ವಾಮಾಚಾರ
ಗೋಚರ
(ಅಭಿಚಾರ ಇಂದ ಪುನರ್ನಿರ್ದೇಶಿತ)
ವಾಮಾಚಾರ ಪ್ರಪಂಚದ ಅತಿ ಪುರಾತನ ವಿದ್ಯೆಗಳಲ್ಲೊಂದು.ಕ್ಷುದ್ರಶಕ್ತಿಗಳನ್ನು ಆಹ್ವಾನಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದೆಂದು ಹೇಳಲಾಗುವ ಕಲೆಯಿದು.ಹಿಂದೂ ಧರ್ಮದ ಬಹುಮುಖ್ಯ ಅಂಗವಾದ ವೇದಗಳ ಪೈಕಿ ಅಥರ್ವಣವೇದದಲ್ಲಿ ವಾಮಾಚಾರ ಕುರಿತಂತೆ ಆಳವಾಗಿ ವಿವರಿಸಲಾಗಿದೆ.ವಶೀಕರಣ,ಕಣ್ಕಟ್ಟು ವಿದ್ಯೆ,ಮಾಟ ವಿದ್ಯೆ ಮತ್ತು ಸಂಮೋಹನ ಕೂಡ ವಾಮಾಚಾರದ ಇತರೇ ಅಂಗಗಳಾಗಿವೆ. ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯ,ಕುತೂಹಲಗಳನ್ನು ಕಾಣಬಹುದಾಗಿದೆ.
ವಾಮಾಚಾರದ ಉದಾಹರಣೆ ಮತ್ತು ಪರಿಣಾಮಗಳು
[ಬದಲಾಯಿಸಿ]- ಯಾದಗಿರಿ: ಶಹಾಪುರ ತಾಲ್ಲೂಕಿನ ಬೂದಿನಾಳ ಗ್ರಾಮದಲ್ಲಿ ಬಸಯ್ಯ ಸ್ವಾಮಿ ಎಂಬವರ ಪುತ್ರಿ ಅಮೃತಾಳ (೧೮ ತಿಂಗಳು) ಶವ ಸೋಮವಾರ ರಾತ್ರಿ ಅವರ ಮನೆಯ ಹಿಂಭಾಗದ ಬಾವಿಯಲ್ಲಿ ಪತ್ತೆಯಾಗಿದೆ.
- ‘ಮಗುವಿನ ಶವ ಸಿಕ್ಕ ಬಾವಿಯ ಬಳಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ನಿಧಿ ಆಸೆಗೆ ಮಗುವನ್ನು ಬಲಿ ನೀಡಲಾಗಿದೆ’ ಎಂದು ಪೋಷಕರು ಆರೋಪಿಸಿದ್ದಾರೆ. ಬಸಯ್ಯ ಸ್ವಾಮಿ ಮತ್ತು ಲಕ್ಷ್ಮಿ ದಂಪತಿಯ ಇಬ್ಬರು ಪುತ್ರಿಯರ ಪೈಕಿ ಅಮೃತಾ ಎರಡನೆಯವಳು.
- ‘ಸೋಮವಾರ ರಾತ್ರಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗು ದಿಢೀರನೇ ನಾಪತ್ತೆಯಾಗಿದೆ. ತಾಯಿ ಲಕ್ಷ್ಮಿಗೆ ಬೆಳಗಿನ ಜಾವ ಮೂರು ಗಂಟೆ ವೇಳೆ ಎಚ್ಚರವಾದಾಗ ಮಗು ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮನೆಯ ಎಲ್ಲ ಸದಸ್ಯರು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ, ಮಗು ಮನೆಯ ಹಿಂಭಾಗದ ಪಾಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದೆ’ ಎಂದು ತಿಳಿಸಲಾಗಿದೆ.
- ನಿಧಿ ಆಸೆಗೆ ಬಲಿ: ಪೋಷಕರು ಮಗುವನ್ನು ಹುಡುಕುವ ವೇಳೆ ಮನೆಯ ಹಿಂಭಾಗದಲ್ಲಿ ಅರಿಷಿಣ, ಕುಂಕುಮ, ಅಕ್ಕಿ ಸೇರಿದಂತೆ ವಾಮಾಚಾರಕ್ಕೆ ಬಳಸುವ ಒಂದಿಷ್ಟು ವಸ್ತುಗಳು ಸಿಕ್ಕಿವೆ. ತಮ್ಮ ಮಗುವನ್ನು ನಿಧಿಯ ಆಸೆಗೆ ಬಲಿ ನೀಡಿರಬಹುದು ಎಂದು ಮಗುವಿನ ಅಜ್ಜ ರಾಚಯ್ಯನವರ ಅಭಿಪ್ರಾಯ. [೧]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖ
[ಬದಲಾಯಿಸಿ]