ಅಮೇರಿಕದ ಭೋಗ್ಯ ಬಿಕ್ಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Subprime Crisis Diagram - X1.png

ಅಮೇರಿಕದ ಭೋಗ್ಯ ಬಿಕ್ಕಟ್ಟು ಅಮೇರಿಕ ದೇಶದಲ್ಲಿ ೨೦೦೭ರಲ್ಲಿ ಪ್ರಾರಂಭವಾಗಿ ಪ್ರಪಂಚದೆಲ್ಲೆಡೆ ಪ್ರಭಾವ ಬೀರುತ್ತಿರುವ ಇನ್ನೂ ಮುಂದುವರೆಯುತ್ತಿರುವ ಒಂದು ಆರ್ಥಿಕ ಬಿಕ್ಕಟ್ಟು. ಅಮೇರಿಕದಲ್ಲಿ ಮನೆಗಳನ್ನು ಖರೀದಿಸಲು ಅನಿಯಮಿತವಾಗಿ ಸಾಲವನ್ನು ನೀಡಿದ ಪ್ರಭಾವವಾಗಿ, ಮನೆಗಳ ಬೆಲೆ ಕುಸಿದು ಜನರು ತಮ್ಮ ಭೋಗ್ಯವನ್ನು ತೀರಿಸಲಾಗದೆ ಈ ಬಿಕ್ಕಟ್ಟು ಪ್ರಾರಂಭವಾಯಿತು. ಅನೇಕ ಬ್ಯಾಂಕುಗಳು ಈ ಸಾಲಗಳನ್ನು ಮರುಕಳಿಸಲಾಗದಿದ್ದರಿಂದ ದಿವಾಳಿತನವನ್ನು ಘೋಷಿಸಬೇಕಾಯಿತು. ಈ ಭೋಗ್ಯದ ಸಾಲಗಳಲ್ಲಿ ಅನೇಕ ದೇಶಗಳ ಬ್ಯಾಂಕುಗಳು ಹಣವನ್ನು ತೊಡಗಿಸಿದ್ದರಿಂದ ಈ ಬಿಕ್ಕಟ್ಟು ಪ್ರಪಂಚಾದ್ಯಂತ ಹರಡಿದೆ.