿ ಮಾತ್ರ ನಟಿಸಿದ್ದರು. ಸೋದರ. ೧೯೫೭, ರಲ್ಲಿ ಅವರು, ’ಅಬ್ ದಿಲ್ಲಿ ದೂರ್ ನಹಿ’ ಚಿತ್ರವನ್ನು ನಟಿಸಿದರು. ಬಾಲನಟನಾಗಿ. ಈಗಿನ ಪಾಕೀಸ್ಥಾನದಿಂದ ಅವರ ಪರಿವಾರ ಬಂತು.

ವಿದ್ಯಾಭ್ಯಾಸ[ಬದಲಾಯಿಸಿ]

ಬಾಂದ್ರದಲ್ಲಿ ಸೇಂಟ್ ಟೆರೆಸ ಹೈಸ್ಕೂಲ್ ನಲ್ಲಿ ಪ್ರಾಥಮಿಕ ಶಾಲೆ, ಯನ್ನು ಮುಗಿಸಿ, ಬಾಂದ್ರದ, ಆರ್. ಡಿ ನ್ಯಾಷನಲ್ ಕಾಲೇಜ್ ನಲ್ಲಿ ಕೆಲವುದಿನ ಹೋಗಿದ್ದರು. ’ಜನರಲ್ ಸೆಕ್ರೆಟರಿ’ ಯಗಿದ್ದರು. ಚುನಾವಣೆಯಲ್ಲಿ ಅತಿ ಹೆಚ್ಚಿನ ಓಟುನ್ನು ಗಳಿಸಿದ್ದರು. ಅಲ್ಲಿಂದ ಮುಂದೆ ಎಲ್ಲರೂ ಅವರನ್ನು ಕಂಡರೆ ಭಯ ಭಕ್ತಿಗಳನ್ನು ತೋರಿಸುತ್ತಿದ್ದರು. ದಾದ ಎನ್ನುತ್ತಿದ್ದರು. ಥಿಯೇಟರ್ ನಲ್ಲಿ ನಟಿಸುತ್ತಿದ್ದರು. ೧೭ ನೆಯ ವಯಸ್ಸಿನಲ್ಲಿ ಬಾಲನಟನಾಗಿ ಅಭಿನಯಿಸಿದರು. ಆಬ್ ದಿಲ್ಲಿ ಡೂರ್ ನಹಿ (೧೯೫೭).

ವೃತ್ತಿಜೀವನ[ಬದಲಾಯಿಸಿ]

೧೯೬೦ ರಲ್ಲಿ ಕೆ. ಆಸಿಫ್ ರಿಗೆ ಸಹಾಯಕರಾಗಿ ಕೆಲಸಮಾಡಿದರು.Love and God ಪುಟ್ಟ ಪಾತ್ರದಲ್ಲಿದ್ದರು. ೧೯೭೧ ರಲ್ಲಿ ಆಸಿಫ್ ಮರಣಿಸಿದ್ದರಿಂದ ಅರ್ಧದಲ್ಲೇ ಚಿತ್ರನಿಂತಿತು. ೧೯೮೬ ರಲ್ಲಿ ರಿಲೀಸ್, ೧೯೮೬. ರಲ್ಲಿ ೧೯೭೩ ರಲ್ಲಿ ಮೊದಲ ಚಿತ್ರ, ಹಿಂದುಸ್ಥಾನ್ ಕಿ ಕಸಮ್.

'ಶೋಲೆ ಚಿತ್ರ, ಭಾರತದ ಚಿತ್ರ-ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ನಿರ್ಮಿಸಿತು[ಬದಲಾಯಿಸಿ]

