ಅನಿಲ್ ಅಂಬಾನಿ
ಅನಿಲ್ ಧೀರುಭಾಯ್ ಅಂಬನಿ | |
---|---|
ಜನನ | anil dirubai ambani ೦೪-೦೬-೧೯೫೯ ಮುಂಬಯಿ |
ರಾಷ್ಟ್ರೀಯತೆ | ಭಾರತಿಯ |
ವೃತ್ತಿ | ಚೇರ್ಮನ್ ಆಫ್ ಅನಿಲ್ ಧಿರುಭಾಯ್ ಅಂಬಾನಿ ಗ್ರೂಪ್ |
ಅನಿಲ್ ಧೀರುಭಾಯ್ ಅಂಬಾನಿ ಉದ್ಯಮಿ, ಧೀರೂಭಾಯಿ ಅಂಬಾನಿಯವರ ಕಿರಿಯ ಮಗ. ಇವರು ತನ್ನ ತಾಯಿಯಾದ ಕೋಕಿಲಾಬೆನ್ ಧೀರೂಭಾಯಿ ಅಂಬಾನಿಯವರ ಜೊತೆ ಮುಂಬಯಿನಲ್ಲಿ ವಾಸಿಸುತ್ತಾರೆ. ಇವರ ಅಣ್ಣ ಮುಖೇಶ್ ಅಂಬಾನಿ. ಶ್ರೀಮತಿ ದೀಪ್ತಿ ಸಲಗಾಂವಕರ್ ಮತ್ತು ಶ್ರೀಮತಿ ನೀನಾ ಕೊಠಾರಿ ಇವರ ಕಿರಿಯ ಸಹೋದರಿಯರು.ಅವರು ಜೂನ್ ೪ ೧೯೫೯ರಂದು ಮುಂಬಯಿನಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ಇವರು ಮುಂಬಯಿ ವಿಶ್ವವಿದ್ಯಾಲಯದ, ಕೆ.ಸಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ, ವಾರ್ಟನ್ನಲ್ಲಿ ಎಂಬಿಎ ಪದವಿ ಪಡೆದುಕೊಂಡರು.
ರಿಲಯನ್ಸ್ ನಿರ್ವಹಣೆ
[ಬದಲಾಯಿಸಿ]ಇವರು ಭಾರತೀಯ ಉದ್ಯಮಿ ದಿಗ್ಗಜ ಮತ್ತು ಬಂಡವಾಳಗಾರರಾಗಿದ್ದರು. ಇವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅದ್ಯಕ್ಷರಾಗಿದ್ದರು. ಜೂನ್ ೨೦೦೫ ರಲ್ಲಿ ಅಸ್ತಿತ್ವಕ್ಕೆ ಬಂದ ರಿಲಯನ್ಸ ಗ್ರೂಪ್ನ ಅದ್ಯಕ್ಷರಾಗಿದ್ದರು. ಅನಿಲ್ ಅಂಬಾನಿಯವರು ರಿಲಯನ್ಸ್ ಮಹಾಸಂಸ್ಥೆಯ ವಿಭಾಗಗಳಾದ ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಪ್ರಾಸ್ಟ್ರಕ್ಚರ್, ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಇವುಗಳ ನಿರ್ವಹಣೆಯನ್ನು ಮಾಡುತ್ತಿದ್ದರು.[೧][೨][೩]
