ವಿಷಯಕ್ಕೆ ಹೋಗು

ಅನ್ನಾ ಅಖ್ಮಾಟೋವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅನ್ನಾ ಅಂಡ್ರೆಯೆವ್ನಾ ಗೊರೆಂಕೊ ಇಂದ ಪುನರ್ನಿರ್ದೇಶಿತ)
ಅನ್ನಾ ಅಖ್ಮಾಟೋವಾ
ಜನನಅನ್ನಾ ಅಂಡ್ರೆಯೆವ್ನಾ ಗೊರೆಂಕೊ
೨೩ ಜೂನ್ ೧೮೮೯}
ಒಡಿಸ್ಸಾ.ರಷ್ಯಾ
ಮರಣ೫ ಮಾರ್ಚ್ ೧೯೬೬
ಮಾಸ್ಕೋ, ರಷ್ಯ.
ವೃತ್ತಿಕವಿಯತ್ರಿ, ಅನುವಾದಕ, ಆತ್ಮಚರಿತ್ರೆಕಾರ
ರಾಷ್ಟ್ರೀಯತೆರಷ್ಯ

ಅನ್ನಾ ಅಂಡ್ರೆಯೆವ್ನಾ ಗೊರೆಂಕೊ (೨೩ ಜೂನ್ ೧೮೮೯-೫ ಮಾರ್ಚ್ ೧೯೬೬) ಪ್ರಸಿದ್ಧ ಲೇಖಕಿ. ಇವರು ಅನ್ನಾ ಅಖ್ಮಾಟೋವಾ []ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು. ಇವರು ರಷ್ಯಾದ ಆಧುನಿಕ ಲೇಖಕಿಯರಲ್ಲಿ ಒಬ್ಬರು. ರಷ್ಯಾದ ಕ್ಯನಾನ್‌ನಲ್ಲಿ ಅತ್ಯಂತ ಮೆಚ್ಛುಗೆಯನ್ನು ಪಡೆದಂತ ಒರ್ವ ಬರಹಗಾರ್ತಿ ಅನ್ನಾ ಅಖ್ಮಾಟೋವಾ. ಅನ್ನಾ ಅಂಡ್ರೆಯೆವ್ನಾ ಗೊರೆಂಕೊರವರ ಕೆಲಸದ ವ್ಯಾಪ್ತಿಯು ಸಂಕೀರ್ಣ ರಚನಾತ್ಮಕ ಚಿತ್ರಗಳಿಂದ ಹಿಡಿದು ಸಣ್ಣ ಭಾವಗೀತೆಯ ಕವನ ರಿಕ್ವಿಯಂವರೆಗೂ ಇದೆ. ರಿಕ್ವಿಯಂ ಎಂಬುದು ಸ್ಟಾಲಿನಿಸ್ಟ್ ಟೆರರ್‌‌ರವರ ದುರಂತದ ಮೇರುಕೃತಿ. ಅವರ ಶೈಲಿ ಆರ್ಥಿಕ ಮತ್ತು ಭಾವನಾತ್ಮಕ ಸಂಯಮಗಳ ಲಕ್ಷಣಗಳಿಂದ ಕೂಡಿತ್ತು. ಅವರು ತಮ್ಮ ಬರವಣಿಗೆಯನ್ನು ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಇವು ಅರ್ಲಿ ಲೈಫ್ ಮತ್ತು ಲೆಟರ್‌ ವರ್ಕ್‌. ಸ್ಟಾಲಿನ್‌‌ನ ಅಧಿಕಾರಿಗಳು ಇವಳ ಕೆಲಸವನ್ನು ಖಂಡಿಸಿ ಅಂಕುಶ ವಿಧಿಸಿದರು. ಆದರು ವಲಸೆ ಹೋಗದೆ ರಷ್ಯದಲೇ ಉಳಿದು, ತನ್ನ ಸುತ್ತ ನಡೆಯುತ್ತಿರುವ ಘಟನೆಗಳಿಗೆ ಸಾಕ್ಷಿಯಾಗಿದ್ದಳು. ಯುದ್ಧ ಹಾಗು ಕ್ರಾಂತಿ ಅಖ್ಮಾಟೋವಾ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು. ಇವು ನಿರಂಕುಶ ಪ್ರಭುತ್ವದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತು. ತನ್ನ ಹತ್ತಿರದಲ್ಲಿರುವ ಜನರು ಕ್ರಾಂತಿಯ ಪರಿಣಾಮವಾಗಿ ನಿಧನರಾದರು ಇದರಿಂದ ಅಖ್ಮಾಟೋವಾ ತುಂಬ ವರ್ಷಗಳ ಕಾಲ ಅಸಂತೋಷವಾಗಿದ್ದಳು. ಅಖ್ಮಾಟೋವಾರವರ ಮೊದಲ ಪತಿ ನಿಕೊಲಾಯ್ ಗುಮಿಲೇವ್, ಇವರು ಸೋವಿಯೆತ್ ರಹಸ್ಯ ಪೊಲೀಸರಿಂದ ಮರಣ ದಂಡನೆ ಹೊಂದಿದ್ದರು. ಆಕೆಯ ಮಗ ಲೆವ್‌ ಗುಮಿಲೀವ್‌ ಮತ್ತು ತನ್ನ ಪತಿ ನಿಕೊಲಾಯ್ ಪುನಿನ್ ಗುಲಾಗ್‌ನಲ್ಲಿ ಅನೇಕ ವರ್ಷಗಳ ಕಾಲ ವಾಸಮಾಡುತ್ತಿದ್ದರು. ಇಲ್ಲಿಯೇ ಪುನಿನ್ ತೀರಿಕೊಂಡರು

