ಅನುಬಂಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಬಂಧ, ಸಾಮಾನ್ಯವಾಗಿ, ಅದರ ಮುದ್ರಣ ಅಥವಾ ಪ್ರಕಟಣೆಯ ತರುವಾಯ ಒಂದು ದಸ್ತಾವೇಜಿಗೆ ಅದರ ಲೇಖಕನಿಂದ ಮಾಡಬೇಕಾದ ಒಂದು ಸೇರ್ಪಡೆ.

ಅನುಬಂಧವು ಅಸಮಂಜಸತೆಗಳನ್ನು ವಿವರಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಕೃತಿಯನ್ನು ವಿಸ್ತರಿಸಬಹುದು ಅಥವಾ ಮುಖ್ಯ ಕೃತಿಯಲ್ಲಿ ಕಂಡುಬರುವ ಮಾಹಿತಿಯನ್ನು ವಿವರಿಸಬಹುದು ಅಥವಾ ನವೀಕರಿಸಬಹುದು, ವಿಶೇಷವಾಗಿ ಯಾವುದೇ ಅಂಥ ಸಮಸ್ಯೆಗಳನ್ನು ಮುಖ್ಯ ಕೃತಿಯಲ್ಲಿ ಸರಿಪಡಿಸಲು ಬಹಳ ತಡವಾಗಿ ಕಂಡುಹಿಡಿದಾಗ. ಉದಾಹರಣೆಗೆ, ಮುಖ್ಯ ಕೃತಿಯನ್ನು ಆಗಲೇ ಮುದ್ರಣ ಮಾಡಿರಬಹುದು ಮತ್ತು ಒಗ್ಗಡವನ್ನು ನಾಶಮಾಡಿ ಪುನಃ ಮುದ್ರಿಸುವ ವೆಚ್ಚ ಬಹಳ ಹೆಚ್ಚು ಎಂದು ಪರಿಗಣಿಸಲಾಗಿರಬಹುದು. ವಸ್ತುತಃ, ಅನುಬಂಧಗಳು ಅನೇಕ ರೂಪಗಳಲ್ಲಿ ಬರಬಹುದು — ಕೃತಿಯ ಜೊತೆಗೆ ಅಡಕವಾದ ಪ್ರತ್ಯೇಕ ಪತ್ರ, ಅಂಕೀಯ ಮಾಧ್ಯಮ ಅಥವಾ ಹೋಲುವ ವಾಹಕದಲ್ಲಿ ಪಠ್ಯ ಕಡತಗಳು. ಅದು ಇರುವ ದೋಷಗಳನ್ನು ಒದುಗನಿಗೆ ಸೂಚಿಸುವ ಕೆಲಸ ಮಾಡಬಹುದು, ಒಂದು ತಪ್ಪೋಲೆಯಾಗಿ.

ಇತರ ದಸ್ತಾವೇಜುಗಳಲ್ಲಿ, ಬಹಳ ಮುಖ್ಯವಾಗಿ ಕಾನೂನು ಒಪ್ಪಂದಗಳಲ್ಲಿ, ಅನುಬಂಧವು ಒಪ್ಪಂದದ ಮುಖ್ಯ ಭಾಗದಲ್ಲಿ ಸೇರಿಸಲಾಗದ ಒಂದು ಹೆಚ್ಚುವರಿ ದಸ್ತಾವೇಜು. ಅದು, ಸಾಮಾನ್ಯವಾಗಿ ಮುಖ್ಯ ದಸ್ತಾವೇಜಿನ ನಂತರ ಸಂಕಲಿಸಿ ಮುಗಿಸಲಾದ ಒಂದು ತತ್ಪೂರ್ತ ಘಟಕ, ಮತ್ತು ಹೆಚ್ಚುವರಿ ಪದಗಳು, ಕಟ್ಟುಪಾಡುಗಳು ಅಥವಾ ಮಾಹಿತಿಯನ್ನು ಹೊಂದಿರುತ್ತದೆ.

ಅದು ಒಂದು ಒಪ್ಪಂದದ ಇತರ ಪರಿಶಿಷ್ಟಗಳಿಂದ ಭಿನ್ನವಾಗಿದೆ. ಈ ಪರಿಶಿಷ್ಟಗಳು ಒಪ್ಪಂದದ ಪ್ರಧಾನಭಾಗದಿಂದ ಪ್ರತ್ಯೇಕಿಸಲಾಗಿರುವ ಹೆಚ್ಚುವರಿ ಪದಗಳು, ವಿವರಣೆಗಳು, ನಿಬಂಧನೆಗಳು, ಸಾಮಾನ್ಯ ನಮೂನೆಗಳು ಅಥವಾ ಇತರ ಮಾಹಿತಿಯನ್ನು ಹೊಂದಿರಬಹುದು.

ಅದೇರೀತಿ ಮಿಂಚಂಚೆಗಳಿಗೆ ಕಡತ ಪದವನ್ನು ಬಳಸಲಾಗುತ್ತದೆ, ಮತ್ತು ಕಾಗದ ಪತ್ರದೊಂದಿಗೆ ಅಡಕ ಪದವನ್ನು ಬಳಸಲಾಗುತ್ತದೆ.

"https://kn.wikipedia.org/w/index.php?title=ಅನುಬಂಧ&oldid=760294" ಇಂದ ಪಡೆಯಲ್ಪಟ್ಟಿದೆ