ಸಾಧನೆಗಳು ಮತ್ತು ಅಭಿವೃದ್ದಿಗಳು
[ಬದಲಾಯಿಸಿ]೨೦೧೬ರ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಅಂಬಾನಿಯವರ ನಿವ್ವಳ ಮೌಲ್ಯವು ೩.೩ ಬಿಲಿಯನ್ ಆಗಿತ್ತು. ಇಷ್ಟೆಲ್ಲ ದೊಡ್ಡ ಸಂಖ್ಯೆಯ ಸಂಸ್ಥೆಗಳ ನಡುವೆಯೂ ಅವರು ಮನರಂಜನೆಯಲ್ಲಿಯೂ ಆಸಕ್ತಿಯನ್ನು ತೋರಿಸುತ್ತಿದ್ದರು. ಮನರಂಜನೆಯಲ್ಲಿ ಅವರ ಪ್ರಮುಖ ಆಸಕ್ತಿಯ ಕೇಂದ್ರಗಳು ಹಲವಾರು ಇವೆ. ಅವುಗಳೆಂದರೆ ೪೪ ಎಫ್ಎಮ್ ರೇಡಿಯೋ ಕೇಂದ್ರ, ರಾಷ್ಟ್ರವ್ಯಾಪಿ ಡಿಟಿಎಚ್ ವ್ಯಾಪಾರ, ಅನಿಮೇಷನ್ ಸ್ಟುಡಿಯೋಸ್ ಮತ್ತು ಭಾರತದಾದ್ಯಂತ ಹಲವಾರು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸೇರಿವೆ, ಅವರು ಮಾಜಿ ಬಾಲಿವುಡ್ ನಟಿ ಟೀನಾಮುನಿಮ್ ಅವರನ್ನು ವಿವಾಹವಾಗಿದ್ದಾರೆ, ಅನ್ಮೋಲ್ ಮತ್ತು ಅನ್ಶುಲ್ ಅವರ ಇಬ್ಬರು ಮಕ್ಕಳು. ೨೦೦೨ರಲ್ಲಿ ತನ್ನ ತಂದೆಯ ಮರಣದನಂತರ ಅನಿಲ್ ಅಂಬಾನಿ ರಿಲಯನ್ಸ್ ಗ್ರೂಪ್ಸ್ ನಿಯಂತ್ರಣವನ್ನು ವಹಿಸಿಕೊಂಡರು, ಟೆಲಿಕಾಂ ಮನರಂಜನೆ, ಹಣಕಾಸು ಸೇವೆಗಳು, ಪವರ್ ಮತ್ತು ಇನ್ಪ್ರಾಸ್ಟ್ರಕ್ಚ್ ರ್ ಸಂಸ್ಥೆಗಳನ್ನು ಆಸಕ್ತಿಯಿಂದ ವಹಿಸಿಕೊಂಡರು. ೨೦೦೮ರಲ್ಲಿ ಅಂಬಾನಿಯವರು ಬೃಹತ್ ಆಹ್ವಾನಕ್ಕೆ ಅತೀ ಕಡಿಮೆ ಅವಧಿ ಅಂದರೆ ೬೦ ಸೆಕೆಂಡ್ಸ್ನಲ್ಲಿ ಚಂದಾದಾರರಾಗಿದ್ದರು. ಇದು ಭಾರತದ ಅತಿದೊಡ್ಡ ಐಪಿಒ ಆಗಿದೆ, ಹೀಗೆ ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಅತೀವೇಗವಾಗಿ ನಡೆದ ವಹಿವಾಟು ಇತಿಹಾಸದಲ್ಲೆ ಮತ್ತೊಂದಿರಲಿಲ್ಲ. ೨೦೦೫ರಲ್ಲಿ ಅಂಬಾನಿಯವರು ಆಡ್ಲ್ಯಾಬ್ಸ್ ಫಿಲ್ಮ್ ನ ಚಿತ್ರ ಸಂಸ್ಕರಣೆ, ಉತ್ಪಾದನೆ, ಪ್ರದರ್ಶನ ಮತ್ತು ಡಿಜಿಟಲ್ ಸಿನಿಮಾ ಹಿತಾಸಕ್ತಿಗಳನ್ನು ಹೊಂದಿರುವ ಕಂಪನಿಯ ಬಹುತೇಕ ಶೇರುಗಳನ್ನು ಸ್ವಾಧೀನ ಮಾಡಿಕೊಂಡು ಮನರಂಜನಾ ಉದ್ಯಮಕ್ಕೆ ಚೊಚ್ಚಲ ಕಾಣಿಕೆ ನೀಡಿದ್ಧಾರೆ. ೨೦೦೯ರಲ್ಲಿ ಆಡ್ಲ್ಯಾಬ್ಸ್ ಕಂಪನಿಯನ್ನು "ರಿಲಯನ್ಸ್ ಮೀಡಿಯವರ್ಕ್ಸ್ ಎಂದು ಮರುನಾಮಕರಣ ಮಾಡಲಾಯಿತು. ೨೦೦೮ರಲ್ಲಿ ಸ್ಟೀವನ್ ಸ್ಪೀಲ್ಬರ್ಗ್ ನಿರ್ಮಾಣ ಕಂಪನಿ ಡ್ರೀಮ್ ವರ್ಕ್ಸ್ ರೊಂದಿಗೆ ಅಮೇರಿಕದ ೧.೨ ಬಿಲಿಯನ್ ಮೌಲ್ಯದ ಜಾಯಿಂಟ್ ವೆಂಚರಿಯು ಅಂಬಾನಿಯವರ ಮನರಂಜನಾ ವ್ಯವಹಾರವನ್ನು ಜಾಗತಿಕ ವೇದಿಕೆಗೆ ಕರೆತರುವಲ್ಲಿ ಪಾತ್ರವಹಿಸಿದೆ. ಈ ಲಿಂಕ್ ಮೂಲಕ ಸ್ಟೀವನ್ ಸ್ಪೀಲ್ಬರ್ಗ್ರವರೊಂದಿಗೆ ಅನೇಕ ಚಲನಚಿತ್ರಗಳನ್ನು ತಯಾರುಮಾಡುವಲ್ಲಿ ನೆರವಾಗಿದ್ದಾರೆ. ೨೦೧೨ರಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದ ಲಿಂಕನ್ ಚಲನಚಿತ್ರ ಮತ್ತು ಆಸ್ಕರ್ ಪ್ರಶಸ್ತಿಗೆ ನೇಮಕವಾದ ವಾರ್ ಹಾರ್ಸ್, ದಿ ಹೆಲ್ಪ ಮುಂತಾದ ಚಲನಚಿತ್ರಗಳನ್ನು ನಿರ್ಮಿಸುವಲ್ಲಿ ನೆರವಾಗಿದ್ದಾರೆ.ಅಂಬಾನಿಯವರನ್ನು ಅವರ ಸಹೋದ್ಯೊಗಿಗಳು ಎಡಿಎ ಎಂದು ಕರೆಯುತ್ತಿದ್ದರು, ರಿಲಯನ್ಸ್ ಗ್ರೂಪ್ಪನ್ನು ಸ್ಥಾಪಿಸಿದ ೧೦ ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಭಾರತದ ಕೆಲವು ಪ್ರಮುಖ ಬೆಳವನಣಿಗೆ ಕ್ಷೇತ್ರಗಳು ಸೇರಿದಂತೆ ದೂರಸಂಪರ್ಕ, ಉತ್ಪಾದನ, ಸಾಗಣೆ ಮತ್ತು ನವೀಕರಿಸಲಾಗುವ, ನವೀಕರಿಸಲಾಗದ ಮೂಲಗಳ ವಿತರಣೆ, ರಾಷ್ತ್ರೀಯ ಹೆದ್ದಾರಿಗಳು, ಮೆಟ್ರೋ ರೈಲು ವ್ಯವಸ್ಥೆಗಳು, ಸಿಮೆಂಟ್, ಆರ್ಥಿಕ ಸೇವೆಗಳು, ಶಿಕ್ಷಣ, ಆರೋಗ್ಯ, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಮುಂಚೂಣಿ ಸ್ಥಾನವನ್ನು ನಿರ್ಮಿಸಿದೆ.