ಅನಿಷಾ ಸಯ್ಯದ್

ವಿಕಿಪೀಡಿಯ ಇಂದ
Jump to navigation Jump to search
ಅನಿಷಾ ಸಯ್ಯದ್
Personal information
ಜನನ (1980-09-22) 22 September 1980 (age 39)
Wai, Maharashtra, India[೧]
ಎತ್ತರ157 cm (5 ft 2 in)[೧]
ತೂಕ90 kg (198 lb)[೧]
ಪತ್ನಿ(ಯರು)Mubarak Hussain[೧]
Sport
ಕ್ರೀಡೆShooting
ಕಾರ್ಯಕ್ರಮ(ಗಳು)25 meter pistol

ಅನಿಷಾ ಸಯ್ಯದ್ [೨](ಜನನ 22 ಸೆಪ್ಟೆಂಬರ್ 1980) 2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ[೩] ಎರಡು ಚಿನ್ನದ ಪದಕಗಳನ್ನು ಗೆದ್ದ ಭಾರತೀಯ ಮಹಿಳಾ ಪಿಸ್ತೂಲ್ ಶೂಟರ್. ಅವರು 2006 ರಲ್ಲಿ SAF ಆಟಗಳಲ್ಲಿ ಚಿನ್ನದ ಪದಕವನ್ನು ಗೆದ್ದರು. 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು 25 ಮೀ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

ಆರಂಭಿಕ ಜೀವನ[ಬದಲಾಯಿಸಿ]

ಮೂಲತಃ ಪುಣೆಯ ಸತಾರಾ ಜಿಲ್ಲೆಯ ಖಡ್ಕಿಗೆ ಸೇರಿದ ಅನಿಸಾ ಅಬ್ದುಲ್ ಹಮೀದ್ ಸಯ್ಯೆತ್ ನ ಪುತ್ರಿ ಮತ್ತು ಒಡಹುಟ್ಟಿದ ನಾಲ್ಕು ಜನರಲ್ಲಿ ಕಿರಿಯಳಾಗಿದ್ದಾರೆ. ಕ್ಲಬ್-ಮಟ್ಟದ ಮಾಜಿ ಫುಟ್ಬಾಲ್ ಆಟಗಾರರಾಗಿದ್ದ ಆಕೆಯ ತಂದೆ ಟೆಲ್ಕೊದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಕಾಲೇಜಿನಲ್ಲಿ ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್ಸಿಸಿ) ತರಬೇತಿಯನ್ನು ಪಡೆಯುತ್ತಿರುವಾಗ ಅನಿಷಾ ಶೂಟಿಂಗ್ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು.[೪]

ವೃತ್ತಿಜೀವನ[ಬದಲಾಯಿಸಿ]

ಅನಿಷಾರವರು ಪ್ರಾಥಮಿಕ ಶಿಕ್ಷಕಿಯಾಗಿ ಲೇಡಿ ಹವಾಭಾಯ್ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮುಂಬೈ-ಪುಣೆ ರೈಲ್ವೆ ಮಾರ್ಗದಲ್ಲಿ ಮಹಾರಾಷ್ಟ್ರದ ವಿಲೇ ಪಾರ್ಲೆ ರೈಲ್ವೆ ನಿಲ್ದಾಣದಲ್ಲಿ, ಟಿಕೆಟ್-ಕಲೆಕ್ಟರ್ ಆಗಿ ಭಾರತೀಯ ರೈಲ್ವೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ತನ್ನ ತವರು ಪಟ್ಟಣ (ಪುಣೆ) ಗೆ ವರ್ಗಾಯಿಸಲು ಪದೇ ಪದೇ ನಿರಾಕರಿಸಿದ ನಂತರ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು.[೫]

ಅನಿಷಾರವರ ಶೂಟಿಂಗ್ ವೃತ್ತಿಜೀವನವು 2002 ರಲ್ಲಿ ಗನಿ ಶೇಕ್ ಮತ್ತು ಪಿ.ವಿ.ಐನಾಮ್ದಾರ್ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು. ಅನಿಷಾ ರಾಹಿ ಸರ್ನೋಬಾಟ್ ಜೊತೆಗೂಡಿ 25m ಪಿಸ್ತೂಲ್ ಸಮಾರಂಭದಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದರು. ಜೂನ್ 26, 2014 ರಂದು ಗ್ಲ್ಯಾಸ್ಗೋ ಸಮೀಪದ ಬ್ಯಾರಿ ಬುಡನ್ ಶೂಟಿಂಗ್ ಸೆಂಟರ್ ನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ 25 ಮೀಟರ್ ಪಿಸ್ತೂಲ್ ಸಮಾರಂಭದಲ್ಲಿ ಅವರು ಬೆಳ್ಳಿ ಪದಕ ಗೆದ್ದರು.

ಕಾನಾವೆಲ್ತ್ ಕ್ರೀಡಾಕೂಟದಲ್ಲಿ 776.5 ಅಂಕಗಳೊಂದಿಗೆ ವೈಯಕ್ತಿಕ ಚಿನ್ನದ ಪದಕವನ್ನು ಅನಿಷಾ ಗೆದ್ದರು. ಅವರು 2006 ರಲ್ಲಿ SAF ಆಟಗಳಲ್ಲಿ ಚಿನ್ನದ ಪದಕವನ್ನು ಗೆದ್ದರು. 2014 ರಲ್ಲಿ ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 25 ಮೀಟರ್ ಪಿಸ್ತೂಲ್ ಶೂಟಿಂಗಿಗಾಗಿ ಅವರು ಬೆಳ್ಳಿ ಪದಕ ಗೆದ್ದರು. ಆನಿಲಿಯಾ ಮೆಡಲ್ ಹಂಟ್ ಕಂಪೆನಿಯಿಂದ ಅನಿಷಾಗೆ ಬೆಂಬಲವಿದೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಅನಿಷಾ ಅವರು ಮುಬಾರಕ್ ಖಾನ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಇತ್ತೀಚೆಗೆ 2017 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು, ದಂಪತಿಗಳು ಈಗ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಸತ್ಯಬ್ರಾತ ಧಾಮ್ ಅನಿಷಾರವರ ಮನಸ್ಸಿನ ತರಬೇತುದಾರ, ಅವಳನ್ನು ನಿರಂತರವಾಗಿ ಪ್ರೇರೇಪಣೆ ಹೊಂದುವಂತೆ ಮಾಡುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]