ಅಮಾನ್ಸಿಯೊ ಒರ್ಟೆಗಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮಾನ್ಸಿಯೊ ಒರ್ಟೆಗಾ
ಜನನ (1936-03-28) ೨೮ ಮಾರ್ಚ್ ೧೯೩೬ (ವಯಸ್ಸು ೮೮)
ಬಸ್ಡೊಂಗೊ ಡಿ ಅರ್ಬಾಸ್, ಕ್ಯಾಸ್ಟಿಲ್ ಮತ್ತು ಲಿಯಾನ್, ಸ್ಪೇನ್
ವೃತ್ತಿವ್ಯಾಪಾರಿ
Known forಇಂಡಿಟೆಕ್ಸ್ ಗ್ರೂಪ್‌ನ ಸಹ-ಸ್ಥಾಪಕರು
ಸ್ಪೇನ್‌ನ ಅತ್ಯಂತ ಶ್ರೀಮಂತ ವ್ಯಕ್ತಿ
Board member ofಇಂಡಿಟೆಕ್ಸ್
ಡೇಜ್ (COO)
ಸಂಗಾತಿs
  • ರೊಸಾಲಿಯಾ ಮೇರಾ (ವಿವಾಹ 1966; ವಿಚ್ಛೇದನ 1986)
  • ಫ್ಲೋರಾ ಪೆರೆಜ್ ಮಾರ್ಕೋಟ್ (ವಿವಾಹ 2001)
ಮಕ್ಕಳುಸಾಂಡ್ರಾ ಒರ್ಟೆಗಾ ಮೇರಾ ಸೇರಿ ೩ ಜನ
Signature


ಅಮಾನ್ಸಿಯೊ ಒರ್ಟೆಗಾ ಗಾವೊನಾ (ಸ್ಪ್ಯಾನಿಷ್ ಉಚ್ಚಾರಣೆ: [aˈmanθjo oɾˈteɣa ɣaˈona]; ಜನನ ೨೮ ಮಾರ್ಚ್ ೧೯೩೬) ಒಬ್ಬ ಸ್ಪ್ಯಾನಿಷ್ ಬಿಲಿಯನೇರ್ ಉದ್ಯಮಿ.ಅಮಾನ್ಸಿಯೊ ಒರ್ಟೆಗಾ ಅವರು ಇಂಡಿಟೆಕ್ಸ್ ಫ್ಯಾಶನ್ ಗ್ರೂಪ್‌ನ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷರು. ಜಾರಾ ಮತ್ತು ಬರ್ಷ್ಕಾ ಬಟ್ಟೆ ಮತ್ತು ಪರಿಕರಗಳ ಅಂಗಡಿಗಳ ಸರಣಿಗೆ ಹೆಸರುವಾಸಿಯಾಗಿದ್ದಾರೆ.[೧] ನವೆಂಬರ್ ೨೦೨೩ ರ ಹೊತ್ತಿಗೆ, ಒರ್ಟೆಗಾ $೭೩ ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದರು. ಅಮಾನ್ಸಿಯೊ ಒರ್ಟೆಗಾ ಅವರು ಬರ್ನಾರ್ಡ್ ಅರ್ನಾಲ್ಟ್ ಮತ್ತು ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ನಂತರ ಯುರೋಪ್‌ನಲ್ಲಿ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿ. ವಿಶ್ವದ ೧೪ ನೇ ಶ್ರೀಮಂತ ವ್ಯಕ್ತಿ. ೨೦೧೫ ರಲ್ಲಿ ಅಲ್ಪಾವಧಿಗೆ, ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು.ಅವರ ಮೂಲ ಕಂಪನಿಯಾದ ಜಾರಾ ಇಂಡಿಟೆಕ್ಸ್‌ನ ಷೇರುಗಳು ಗರಿಷ್ಠ ಮಟ್ಟಕ್ಕೆ ಏರಿದಾಗ ಅವರ ನಿವ್ವಳ ಮೌಲ್ಯವು $ ೮೦ ಶತಕೋಟಿಗೆ ಏರಿದಾಗ ಬಿಲ್ ಗೇಟ್ಸ್‌ರನ್ನು ಮೀರಿಸಿದರು.[೨]

