ಅಮೀನ್ ಸಯಾನಿ
ಅಮೀನ್ ಸಯಾನಿ | |
---|---|
Born | |
Nationality | ಭಾರತೀಯ |
Education | Scindia School |
Alma mater | ಸೈಂಟ್ ಕ್ಸೇವಿಯರ್ಸ್ ಕಾಲೇಜು |
Occupation(s) | ಉದ್ಘೋಷಕಾರ, ರೇಡಿಯೋ ಜಾಕಿ |
Years active | 1952–present |
Spouse | ರಮಾ (ನಿಧನ) |
Website | Ameen Sayani |
ಅಮೀನ್ ಸಯಾನಿಯವರು, ಒಬ್ಬ ಸುಪ್ರಸಿದ್ಧ ರೇಡಿಯೋ ಕಾರ್ಯಕ್ರಮ, ಪ್ರಸ್ತುತ-ಕರ್ತರೆಂದು ಹೆಸರುಮಾಡಿದವರು. (ಡಿಸೆಂಬರ್, ೨೧, ೧೯೩೨-ಫೆಬ್ರವರಿ,೨೦, ೨೦೨೪) ಭಾರತವಲ್ಲದೆ ದಕ್ಷಿಣ ಏಷ್ಯಾದಲ್ಲೇ ಒಬ್ಬ ’ಪ್ರಭಾವಿ ಅನೌನ್ಸರ್’ ಎಂದು ಎಲ್ಲರಿಗೂ ಪರಿಚಿತರಾದರು ’ಬಿನಾಕ ಗೀತ್ ಮಾಲ’ ಎಂಬ ಕಾರ್ಯಕ್ರಮ, ಆಗಿನ ರೇಡಿಯೊ ಸಿಲೋನ್ ನಿಂದ ಮೂಡಿಬರುತ್ತಿತ್ತು. ಇಂದಿಗೂ ಅವರ ಮಾತಿನ ಮೋಡಿ ಮಾಸಿಲ್ಲ. ಅವರ ಧ್ವನಿಯನ್ನು ನಕಲು ಮಾಡುವ ಯುವಪ್ರತಿಭೆಗಳಿಗೆ ಕಮ್ಮಿಯಿಲ್ಲ. ರೇಡಿಯೊ ಸಿಲೋನ್ ಆಕಾಶವಾಣಿ ನಿಲಯದಲ್ಲಿದ್ದ ಅನೇಕ ಅನೌಸರ್ ಗಳಲ್ಲಿ ಅಮೀನ್ ಸಯಾನಿಯವರೂ ಒಬ್ಬರಾಗಿದ್ದರು. ಅವರ ಧ್ವನಿಯನ್ನು 'ಮಿಲಿಯನ್ ಗಟ್ಟಲೆ ಜನ' ಕೇಳಿ ಸಂತೋಷಪಡುತ್ತಿದ್ದರು. ಅವರಿಂದಾಗಿ ೧೯೫೦-೬೦ ರ ದಶಕದಲ್ಲಿ, ರೇಡಿಯೊ ಸಿಲೋನ್ ಸ್ಟೇಷನ್ ಹೆಸರುವಾಸಿಯಾಯಿತು. ಅಮೀನ್ ಸಯಾನಿಯವರು, ಅನೇಕ ಚಲನಚಿತ್ರಗಳಲ್ಲಿ ಎಲ್ಲೋ ಒಂದು ಕಡೆ ಇರುತ್ತಿದ್ದರು.
- 'ಭೂತ್ ಬಂಗ್ಲಾ',
- 'ತೀನ್ ದೇವಿಯಾ',
- 'ಬಾಕ್ಸರ್',
- 'ಕತಲ್,'
ಮೇಲಿನ ಚಿತ್ರಗಳಲ್ಲಿ ಅವರ ಪಾತ್ರ ತಮ್ಮ ನಿಜ-ಜೀವನದ್ದೇ ಆಗಿರುತ್ತಿತ್ತು. ಅನೌನ್ಸ್ ಮಾಡುವ ಕೆಲಸ. ಈಗಲೂ 'ರೇಡಿಯೊ ಸಿಲೋನ್' ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರೆ. ಅಮೀನ್ ಸಯಾನಿಯವರ ಕಂಚಿನ ಕಂಠಕ್ಕೆ ಮಾರುಹೋಗದವರೇ ಇರುತ್ತಿರಲಿಲ್ಲ. ೨೦೦೯ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಯಿತು.
ನಿಧನ
[ಬದಲಾಯಿಸಿ]ಅಮೀನ್ ಸಯಾನಿಯವರು ತಮ್ಮ ೯೧ ನೆಯ ವರ್ಷದಲ್ಲಿ ಹೃದಯಾಘಾತದಿಂದ ೨೦, ಫೆಬ್ರವರಿ, ೨೦೨೪ ರಂದು, ನಿಧನರಾದರು. [೧]
ಕೊಂಡಿಗಳು
[ಬದಲಾಯಿಸಿ]^ "Veteran broadcaster Ameen Sayani gets Padma Shri". Thaindian News. 26 January 2009. Retrieved 26 january 2009. ^ "Ameen Sayani’s Geetmala Ki Chhaon Mein". Screen. Retrieved 26 January 2009. ^ Vinay Kumar (26 January 2009). "Kakodkar, Madhavan Nair, Bindra, Nirmala among Padma awardees". The Hindu. Retrieved 26 January 2009.
ಸಂಪರ್ಕ ಹೊಂದಿ
[ಬದಲಾಯಿಸಿ]- Radio Ceylon
- Binaca Geetmala
- List of Binaca Geetmala annual chart toppers
- http://www.mapsofindia.com/who-is-who/news-media/ameen-sayani.html