ಅನಾತೋಲ್ ಫ್ರಾನ್ಸ್
ಅನಾತೋಲ್ ಫ್ರಾನ್ಸ್ | |
---|---|
ಜನನ | ಪ್ಯಾರಿಸ್, ಫ್ರಾನ್ಸ್ | ೧೬ ಏಪ್ರಿಲ್ ೧೮೪೪
ಮರಣ | 12 October 1924 Tours, France | (aged 80)
ವೃತ್ತಿ | ಕಾದಂಬರಿಗಾರ |
ರಾಷ್ಟ್ರೀಯತೆ | French |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1921 |
ಸಹಿ |
ಅನಾತೋಲ್ ಫ್ರಾನ್ಸ್ [೧೮೪೪-೧೯೨೪] ಸಾಹಿತ್ಯಕ್ಕಾಗಿ ೧೯೨೧ ರಲ್ಲಿ ನೋಬೆಲ್ ಪ್ರಶಸ್ತಿಪಡೆದ ಫ್ರೆಂಚ್ ಸಾಹಿತಿ. ಕತೆ ಮತ್ತು ಕಾದಂಬರಿಗಾರರು. ಇವರ ನಿಜನಾಮಧೇಯ, 'Jacques Anatole Francois Thibault' ಎಂದು.
ಬಾಲ್ಯದ ದಿನಗಳು
[ಬದಲಾಯಿಸಿ]ಅನಾತೋಲ್ ಫ್ರಾನ್ಸ್‍ರ ತಂದೆ, ಪುಸ್ತಕದ ವ್ಯಾಪಾರಿಯಾಗಿದ್ದರು. ಅವರ ಪುಸ್ತಕದಂಗಡಿಯ ಹೆಸರು, ’Library the France’ ತನ್ನ ಹೆಸರಿನ ಜೊತೆಗೆ, ಅಂಗಡಿಯ ಹೆಸರನ್ನು ಜೋಡಿಸಿ ತಮ್ಮ ’ಕಾವ್ಯನಾಮ’ ವನ್ನಾಗಿ ಇಟ್ಟುಕೊಂಡರು. ಪತ್ರಕರ್ತರಾಗಿ, ಪ್ರಕಾಶನ ಸಂಸ್ಥೆಯ ಸಹಾಯಕರಾಗಿ, ಕೆಲಸಮಾಡಿದರು. ಕೆಲಕಾಲ ಶಿಕ್ಷಕರಾಗಿ ಮತ್ತು ಸೈನ್ಯದಲ್ಲಿ ಸೈನಿಕರಾಗಿ ದುಡಿದರು.ಅನಾತೋಲ್ ಫ್ರಾನ್ಸ್ ಮುಂದೆ ಪುಸ್ತಕಾಲಯದಲ್ಲಿ ಲೈಬ್ರೆರಿಯನ್ ಆಗಿ, (೧೮೭೬-೧೮೯೦) ’ಕಮ್ಯುನಿಸ್ಟ್ ವಿಚಾರಧಾರೆ,’ ಅವರನ್ನು ಆಕರ್ಷಿಸಿತ್ತು. ಹಾಗಾಗಿ ಧಾರ್ಮಿಕ ಢಂಬಾಚಾರಗಳನ್ನು ಅಲ್ಲಗಳೆಯುತ್ತಿದ್ದರು. ರೋಮನ್ ಕ್ಯಾಥೊಲಿಕ್ ಚರ್ಚ್ ಅವರ ಬರಹಗಳನ್ನು ನಿಷೇಧಿಸಿತ್ತು.[೧] ಕೆಲವು ವೇಳೆ ಅನಾತೋಲ್ ಫ್ರಾನ್ಸ್‍ರವರು ಫ್ರೆಂಚ್ ಸಮಾಜದ ರೀತಿ-ನೀತಿಗಳನ್ನು ತೀಕ್ಷ್ಣವಾದ ವಿಮರ್ಶೆಗೆ ಒಳಪಡಿಸಿ ಮಾತಾಡುತ್ತಿದ್ದರು
ಸಾಹಿತ್ಯ
[ಬದಲಾಯಿಸಿ]೧೯೦೮ ರಲ್ಲಿ ಪ್ರಕಟಿತವಾದ ಅನಾತೋಲ್ ಫ್ರಾನ್ಸ್ ರವರ ಸುಪ್ರಸಿದ್ಧ ಕಾದಂಬರಿ, ’[Penguin Island]' ಈ ಕಾದಂಬರಿಯ ವಿಷಯ, ಒಬ್ಬ ಮಠಾಧಿಪತಿ, ಪ್ರಮಾದವಶಾತ್ ಪೆಂಗ್ವಿನ್ ಪಕ್ಷಿ ಗಳಿಗೆ ಜ್ಞಾನ-ದೀಕ್ಷೆ ಕೊಡುತ್ತಾನೆ. ಆಗ ಅವು ಮಾನವರಾಗಿ ಪರಿವರ್ತಿತಗೊಳ್ಳುತ್ತವೆ. ಮಾನವರ ಸಹಜ ದೌರ್ಬಲ್ಯಗಳಾದ, ಕೊಲೆ, ಸುಲಿಗೆ, ವಂಚನೆಗಳು