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ನಾಲ್ವರು ಮಕ್ಕಳಲ್ಲಿ ಕಿರಿಯವರಾದ ಅಮಾನ್ಸಿಯೊ ಒರ್ಟೆಗಾ ಅವರು ಸ್ಪೇನ್‌ನ ಲಿಯೋನ್‌ನ ಬುಸ್ಡೊಂಗೊ ಡಿ ಅರ್ಬಾಸ್‌ನಲ್ಲಿ ಜನಿಸಿದರು. ಅವರು ಆಂಟೋನಿಯೊ ಒರ್ಟೆಗಾ ರೊಡ್ರಿಗಸ್ ಮತ್ತು ಜೋಸೆಫಾ ಗಾವೊನಾ ಹೆರ್ನಾಂಡೆಜ್‌ಗೆ ಜನಿಸಿದರು. ಅವರ ಬಾಲ್ಯವನ್ನು ಗಿಪುಜ್ಕೊವಾದ ಟೊಲೋಸಾದಲ್ಲಿ ಕಳೆದರು.[೩]

ಅಮಾನ್ಸಿಯೊ ಒರ್ಟೆಗಾ ಅವರ ತಂದೆ ರೈಲ್ವೆ ಕೆಲಸಗಾರರಾಗಿದ್ದರು ಆದ್ದರಿಂದ ಅವರು ಶಾಲೆಯನ್ನು ತೊರೆದರು ಮತ್ತು ೧೪ ನೇ ವಯಸ್ಸಿನಲ್ಲಿ ಎ ಕೊರುನಾಗೆ ತೆರಳಿದರು.[೪]

ವೃತ್ತಿ[ಬದಲಾಯಿಸಿ]

೧೯೬೩ ರಲ್ಲಿ, ಅಮಾನ್ಸಿಯೊ ಒರ್ಟೆಗಾ ಅವರು ಕ್ವಿಲ್ಟೆಡ್ ಬಾತ್‌ರೋಬ್‌ಗಳನ್ನು ಮಾರಾಟ ಮಾಡಲು ಕನ್ಫೆಸಿಯನ್ಸ್ ಗೋವಾವನ್ನು ಸ್ಥಾಪಿಸಿದರು.[೫]

೧೯೭೫ ರಲ್ಲಿ, ಅವರು ತಮ್ಮ ಪತ್ನಿ ರೊಸಾಲಿಯಾ ಮೇರಾ ಅವರೊಂದಿಗೆ ತಮ್ಮ ಮೊದಲ ಜರಾ ಅಂಗಡಿಯನ್ನು ತೆರೆದರು.[೬]

೨೦೦೯ ರಲ್ಲಿ, ಜಾರಾ ಇಂಡಿಟೆಕ್ಸ್ ಗುಂಪಿನ (ಇಂಡಸ್ಟ್ರಿಯಾಸ್ ಡಿ ಡಿಸೆನೊ ಟೆಕ್ಸ್ಟೈಲ್ ಸೊಸೈಡಾಡ್ ಅನೋನಿಮಾ) ಭಾಗವಾಗಿತ್ತು. ಅದರಲ್ಲಿ ೫೯.೨೯% ಒರ್ಟೆಗಾ ಅವರು ಹೊಂದಿದ್ದರು.[೭]

೨೦೧೧ ರಲ್ಲಿ, ಒರ್ಟೆಗಾ ಅವರು ಜಾರಾ ಸರಪಳಿಯ ಮೂಲ ಕಂಪನಿಯಾದ ಇಂಡಿಟೆಕ್ಸ್‌ನಿಂದ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಅವರು ಇಂಡಿಟೆಕ್ಸ್ ಉಪಾಧ್ಯಕ್ಷ ಮತ್ತು ಸಿಇಒ ಪಾಬ್ಲೊ ಇಸ್ಲಾ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲು ಹೇಳಿದರು. ೨೦೧೨ ರಲ್ಲಿ ಒರ್ಟೆಗಾ ಅವರು ರೋಮನ್ ಕ್ಯಾಥೋಲಿಕ್ ಪರಿಹಾರ ಸಂಸ್ಥೆಯಾದ ಕ್ಯಾರಿಟಾಸ್ ಇಂಟರ್ನ್ಯಾಷಲಿಸ್‌ಗೆ ಸುಮಾರು €೨೦ ಮಿಲಿಯನ್ ದೇಣಿಗೆ ನೀಡಿದರು.[೮]

ಒರ್ಟೆಗಾ ಅವರು ಮಡ್ರಿಡ್‌ನಲ್ಲಿ ಟೊರೆ ಪಿಕಾಸೊ ಎಂಬ ಕಟ್ಟಡವನ್ನು ಖರೀದಿಸಿದರು. ಅವರು ಫ್ಲಾರಿಡಯಾದ ಮಿಯಾಮಿಯಲ್ಲಿ ಎಪಿಕ್ ರೆಸಿಡೆನ್ಸಸ್ ಮತ್ತು ಹೋಟೆಲ್ ಅನ್ನು ಸಹ ಖರೀದಿಸಿದರು.

