ಅನಸುಯ ಸಾರಾಭಾಯ್

ವಿಕಿಪೀಡಿಯ ಇಂದ
Jump to navigation Jump to search
ಅನಸುಯ ಸಾರಾಭಾಯ್
ಜನನ11 ನವೆಂಬರ್ 1885
ಅಹಮದಾಬಾದ್
ನಿಧನ1972
ರಾಷ್ಟ್ರೀಯತೆಭಾರತೀಯರು
Other namesಮೊಟಬೆನ್
Known forಕಾರ್ಮಿಕ ಚಳುವಳಿ

ಅನಸುಯ ಸಾರಾಭಾಯ್ ಭಾರತದ ಮಹಿಳಾ ಕಾರ್ಮಿಕ ಚಳುವಳಿಯ ಪ್ರವರ್ತಕರಾಗಿದ್ದರು.ಅವರು 1920 ರಲ್ಲಿ ಅಹಮದಾಬಾದ್ ಜವಳಿ ಕಾರ್ಮಿಕ ಸಂಘ (ಮಜದೂರ್ ಮಹಾಜನ್ ಸಂಘ), ಜವಳಿ ಕಾರ್ಮಿಕರ ಭಾರತದ ಅತ್ಯಂತ ಹಳೆಯ ಒಕ್ಕೂಟದ ಸ್ಥಾಪಕರು.[೧]

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಸಾರಾಭಾಯ್ ಅವರು ಅಹಮದಾಬಾದ್ನಲ್ಲಿ 11 ನವೆಂಬರ್ 1885 ರಂದು ಕೈಗಾರಿಕೋದ್ಯಮಿ ಮತ್ತು ಶ್ರೀಮಂತ ಕುಟುಂಬವಾದ ಸಾರಾಭಾಯ್ ಕುಟುಂಬದಲ್ಲಿ ಜನಿಸಿದರು. ಆಕೆಯು ಒಂಬತ್ತು ವರ್ಷದವಳಾಗಿದ್ದಾಗ ಅವರ ತಂದೆತಾಯಿಗಳು ಮರಣಹೊಂದಿದರು, ಆದ್ದರಿಂದ ಅವರನ್ನು , ಅವಳ ಸಹೋದರ ಅಂಬಾಲ್ ಸಾರಾಭಾಯಿ, ಮತ್ತು ಸಹೋಹರಿಯ ಜೊತೆ ಚಿಕ್ಕಪ್ಪನೊಂದಿಗೆ ವಾಸಿಸಲು ಕಳುಹಿಸಲಾಯಿತು .[೨] ಅವರು 13 ನೇ ವಯಸ್ಸಿನಲ್ಲಿ[೨] ತನ್ನ ಸಹೋದರನ ಸಹಾಯದಿಂದ ಅವರ ಬಾಲ್ಯ ವಿವಾಹವನ್ನು ವಿಫಲಗೊಳಿಸಿದರು.ಅವರು ವೈದ್ಯಕೀಯ ಪದವಿಯನ್ನು ಮುಂದುವರಿಸಲು 1912 ರಲ್ಲಿ ಇಂಗ್ಲೆಂಡ್ಗೆ ತೆರಳಿದರು ಆದರೆ ಪ್ರಾಣಿಗಳ ಛೇದನವು ಪಠ್ಯಕ್ರಮದ ಒಂದು ಭಾಗವಾಗಿದೆ ಎಂದು ಅರಿತುಕೊಂಡಾಗ ಅದು ಅವರ ಜೈನ ನಂಬಿಕೆಗಳ ಉಲ್ಲಂಘನೆಯಾಗಿರುವುದರಿಂದ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಬದಲಾಯಿಸಿಕೊಂಡರು.ಇಂಗ್ಲೆಂಡಿನಲ್ಲಿ ಆಕೆ ಫ್ಯಾಬಿಯನ್ ಸೊಸೈಟಿಯಿಂದ ಪ್ರಭಾವಿತರಾದರು ಮತ್ತು ಸಫ್ರಾಗೆಟ್ ಚಳವಳಿಯಲ್ಲಿ ತೊಡಗಿಸಿಕೊಂಡರು..[೩][೨]

ರಾಜಕೀಯ ವೃತ್ತಿ[ಬದಲಾಯಿಸಿ]

