ಅಮಿರಬಾಯಿ ಕರ್ನಾಟಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅಮೀರಬಾಯಿ ಕರ್ಣಾಟಕಿ
ಜನನಬೀಳಗಿ, ಬಿಜಾಪುರ (ಈಗ ಬಾಗಲಕೋಟೆ), ಕರ್ನಾಟಕ
ಮರಣಮಾರ್ಚ್ 3, 1965(1965-03-03)
ಬಿಜಾಪುರ, ಕರ್ಣಾಟಕ
ಸಂಗೀತ ಶೈಲಿರಂಗಭೂಮಿ, ಸಿನಿಮಾ
ವೃತ್ತಿನಟಿ, ಗಾಯಕಿ
ಸಕ್ರಿಯ ವರ್ಷಗಳು1935–1961

ಅಮಿರಬಾಯಿ ಕರ್ನಾಟಕಿ (ಸನ್ ೧೯೦೬ -ಮಾರ್ಚ್ ೩,,೧೯೬೬)ಯವರು ಹಿನ್ನಲೆಗಾಯಕಿ, ಚಲನಚಿತ್ರ ನಟಿಯರಾಗಿದ್ದರು.ಇವರಿಗೆ ಕನ್ನಡ ಕೋಗಿಲೆ" ಎಂಬ ಬಿರುದಿತ್ತು.ಇವರು ಹಾಡಿದ "ವೈಷ್ಣವ ಜನತೋ" ಹಾಡು ಗಾಂಧೀಜಿ ಯವರ ಅಚ್ಚುಮೆಚ್ಚಿನ ಗೀತೆಯಾಗಿತ್ತು.

ಬದುಕು[ಬದಲಾಯಿಸಿ]

ಅಮಿರಬಾಯಿ ಕರ್ನಾಟಕಿ ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆಯ ಬೀಳಗಿ ಯಲ್ಲಿ ಮದ್ಯಮ ವರ್ಗದ ಒಂದು ಕುಟುಂಬದಲ್ಲಿ ಜನಿಸಿದರು. ಅವರ ಐದು ಜನ ಸಹೋದರಿಯರಲ್ಲಿ ಇವರ ಅಕ್ಕ ಗೌಹರ್ ಬಾಯಿ ಕೂಡಾ ಪ್ರಸಿದ್ಧರಾಗಿದ್ದಾರೆ. ಮೆಟ್ರಿಕುಲೇಶನ್ ನಂತರ ಮುಂಬಯಿ ಸೇರಿದ ಇವರು ಹಿಂದಿ ಚಲನ ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ, ನಟಿಯಾಗಿ ಆ ಕಾಲದಲ್ಲಿ ಪ್ರಸಿದ್ಧರಾದರು.ಮುಂದೆ ಬದ್ರಿ ಕಾಂಚವಾಲ ಎಂಬವರನ್ನು ಮದುವೆಯಾದರು. ೧೯೬೬ ,ಮಾರ್ಚ್ ೩ ರಂದು ಪಾರ್ಶವಾಯುವಿನಿಂದ ಕೊನೆಯುಸಿರೆಳೆದರು.

ವೃತ್ತಿ[ಬದಲಾಯಿಸಿ]

ಮುಂಬೈಯಲ್ಲಿ ಗಾಯಕಿಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮುಂದೆ ಗಾಯಕಿ-ತಾರೆಯಾಗಿ ಬೆಳೆದರು.೧೯೪೩ರಲ್ಲಿ ತಯಾರಾದ ಕಿಸ್ಮತ್ ಎಂಬ ಸಿನೇಮಾ ಇವರಿಗೆ ಖ್ಯಾತಿಯ ಉತ್ತುಂಗವನ್ನು ತೋರಿಸಿತು.೧೯೪೮ರವರೇಗೆ ಇವರು ಖ್ಯಾತಿಯ ಶಿಖರದಲ್ಲಿದ್ದ್ದ ಇವರು ಮುಂದೆ ಗಾಯಕಿಯಾಗಿ, ಚರಿತ್ರ ನಟಿಯಾಗಿ ತನ್ನ ಹಿಂದಿ ಚಿತ್ರರಂಗದ ವೃತ್ತಿ ಬದುಕನ್ನು ಮುಗಿಸಿದರು. ಮುಂದೆ ಗುಜರಾಥಿ, ಮರ್ವಾರಿ ಬಾಷೆಯ ಚಿತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]