೧೯೭೫ ರಲ್ಲಿ ಅಮಿತಾಬ್ ಬಚ್ಚನ್, ಸಂಜೀವ್ ಕುಮಾರ್, ಧರ್ಮೇಂದ್ರ ದೇವಲ್, ’ಬಬ್ಬರ್’ ಪಾತ್ರ, ಚಂಬಲ್ ಡೆಕಾಯಿಟ್ ಪಾತ್ರ. ಅತಿ ಭಯಾನಕ ಹಾಗೂ ಪ್ರಭಾವಿತ ಪಾತ್ರ. ನೆನೆಪಿನಲ್ಲಿಡುವ ಪಾತ್ರವಾಗಿತ್ತು. ’ಪಟ್ ಕಥಾ ಲೇಖಕಸಲೀಮ್ ಅಮ್ಜಾದ್ ಖಾನ್ ತಮ್ಮ ಪಾತ್ರವನ್ನು ಅತ್ಯಂತ ಪ್ರಭಾವಿಯಾಗಿ ಪ್ರದರ್ಶಿಸುವ ಕೆಲಸದಲ್ಲಿ ಅತ್ಯಂತ ಮುತುವರ್ಜಿ ವಹಿಸಿದರು. ಚೆಂಬಲ್ ಪ್ರದೇಶದ ಡಕಾಯಿತರ ಗ್ಯಾಂಗ್ ನ ಕಾರ್ಯವೈಖರಿಯ ಚಿತ್ರಣವನ್ನು ಪುಸ್ತಕವೊಂದರಲ್ಲಿ ಓದಿ ಮನವರಿಕೆಮಾಡಿಕೊಂಡು ಅವನ್ನು ಚೆನ್ನಾಗಿ ಅಭ್ಯಾಸಮಾಡಿದರು.(actress Jaya Bhaduri's father). ಅತಿ ಹೆಚ್ಚು ಹೊಗಳಿಕೆಗೆ ಪಾತ್ರರಾಗಿದ್ದರು. ಭಾರತೀಯ ಚಿತ್ರರಂಗದಲ್ಲಿ ಒಬ್ಬ ಅತ್ಯಂತ ಕೆಟ್ಟವ್ಯಕ್ತಿಯ ಚಿತ್ರಣವಾಗಿತ್ತು. ಎಲ್ಲರಿಗೂ ಪ್ರಿಯವಾಯಿತು.

ಶೋಲೆ-ಚಿತ್ರಕಥೆ[ಬದಲಾಯಿಸಿ]

ತಾನು ಮಾಡುತ್ತಿರುವ ಯಾವ ಕೆಟ್ಟಕಾರ್ಯಗಳಿಗೂ ಪಶ್ಚಾತ್ತಾಪ ಪಡದ ಅತಿ-ಕೆಟ್ಟ ಮನುಷ್ಯನ ಪಾತ್ರವನ್ನು ಶೋಲೆಚಿತ್ರದ ಖಳನಾಯಕ ಮಾಡುತ್ತಾನೆ. "Arre O' Sambha, Kitne Aadmi The"—"ಬಾಲಿವುಡ್ ಚಿತ್ರ, 'ಶೋಲೆ'ಯಲ್ಲಿ'ಎಲ್ಲರೂ ಜ್~ಜಾಪಿಸಿಕೊಂಡು ಹೇಳುತ್ತಿದ್ದ ವಾಕ್ಯ. 'ಶೋಲೆ' ಅತಿಹೆಚ್ಚು ಹಣಗಳಿಸಿದ, ಅತಿ ಹೆಚ್ಚು ದಿನ ನಡೆದ, ಚಿತ್ರವಾಗಿದೆ. ಅತಿದೊಡ್ಡ ಹೆಸರಿನ ಅಭಿನಯವಿದ್ದ, ಗಬ್ಬರ್ ಸಿಂಗ್ ಪಾತ್ರಕ್ಕೆ, ಪಾರ್ಲೆ ಜಿಬಿಸ್ಕೆತ್ ಮಾರಾಟ ಹೆಚ್ಚಾಯಿತು. ೧೯೭೦-೮೦-೯೦ ಯಲ್ಲಿ ಕೆಲವಾರು ಪಾತ್ರ ಅಂತಹವೇ, ಅಜಿತ್ ಪಾತ್ರವಹಿಸುತ್ತಿದ್ದರು. ಅವರು ನಗರದ ಕೇಡಿಗಳು, ಮತ್ತು ಆತಂಕವಾದಿಗಳ ನಾಯಕರಾಗಿ, ಕೆಲವಾರು ಪಾತ್ರಗಳನ್ನು ಚೆನ್ನಾಗಿಮಾಡುತ್ತಿದ್ದರು.