ರಿಲಯನ್ಸ್ ಗ್ರೂಪನ ಪ್ರಮುಖ ಇಂಡಿಕೇಟರ್ಸ್: ಭಾರತದ ಟಾಪ್ ೫ ಉದ್ಯಮ ಸಂಸ್ಥೆಗಳಲ್ಲಿ ರಿಲಯನ್ಸ್ ಗ್ರೂಪ್ ಕೂಡ ಒಂದಾಗಿದೆ ಹಾಗು ಪ್ರಪಂಚದಲ್ಲೆ ಅತಿ ಹೆಚ್ಚು ಷೇರುದಾರರು ಮತ್ತು ಹೂಡಿಕೆದಾರರ ನೆಲೆಯನ್ನು ಹೊಂದಿದೆ. ಸುಮಾರು ೧೩ ಮಿಲಿಯನ್ ಷೇರುದಾರರನ್ನು ಮತ್ತು ಹೂಡಿಕೆದಾರರನ್ನು ಹೊಂದಿದೆ. ಶ್ರೀ ಅಂಬಾನಿಯವರು ಭಾರತದ ಹಲವಾರು ಪ್ರಥಿಷ್ಠಿತ ಸಂಸ್ಥೆಗಳ ನಿರ್ವಹಣೆಯನ್ನು ಮಾಡುತ್ತಿದ್ದರು. ಅವರು ಭಾರತ ಮತ್ತು ವಿದೇಶದಲ್ಲಿನ ಪ್ರಥಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಜೊತೆ ಹೆಚ್ಚಿನ ಸಂಬಂಧ ಹೊಂದಿದ್ದಾರೆ. ರಿಲಯನ್ಸ್ ಲೈಫ್ ಇನ್ಶುರೆನ್ಸ್, ನಿಪ್ಪಾನ್ ಲೈಫ್ ಆಫ್ ಜಪಾನ್ನೊಂದಿಗೆ ಸಹಭಾಗಿತ್ವದಲ್ಲಿದೆ ಹಾಗು ಭಾರತದ ಬಹುತೇಕ ಪ್ರಭಾವಿ ಉದ್ಯಮ ಟಿ.ವಿ ವಾಹಿನಿಗಳಾದ ಬ್ಲೂಮ್ಬರ್ಗ್ ನ ಸಹಭಾಗಿತ್ವದಲ್ಲಿದೆ. ಅನಿಲ್ ಅಂಬಾನಿ ಅವರು ಅಮೇರಿಕಾದ, ವಾರ್ಟನ್ ಸ್ಕೂಲ್, ವಾರ್ಟನ್ ಬೋರ್ಡ್ ಮೇಲ್ವಿಚಾರಣೆಯ ಸದಸ್ಯರಾಗಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದ ರಾಷ್ಟ್ರಪತಿ ಜಾಗತಿಕ ಮಂಡಳಿಯ ಹಾಗೂ ಯುಕೆಯ ಸಲಹಾ ಮಂಡಳಿ ವಾರ್ವಿಕ್ ಬಿಜಿನೆಸ್ ಸ್ಕೂಲ್ನ ಸದಸ್ಯರಾಗಿದ್ದರು. ಹೈದರಾಭಾದ್ ನ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ (ಐ.ಎಸ್.ಬಿ) ಸಂಸ್ಥಾಪಕರಲ್ಲಿ ಒಬ್ಬರು. ಐ.ಎಸ್.