ಅಪೂರ್ವಿ ಚಾಂಡೇಲಾ
ವೈಯುಕ್ತಿಕ ಮಾಹಿತಿ | |||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | ||||||||||||||||||||||||||||||||||||||||||||||
ಜನನ | ಜೈಪುರ, ರಾಜಸ್ಥಾನ, ಭಾರತ | ೪ ಜನವರಿ ೧೯೯೩||||||||||||||||||||||||||||||||||||||||||||||
ಎತ್ತರ | 1.54 m (5 ft 1 in) | ||||||||||||||||||||||||||||||||||||||||||||||
ತೂಕ | 52 kg (115 lb) | ||||||||||||||||||||||||||||||||||||||||||||||
Sport | |||||||||||||||||||||||||||||||||||||||||||||||
ದೇಶ | ಭಾರತ | ||||||||||||||||||||||||||||||||||||||||||||||
ಕ್ರೀಡೆ | ಶೂಟಿಂಗ್ | ||||||||||||||||||||||||||||||||||||||||||||||
ಸ್ಪರ್ಧೆಗಳು(ಗಳು) | 10 ಮೀಟರ್ ಏರ್ ರೈಫಲ್ | ||||||||||||||||||||||||||||||||||||||||||||||
ಪದಕ ದಾಖಲೆ
|
ಅಪೂರ್ವಿ ಸಿಂಗ್ ಚಾಂಡೇಲಾ (ಜನನ ೪ ಜನವರಿ ೧೯೯೩) ಭಾರತೀಯ ಕ್ರೀಡಾ ಶೂಟರ್ ಆಗಿದ್ದು, ಅವರು ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾರೆ. ಅವರು ಹೊಸದಿಲ್ಲಿಯಲ್ಲಿ ನಡೆದ ೨೦೧೮ರ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ಚಾಂಡೇಲಾರವರು ಜೈಪುರದಲ್ಲಿ ಜನಿಸಿದರು.[೨] ಆಕೆಯ ತಂದೆ ಕುಲದೀಪ್ ಸಿಂಗ್ ಚಂಡೇಲಾ[೩] ಮತ್ತು ತಾಯಿ ಬಿಂದು ರಾಥೋಡ್.[೪] ಜೈಪುರದ ಮಾಯೋ ಬಾಲಕಿಯರ ಶಾಲೆ ಅಜ್ಮೀರ್ ಮತ್ತು ಮಹಾರಾಣಿ ಗಾಯತ್ರಿ ದೇವಿ ಬಾಲಕಿಯರ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪಡೆದರು. ದೆಹಲಿ ವಿಶ್ವವಿದ್ಯಾಲಯದ ಮೇರಿ ಕಾಲೇಜಿನಿಂದ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.
ವೃತ್ತಿ
[ಬದಲಾಯಿಸಿ]೨೦೧೨ ರಲ್ಲಿ, ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಡೇಲಾರವರು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.[೫][೬] ೨೦೧೪ ರಲ್ಲಿ, ಹೇಗ್‌ನಲ್ಲಿ ನಡೆದ ಇಂಟರ್‌ಶೂಟ್ ಚಾಂಪಿಯನ್‌ಶಿಪ್‌ನಲ್ಲಿ ಅವರು ನಾಲ್ಕು ಪದಕಗಳನ್ನು ಗೆದ್ದರು. ಇದರಲ್ಲಿ ಎರಡು ವೈಯಕ್ತಿಕ ಮತ್ತು ಎರಡು ತಂಡದ ವಿಭಾಗದಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದರು.[೭] ಅದೇ ವರ್ಷದಲ್ಲಿ, ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವರು, ಫೈನಲ್‌ನಲ್ಲಿ 206.7 ಅಂಕಗಳನ್ನು ಗಳಿಸಿ, ಹೊಸ ದಾಖಲೆಯನ್ನು ಸೃಷ್ಟಿಸಿದರು.[೮]
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಾಂಡೇಲಾ ೨೦೧೬ ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.[೯] ಅಲ್ಲಿ ಅವರು, ಅರ್ಹತಾ ಸುತ್ತಿನಲ್ಲಿ ೫೧ ಸ್ಪರ್ಧಿಗಳಲ್ಲಿ ೩೪ನೇ ಸ್ಥಾನ ಪಡೆದರು.[೧೦]
೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ, ಅವರು ರವಿ ಕುಮಾರ್ ಅವರೊಂದಿಗೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಸ್ಪರ್ಧೆಗೆ ಜೋಡಿಯಾಗಿದ್ದರು ಮತ್ತು ಕಂಚಿನ ಪದಕವನ್ನು ಗೆದ್ದರು.[೧೧] ಮಾಜಿ ರಾಷ್ಟ್ರೀಯ ಚಾಂಪಿಯನ್ ರಾಕೇಶ್ ಮನ್ಪತ್ ಅವರು, ಅಪೂರ್ವಿ ಚಾಂಡೇಲಾರವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.[೧೨] ನವದೆಹಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ೨೦೧೯ ರಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.[೧೩]
ಐಎಸ್ಎಸ್ಎಫ್ ವಿಶ್ವ ಪದಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Glasgow 2014 - 10m Air Rifle Women's Finals". Archived from the original on 2014-07-29. Retrieved 2019-09-02.
- ↑ "ಆರ್ಕೈವ್ ನಕಲು". Archived from the original on 2014-08-07. Retrieved 2019-09-02.
- ↑ "Jaipur girl realises dream of shooting alongside Bindra, wins two gold".
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2019-09-02.
- ↑ "Apurvi Chandela takes air rifle gold". The Hindu. 24 December 2012.
- ↑ "ಆರ್ಕೈವ್ ನಕಲು". Archived from the original on 2014-08-09. Retrieved 2019-09-02.
- ↑ "Rajasthan shooter Apurvi Chandela bags 4 medals at Hague meet". 10 February 2014.
- ↑ "ಆರ್ಕೈವ್ ನಕಲು". Archived from the original on 2014-08-08. Retrieved 2019-09-02.
- ↑ "Sitemap".
- ↑ http://www.firstpost.com/sports/rio-olympics-2016-jitu-rai-finishes-8th-in-10m-air-pistol-apurvi-chandela-ayonika-paul-out-in-qualifiers-2939890[ಶಾಶ್ವತವಾಗಿ ಮಡಿದ ಕೊಂಡಿ]
- ↑ "Asian Games 2018: Shooters Apurvi Chandela, Ravi Kumar open India's medal tally, clinch mixed air rifle bronze". 20 August 2018.
- ↑ https://www.hindustantimes.com/other-sports/personal-coaches-must-be-given-credit-for-indian-shooters-2018-commonwealth-games-showing/story-hgyJq2TzOdHBrE55[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2019-05-27. Retrieved 2019-09-02.