  • ಭಾರತದಲ್ಲಿ ಮಹಿಳೆಯರು ಮತ್ತು ಬಡವರ ಸುಧಾರಣೆಗಾಗಿ ಅವರು ಕೆಲಸ ಮಾಡಿದರು;
  • ಅವರು ಶಾಲೆ ತೆರೆದರು. 36 ಗಂಟೆಗಳ ಶಿಫ್ಟ್ ನಂತರ ಮನೆಗೆ ಮರಳುವ  ಮಹಿಳಾ ಗಿರಣಿ ಕೆಲಸಗಾರರನ್ನು ನೋಡಿ ನಂತರ ಕಾರ್ಮಿಕ ಚಳವಳಿಯಲ್ಲಿ ತೊಡಗಲು ಅವರು ನಿರ್ಧರಿಸಿದರು.
  • ಅವರು ಅಹ್ಮದಾಬಾದ್ನಲ್ಲಿ 1914 ರ ಮುಷ್ಕರದಲ್ಲಿ ಜವಳಿ ಕೆಲಸಗಾರರನ್ನು ಸಂಘಟಿಸಲು ನೆರವಾದರು.
  • 1918 ರಲ್ಲಿ ಒಂದು ತಿಂಗಳ ಅವಧಿಯ ಮುಷ್ಕರದಲ್ಲಿ ತೊಡಗಿಸಿಕೊಂಡಿದ್ದಳು, ಅಲ್ಲಿ ನೇಕಾರರು ವೇತನದಲ್ಲಿ ಶೇ 50 ರಷ್ಟು ಹೆಚ್ಚಳ ಆಗ್ರಹಿಸಿದರು ಮತ್ತು 20 ಶೇ. ಪಡೆದರು.
  • ಗಾಂಧಿಯವರು ಕುಟುಂಬದ ಸ್ನೇಹಿತರಾಗಿದ್ದರು, ನಂತರ ಅವರು ಸರಬಾಯ್ಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಿದರು.[೨]
  • ಕಾರ್ಮಿಕರ ಪರವಾಗಿ ಗಾಂಧಿಯವರು ಉಪವಾಸ ಆರಂಭಿಸಿದರು ಮತ್ತು ಕಾರ್ಮಿಕರಿಗೆ ಅಂತಿಮವಾಗಿ ಶೇ 35 ರಷ್ಟು ಹೆಚ್ಚಳವಾಯಿತು.
  • ಇದರ ನಂತರ, 1920 ರಲ್ಲಿ, ಅಹಮದಾಬಾದ್ ಟೆಕ್ಸ್ಟೈಲ್ ಲೇಬರ್ ಅಸೋಸಿಯೇಷನ್ (ಮಜೂರ್ ಮಹಾಜನ್ ಸಂಘ) ಅನ್ನು ರಚಿಸಲಾಯಿತು. [೧]

ಪರಂಪರೆ ಮತ್ತು ಮರಣ[ಬದಲಾಯಿಸಿ]

ಸಾರಾಭಾಯ್ ಅವರನ್ನು "ಹಿರಿಯ ಸಹೋದರಿ" ಗುಜರಾತಿನನಲ್ಲಿ ಮೊಟಬೆನ್[೨] ಎಂದು ಕರೆಯಲಾಯಿತು. ಅವರು ಸ್ವಯಂ ಉದ್ಯೋಗಿ ಮಹಿಳಾ ಸಂಘದ ಸಂಸ್ಥಾಪಕಿ ಇಲಾ ಭಟ್ಗೆ ಸಲಹೆ ನೀಡಿದರು.[೪] ಸಾರಭಾಯ್ 1972 ರಲ್ಲಿ ನಿಧನರಾದರು.[೪] ನವೆಂಬರ್ 11, 2017 ರಂದು ಗೂಗಲ್ ಅವರ 132 ನೇ ಜನ್ಮದಿನೋತ್ಸವವನ್ನು ಆಚರಿಸಿತು ಮತ್ತು ಗೂಗಲ್ ಡೂಡಲ್ನೊಂದಿಗೆ ಸಮರ್ಪಿಸಿ ಗೌರವಿಸಿತು.[೫]

ಉಲ್ಲೇಖಗಳು[ಬದಲಾಯಿಸಿ]