ಸಿರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಭಿಧಮನಿ ಇಂದ ಪುನರ್ನಿರ್ದೇಶಿತ)
ಸಿರೆಯ ರಚನೆ

ಸಿರೆಗಳು ಹೃದಯದ ಕಡೆಗೆ ರಕ್ತವನ್ನು ಸಾಗಿಸುವ ರಕ್ತನಾಳಗಳು. ಬಹುತೇಕ ಸಿರೆಗಳು ಅಂಗಾಂಶಗಳಿಂದ ಹೃದಯಕ್ಕೆ ಆಮ್ಲಜನಕ ರಹಿತ ರಕ್ತವನ್ನು (ಮಲಿನ ರಕ್ತ ನಾಳಗಳು- ವೈನ್ಸ್)ಸಾಗಿಸುತ್ತವೆ; ಶ್ವಾಸಕೋಶದ ಸಿರೆ ಮತ್ತು ಹೊಕ್ಕುಳಿನ ಸಿರೆಗಳು ಅಪವಾದಗಳಾಗಿವೆ, ಇವೆರಡೂ ಹೃದಯಕ್ಕೆ ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುತ್ತವೆ. ಸಿರೆಗಳಿಗೆ ತದ್ವಿರುದ್ಧವಾಗಿ, ಅಪಧಮನಿಗಳು (ಶುದ್ಧರಕ್ತನಾಳಗಳು -ಆರ್ಟರಿ) ಹೃದಯದಿಂದ ಬೇರೆ ಅಂಗಾಂಗಳ ಕಡೆಗೆ ರಕ್ತವನ್ನು ಸಾಗಿಸುತ್ತವೆ.

ಲಕ್ಷಣ[ಬದಲಾಯಿಸಿ]

ಸಿರೆಗಳು ಅಪಧಮನಿಗಳಿಗಿಂತ ಕಡಿಮೆ ಮಾಂಸಲವಾಗಿರುತ್ತವೆ ಮತ್ತು ಹಲವುವೇಳೆ ಚರ್ಮಕ್ಕೆ ಹೆಚ್ಚು ಹತ್ತಿರವಿರುತ್ತವೆ. ಬಹುತೇಕ ಸಿರೆಗಳಲ್ಲಿ ಹಿಂಹರಿವನ್ನು ತಡೆಗಟ್ಟಲು ಕವಾಟಗಳಿರುತ್ತವೆ.

ಸಿರೆಗಳು ರಕ್ತವನ್ನು ವಾಪಸ್ಸು ಹೃದಯಕ್ಕೆ ಸಾಗಿಸುವ ನಾಳಗಳಾಗಿ ದೇಹದಾದ್ಯಂತ ಇವೆ. ಬಾಹ್ಯxಆಳದ, ಶ್ವಾಸಕೋಶದxಶ್ವಾಸಕೋಶೇತರ, ಮತ್ತು ದೊಡ್ಡxಸಣ್ಣ ಸೇರಿದಂತೆ, ಸಿರೆಗಳನ್ನು ಅನೇಕ ರೀತಿಗಳಲ್ಲಿ ವರ್ಗೀಕರಿಸಲಾಗುತ್ತದೆ. ಇವು ದೇಹದ ಜೀವಕೋಶಗಳಲ್ಲಿರುವ ಕಶ್ಮಲ, ಇಂಗಾಲಾಮ್ಲಗಳನ್ನು ಹೀರಿದ ರಕ್ತವನ್ನು ಹೃದಯಕ್ಕೂ ಅಲ್ಲಿಂದ ಶ್ವಾಸಕೋಶಕ್ಕೂ ಸಾಗಿಸುವುವು.

ವಿಧಗಳು[ಬದಲಾಯಿಸಿ]