ಆರಂಭಿಕ ಜೀವನ ಮತ್ತು ಕುಟುಂಬ

[ಬದಲಾಯಿಸಿ]

ಅಖ್ಮಾಟೋವಾ ಬ್ಲಾಕ್‌ ಸಿ ಆಫ್ ಒಡಿಸ್ಸಾ ಹತ್ತಿರದಲ್ಲಿರುವ ಬೊಲ್‌‌ಶೋಯ್ ಫಾಂಟನ್‌ನಲ್ಲಿ ಜನಿಸಿದರು. ತಂದೆ ಅಂಡ್ರೇ ಅಂಟೋವಿಕ್ ಗೊರೆಂಕೊ ಹಾಗೂ ತಾಯಿ ಇನ್ನಾ ಇರ್ಜಾಮೋವ್ನಾ ಸ್ಟೋಗೊವಾ. , ತಂದೆ ನಾವೆಲ್ ಇಂಜಿನಿಯರ್ ಆಗಿದ್ದನು. ಇವರಿಬ್ಬರೂ ರಷ್ಯದ ಗಣ್ಯವ್ಯಕ್ತಿಗಳು.

ತನ್ನ ದೊಡ್ಡ ಕುಟುಂಬದಲ್ಲಿ ಯಾರೂ ಕವಿತೆಗಳನ್ನುನ್ನು ಬರೆದಿರಲಿಲ್ಲ. ಆದರೆ ರಷ್ಯದ ಮೊದಲ ಲೇಖಕಿಯಾದ ಮಹಿಳೆ ಅನ್ನಾ ಬುನಿನಾ, ಅಖ್ಮಾಟೋವಾಳ ಅಜ್ಜ ಇರಾಸಮ್ ಐವನೊವಿಚ್ ಸ್ಟೋಗೊವ್‌ರವರ ಚಿಕ್ಕಮ್ಮ. ಸ್ಟೋಗೊಸ್ ಕುಟುಂಬ ಮಾಸ್ಕೊ ಪ್ರಾಂತ್ಯದ ಮಾಂಸ್‌ಕೌ ಪ್ರದೇಶದಲ್ಲಿ ಸಾಧಾರಣ ಭೂಮಾಲೀಕರಾಗಿದ್ದರು. ಅವರು ಪೊಸದನಿತ್ಸ್ ಮಾರ್ಫ಼ ಸಮಯದಲ್ಲಿ ಬಂಡಾಯದ ನಂತರ ಇಲ್ಲಿ ನೆಲೆಸಿದ್ದರು. ನವ್ಗೊರೋಡ್ ರಲ್ಲಿ ಅವರಿಗೆ ಒಂದು ಶ್ರೀಮಂತವಾದ ಕುಟುಂಬವಿತ್ತು. ತನ್ನ ಖಾನ್‌ ಅಖ್ಮಾಟ್‌ನನ್ನು ಒಂದು ರಾತ್ರಿ ರಷ್ಯದವರು ಸಾಯಿಸಿದರು. ಹದಿನೆಂಟನೆಯ ಶತಮನದಲ್ಲಿ ಅಖ್ಮಾಟೋವಾ ರಾಣೀಯರಲ್ಲಿ ಒಬ್ಬರಾದ ಪ್ರಸ್ಕೊವಿಯ ಯೆಗೋರವ್‌, ಸಿಮ್‌ಬಿರ್ಸ್ಕ್‌ನಲ್ಲಿ ಭೂಮಾಲೀಕನಾಗಿದ್ಧ ಮೋಟೊವಿಲೋವ್‌ ಎಂಬ ಪ್ರಸಿದ್ಧ ಶ್ರೀಮಂತನ್ನನ್ನು ಮದುವೆಯಾದಳು. ಯೆಗೋರ್ ಮೋಟೊವಿಲೋವ್ ಅಖ್ಮಾಟೋವಾರವರ ಮುತ್ತಾತ, ಅವರ ಮಗಳು ಅನ್ನಾ ಯೆಗೋರ ಅಖ್ಮಾಟೋವಾರವರ ಅಜ್ಜಿ. ಅಖ್ಮಾಟೋವಾರವರ ಅಜ್ಜಿಯು ತನ್ನ ತಾಯಿಯು ಒಂಭತ್ತು ವರ್ಷವಿದ್ದಾಗಲೇ ತೀರಿಕೊಂಡರು. ನಂತರ ತನ್ನ ಅಜ್ಜಿಯ ಹೆಸರನ್ನು ಇವರಿಗೆ ಇಟ್ಟು ಗೌರವಿಸಿದರು.

