ವಿಷಯಕ್ಕೆ ಹೋಗು

ಅನಸೂಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನಸೂಯ
Anasuya
Rama visiting Atri's hermitage. As Atri talks to Rama and his brother Lakshmana, Anusuya talks with his wife Sita
Anasuya feeding the Hindu Trinity

ಅನಸೂಯೆ ಕರ್ದಮ ಮುನಿ ಹಾಗು ದೇವಹೂತಿಯರ ಮಗಳು. ಅತ್ರಿ ಮಹರ್ಷಿಯ ಹೆಂಡತಿ. ಪರಮ ಪತಿವ್ರತೆ. ಇವಳ ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳನ್ನು ಮಕ್ಕಳನ್ನಾಗಿಸಿ, ತೊಟ್ಟಿಲಲ್ಲಿಟ್ಟು ತೂಗಿ, ಸರಸ್ವತಿ, ಲಕ್ಷ್ಮೀ, ಪಾರ್ವತಿಯರನ್ನು ಕಂಗಾಲುಗೊಳಿಸಿದವಳು. ನಂತರ ಅವರನ್ನು ಮೆಚ್ಚಿಸಿ ವರ ಪಡೆದು, ದತ್ತಾತ್ರೇಯ, ದೂರ್ವಾಸ, ಚಂದ್ರರೆಂಬ ಮೂವರು ಮಕ್ಕಳನ್ನು ಹೆತ್ತಳು. ಶ್ರೀರಾಮನ ಅರಣ್ಯವಾಸದಲ್ಲಿ ಸೀತೆಗೆ ಈಕೆ ಮಾಂಗಲ್ಯವೃದ್ಧಿಯ ಧರ್ಮರಹಸ್ಯಗಳನ್ನು ತಿಳಿಸಿದಳು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


"https://kn.wikipedia.org/w/index.php?title=ಅನಸೂಯ&oldid=714096" ಇಂದ ಪಡೆಯಲ್ಪಟ್ಟಿದೆ