ಅಬ್ಬಯ್ಯ ನಾಯ್ಡು
ಎ.ಎಲ್.ಅಬ್ಬಾಯಿ ಕನ್ನಡ ಚಿತ್ರರಂಗದ ಒಬ್ಬ ವಿಶಿಷ್ಠ ನಿರ್ಮಾಪಕರಾಗಿದ್ದಂಥಹವರು. ಒಬ್ಬ ಗಾರೆ ಕೆಲಸಗಾರನಾಗಿ ವೃತ್ತಿ ಮಾಡುತ್ತಿದ್ದಂತಹ ವ್ಯಕ್ತಿ ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕರಾಗಿ ಬೆಳೆದಿದ್ದು ,ಅನ್ನ ನೀಡಿ ಬೆಳೆಸಿದ್ದ ತಮ್ಮ ವೃತ್ತಿಯ ಉಪಕರಣವಾದ ಗಾರೆ ಕರಣೆಯನ್ನ ತಮ್ಮ ಚಿತ್ರಲಾಂಛನವಾಗಿ ಮಾಡಿಕೊಂಡು ಮಧು ಆರ್ಟ್ ಫಿಲಂಸ್ ಲಾಂಛನದಿ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಅನೇಕ ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸಿ, ನಂತರ ಬೆಂಗಳೂರಿನ ಚಿಕ್ಕಕಲ್ಲಸಂದ್ರದಲ್ಲಿ ಅಬ್ಬಯ್ಯನಾಯ್ದ್ಡು ಸ್ಟುದಿಯೊ ನಿರ್ಮಿಸಿದನ್ಥಹ ಧೀಮಂಥ ಇವರು. ಮೂಲ ಆಂಧ್ರಪ್ರದೇಶದವರಾದರೂ ಅನ್ನ ಕೊಟ್ಟ ಕರ್ನಾಟಕದ, ಕನ್ನಡದ ಮೇಲಿನ ಇವರ ಪ್ರೇಮ ಇವರ ಚಿತ್ರಗಳಲ್ಲಿ ಎದ್ದು ಕಾಣುತಿತ್ತು. ಇವರು ಬೆಳೆದು ಬಂದಂತಹ ಬಡತನ, ಅವರ ಬವಣೆ, ಕಾರ್ಮಿಕನಾಗಿ ಕಂಡುಂಡ ನೋವು ಇವರ ಚಿತ್ರಗಳ ಜೀವಾಳವಾಗಿ ಹೆಣ್ಮಕ್ಕಳನ್ನು ಚುಂಬಕದಂತೆ ಸೆಳೆಯುತ್ತಿದ್ದವು. ಎ.ಎಲ್.ಅಬ್ಬಾಯಿ ನಾಯ್ಡು "ಮಧು ಆರ್ಟ್ಸ್ ಫಿಲಂ" ಸಂಸ್ಥೆ ಯನ್ನು ಸ್ತಾಪಿಸಿದ ನಾಯ್ಡುರವರು "ಹೂವು ಮುಳ್ಳು" ಎಂಬ ಡಕಾಯಿತರ ಚಿತ್ರವನ್ನು ನಿರ್ಮಿಸಿ ಚಿತ್ರರಂಗಕ್ಕೆ ಬಂದರು.ಸಣ್ಣ ಪುಟ್ಟ ಪಾತ್ರಗಳಲ್ಲಿಯೇ ಕಾಣಿಸಿ ಕೊಳ್ಳುತಿದ್ದ ಇವರು ಆ ಕಾಲಕ್ಕೆ ಟ್ರೆಂಡ್ ಎನಿಸಿದ್ದ ಡಕಾಯಿತರು ಪರಿವರ್ತನೆಗೊಂಡು ದೇಶಭಕ್ತರಾಗುವ "ಮಾತೃ ಭೂಮಿ" ಚಿತ್ರ ನಿರ್ಮಿಸಿದ ನಂತರ ರಾಜ್ರವರು ನಾಯಕರಾಗಿದ್ದ ಸಲೀಂ-ಜಾವೇದ್ ಜೋಡಿ ರಚಿಸಿದ ಕತೆಯನ್ನು ಆಧರಿಸಿ ಅದ್ದೂರಿ ಎನಿಸಿದ "ರಾಜಾ ನನ್ನ ರಾಜ " ಚಿತ್ರವನ್ನು ರೂಪಿಸಿದರು.ಅನಂತರ "ಚೆಲ್ಲಿದ ರಕ್ತ "ದಲ್ಲಿ ಡಕಾಯಿತರ ನಾಯಕಯನ್ನೇ ಮುಂದುವರೆಸಿದ ನಾಯ್ಡುರವರು "ಸೀತಾರಾಮು"ನಿರ್ಮಿಸಿ ಶಂಕರನಾಗ್ ಅವರಿಗೆ ಕಮರ್ಷಿಯಲ್ ಚಿತ್ರಗಳಲ್ಲಿ ಬ್ರೇಕ್ ನೀಡಿದರು.ಯಾವಾಗ "ತಾಯಿಯ ಮಡಿಲಲ್ಲಿ' ಅಭೂತಪೂರ್ವ ಯಶಸ್ಸು ಕಂಡ ನಂತರ ಅಬ್ಬಾಯಿ ಅವರ ಬತ್ತಳಿಕೆಯಿಂದ "ತಾಯಿ"ತಾಳಿ"ಕರಳು"ಕುಂಕುಮ"ತೊಟ್ಟಿಲು" ಮುಂತಾದ ಗೋಳಿನ ಚಿತ್ರ ಪರಂಪರೆಯೊಂದು ಕನ್ನಡದಲ್ಲಿ ಆರಂಭವಾಯಿತು.ಸಾಮಾನ್ಯ ಪ್ರೇಕ್ಷಕನಿಗೆ ರಂಜನೆಯಲ್ಲದೆ ,ಸಾಮಾಜಿಕ ಸಂದೇಶವನ್ನು ರವಾನಿಸುವ ದ್ಯೇಯ ಅವರದಾಗಿತ್ತು.ನೊಂದವರ,ಕಾರ್ಮಿಕರ ,ಅಸಹಾಯಕರ ನೋವಿನ ಚಿತ್ರಣದ ಮೂಲಕ ರಂಜನೆಯನ್ನು ಉಣಬಡಿಸಿದ ಅಬ್ಬಾಯಿ ನಾಯ್ಡು ಅವರ ಯಶಸ್ಸು ಕನ್ನಡ ಚಿತ್ರರಂಗದ ಬೆರಗಿನ ಸಂಗತಿಗಳಲ್ಲೊಂದು."ನಮನ"