ಅಪಖ್ಯಾತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನಪ್ರಿಯತೆಯ ವಿರುದ್ಧಪದವಾದ ಅಪಖ್ಯಾತಿ ಒಬ್ಬರ ಸಮಾನ ಮಟ್ಟದವರಿಂದ ಒಪ್ಪಿಗೆ ಅಥವಾ ಅನುಮೋದನೆಯ ಕೊರೆತೆಯಿರುವ ಗುಣ.

ಹರೆಯದವರ ಸಾಮಾನ್ಯ ಮನೋಸಾಮಾಜಿಕ ಬೆಳವಣಿಗೆಯಲ್ಲಿ ಸಹಕರ್ಮಿ ಸಂಬಂಧಗಳ ಪ್ರಾಮುಖ್ಯತೆಯನ್ನು ಬಹಳ ಸಂಶೋಧಿಸಲಾಗಿದೆ. ಸಹಕರ್ಮಿಗಳ ಪ್ರಭಾವ ಅಷ್ಟೇನೂ ಆಶ್ಚರ್ಯಕರವಲ್ಲ, ಏಕೆಂದರೆ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ದಿನಗಳ ಬಹುಪಾಲನ್ನು ವಯಸ್ಕರ ಬದಲು ಸಹಕರ್ಮಿಗಳೊಂದಿಗೆ ಕಳೆಯುತ್ತಾರೆ, ತರಗತಿಯ ಅವಧಿಯಲ್ಲಿ ಮತ್ತು ಹೊರಗೆ.[೧] ಹೆಚ್ಚು ಮುಖ್ಯವಾಗಿ, ಸಹಕರ್ಮಿ ಗುಂಪುಗಳು ಪ್ರಯೋಗಕ್ಕೆ ಮನೆಯಿಂದ ಪ್ರತ್ಯೇಕವಾದ ಸಂದರ್ಭಗಳನ್ನು ಒದಗಿಸುತ್ತವೆ. ಇದರಿಂದ ಸಹಕರ್ಮಿಗಳು ಗುರುತಿನ ಭಾವದ ಮತ್ತು ಅನ್ಯೋನ್ಯತೆಯ ಸಾಮರ್ಥ್ಯದ ಅಭಿವೃದ್ಧಿಯಲ್ಲಿ ವಿಶೇಷವಾಗಿ ನಿರ್ಧಾರಕರಾಗುತ್ತಾರೆ.

ಆದರೆ ಸಾಮಾನ್ಯ ಸಹಕರ್ಮಿ ಸಂಬಂಧಗಳು ಮನೆಗೆ ಆಹ್ಲಾದಕರ ಪರ್ಯಾಯವಾದರೂ, ಈ ಸಾಮಾಜಿಕ ಜಾಲಬಂಧದಲ್ಲಿನ ಹರೆಯದ ಅನುಭವಗಳ ಒಂದು ಉಪವರ್ಗ ಸ್ಪಷ್ಟವಾಗಿ ಅಹಿತಕರವಾಗಿರುತ್ತದೆ. ಈ ಹರೆಯದವರನ್ನು ಬಾಲ್ಯದ ಮುಂಚಿನಲ್ಲೂ ಜನಪ್ರಿಯರಲ್ಲದ ಅಥವಾ ವಕ್ರ ಎಂದು ಪರಿಗಣಿಸಲಾಗುತ್ತದೆ, ಮತ್ತು ಹಾಗೆಯೇ ತಿರಸ್ಕರಿಸಲಾಗುತ್ತದೆ. ಹರೆಯದಲ್ಲಿ, ಅವರು ಯಾವುದೇ ಜನಸಮೂಹದಿಂದ ವಿಲಕ್ಷಣವಾಗಿದ್ದು, ತಮ್ಮ ಜನಪ್ರಿಯ ಸಹವಿದ್ಯಾರ್ಥಿಗಳ ನಿಕಟ ಸ್ನೇಹದ ಕೊರೆತೆ ಅನುಭವಿಸುತ್ತಾರೆ. ಸಹಕರ್ಮಿ ತಿರಸ್ಕಾರದ ಪರಿಣಾಮಗಳನ್ನು ದಾಖಲಿಸುವ ಗಣನೀಯ ಸಂಶೋಧನೆ ಆಗಿದೆ, ಉದಾಹರಣೆಗೆ, ಕಡಿಮೆಯಾದ ಶೈಕ್ಷಣಿಕ ಸಾಧನೆ, ಅಪರಾಧಿ ವರ್ತನೆ, ಮತ್ತು ಪ್ರೌಢಾವಸ್ಥೆಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು. ಬೇರೆ ಸಂಶೋಧನೆಯು ಜನಪ್ರಿಯವಲ್ಲದ ಹರೆಯದವರ ಸ್ಥಿರ ಉಪವರ್ಗಗಳನ್ನು ಗುರುತಿಸುವತ್ತ ಗಮನ ಹರಿಸಿದೆ. ಆಕ್ರಮಣಕಾರಿ, ದೂರವಾದ, ಮತ್ತು ಆಕ್ರಮಣಕಾರಿ ಹಾಗೂ ದೂರವಾದ ವ್ಯಕ್ತಿಗಳ ನಡುವೆ ಮಾಡಲಾದ ಭಿನ್ನತೆ ಒಂದು ಸಾಮಾನ್ಯ ಭಿನ್ನತೆಯಾಗಿದೆ.

ಆದರೆ, ಈ ಗುಣಲಕ್ಷಣಗಳು ಆಕ್ರಮಣಕಾರಿ ಅಥವಾ ದೂರವಾಗುವ ಮಕ್ಕಳು ಅಪಖ್ಯಾತಿ ಹೊಂದುವಲ್ಲಿ ಮತ್ತು ನಂತರದ ಹೊಂದಾಣಿಕೆ ಸಮಸ್ಯೆಗಳನ್ನು ಅನುಭವಿಸುವುದಕ್ಕೆ ಹೇಗೆ ಕಾರಣವಾಗುತ್ತವೆ ಎಂಬುದರ ಬಗ್ಗೆ ಕಡಿಮೆ ತಿಳಿದಿದೆ. ವಾಸ್ತವವಾಗಿ, ಈ ಸಂಬಂಧದ ಕಾರಣತ್ವವೇ ಅನಿಶ್ಚಿತವಾಗಿದೆ, ಮತ್ತು ಅವು ವಿವಿಧ ಬಲವರ್ಧನಾ ಪ್ರಕ್ರಿಯೆಗಳ ಕಾರಣ ಇರುವುದರಿಂದ ವರ್ತನ ಗುಣಲಕ್ಷಣಗಳು ಹಾಗೂ ಅಪಖ್ಯಾತಿ ಎರಡೂ ಸ್ಥಿರವಾಗಿವೆ ಎಂದು ಸಲಹೆಮಾಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Brown, B. (1990). Peer groups. In S. Feldman & G. Elliott (Eds.), At the threshold: The developing adolescent (pp. 171–196). Cambridge, Mass.: Harvard University Press.