ಜುಲೈ ೨೦೧೭ ರಲ್ಲಿ, ಎಇಎಫ್(AEF) ಪ್ರಶಸ್ತಿಗಳ ಎರಡನೇ ಆವೃತ್ತಿಗಾಗಿ, ಸ್ಪ್ಯಾನಿಷ್ ಅಸೋಸಿಯೇಷನ್ ​​​​ಆಫ್ ಫೌಂಡೇಶನ್ಸ್ ೨೦೧೭ ರ ಲೋಕೋಪಕಾರಿ ಇನಿಶಿಯೇಟಿವ್ ವಿಭಾಗದಲ್ಲಿ ಅಮಾನ್ಸಿಯೊ ಒರ್ಟೆಗಾ ಅವರಿಗೆ ಪ್ರಶಸ್ತಿಯನ್ನು ನೀಡಿತು.[೯]

ಒರ್ಟೆಗಾ ಅವರು ಪಾಂಟೆಗಾಡಿಯಾದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಅವರ ಪೋರ್ಟ್‌ಫೋಲಿಯೊದಲ್ಲಿನ ರಿಯಲ್ ಎಸ್ಟೇಟ್ ಸ್ವತ್ತುಗಳು ಮ್ಯಾನ್‌ಹ್ಯಾಟನ್‌ನ ಹಾಗ್‌ವುಟ್ ಕಟ್ಟಡ ಮತ್ತು ಆಗ್ನೇಯ ಹಣಕಾಸು ಕೇಂದ್ರವನ್ನು ಒಳಗೊಂಡಿವೆ. ವಾಷಿಂಗ್ಟನ್‌ನ ಕೇಂದ್ರ ವ್ಯಾಪಾರ ಜಿಲ್ಲೆಯಲ್ಲಿ ಕಟ್ಟಡ ಮತ್ತು ಎರಡು ಸಿಯಾಟಲ್ ಕಚೇರಿ ಕಟ್ಟಡಗಳನ್ನು ಖರೀದಿಸಿದ ನಂತರ ೨೦೧೯ ರಲ್ಲಿ, ಕಂಪನಿಯು ಡೌನ್‌ಟೌನ್ ಚಿಕಾಗೋ ಹೋಟೆಲ್‌ಗಾಗಿ $೭೨.೫ ಮಿಲಿಯನ್ ಒಪ್ಪಂದವನ್ನು ಪೂರ್ಣಗೊಳಿಸಿತು.[೧೦][೧೧]

ನಿವ್ವಳ ಆದಾಯ[ಬದಲಾಯಿಸಿ]

೨೦೨೧ ರಲ್ಲಿ ಅಮಾನ್ಸಿಯೊ ಒರ್ಟೆಗಾ ಅವರ ಸಂಪತ್ತು ಸುಮಾರು ೭೩.೧ ಬಿಲಿಯನ್ ಯುರೋಗಳು.

ಒರ್ಟೆಗಾ ಅವರು ಪ್ರಸ್ತುತ ಇಂಡಿಟೆಕ್ಸ್‌ನ ಅತಿದೊಡ್ಡ ಷೇರುದಾರರಾಗಿದ್ದಾರೆ. ಸುಮಾರು ೬೦% ರಷ್ಟು ಷೇರು.[೧೨][೧೩]

ರಿಯಲ್ ಎಸ್ಟೇಟ್ ಸ್ವತ್ತುಗಳಿಗೆ ಸಂಬಂಧಿಸಿದಂತೆ, ರಿಯಲ್ ಎಸ್ಟೇಟ್‌ಗಳು ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾದಲ್ಲಿ ಕೇಂದ್ರೀಕೃತವಾಗಿದೆ. ಇದು ಎರಡೂ ನಗರಗಳ ಮುಖ್ಯ ವ್ಯಾಪಾರ ಬೀದಿಗಳ ಮೇಲೆ ನೆಲೆಗೊಂಡಿದೆ. ಅಂತರಾಷ್ಟ್ರೀಯವಾಗಿ, ಅವರು ಇತರ ಐದು ಪ್ರಮುಖ ಯುರೋಪಿಯನ್ ರಾಜಧಾನಿಗಳಲ್ಲಿ (ಪ್ಯಾರಿಸ್, ಬರ್ಲಿನ್, ರೋಮ್, ಲಿಸ್ಬನ್ ಮತ್ತು ಲಂಡನ್) ಆಸ್ತಿಗಳನ್ನು ಹೊಂದಿದ್ದಾರೆ.