ಕೆಲವು ಅಸಮಾನ್ಯವಾದ ಪಾತ್ರಗಳು[ಬದಲಾಯಿಸಿ]

  • ೧೯೭೭ ರಲ್ಲಿ ನಿರ್ಮಿತವಾದ ಶತರಂಜ್ ಕಿ ಖಿಲಾಡಿ, ಸತ್ಯಜಿತ್ ರೇ ನಿರ್ದೆಶನ, ದಲ್ಲಿ ನಡೆಯಿತು. ಶತರಂಜ್ ಕಿ ಖಿಲಾಡಿ ಚಿತ್ರದಲ್ಲಿ ಒಬ್ಬ ಅಸಹಾಯಕ ರಾಜನ ಪಾತ್ರ, ವಾಝಿದ್ ಅಲಿ ಖಾನ್, ಅಭಿನಯಿಸಿದ್ದಾರೆ. 'ಅವಧ್ ನ ರಾಜ', 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ', ಆ ಚಿತ್ರವೊಂದರಲ್ಲಿ ಹಾಡುಗಳನ್ನು 'ಡಬ್' ಮಾಡಲಾಯಿತು.
  • ೧೯೮೧ರ ಯಾರಾನ ದಲ್ಲಿ ಅಮಿತಾಬ್ ಬಚ್ಚನ್, ವಿರುದ್ಧ ಪಾತ್ರಾಭಿನಯ,ಅಮಿತಾಬ್ ರವರ ತಂದೆ,
  • ಲಾವಾರಿಸ್ ನಲ್ಲಿ, ಅಮ್ಜಾದ್ ಖಾನ್ ರ ಪಾತ್ರ,
  • film Utsav(೧೯೮೪), ಅಮ್ಜಾದ್ ಖಾನ್,
  • ವಾತ್ಸಾಯನ, 'ಕಾಮಸೂತ್ರ'ದ ಲೇಖಕನ ಪಾತ್ರ ಅಭಿನಯಿಸಿದ್ದರು.
  • ೧೯೮೮ ಮರ್ಚಂಟ್ ಐವರಿ ನಿರ್ಮಿತ, ಇಂಗ್ಲಿಷ್ ಚಿತ್ರ, The Perfect Murder, ಭೂಗತ ಡಾನ್ ಪಾತ್ರದ ಹಾಸ್ಯದ ಪಾತ್ರಗಳಲ್ಲಿ,ಅಮ್ಜಾದ್ ಖಾನ್ ಕಾಣಿಸಿಕೊಂಡಿದ್ದರು. ಅವರ, ಕೆಲವು ಉತ್ತಮ ಚಿತ್ರಗಳು.
  • 'ಕುರ್ಬಾನಿ
  • 'Love Story',
  • 'Chameli Ki Shaadi'
  • 'ರಾಮ್ ಘರ್ ಕೆ ಶೋಲೆ’ ಚಿತ್ರದಲ್ಲಿ ಅದೇ ಪಾತ್ರವನ್ನು ದೊಹರಾಯಿಸಿದರು.

'ಅಮ್ಜಾದ್ ಖಾನ್', ರವರು ಕೆಲವು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದರು[ಬದಲಾಯಿಸಿ]

೧೯೮೦ ರಲ್ಲಿ ಒಂದು ಚಿತ್ರದ ನಿರ್ದೇಶನವನ್ನೂಮಾಡಿದರು. 'ಚೋರ್ ಪೋಲೀಸ್ 'ನಲ್ಲಿ ೧೯೮೩, ಅಮೀರ್ ಆದ್ಮಿ ಗರೀಬ್ ಆದ್ಮಿ, ೧೯೮೫, ಎರಡು ಚಿತ್ರಗಳೂ ನೆಲೆಕ್ಕೆ ಬಿದ್ದು ಮತ್ತೇಳಲೇ ಇಲ್ಲ. ಬಾಲಿವುಡ್ ಚಿತ್ರ ರಂಗದ ಕಲಾಕಾರರ ಸಂಘದ ಅಧ್ಯಕ್ಷರಾಗಿದ್ದರು.(President of the Actors Guild association)

ಅಮ್ಜಾದ್ ಖಾನ್ ವ್ಯಕ್ತಿತ್ವ[ಬದಲಾಯಿಸಿ]