Anna Akhmatova with her husband Nikolay Gumilev and their son, Lev, 1913

ಅವರು ಹನ್ನೊಂದು ತಿಂಗಳ ಮಗುವಾಗಿದ್ದಾಗ ತನ್ನ ಕುಟುಂಬ ಸೇಂಟ್ ಪೀಟರ್ಸ್ಬರ್ಗ್ ಹತ್ತಿರದಲ್ಲಿರುವ ಟಿಸರಸ್ಕೊಯಿ ಸೆಲೊ ಕಡೆಗೆ ತೆರಳಿದರು. ಅವರ ಕುಟುಂಬ ಶಿರೊಕಾಯಿ ರಸ್ತೆ ಮತ್ತು ಬೆಜಿಮಯಯ್ಯ ಲೇನ್ ಮೂಲೆಯಲ್ಲಿ ಒಂದು ಮನೆಯನ್ನು ಮಾಡಿ ವಾಸಿಸುತ್ತಿದ್ದರು, ಅವರು ೭ ರಿಂದ ೧೩ ವಯಸ್ಸಿನವರೆಗೂ ಬೇಸಿಗೆ ರಜೆಯಲ್ಲಿ ಸೆವಾಸ್ಟೊಪೋಲ್ ಹತ್ತಿರದ ಒಂದು ಹಳ್ಳಿ ಮನೆಯಲ್ಲಿ ತಮ್ಮ ಕಾಲವನ್ನು ಕಳೆಯುತ್ತಿದ್ದರು. ೧೯೦೫ ರಲ್ಲಿ ತನ್ನ ತಂದೆ ತಾಯಿ ದೂರವಾದ ನಂತರ ಮರಿನ್ಸಕಯಾ ಪ್ರೌಡಶಾಲೆಯಲ್ಲಿ ಅಧ್ಯಾಯನ ಮುಗಿಸಿದರು. ಕೀವ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಅಧ್ಯಾಯನವನ್ನು ಮುಗಿಸಿದ ನಂತರ ಒಂದು ವರ್ಷಗಳ ಕಾಲ ಸಾಹಿತ್ಯ ಅಧ್ಯಾಯನವನ್ನು ಮಾಡಲು ಕೀವ್ ನಿಂದ ಸೇಂಟ್ ಪೀಟರ್ಸ್ಬರ್ಗ್‌ಗೆ ಮರಳಿದರು. ಅಖ್ಮಾಟೋವಾ ೧೧ನೇ ವಯಸ್ಸಿನಲ್ಲಿ ಕವನ ಬರೆಯಲು ಪ್ರಾರಂಭಿಸಿದರು. ಕವಿಗಳಾದ ನಿಕೊಲಾಯ್ ನೆಕ್ರಾಸೊವ್, ಅಲೆಕ್ಸಾಂಡರ್ ಪುಶ್ಕಿನ್, ಎವ್ಗೆನಿ ಬ್ಯಾರೆನಸ್ಕೆ ಮತ್ತು ಸಿಂಬಲಿಸ್ಟ್ ಇವರಿಂದ ಪ್ರೇರಿತರಾಗಿ ಕವನಗಳನ್ನು ಬರೆದರು. ಆ ಕವನಗಳು ಮುಂದೆ ಪ್ರಕಟವಾಯಿತು. ಅವರ ಸಹೋದರಿಯಾದ ಇನ್ನಾರವರೂ ಸಹಾ ಕವನಗಳನ್ನು ಬರೆಯುತ್ತಿದ್ದರು, ಆದರೆ ಅವರು ಪ್ರೌಡಶಾಲೆಯನ್ನು ಮುಗಿಸಿದ ನಂತರವೇ ಮದುವೆ ಮಾಡಿ ಕಳುಹಿಸಿದರು. ಅಖ್ಮಾಟೋವಾರವರು ೧೯೦೩ ರಲ್ಲಿ ಕ್ರಿಸ್ಮಸ್ ದಿನದಂದು ಯುವ ಕವಿ, ನಿಕೊಲಾಯ್ ಗುಮಿಲೇವ್ ನನ್ನು ಭೇಟಿಯಾದರು. ನಿಕೊಲಾಯ್ ರವರು ತನ್ನನ್ನು ಬರೆಯಲು ಪ್ರೋತ್ಸಾಹಿಸಿ ಮತ್ತು ತೀವ್ರವಾಗಿ ತನ್ನನ್ನು ಅನುಸರಿಸಿದ ಮೇಲೆ ಹಲವಾರು ಬಾರಿ ವೈವಾಹಿಕ ಪ್ರಸ್ತಾಪವನ್ನು ಮಾಡಿದರು. ನಂತರ ೧೯೧೦ ರಲ್ಲಿ ಇಬ್ಬರು ವಿವಾಹವಾಗದರು. ೧೯೧೨ ರಲ್ಲಿ ಅಖ್ಮಾಟೋವಾರವರ ಮಗ ಲೆವ್ ಜನಿಸಿದರು.