ಡಿಸೆಂಬರ್ ೨೦೧೯ ರಲ್ಲಿ, ಪಾಂಟೆಗಾಡಿಯಾ ೨೮೧.೬೪ ಮಿಲಿಯನ್ ಯುರೋಗಳಿಗೆ ಶಕ್ತಿ ಕಂಪನಿ ಎನಾಗಾಸ್‌ನ ೫% ಅನ್ನು ಸ್ವಾಧೀನಪಡಿಸಿಕೊಂಡಿತು. ಜುಲೈ ೨೦೨೧ ರಲ್ಲಿ, ಇದು ಅದೇ ಶೇಕಡಾವಾರು ಶಕ್ತಿಯ ಕಂಪನಿಯಾದ ರೆಡ್ ಎಲೆಕ್ಟ್ರಿಕಾ ಮತ್ತು ೧೨% ರಷ್ಟು ರೆಡೆಸ್ ಎನರ್ಜೆಟಿಕಾಸ್ ನ್ಯಾಸಿಯೊನೈಸ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಎಲೆಕ್ಟ್ರಿಕ್ ಗ್ರಿಡ್‌ಗಳ ನಿರ್ವಾಹಕರನ್ನು ಸ್ವಾಧೀನಪಡಿಸಿಕೊಂಡಿತು.[೧೪]

ವೈಯಕ್ತಿಕ ಜೀವನ[ಬದಲಾಯಿಸಿ]

೧೯೬೬ ರಲ್ಲಿ ಅಮಾನ್ಸಿಯೊ ಒರ್ಟೆಗಾ ಗಾವೊನಾ ಅವರು ರೊಸಾಲಿಯಾ ಮೇರಾ ಗೊಯೆನೆಚಿಯಾ ಅವರನ್ನು ವಿವಾಹವಾದರು. ಅವರಿಬ್ಬರಿಗೆ ಮಾರ್ಕೋಸ್ ಮತ್ತು ಸಾಂಡ್ರಾ ಒರ್ಟೆಗಾ ಮೇರಾ ಎಂಬ ಇಬ್ಬರು ಮಕ್ಕಳಿದ್ದರು. ೧೯೮೬ ರಲ್ಲಿ ಒರ್ಟೆಗಾ ಮತ್ತು ಮೇರಾ ಅವರು ವಿಚ್ಛೇದನ ಪಡೆದರು. ಆಗಸ್ಟ್ ೨೦೧೩ ರಲ್ಲಿ ತಮ್ಮ ೬೯ ನೇ ವಯಸ್ಸಿನಲ್ಲಿ ಮೇರಾ ಅವರು ನಿಧನರಾದರು. ೨೦೦೧ ರಲ್ಲಿ ಒರ್ಟೆಗಾ ಅವರು ತಮ್ಮ ಎರಡನೇ ಪತ್ನಿಯಾಗಿ ಫ್ಲೋರಾ ಪೆರೆಜ್ ಮಾರ್ಕೋಟ್ ಅವರನ್ನು ವಿವಾಹವಾದರು. ಅವರಿಬ್ಬರಿಗೆ ೧೯೮೪ ರಲ್ಲಿ ಮಾರ್ಟಾ ಒರ್ಟೆಗಾ ಪೆರೆಜ್ ಎಂಬ ಮಗಳು ಜನಿಸಿದರು.[೧೫] ೨೦೧೭ ರ ಹೊತ್ತಿಗೆ, ಒರ್ಟೆಗಾ ಅವರು ದೊಡ್ಡ ರಿಯಲ್ ಎಸ್ಟೇಟ್ ಬಂಡವಾಳವನ್ನು ಹೊಂದಿದ್ದರು. ಅವರು ಹೆಚ್ಚಾಗಿ ತಮ್ಮ ಪತ್ನಿಯೊಂದಿಗೆ ಸ್ಪೇನ್‌ನ ಎ ಕೊರುನಾದಲ್ಲಿನ ಅವರ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು.[೧೬]

