ಅಮೆರಿಕದ ಕಾಯಿದೆ ಸಂಸ್ಥೆ

ವಿಕಿಪೀಡಿಯ ಇಂದ
Jump to navigation Jump to search

ಅಮೆರಿಕದ ಕಾಯಿದೆ ಸಂಸ್ಥೆ : ಪ್ರಪಂಚದ ಪ್ರಸಿದ್ಧ ಕಾಯಿದೆಸಂಸ್ಥೆಗಳಲ್ಲಿ ಒಂದು. ನ್ಯಾಯಾಧೀಶರು, ವೃತ್ತಿವಕೀಲರು, ಕಾನೂನು ತಜ್ಞರುಗಳಿಂದ ಕೂಡಿದ ವಿಧಿಬದ್ಧಸಂಸ್ಥೆ ಇದು.

ಧ್ಯೇಯೋದ್ದೇಶಗಳು[ಬದಲಾಯಿಸಿ]

ಕಾನೂನನ್ನು ಕುರಿತು ಅರ್ಥವಿವರಣೆ ಮಾಡಿ ಸರಳನಿಯಮಗಳನ್ನಾಗಿ ನಿರೂಪಿಸುವುದು, ಸಾಮಾಜಿಕ ಆವಶ್ಯಕತೆಗಳಿಗೆ ತಕ್ಕಂತೆ ಕಾನೂನುಗಳನ್ನು ಅನ್ವಯಿಸುವುದು, ನ್ಯಾಯಪರಿಪಾಲನೆಗಾಗಿ ಸುವ್ಯವಸ್ಥಿತ ಆಡಳಿತನಿರ್ಮಾಣಕ್ಕೆ ನೆರವಾಗುವುದು, ಕಾನೂನು ಶಾಸ್ರ್ತದ ಬಗ್ಗೆ ಪಬುದ್ಧ ಅಧ್ಯಯನ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳಿಗೆ ನೆರವು ನೀಡುವುದು ಈ ಸಂಸ್ಥೆಯ ಪ್ರಮುಖ ಧ್ಯೇಯೋದ್ದೇಶಗಳು.

ಇತಿಹಾಸ[ಬದಲಾಯಿಸಿ]