ಕೆಲಸ ಮತ್ತು ವಿಷಯಗಳು

[ಬದಲಾಯಿಸಿ]

ಅಖ್ಮಾಟೋವಾ ೧೯೧೦ ರಲ್ಲಿ ಅಕ್ಮೆಯಿಸ್ಟ್ ಗುಂಪಿಗೆ ಸೇರಿದರು, ಆ ಗುಂಪಿನಲ್ಲಿ ಕವಿಗಳಾದ ಒಸಿಪ್ ಮಂಡಲಸ್ಟಂ ಮತ್ತು ಸೆರ್ಗೆ ಗೋರಡಸ್ಕೆ, ಇವರೆಲ್ಲರು ಒಂದುಗೂಡಿ ಸಾಂಕೇತಿಕ ಶಾಲೆಯ ಪ್ರತಿಕ್ರಿಯೆಯಾಗಿ, ಪ್ರತಿಮಾವಾದ ಯುರೋಪ್ ಮತ್ತು ಅಮೇರಿಕಾದ ಏಕಕಾಲೀನ್ ಬೆಳವಣಿಗೆಗಾಗಿ ಕೆಲಸ ಮಾಡಿದರು. ತನ್ನ ಮೊದಲ ಸಂಗ್ರಹಣೆಗಳಾದ ಸಂಜೆ (೧೯೧೨) ಮತ್ತು ರೋಸರಿ (೧೯೧೪), ವ್ಯಾಪಕ ವಿಮರ್ಶಾ ಪ್ರಶಂಸೆಗಳಿಸಿತು. ಈ ಎರಡು ನಂಗ್ರಹಣೆಗಳು ಖ್ಯಾತಿಯನ್ನು ಹೊಂದಿದ ಮೇಲೆ ತನ್ನ ವೃತ್ತಿ ಜೀವನವೂ ಆರಂಭವಾಯಿತು. ಸಂಜೆ ಮತ್ತು ನಂತರದ ನಾಲ್ಕು ಪುಸ್ತಕಗಳು ಹೆಚ್ಚಾಗಿ ಪ್ರೀತಿಹೊಂದಿತ್ತು, ಗುಂಡಿಟ್ಟ ದುಃಖ ಎಂಬ ವಿಷಯದ ಭಾವಗೀತೆಗಳು ಚಿತ್ರಕಲೆಯಾಗಿತ್ತು. ತನ್ನ ಆರಂಭಿಕ ಕವಿತೆಗಳಲ್ಲಿ ಸಾಮಾನ್ಯವಾಗಿ ಪುರುಷ ಹಾಗೂ ಮಹಿಳೆಯ ಸಂಬಂಧವನ್ನು ಕುರಿತು ಬರೆಯುತ್ತಿದ್ದರು. ವಿಮರ್ಶಕ ರಾಬರ್ಟಾ ರೀಡರ್ ಎಂಬ ಆರಂಭಿಕ ಕವನವೂ ಯಾವಾಗಲೂ ಅಭಿಮಾನಿಗಳನ್ನು ಬೃಹತ್ ಸಂಖ್ಯೆಯಲ್ಲಿ ಸೆಳೆಯುತ್ತಿತ್ತು. ೧೯೩೫-೪೦ ರಲ್ಲಿ ನಡೆದ ಸೋವಿಯತ್ ಭಯೋತ್ಪಾದಕ ಅಡಿಯಲ್ಲಿ ಸಾಮಾನ್ಯ ಜನರು ಅನುಭವಿಸುತಿದ್ದುದ್ದನ್ನು ಚಿತ್ರಿಸಿದ್ದಾರೆ.