ಅಮಾನ್ಸಿಯೊ ಒರ್ಟೆಗಾ ಅವರು "ಡ್ರಿಜ್ಲ್" ಮತ್ತು "ವಲೋರಿಯಾ ಬಿ", ಜೊತೆಗೆ ಗಲ್ಫ್ಸ್ಟ್ರೀಮ್ G650 ಜೆಟ್ ಎಂಬ ಎರಡು ವಿಹಾರ ನೌಕೆಗಳನ್ನು ಹೊಂದಿದ್ದಾರೆ.[೧೭][೧೮]

ಉಲ್ಲೇಖಗಳು[ಬದಲಾಯಿಸಿ]

  1. "Amancio Ortega". Forbes (in ಇಂಗ್ಲಿಷ್). Retrieved 2024-04-11.
  2. Warren, Katie. "Meet Amancio Ortega, the fiercely private Zara founder who's worth $62 billion and owns properties in Madrid, London, and New York City". Business Insider. Archived from the original on 22 October 2019. Retrieved 2019-10-22.
  3. Martínez, David (25 October 2012). Zara: Visión y estrategia de Amancio Ortega. Penguin Random House Grupo Editorial España. p. 10. ISBN 9788415431473.[ಶಾಶ್ವತವಾಗಿ ಮಡಿದ ಕೊಂಡಿ]
  4. Walt, Vivienne (8 January 2013). "Meet Amancio Ortega: The third-richest man in the world". Cable News Network. Time Warner Company. Archived from the original on 18 February 2013. Retrieved 20 February 2013.
  5. Alonso, Ana Polo; Press, Europa (2022-03-28). "Hoy cumple 86 años Amancio Ortega, el hombre que juró que no volvería a pasar hambre". El Independiente (in ಸ್ಪ್ಯಾನಿಷ್). Retrieved 2022-04-26.
  6. Dennys, Harriet (16 August 2013). "Zara founder Rosalia Mera's fast-fashion legacy to the British high street". The Daily Telegraph. London. Archived from the original on 16 August 2013. Retrieved 14 July 2019.
  7. "Inditex Group Annual Report 2009" (PDF). Inditex Group. Archived from the original (PDF) on 2 June 2012. Retrieved 26 May 2014.
  8. "Amancio Ortega Foundation donates 20 million euros to charity". Thinkspain.com. 25 October 2012. Archived from the original on 16 July 2017. Retrieved 14 July 2013.
  9. "Amancio Ortega, Fundación Accenture y Fundación Recover, premiados por su labor filantrópica". ABC (in ಸ್ಪ್ಯಾನಿಷ್). Vocento. 17 July 2017. Archived from the original on 18 July 2017. Retrieved 17 July 2017.
  10. Dombey, Daniel (12 March 2020). "Inditex founder has a multibillion-euro property bet". Financial Times. Retrieved 2020-12-04.
  11. "Zara Founder Unveils $17.2 Billion Global Real Estate Empire". Bloomberg.com (in ಇಂಗ್ಲಿಷ್). 2020-07-07. Retrieved 2020-12-04.
  12. Rosique, Carmen (25 de agosto de 2012), «Los dueños de las empresas del Ibex.»
  13. Grupo Inditex
  14. "=Amancio Ortega compra un 12% del operador de la red eléctrica portuguesa (REN) y se convierte en su segundo mayor accionista". elmundo.es. 2021-07-30.
  15. Dowsett, Sonya. "Exclusive: Zara owner Ortega shields Inditex stake to maintain..." U.S. (in ಅಮೆರಿಕನ್ ಇಂಗ್ಲಿಷ್). Archived from the original on 17 August 2018. Retrieved 2018-08-17.
  16. "Meet the reclusive Spanish billionaire who just beat out Bill Gates to become the richest person in the world" Archived 22 June 2018 ವೇಬ್ಯಾಕ್ ಮೆಷಿನ್ ನಲ್ಲಿ., Business Insider, Kate Taylor and Will Martin, August 30, 2017
  17. "Amancio Ortega | His Crazy $80,000,000 DRIZZLE Yacht | VALORIA B | SuperYachtFan". Archived from the original on 16 January 2020. Retrieved 15 July 2020.
  18. "Amancio Ortega, Loves to Take Drizzle Megayacht Down the Adriatic - the Market Herald". 6 January 2020. Archived from the original on 30 March 2020. Retrieved 15 July 2020.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Business positions
New title President of Inditex
1985–2011
ಉತ್ತರಾಧಿಕಾರಿ
Pablo Isla