ಅಮೆರಿಕದ ಕಾಯಿದೆಸಂಸ್ಥೆಯ ಪ್ರಾರಂಭದ ಇತಿಹಾಸ ತುಂಬಾ ಸ್ವಾರಸ್ಯಕರವಾಗಿದೆ. ಮೊಟ್ಟಮೊದಲಿಗೆ ಅಮೆರಿಕದಲ್ಲಿ ಕಾನೂನಿನ ಪದ್ಧತಿಯ ಉತ್ತಮೀಕರಣಕ್ಕಾಗಿ ಎಲ್ಲ ನ್ಯಾಯಶಾಖೆಗಳು ಶ್ರಮಿಸಲು ಕೇಂದ್ರ್ರ್ರ ನ್ಯಾಯಮಂಡಲಿಯೊಂದು ಇರಬೇಕೆಂದು ಅಮೆರಿಕದ ವಿವಿಧ ನ್ಯಾಯಪಂಥಗಳ ಮಂಡಲಿಗೆ ಕಂಡುಬಂದಿತು. ಆ ಸಂಬಂಧದಲ್ಲಿ ಹಲವಾರು ಪ್ರಯತ್ನಗಳು ನಡೆದು ಆ ಬಗ್ಗೆ ಯೋಜನೆಯೊಂದು ಸಿದ್ಧವಾಯಿತು. ಆ ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿ ತನ್ನ ಕಾರ್ಯದ ಯಶಸ್ಸಿಗಾಗಿ ನ್ಯಾಯಾಲಯ, ವಕೀಲಿಸಂಘ, ನ್ಯಾಯವಿದ್ಯಾಲಯ, ಪ್ರತಿಷ್ಠಿತಜನಮಂಡಲಿಗಳ ಸಹಾಯ-ಸಹಕಾರಗಳನ್ನು ಪಡೆಯಲು ನಿರ್ಧರಿಸಿತು. ೧೯೨೧ರ ಡಿಸೆಂಬರ್‍ನಲ್ಲಿ ಜರುಗಿದ ಈ ವಿಶೇಷಸಮಿತಿಯ ವಾರ್ಷಿಕಾಧಿವೇಶನದಲ್ಲಿ ಸಮಗ್ರಪರಿಸ್ಥಿತಿಯ ಪರಿಶೀಲನೆಗಾಗಿ ಪ್ರತ್ಯೇಕಮಂಡಲಿಯೊಂದನ್ನು ರಚಿಸಲಾಯಿತು. ಈ ಮಂಡಲಿ ಮುಂದಿಟ್ಟ ವರದಿಯಲ್ಲಿ ಅಮೆರಿಕದ ಕಾನೂನುಪದ್ಧತಿಯಲ್ಲಿ ಕಂಡುಬಂದ ಸಮಗ್ರದೋಷಗಳ ನಿರೂಪಣೆ, ಈ ದೋಷಗಳ ಪರಿಹಾರೋಪಾಯ ಕ್ರಮಗಳ ನಿರೂಪಣೆ, ಇದಕ್ಕಾಗಿ ತಗಲುವ ವೆಚ್ಚ, ಬೇಕಾಗುವ ಅವಧಿಯ ಗೊತ್ತುಪಡಿ ಇವೇ ಮೊದಲಾದ ವಿಷಯಗಳು ಅಡಕವಾಗಿದ್ದುವು. ಈ ವರದಿಯನ್ನು ಆಧರಿಸಿ ರೂಪುಗೊಂಡ ಸ್ಥಿರಮಂಡಲಿಯೇ ಅಮೆರಿಕದ ಕಾಯಿದೆಸಂಸ್ಥೆ. ಇದು ೧೯೨೩ರಲ್ಲಿ ಮನ್ನಣೆ ಹೊಂದಿ ಕಾರ್ಯಪ್ರವೃತ್ತವಾಯಿತು. ಪ್ರಾರಂಭದ ಹತ್ತು ವರ್ಷಗಳ ವೆಚ್ಚವನ್ನು ಕಾರ್ನೆಗಿ ಕಾರ್ಪೊರೇಷನ್ ವಹಿಸಿಕೊಂಡಿತು. ಸಂಸ್ಥೆಯ ಮುಖ್ಯಾದ್ಯಕ್ಷರಾಗಿ ಜಾರ್ಜ್ ಡಬ್ಲ್ಯು. ವಿಕ್ಕರ್ ಷ್ಯಾಮ್ ಅವರು ಅಧ್ಯಕ್ಷರುಗಳಲ್ಲೊಬ್ಬರಾಗಿ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಕಾನೂನುವಿಭಾಗದ ಹಿರಿಯ ಮೇಲ್ವಿಚಾರಣಾಧಿಕಾರಿಯಾದ ವಿಲಿಯಂ ಡ್ರೆಪರ್ ಲೆವಿಸ್ ಅವರೂ ನೇಮಕಗೂಂಡರು. ಸಂಸ್ಥೆಯ ಕಾರ್ಯಾಚರಣೆಗೆ ಸಾರ್ವಜನಿಕ ಮಹತ್ತ್ವವುಂಟಾಗಿ ಕಾನೂನಿನ ನಿರ್ಮಾಣಕಾರ್ಯದಲ್ಲಿ ಈ ಸಂಸ್ಥೆ ಮಹತ್ತರ ಪಾತ್ರ ವಹಿಸುವಂತಾಯಿತು.