ಶುರುವಾಗುತ್ತವೆ. ಹೀಗೆ ಮುಂದುವರೆದು, ಭಯೋತ್ಪಾದಕರ, ಬಾಂಬ್ ಸ್ಫೋಟಕ್ಕೆ, ಒಂದು ನಾಗರೀಕತೆಯೇ ಬಲಿಯಾಗುವ ವಿಪರ್ಯಾಸವನ್ನು ನಾವು ಮನಗಾಣುತ್ತೇವೆ. ೧೯೧೪ ರಲ್ಲಿ ಅನಾತೋಲ್ ಫ್ರಾನ್ಸ್‍ರವರಿಂದ ಪ್ರಕಟವಾದ ದೇವತೆಗಳ ದಂಗೆ ಎಂಬ ಕಾದಂಬರಿ, ಫ್ರಾನ್ಸ್ ದೇಶದ ಮುಖ್ಯ ಕಾದಂಬರಿಯೆಂದು ಕೆಲವು ವಿಮರ್ಶಕರ ಅಂಬೋಣ. ಇದಲ್ಲದೆ ಸಮಕಾಲೀನ ಇತಿಹಾಸದಡಿಯಲ್ಲಿ ಅನಾತೋಲ್ ಫ್ರಾನ್ಸ್, ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಬರೆದ ಸಣ್ಣ ಕಥೆಗಳು ಜಗತ್ತಿನ ಎಲ್ಲ ಸಾಹಿತ್ಯಕ ಭಾಷೆಗಳಿಗೆ ರೂಪಾಂತರಗೊಂಡಿದೆ. ನೋಬೆಲ್ ಪ್ರಶಸ್ತಿ ಬಂದ ಬಳಿಕ ಅವರ ಸಮಗ್ರ ಕೃತಿಗಳನ್ನು ೨ ಸಂಪುಟಗಳಲ್ಲಿ ೧೯೨೫-೩೫ ರ ನಡುವೆ ಪ್ರೆಂಚ್ ಸರಕಾರ ಪ್ರಕಟಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ Halsall, Paul (May 1998). "Modern History Sourcebook: Index librorum prohibitorum, 1557–1966 (Index of Prohibited Books)". Internet History Sourcebooks Project (Fordham University). Archived from the original on 2014-08-30. Retrieved 2015-08-22.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Anatole France: A Brief Introduction
- Anatole France, Nobel Prize Winner by Herbert S. Gorman, ದ ನ್ಯೂ ಯಾರ್ಕ್ ಟೈಮ್ಸ್, 20 November 1921
- Correspondence with architect Jean-Paul Oury at Syracuse University
- Université McGill: le roman selon les romanciers Archived 2015-12-23 ವೇಬ್ಯಾಕ್ ಮೆಷಿನ್ ನಲ್ಲಿ.
- (French) Anatole France, his work in audio version Archived 2009-09-19 ವೇಬ್ಯಾಕ್ ಮೆಷಿನ್ ನಲ್ಲಿ.
- Dreyfus Rehabilitated Archived 2015-09-23 ವೇಬ್ಯಾಕ್ ಮೆಷಿನ್ ನಲ್ಲಿ.