ಕಾಲೇಜಿನ ದಿನಗಳಿಂದಲೂ ಎಲ್ಲರೂ ಅವರನ್ನು ಗೌರವಿಸುತ್ತಿದ್ದರು. ಎಷ್ಟೋ ಸಮಯಗಳಲ್ಲಿ ಚಿತ್ರರಂಗದ ಪರಿವಾರದಲ್ಲಿ ಉದ್ಭವಿಸುವ ಮತಭೇದಗಳನ್ನು ಸುಲಲಿತವಾಗಿ ಪರಿಹರಿಸುತ್ತಿದ್ದರು. ಒಮ್ಮೆ ಡಿಂಪಲ್ ಕಾಪಾಡಿಯ ರವರು ತಾಯಿಯ ಕಿರ್ದಾರ್ ಮಾಡಲುಸಮ್ಮತಿ ಸೂಚಿಸಿದ್ದು ನಂತರ, ಮನಸ್ಸನ್ನು ಬದಲಾಯಿಸಿದರು.ಆಗ ಅಧ್ಯಕ್ಶರಾಗಿದ್ದ ಅಮ್ಜದ್ ಆಲಿಯವರು, ಮಧ್ಯದಲ್ಲಿ ಪ್ರವೆಶಿಸಿ ಸಮಯೋಚಿತವಾದ ಹಾಗೂ ಸುಕ್ತವಾದ ತೀರ್ಮಾನವನ್ನು ಕೊಟ್ಟು, ಸಮಾಧಾನಮಾಡಿದರು.

ರಸ್ತೆಯ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರು[ಬದಲಾಯಿಸಿ]

೧೯೭೬, ರಲ್ಲಿ ಅಮ್ಜಾದ್ ಖಾನ್ ರವರು, ಬಾಂಬೆ ಗೋವ ರಸ್ತೆಯ ಅಪಘಾತದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ವಾಹನವನ್ನು ತಡೆಯಲು ದಿಕ್ಕು ಬದಲಾಯಿಸಿ ಒಂದು ಮರಕ್ಕೆ ಢಿಕ್ಕಿ ಹೊಡೆದು ಗಾಯದಿಂದ ಆಸ್ಪತ್ರೆಸೇರಿದರು. ಅಲ್ಲಿಂದ ಅವರ ದೇಹದ ತೂಕ ಬಹಳವಾಗಿ ಹೆಚ್ಚಾಗುತ್ತಾ ಬಂತು. ೧೯೯೨ ರಲ್ಲಿ ಅವರಿಗೆ ಹೃದಯಾಘಾತವಾಯಿತು. ಆಗ ಅವರಿಗೆ, ೫೧ ವರ್ಷ ವಯಸ್ಸಾಗಿತ್ತು. ೧೯೯೬ ರ ವರೆಗೆ, ಅವರು ಮಾಡಿದ ಅನೇಕ ಚಿತ್ರಗಳನ್ನು ಬಿಡುಗಡೆಮಾಡಿದರು.

ಮರಣ[ಬದಲಾಯಿಸಿ]

ಪಾಲಿ ಹಿಲ್ ನ ಮನೆಯಿಂದ ಹೊರಟ ಅಮ್ಜಾದ್ ಖಾನ್ ರವರ ಮೈಯೆತ್, ಬಾಂದ್ರ (ಪೂರ್ವ) ದ ಮುಸ್ಲಿಮ್ ಸ್ಮಶಾನಕ್ಕೆ, ಹೋಗುವತನಕ, ಅವರ ಗೆಳೆಯರೆಲ್ಲಾ, ನಡೆದೇಹೋಗಿದ್ದರು.

'ಅಮ್ಜಾದ್ ಖಾನ್, ರವರ ಪರಿವಾರ[ಬದಲಾಯಿಸಿ]

೧೯೭೨ ರಲ್ಲಿ ಶೀಲ ಖಾನ್ ರವರನ್ನು ಮದುವೆಯಾದರು. ಶಾದಾಬ್ ಖಾನ್ ಮಗ, ಕೆಲವುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಬ್ಬ ಮಗಳು, ಆಹ್ಲಾಮ್ ಖಾನ್, ಮತ್ತು ಕೊನೆಯ ಮಗ, ಸೀಮಾಬ್ ಖಾನ್. Amjad Khan (filmography)