ಅನುಲೋಮ ಪ್ರಾಣಾಯಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಲೋಮ ಪ್ರಾಣಾಯಾಮವು (अनुलोम प्राणायाम) ಹಠ ಯೋಗದ ಅಭ್ಯಾಸದಲ್ಲಿ ಬಳಸಲಾದ ಹಲವಾರು ಪ್ರಾಣಾಯಾಮ ಅಥವಾ ಉಸಿರಾಟದ ವ್ಯಾಯಾಮಗಳಲ್ಲಿ ಒಂದು.[೧] ಅನು ಎಂದರೆ ಸ್ಥೂಲವಾಗಿ ಜೊತೆಗೆ ಮತ್ತು ಲೋಮ ಎಂದರೆ ಕೂದಲು. ಹಾಗಾಗಿ ಇದರ ಅರ್ಥ ಸಹಜ ಅಥವಾ ಸ್ವಾಭಾವಿಕ. ಇದು ವಿಲೋಮ ಪ್ರಾಣಾಯಾಮಕ್ಕೆ (विलोम प्राणायाम) (ಅಂದರೆ ಅಸಹಜ, ಅಸ್ವಾಭಾವಿಕ) ವಿರುದ್ಧವಾಗಿದೆ.

ನಾಡಿ ಶೋಧನದ (ಸಾಮಾನ್ಯವಾಗಿ ಪರ್ಯಾಯ ಹೊಳ್ಳೆಯ ಉಸಿರಾಟ ಎಂದು ಕರೆಯಲ್ಪಡುತ್ತದೆ ಮತ್ತು ಕೆಲವು ವಲಯಗಳಲ್ಲಿ ಅನುಲೋಮ ವಿಲೋಮ ಎಂದು ಪರಿಚಿತವಾಗಿದೆ) ಅಭ್ಯಾಸವನ್ನು ಹೋಲುವ ಅನುಲೋಮವು ಎರಡೂ ಹೊಳ್ಳೆಗಳಿಂದ ಒಟ್ಟಿಗೆ ಉಸಿರೆಳೆದುಕೊಂಡು ಪ್ರತಿ ಉಸಿರನ್ನು ಪರ್ಯಾಯವಾಗಿ ಎಡ ಮತ್ತು ಬಲ ಹೊಳ್ಳೆಗಳ ನಡುವೆ ಹೊರಬಿಡುವುದನ್ನು ಒಳಗೊಳ್ಳುತ್ತದೆ. ಬಲ ಹೊಳ್ಳೆಯನ್ನು ನಿಯಂತ್ರಿಸಲು ಬಲಗೈಯ ಹೆಬ್ಬೆರಳನ್ನು ಬಳಸಲಾಗುತ್ತದೆ. ಎಡ ಹೊಳ್ಳೆಯನ್ನು ನಿಯಂತ್ರಿಸಲು ಕಿರುಬೆರಳು ಮತ್ತು ಉಂಗುರದ ಬೆರಳನ್ನು ಬಳಸಲಾಗುತ್ತದೆ. ಉಲ್ಟಾ ಅನುಲೋಮ ಉಸಿರಾಟವನ್ನು ಪ್ರತಿಲೋಮ ಎಂದು ಕರೆಯಲಾಗುತ್ತದೆ. ಇದರಲ್ಲಿ ಉಸಿರನ್ನು ಪರ್ಯಾಯ ಹೊಳ್ಳೆಗಳ ಮೂಲಕ ಒಳಗೆಳೆದುಕೊಂಡು ಎರಡೂ ಹೊಳ್ಳೆಗಳ ಮೂಲಕ ಒಟ್ಟಿಗೆ ಹೊರಬಿಡಲಾಗುತ್ತದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುಂದುವರಿದಂತೆ ಕುಂಭಕ ಅಥವಾ ಹಿಡಿದಿಡುವ ಅಭ್ಯಾಸವನ್ನು ಪ್ರೋತ್ಸಾಹಿಸಲಾಗುತ್ತದೆ; ಮೊದಲು ಉಚ್ಛ್ವಾಸದ ಕೊನೆಯಲ್ಲಿ ಮತ್ತು ಅಂತಿಮವಾಗಿ ನಿಶ್ವಾಸದ ಕೊನೆಯಲ್ಲಿ.

ಉಲ್ಲೇಖಗಳು[ಬದಲಾಯಿಸಿ]

  1. "Hatha Yoga Pradipika: Chapter II. On Prâṇâyâma". Sacred Texts.