  • ಬಾಹ್ಯ ಸಿರೆಗಳು ದೇಹದ ಮೇಲ್ಮೈಗೆ ಹೆಚ್ಚು ಹತ್ತಿರವಿರುತ್ತವೆ, ಮತ್ತು ಅನುರೂಪ ಅಪಧಮನಿಗಳನ್ನು ಹೊಂದಿರುವುದಿಲ್ಲ.
  • ಆಳದ ಸಿರೆಗಳು ಶರೀರದ ಹೆಚ್ಚು ಆಳದಲ್ಲಿರುತ್ತವೆ ಮತ್ತು ಅನುರೂಪ ಅಪಧಮನಿಗಳನ್ನು ಹೊಂದಿರುತ್ತವೆ.
  • ರವಾನೆಗಾರ ಸಿರೆಗಳು ಬಾಹ್ಯ ಸಿರೆಗಳಿಂದ ಆಳದ ಸಿರೆಗಳಿಗೆ ರಕ್ತವನ್ನು ಬರಿದುಮಾಡುತ್ತವೆ.[೧] ಇವುಗಳನ್ನು ಸಾಮಾನ್ಯವಾಗಿ ಕೆಳಗಿನ ಅವಯವಗಳು ಮತ್ತು ಪಾದದ ಸಂದರ್ಭದಲ್ಲಿ ಸೂಚಿಸಲಾಗುತ್ತದೆ.
  • ಸಂವಹನ ಸಿರೆಗಳು ಬಾಹ್ಯ ಸಿರೆಗಳಿಂದ ಆಳದ ಸಿರೆಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸಿರೆಗಳು.
  • ಶ್ವಾಸಕೋಶದ ಸಿರೆಗಳು ಶ್ವಾಸಕೋಶದಿಂದ ಹೃದಯಕ್ಕೆ ಆಮ್ಲಜನಕಯುಕ್ತ ರಕ್ತ ವನ್ನು ಒಯ್ಯುವ ಸಿರೆಗಳ ಸಮೂಹ.
  • ಶ್ವಾಸಕೋಶೇತರ ಸಿರೆಗಳು ದೇಹದ ಅಂಗಾಂಶಗಳನ್ನು ಬರಿದುಮಾಡಿ ಹೃದಯಕ್ಕೆ ಆಮ್ಲಜನಕರಹಿತ ರಕ್ತವನ್ನು ರವಾನಿಸುತ್ತವೆ.

ವಿಪರ್ಯಯ (ಹಿಮ್ಮುಖವಾಗಿ) ದಿಕ್ಕಿನಲ್ಲಿ ರಕ್ತ ಹರಿಯುವುದನ್ನು ತಡೆಗಟ್ಟಲು ಬಹುತೇಕ ಸಿರೆಗಳು ಕವಾಟಗಳನ್ನು ಅಳವಡಿಸಿಕೊಂಡಿರುತ್ತವೆ.

ಸಿರೆಯ (ಮಲಿನ ರಕ್ತನಾಳದ) ಬಣ್ಣ[ಬದಲಾಯಿಸಿ]

ಸಿರೆಗಳು ಅರೆಪಾರದರ್ಶಕವಾಗಿರುತ್ತವೆ, ಹಾಗಾಗಿ ಒಂದು ಜೀವಿಯ ಹೊರಗಿನಿಂದ ಕಾಣುವ ಸಿರೆಯ ಬಣ್ಣ ದೊಡ್ಡ ಮಟ್ಟಿಗೆ ಸಿರೆಯಲ್ಲಿನ ರಕ್ತದ ಬಣ್ಣದಿಂದ ನಿರ್ಧರಿತವಾಗಿರುತ್ತದೆ. ಅದರ ಕಡಿಮೆ ಆಮ್ಲಜನಕ ಪ್ರಮಾಣದ ಕಾರಣ ಇದು ಸಾಮಾನ್ಯವಾಗಿ ದಟ್ಟ ಕೆಂಪಾಗಿರುತ್ತದೆ. ಸಿರೆಗಳು ನೀಲಿಯಾಗಿ ಕಾಣುತ್ತವೆ ಏಕೆಂದರೆ ಚರ್ಮದಡಿಯ ಕೊಬ್ಬು ಕಡಿಮೆ ಆವರ್ತದ ಬೆಳಕನ್ನು ಹೀರಿಕೊಂಡು ಕೇವಲ ಹೆಚ್ಚು ಶಕ್ತಿಯ ನೀಲಿ ತರಂಗಾಂತರಗಳಿಗೆ ಸಿರೆಗಳ ಮೂಲಕ ಭೇದಿಸಿಹೋಗಿ ವಾಪಸು ವೀಕ್ಷಕನಿಗೆ ಪ್ರತಿಫಲನವಾಗಲು ಅವಕಾಶ ಮಾಡಿಕೊಡುತ್ತದೆ.

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Albert, consultants Daniel (2012). Dorland's illustrated medical dictionary (32nd ed.). Philadelphia, PA: Saunders/Elsevier. p. 2042. ISBN 978-1-4160-6257-8.
"https://kn.wikipedia.org/w/index.php?title=ಸಿರೆ&oldid=1163858" ಇಂದ ಪಡೆಯಲ್ಪಟ್ಟಿದೆ