ವಿಷಯಕ್ಕೆ ಹೋಗು

ತಪ್ಪೋಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಪ್ಪೋಲೆ (ತಿದ್ದೋಲೆ, ಶುದ್ಧೀಪತ್ರ) ಎಂದರೆ ಒಂದು ಪ್ರಕಟಿತ ಪಠ್ಯದಲ್ಲಿ ಮಾಡುವ ತಿದ್ದುಪಡಿ. ಒಂದು ಸಾಮಾನ್ಯ ನಿಯಮವಾಗಿ, ಪ್ರಕಾಶಕರು ಉತ್ಪಾದನಾ ದೋಷಕ್ಕಾಗಿ (ಅಂದರೆ ಪ್ರಕಾಶನ ಪ್ರಕ್ರಿಯೆ ವೇಳೆ ಸೇರಿಸಲ್ಪಟ್ಟ ದೋಷ) ಒಂದು ತಪ್ಪೋಲೆಯನ್ನು ಒದಗಿಸುತ್ತಾರೆ ಮತ್ತು ಲೇಖಕನ ತಪ್ಪಿಗಾಗಿ ತಿದ್ದೋಲೆಯನ್ನು ಒದಗಿಸುತ್ತಾರೆ.[] ಅತ್ಯಂತ ಸಾಮಾನ್ಯವಾಗಿ ತಪ್ಪೋಲೆಯನ್ನು ಮೂಲ ಪಠ್ಯವು ಪ್ರಕಾಶನಗೊಂಡ ಸ್ವಲ್ಪ ಸಮಯದ ನಂತರ ಒದಗಿಸಲಾಗುತ್ತದೆ.

ತಪ್ಪೋಲೆ ಪುಟಗಳು

[ಬದಲಾಯಿಸಿ]

ಷಿಕಾಗೊ ಶೈಲಿ ಕೈಪಿಡಿಯ ಪ್ರಕಾರ, "ತಪ್ಪೋಲೆ, ತಪ್ಪುಗಳ ಪಟ್ಟಿಗಳು ಮತ್ತು ಅವುಗಳ ತಿದ್ದುಪಡಿಗಳು ಸಡಿಲವಾದ, ಒಳಸೇರಿಸಿದ ಹಾಳೆಗಳು/ಪುಟಗಳ ಅಥವಾ ರಟ್ಟಿನಲ್ಲಿ ಸೇರಿಸಿ ಕಟ್ಟಲಾದ ಪುಟಗಳ ರೂಪ ತೆಗೆದುಕೊಳ್ಳಬಹುದು. ತಪ್ಪೋಲೆ ಹಾಳೆಯು ಖಂಡಿತವಾಗಿಯೂ ಪುಸ್ತಕದ ಸಾಮಾನ್ಯ ಭಾಗವಾಗಿರುವುದಿಲ್ಲ. ಅದನ್ನು ಎಂದೂ (ನಂತರದ ಮುದ್ರಣದಲ್ಲಿ ಸರಿಮಾಡಬಹುದಾದ) ಸರಳ ಮುದ್ರಣ ದೋಷಗಳನ್ನು ತಿದ್ದಲು, ಅಥವಾ ಮುದ್ರಿತ ಪಠ್ಯದ ಸೇರಿಕೆಗಳನ್ನು ಒಳಸೇರಿಸಲು ಅಥವಾ ಪರಿಷ್ಕರಣೆಗಳನ್ನು ಒಳಸೇರಿಸಲು ನೀಡಬಾರದು (ಇವು ಪುಸ್ತಕದ ಮುಂದಿನ ಆವೃತ್ತಿಗಾಗಿ ಕಾಯಬೇಕು)."

ಉಲ್ಲೇಖಗಳು

[ಬದಲಾಯಿಸಿ]
  1. "Authors and referees — corrections". Nature publishing group. Archived from the original on 2016-08-01. Retrieved 2017-02-10.
"https://kn.wikipedia.org/w/index.php?title=ತಪ್ಪೋಲೆ&oldid=974580" ಇಂದ ಪಡೆಯಲ್ಪಟ್ಟಿದೆ