ಕಳೆದ ವರ್ಷ

[ಬದಲಾಯಿಸಿ]

ಅಖ್ಮಾಟೋವಾರವರು ತನ್ನ ಕೊನೆಯ ಜೀವನವನ್ನು ಲೆನಿನ್‍ಗ್ರಾಡ್ ನಲ್ಲಿ ಪುನಿನ್ ರವರ ಕುಟುಂಬದವರೊಡನೆ ಕಳೆದರು. ೨೦ ವರ್ಷಗಳ ಕಾಲ, ಅಧಿಕೃತ ಚರಿತ್ರೆಯಲ್ಲಿ ನಾಯಕನಿಲ್ಲದೆ ಪೌರಾಣಿಕ ಕಾವ್ಯಕ್ಕೆ ಬರವಣಿಗೆಯ ಮೂಲಕ ಕೆಲಸ ಮಾಡಿದರು. ನವೆಂಬರ್ ೧೯೬೫ ರಲ್ಲಿ, ತನ್ನ ಆಕ್ಸ್ಫ‍ರ್ಡ್ ಬೇಟಿಯ ನಂತರ ಅಖ್ಮಾಟೋವಾ ಹೃದಯಾಘಾತಕ್ಕೆ ಒಳಗಾಗಿದ್ದರಿಂದ ಅವರನ್ನು ಆಸ್ಫತ್ರೆಗೆ ಸೇರಿಸಲಾಯಿತು. ೧೯೬೬ ರ ವಸಂತ ಕಾಲದಲ್ಲಿ ಮಾಸ್ಕೋದಲ್ಲಿ ಆರೋಗ್ಯವಾರ್ಧಕಕ್ಕೆ ತೆರಳಿದರು. ೭೬ನೇ ವಯಸ್ಸಿನಲ್ಲಿ ಹೃದಯದ ವಿಫಲತೆಯಿಂದ ನಿಧನರಾದರು. ಮಾಸ್ಕೋ ಹಾಗೂ ಲೆನಿನ್‍ಗ್ರಾಡ್‍ನಲ್ಲಿ ನಡೆದ ಎರಡು ಸ್ಮಾರಕ ಸಮಾರಂಭದಲ್ಲಿಯೂ ಸಾವಿರಾರು ಜನ ಭಾಗವಹಿಸಿದರು. ಅವರನ್ನು ಸೇಂಟ್ ಪೀಟರ್ಸ್ಬಗ್‌ ಕೋಮರೋವೊ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

ಸಂಸ್ಕೃತಿ ಪ್ರಭಾವ

[ಬದಲಾಯಿಸಿ]

