ಅನೇಕ ಗೆಳೆಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನೇಕ ಗೆಳೆಯರು
Purpose"ಕಲೆ - ಸಾಹಿತ್ಯ - ಸಂಗೀತ - ಸಂಸ್ಕೃತಿ"
ಪ್ರದೇಶ
Worldwide

ಅನೇಕ ~ 2013ನೇ ವರ್ಷದ ನಡುಭಾಗದಲ್ಲಿ ಹುಟ್ಟಿಕೊಂಡ ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಕಲಿಯುತ್ತಿರುವ, ದುಡಿಯುತ್ತಿರುವ ಗ್ರಾಮೀಣ ಸೃಜನಶೀಲ ಯುವ ಸಾಹಿತ್ಯಾಸಕ್ತರ ಸಮುದಾಯ . ಕಲೆ - ಸಾಹಿತ್ಯ - ಸಂಗೀತ - ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ , ಸಂಕಥನ , ಕೃತಿ ಪ್ರಕಟಣೆ - ಪ್ರಸರಣ , ವಿಶೇಷವಾಗಿ ಗಾಂಧೀಯ ಚಿಂತನೆ.. ಕಳೆದುಹೋಗುತ್ತಿರುವ ನೆಲಮೂಲ ಸಂಸ್ಕೃತಿಯ ಕುರಿತು ಅರಿವು, ಅಧ್ಯಯನ ಇದರ ಮೂಲ ಭೂಮಿಕೆ. ಆಧುನಿಕ ಜೀವನದ ಧಾವಂತಗಳಲ್ಲಿ ಹೊಸಪೀಳಿಗೆ ತನ್ನ ಬಹುಪರಂಪರೆಯ ನೆಲೆಗಳನ್ನು, ಅದರ ಮಾರ್ಗಗಳನ್ನು ಹತ್ತಾರು ಸೃಜನಶೀಲ ವಲಯಗಳಲ್ಲಿ ಕಂಡುಕೊಳುವುದಕ್ಕೆ ಪ್ರಯತ್ನಿಸುತ್ತಲೇ ಇದೆ ಮತ್ತು ಏಕಕಾಲದಲ್ಲಿ ಇನ್ನೊಂದು ಕಡೆ ಈ ಎಲ್ಲ ನೆಲೆಗಳ ಬಗ್ಗೆ ವಿಸ್ಮೃತಿಯೊಂದು ಆವರಿಸಿ ಪಾಶ್ಚಿಮಾತ್ಯ ಸ್ವರೂಪದ ಒಂದು ರಾಷ್ಟ್ರ ~ ಒಂದು ಸಂಸ್ಕೃತಿ ಎಂಬುವ ಅಪಾಯಕಾರಿ ಮಾದರಿಯೊಂದನ್ನು ಬೆನ್ನತ್ತಿದೆ. ಹೀಗಿರುವಾಗ 'ವಿವಿಧತೆಯಲ್ಲಿ ಏಕತೆ'ಯನ್ನು, ಉಪಖಂಡವು ರೂಪಿಸಿಕೊಂಡ ಸಂವಿಧಾನವನ್ನು ನಂಬಿದ ಸೃಜನಶೀಲಮನಸ್ಸುಗಳ ಸಮೂಹ ಇದಾಗಿದೆ.

ಅನೇಕ ಹಮ್ಮಿಕೊಂಡ ಕೆ ಎಸ್ ನ 100 ರ ಸಂಭ್ರಮ ಸಮಾರಂಭ