ಬಿಯು ಅಂತರಾಷ್ಟ್ರಿಯ ಉದ್ಯಮ ಶಾಲೆಗಳು- ವಾರ್ಟಿನ್ ಮತ್ತು ಕೆಲ್ಲಾಗ್ ನೊಂದಿಗೆ ಔಪಚಾರಿಕ ಸಹಭಾಗಿತ್ವವನ್ನು ಹೊಂದಿದೆ.ಅನಿಲ್ ಅಂಬಾನಿಯವರನ್ನು ಪ್ರಧಾನಿಯವರು, ಭಾರತೀಯ ಚೀನಾ ಸಿ.ಇ.ಒ ವೇದಿಕೆಗೆ ಹಾಗು ಅಮೇರಿಕಾ-ಭಾರತ ಸಿ.ಇ.ಒ ವೇದಿಕೆಗೆ ಸದಸ್ಯರಾಗಿ ನೇಮಕ ಮಾಡಿದರು. ೨೦೦೪ರಲ್ಲಿ ೬ ವರ್ಷಗಳ ಅವಧಿಗೆ ಮೇಲ್ಮನೆಯಾದ ರಾಜ್ಯ ಸಭೆಗೆ ಭಾರತದ ಸಂಸತ್ತಿನ ಸ್ವತಂತ್ರ ಸದಸ್ಯರಾಗಿ ಆಯ್ಕೆಯಾದರು. ಮುಂಬಯಿನಲ್ಲಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ- ಸ್ಟೇಟ್ ಆಫ್ ದಿ ಆರ್ಟ್ ಮಲ್ಟಿ-ಸ್ಪೆಷಲ್ ಆಸ್ಪತ್ರೆಯನ್ನು, ಅಗ್ರಗಣ್ಯ ಶೈಕ್ಷ್ಯಣಿಕ ಸಂಸ್ಥೆಗಳಲ್ಲಿ ಒಂದಾದ ಧೀರೂಭಾಯಿ ಅಂಬಾನಿ ಇನ್ಸ್ಟಿಟೂಟ್ ಆಫ್ ಇನ್ಫರ್ಮೇಷಣ್ ಮತ್ತು ಕಮ್ಯೂನಿಕೇಷನ್ ಟೆಕ್ನಾಲಜಿಯನ್ನು ಗುಜರಾತ್ನ ಗಾಂಧಿನಗರದಲ್ಲಿ ಸ್ಥಾಪಿಸಿದರು. ಅಹಮದಭಾದ್ನಲ್ಲಿ ಮುದ್ರಾ ಇನ್ಸ್ಟಿಟೂಟ್ ಆಫ್ ಕಮ್ಯೂನಿಕೇಷನ್ ಮತ್ತು ಭಾರತದ ಅತಿದೊಡ್ಡ ವಾರ್ಷಿಕ ಖಾಸಗಿ ಸಮಕಾಲಿನ ಕಲಾ ಪ್ರದರ್ಶನ - ಹಾರ್ಮನಿ ಆರ್ಟ್ ಫೌಂಡೇಶನ್ನನ್ನು ಸ್ಥಾಪಿಸಿದರು. ಶ್ರೀಮತಿ ಟೀನಾ ಅನಿಲ್ ಅಂಬಾನಿಯವರು ರಿಲಯನ್ಸ್ ಗ್ರೂಪ್ ನ ಎಲ್ಲಾ ಕಾರ್ಪೊರೇಟ್ ಸಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳ ಅದ್ಯಕ್ಷರಾಗಿದ್ದರು. ಅನಿಲ್ ಅಂಬಾನಿಯವರು ಮ್ಯಾರಥಾನ್ ರನ್ನರ್ ಮತ್ತು ಸುಮಾರು ೧೫ ವರ್ಷಗಳ ಕಾಲ ಅರ್ಧ ಮತ್ತು ಪೂರ್ಣ ಮ್ಯಾರಥಾನ್ನಲ್ಲಿ ಯಶಸ್ವಿಯಾಗಿ ಭಾಗವಹಿಸುತ್ತಿದ್ದಾರೆ. ಇವರು ಪ್ರಕೃತಿ ಮತ್ತು ವನ್ಯಜೀವಿಗಳ ಸಂರಕ್ಷಕರು ಹಾಗು ಆಧ್ಯಾತ್ಮಿಕ ಚಿಂತಕರಾಗಿದ್ದರು.