ಗೀತರಚನಕಾರ ಮತ್ತು ಗಾಯಕರಾದಂತಹ ಡಾ|| ಉಲಿ ಜಿಸ್‌ಲಿನ್‌ರವರು ೧೯೯೭ ರಂದು 'ವಾಷಿಂಗ್‌ಟಂನ್‌ ಮ್ಯೂಸಿಯಂ ಆಫ್ ಪೋಯಟ್ರಿ ಆಂಡ್ ಮ್ಯೂಸಿಕ್, ಎಂಬುದನ್ನು ಅಮೆರಿಕಾದಲ್ಲಿ ಸ್ಥಾಪಿಸಲಾಯಿತು. ಇದರಲ್ಲಿ ಕೆಲವು ಐದು ಪ್ರಸಿದ್ಧ ರಷ್ಯನ್‌ ಕವಿಗಳ ಕೆಲಸ ಒಳಗೊಂಡಿದೆ. ಬೊರಿಸ್‌ ಪಾಸ್ಟರ್ನಾಕ, ಮರಿನಾ ತ್ಸೆಟೆಯ್ವಾ, ಅಣ್ನ ಅಖ್ಮಾಟೋವಾ, ನಿಕೊಲಾಮ್‌ ಗುಮಿಲೇಟ್ ಮತ್ತು ಒಸಿವ್‌ಮಂದೇಲ್‌ ಸ್ತಂ.

1989 CPA PC 189

ಕವನ ಸಂಕಲನಗಳು

[ಬದಲಾಯಿಸಿ]
  • ಟು ದಿ ಮ್ಯೂಸ್ (೧೯೨೪),
  • ಒನ್ ಗೋಸ್ ಇನ್ ಸ್ಟೈಟ್‌ಫಾರ್ವರ್ಡ್ ವೇಸ್ (೧೯೪೦),
  • ರೀಡಿಂಗ್ 'ಹ್ಯಾಮ್ಲೆಟ್' (೧೯೦೯),
  • ಅವರ್ ನೇಟೀವ್ ಅರ್ತ್ (೧೯೬೧),
  • ಸಾಂಗ್ ಆಫ್ ದಿ ಫೈನಲ್ ಮೀಟೀಂಗ್ (೨೦ನೇ ಶತಮಾನ),
  • ಐ ಡೋಂಟ್ ಲೈಕ್ ಫ್ಲವರ್ಸ್, ಮ್ಯೂಸಿಕ್ (೧೯೫೮),
  • ದಿ ವಿಕ್ಟರಿ (೧೯೪೩-೪೫),
  • ದೇ ಡಿಡ್‍ನಾಟ್ ಮೀಟ್ (೧೯೧೩),
  • ಮೈ ವೇ, ರಾಚೆಲ್, ಹೌ ಮೆನಿ ಡಿಮ್ಯಾಂಡ್ಸ್, ಇನ್ ಡ್ರೀಮ್,
  • ಇನ್ ದ್ ಈವ್‍ನಿಂಗ್ (೧೯೧೨),
  • ಹೀ ಡಿಡ್ ಲವ್, ಗ್ರೀಟಿಂಗ್ಸ್,
  • ಎ ವಿಡೋವ್ ಇನ್ ಬ್ಲ್ಯಾಕ್,
  • ಟ್ರೂ ಟೆಂಡರ್‍ನೆಸ್,
  • ಹಿಯರ್ ಈಸ್ ಮೈ ಗಿಫ್ಟ್, ವಿಲೋವ್, ಷೇಡ್, ತಂಡರ್, ಮೆಮೋರಿ ಆಫ್ ಸನ್, ರೀಕ್ವಿಯಂ, ನೌವ್ ನೋ-ಒನ್ ವಿಲ್ ಬಿ ಲಿಸ್ಟೆನಿಂಗ್ ಟು ಸಾಂಗ್ಸ್ ಇತ್ಯಾದಿ...

ಗೌರವಗಳು

[ಬದಲಾಯಿಸಿ]

೧೯೬೪- ಇಟ್ನಾ ಟಾಮೋನಿಯಾ ಪ್ರಶಸ್ತಿ. ೧೯೬೫- ಆ‍ಕ್ಸ್ಫರ್ಡ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲೇಖನಗಳು

[ಬದಲಾಯಿಸಿ]
  1. "ಅನ್ನಾ ಅಖ್ಮಾಟೋವಾ".