ಯೋಜನೆ ಮತ್ತು ಸಾಧನೆಗಳು[ಬದಲಾಯಿಸಿ]

ರೂಢಿ ತಪ್ಪಿದ ಕಾನೂನುಗಳನ್ನು ಸುಧಾರಿತಗೊಳಿಸುವುದು, ದಂಡಪ್ರಕ್ರಿಯೆಗಳ ಬಗ್ಗೆ ಆದರ್ಶಸಂಹಿತೆಯನ್ನು ರೂಪಿಸುವುದು-ಈ ಎರಡು ಯೋಜನೆಗಳನ್ನು ಪ್ರಥಮತಃ ಸಂಸ್ಥೆ ಕೈಗೊಂಡಿತು. ಮೊದಲ ಯೋಜನೆಯಲ್ಲಿ ಒಡಂಬಡಿಕೆಗಳು, ಖಾಸಗಿ ಅಪರಾಧಗಳು, ಸಂದಿಗ್ಧ ಕಾನೂನುಗಳು, ಅಧಿಕರಣಗಳು, ಆಸ್ತಿಪಾಸ್ತಿ ನಿಯಮಗಳು, ವಾಣಿಜ್ಯಸಂಘಗಳ ನಿಯಮಾವಳಿ ಇವು ಸೇರಿದ್ದವು. ಪ್ರತಿಯೊಂದು ವಿಷಯವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿ ವರದಿ ಮಾಡಲು ಬೇರೆಬೇರೆಯವರನ್ನುನಿಯಮಿಸಲಾಗಿತ್ತು. ಇವರ ನೆರವಿಗೆ ಕಾನೂನುತಜರು ಮತ್ತು ಸಹಾಯಕನ್ಯಾಯಜ್ಞರು ಇದ್ದರು. ಉಪಸಮಿತಿಗಳು ಸಿದ್ಧಪಡಿಸಿದ ವರದಿಯನ್ನು ಚರ್ಚೆ, ಪರಿಶೀಲನೆ, ತೀರ್ಮಾನಗಳಿಗಾಗಿ ಅಂತಿಮವಾಗಿ ಅಮೆರಿಕದ ಕಾಯಿದೆಸಂಸ್ಥೆಯ ವಾರ್ಷಿಕಾಧಿವೇಶನದಲ್ಲಿ ಮಂಡಿಸಲಾಯಿತು. ಅಧಿವೇಶ£ದಲ್ಲಿ ದೇಶದ ನಾನಾಭಾಗಗಳ ನ್ಯಾಯಾಧೀಶರು, ನ್ಯಾಯವಾದಿಗಳು ಭಾಗªಹಿಸಿ ಅಲ್ಲದೆ ರಾಜ್ಯದ ವಕೀಲಿಸಂಸ್ಥೆಗಳು ಪತಿ ಉಪಸಮಿತಿಯ ಕgಡುವರದಿಯನ್ನು ಸ್ಥಳೀಯಸ್ಥಿತಿ ಗತಿಗಳ ಹಿನ್ನೆಲೆಯಲ್ಲಿ ಚರ್ಚಿಸಿ ಲೋಪದೋಷಗಳನ್ನು ಗಮನಿಸಿ, ಸೂಕ್ತಸಲಹೆಗಳೊಂದಿಗೆ ವಾರ್ಷಿಕಾಧಿವೇಶನಕ್ಕೆ ಕಳಿಸಿದರು. ಈ ಬಗೆಯ ಕಾರ್ಯವಿಧಾನ ಅಮೆರಿಕದ ಸಾರ್ವತ್ರಿಕ ಕಾನೂನಿನ ಮೂಲಲಕಣಗಳಿಗೆ ಅನುರೂಪವಾಗಿದೆ. ಈ ಮರುನಿರೂಪಣೆಯ ಕಾರ್ಯದಲ್ಲಿ ಶಾಸನೀಕರಣದ ಭಾವ ಅಲ್ಲಲ್ಲಿ ಕಂಡುಬಂದರೂ ನಿಜಕ್ಕೂ ವಸ್ತುಸ್ಥಿತಿಯ ನಿರೂಪಣೆಗೇ ಪ್ರಾಮುಖ್ಯವಿತ್ತು. ಈ ಕಾರ್ಯದಲ್ಲಿ ನ್ಯಾಯನಿಯಮಾವಳಿಗಳ ಏಕೀಕರಣದ ಗುರಿ ಕಾಣದಿದ್ದರೂ ಸ್ವಲ್ಪಮಟ್ಟಿಗೆ ಆ ಬಗ್ಗೆ ಪ್ರಗತಿಯಾಗಿರುವುದು ಗಮನಾರ್ಹ. ಕಾನೂನುಗಳನ್ನು ವಾಸ್ತವರೂಪದಲ್ಲಿ ನಿರೂಪಿಸುವ ಉದ್ದೇಶದಿಂದ, ಜಾರಿಯಲ್ಲಿದ್ದ ಸಾಮಾನ್ಯನಿಯಮಗಳನ್ನು ಸಾಧ್ಯ ವಿದ್ದಷ್ಟು ಪ್ರಾಮಾಣಿಕವಾಗಿ ಪ್ರತಿನಿಧಿಸುವ ಗುರಿಯಿಂದ, ಅಸ್ತಿತ್ವದಲ್ಲಿರುವ ಸಕಲ ಭಿನ್ನ ವಿಚಾರದೃಷ್ಟಿಗಳನ್ನು ಮುಂದಿಟ್ಟು ವಿಶೇಷ ವ್ಯಾಖ್ಯಾನಗಳೊಂದಿಗೆ, ಸಂಬಂಧಪಟ್ಟ್ಟ ಸಾಕ್ಯದಾಖಲೆಗಳ ಪೂರ್ಣವಿವರಗಳನ್ನು ನೀಡುವ ಕ್ರಮವನ್ನು ಅನುಸರಿಸಿತು. ದಂಡಶಾಸನಸಂಹಿತೆಯ ನಿರೂಪಣಕಾರ್ಯದಲ್ಲಿ ಕೇವಲ ನಿಯಮಾವಳಿಗಳನ್ನು ಸರಳವಾಗಿ ನಿರೂಪಿಸುವುದರ ಜೊತೆಗೆ ಬಳಕೆಯಲ್ಲಿದ್ದ ಶಾಸನಪದ್ಧತಿಗಳ ಸುಧಾರಣೆಗಾಗಿ ಆದರ್ಶಮಾದರಿಗಳನ್ನು ಮುಂದಿಡುವ ಪ್ರಯತ್ನವನ್ನೂ ಮಾಡಲಾಯಿತು. ಕಾನೂನುಗಳ ಸರಳ ನಿರೂಪಣಕಾರ್ಯದಲ್ಲಿ ಶಾಸನವಿಧಿಗಳ ಪ್ರಬಲ ಆಧಾರವಿದ್ದಾಗ ಮಾತ್ರ ನವೀಕರಣಕ್ಕೆ ಪ್ರಯತ್ನಿಸಲಾಯಿತು. ಅಮೆರಿಕದ ಕಾಯಿದೆಸಂಸ್ಥೆ ಶಾಸನಗಳ ಸರಳನಿರೂಪಣೆ, ಏಕೀಕರಣ, ಮೌಲಿಕ ಕಾನೂನುಗಳ ಕ್ರೋಡೀಕರಣ-ಮೊದಲಾದ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ದೇಶದ ಪ್ರಗತಿಗೆ ಅಡ್ಡಿಯೆನಿಸುವಂಥ ಪ್ರಾದೇಶಿಕ ನಿಯಮಾವಳಿಗಳನ್ನು ಬದಿಗೊತ್ತಿ ಪರಿಸ್ಥಿತಿಯನ್ನು ಸುಗಮಗೊಳಿಸುವ ಕಾರ್ಯದಲ್ಲೂ ಅಪೂರ್ವ ಸೇವೆಯನ್ನು ಸಲಿಸುತ್ತಿದೆ. (ಎಚ್.ಆರ್.ಡಿ.)