ಪ್ರಶಸ್ತಿಗಳು ಮತ್ತು ಮಾನ್ಯತೆಗಳು
[ಬದಲಾಯಿಸಿ]ಇವರಿಗೆ ೧೯೯೭ರಲ್ಲಿ ಭಾರತದ ಪ್ರಮುಖ ಉದ್ಯಮ ನಿಯತಕಾಲಿಕೆ, ಬಿಸ್ನಸ್ ಇಂಡಿಯ '೧೯೯೭ ವರ್ಷದ ಉದ್ಯಮಿ' ಪ್ರಶಸ್ತಿ ನೀಡಿತು. ಜೂನ್ ೧೯೯೯ರಲ್ಲಿ ಏಷ್ಯಾವೀಕ್ ನಿಯತಕಾಲಿಕೆಯು ತನ್ನ "ಉದ್ಯಮ ಮತ್ತು ಹಣಕಾಸುಸಹಸ್ರಮಾನದ ಲೀಡರ್ಸ್" ಪಟ್ಟಿಗೆ ಅನಿಲ್ ಅಂಬಾನಿಯವರನ್ನು ಆಯ್ಕೆ ಮಾಡಿ ಭಾರತದ ಏಕೈಕ ಉದ್ಯಮ ಮತ್ತು ಹಣಕಾಸಿನ "ಹೊಸ ನಾಯಕ" ಎಂದು ಪರಿಚಯಿಸಿತು. ಡಿಸೆಂಬರ್ ೨೦೦೧ರಲ್ಲಿ ಅನೇಕವ್ಯಾಪಾರ ಪ್ರದೇಶಗಳಲ್ಲಿ ಜಾಗತಿಕ ಮಟ್ಟದಲ್ಲಿ ರಿಲಯನ್ಸ್ ಸ್ಥಾಪನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ವಾರ್ಟನ್ ಭಾರತದ ಆರ್ಥಿಕ ವೇದಿಕೆಯು "ಮೊದಲ ವಾರ್ಟನ್ ಭಾರತೀಯ ಅಲುಮ್ನಿ" ಪ್ರಶಸ್ತಿಯನ್ನು ಪ್ರಧಾನ ಮಾಡಿತು. ಅಕ್ಟೋಬರ್ ೨೦೦೨ರಲ್ಲಿ ಬಾಂಬೆ ಮ್ಯಾನೇಜ್ಮೆಂಟ್ ಅಸೋಸಿಯೇಷನಿಂದ 'ಎಂಟ್ರಪ್ರಿನರ್ ಆಫ್ ದಿ ಡಿಕೇಡ್' ಪ್ರಶಸ್ತಿಯನ್ನು ಪಡೆದರು. ಪ್ಲಾಟ್ಸ ಗ್ಲೋಬಲ್ ಎನರ್ಜಿಯ ೨೦೦೪ರ 'ವರ್ಷದ ಸಿ.ಇ.ಓ' ಪ್ರಶಸ್ತಿ ಪಡೆದರು ಡಿಸೆಂಬರ್ ೨೦೦೬ರಲ್ಲಿ ಟೈಮ್ಸ್ ಆಫ್ ಇಂಡಿಯಾ, ಟಿ.ಎನ್.ಎಸ್ ನಡೆಸಿದ ಸಮೀಕ್ಷೆಯಲ್ಲಿ 'ವರ್ಷದ ಅತ್ಯುತ್ತಮ ಉದ್ಯಮಿಯಾಗಿ ಆಯ್ಕೆಯಾದರು, ಹಾಗು ಇಂಡಿಯಾ ಟುಡೆ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ, ಉದ್ಯಮ ನಾಯಕರಲ್ಲಿ ಅನಿಲ್ ಅಂಬಾನಿ ಅವರು 'ಅತ್ಯುತ್ತಮ ಮಾದರಿ'ಯಾಗಿ ಆಯ್ಕೆಯಾದರು. ಇಕನಾಮಿಕ್ ಟೈಮ್ಸ್ ಹೇಳಿರುವಂತೆ, ಭಾರತದ ಟಾಪ್ ೧೦೦ ಸಿ.ಇ.ಒಗಳ ಪಟ್ಟಿಯಲ್ಲಿ ಇವರು ೪ನೇ ಸ್ಥಾನದಲ್ಲಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ http://www.reliancecapital.co.in/
- ↑ http://www.rinfra.com/home.html
- ↑ "ಆರ್ಕೈವ್ ನಕಲು". Archived from the original on 2014-04-07. Retrieved 2016-09-15.